ಧೂಳು ಸಮಸ್ಯೆಯಿಂದ ಮುಕ್ತಿ ಕೊಡಿ

Team Udayavani, Mar 23, 2020, 3:00 AM IST

ತುಮಕೂರು: ನಗರದ ಪ್ರಶಾಂತ್‌ ಚಿತ್ರಮಂದಿರದ ಪಕ್ಕದ ರಸ್ತೆಯಿಂದ ಗುಬ್ಬಿವೀರಣ್ಣ ರಂಗಮಂದಿರದವರೆಗಿನ ರಸ್ತೆ ಧೂಳುಮಯವಾಗಿದ್ದು, ಇದರಿಂದ ರಕ್ಷಿಸಿ ಎಂದು ಆಟೋ ಚಾಲಕರು, ವರ್ತಕರು ಮತ್ತು ನಾಗರಿಕರು ಮೇಯರ್‌ ಫ‌ರೀದಾಬೇಗಂ ಮತ್ತು ಆಯುಕ್ತ ಟಿ.ಭೂಬಾಲನ್‌ ಅವರಲ್ಲಿ ಅಳಲು ತೋಡಿಕೊಂಡರು.

ಸಾರಿಗೆ ಬಸ್‌ ನಿಲ್ದಾಣ ಗುಬ್ಬಿ ವೀರಣ್ಣ ರಂಗಮಂದಿರದ ಎದುರಿನ ಸಾರಿಗೆ ಡಿಪೋನಲ್ಲಿ ತಾತ್ಕಾಲಿಕವಾಗಿ ಆರಂಭವಾಗಿದ್ದು, ಇದರಿಂದ ಪ್ರತಿನಿತ್ಯ ನೂರಾರು ಬಸ್‌ಗಳು ಸಂಚರಿಸುವುದರಿಂದ ಧೂಳು ಸೃಷ್ಟಿಯಾಗಿದೆ. ರಂಗಮಂದಿರದ ಪಕ್ಕದ ಜಾಗದಲ್ಲಿ ಪಾಲಿಕೆಯವರೇ ತ್ಯಾಜ್ಯ ಹಾಕುತ್ತಿದ್ದಾರೆ ಎಂದು ದೂರಿದರು.

ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಯುಕ್ತ ಟಿ.ಭೂಬಾಲನ್‌ ಹೇಳಿದರು. ಬೀದಿ ದೀಪ, ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡುವುದಾಗಿ ಮೇಯರ್‌ ಫ‌ರೀದಾ ಬೇಗಂ ತಿಳಿಸಿದರು. ಗುಬ್ಬಿವೀರಣ್ಣ ರಂಗ ಮಂದಿರ ಪಕ್ಕದಲ್ಲಿರುವ ಗುಜರಿ ಅಂಗಡಿಗಳಿಗೆ ಹೋಗಲು ರಸ್ತೆ ನಿರ್ಮಿಸಬೇಕೆಂದು ಬಾಳನಕಟ್ಟೆ ಕಬ್ಬಿಣ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಮನವಿ ಸಲ್ಲಿಸಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ