Udayavni Special

ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ

Team Udayavani, Oct 11, 2020, 4:47 PM IST

tk-tdy-1

ತುಮಕೂರು: ಯುವ ಜನರು ಮೊಬೈಲ್‌ಗೆ ಹೆಚ್ಚು ಅಂಟಿಕೊಳ್ಳದೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಆಲಸ್ಯಕ್ಕೆ ಅವಕಾಶವಾಗುವುದಿಲ್ಲ, ಮಾನಸಿಕ ಉಲ್ಲಾಸವಿರುತ್ತದೆ ಎಂದು ಆಪ್ತ ಸಮಾಲೋಚಕ ಸಿ.ಸಿ.ಪಾವಟೆ ಅಭಿಪ್ರಾಯಪಟ್ಟರು.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ನಗರದ ಅನನ್ಯ ಕಾಲೇಜಿನಲ್ಲಿ ವಿದ್ಯಾರ್ಥಿ, ಯುವಜನರಿಗಾಗಿ ಆಯೋಜಿಸಿದ್ದಮಾನಸಿಕ ಆರೋಗ್ಯ ಕುರಿತ ಆನ್‌ಲೈನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾನಸಿಕ ಆರೋಗ್ಯಕ್ಕೆ ಮಹತ ನೀಡಿ: ಪ್ರತಿವ್ಯಕ್ತಿಯ ದೇಹಕ್ಕೂ ಮನಸ್ಸಿಗೂ ನೇರ ಸಂಬಂಧವಿದ್ದು, ದೈಹಿಕ ಆರೋಗ್ಯಕ್ಕೆ ನೀಡುವ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕಾಗಿದೆ. ಆದರೆ ಬಹಳಷ್ಟು ಜನ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಾ ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದರು.

ಅಪಾಯ ಎದುರಾಗುವ ಸಂಭTವ: ಮಾನಸಿಕವಾಗಿ ನಾವು ಆರೋಗ್ಯವಾಗಿ ಇರಬೇಕಾದ ಕೆಲವೊಂದು ಸೂಕ್ಷ್ಮತೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೈಹಿಕವಾಗಿ ಚೆನ್ನಾಗಿದೆ ಎಂದು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನ‌ಗ‌ಳಲ್ಲಿ ಅಪಾಯ ಎದುರಾಗುವ ಸಂಭವ ಇರುತ್ತದೆ ಎಂದು ಎಚ್ಚರಿಸಿದರು. ಮನುಷ್ಯನಿಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ನಿದ್ರೆ ಮತ್ತು ಆಹಾರ ತುಂಬಾ ಮುಖ್ಯವಾಗಿ ಇರಬೇಕು. ಈ ಎರಡೂ ವಿಷಯದಲ್ಲಿ ಪ್ರಧಾನ್ಯತೆ ನೀಡಬೇಕು. ಬಹಳಷ್ಟು ವಿದ್ಯಾರ್ಥಿಗಳು ನಿದ್ರೆಯ ಕಡೆಗೆ ಗಮನ ಹರಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲ, ಸಿಕ್ಕಿದ ಆಹಾರವನ್ನೆಲ್ಲಾ ತಿನ್ನಲು ಮನಸ್ಸು ಹಾತೊರೆಯುತ್ತದೆ. ಈ ಮನಸ್ಸಿಗೆ ಕಡಿವಾಣ ಹಾಕದೆ ಹೋದರೆ ದೈಹಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ನುಡಿದರು.

ಮೌಡ್ಯಕ್ಕೆ ಆಸ್ಪದ ನೀಡಬೇಡಿ: ಕೆಲವು ಸಿನಿಮಾಗಳು ಹಾಗೂ ಧಾರಾವಾಹಿಗಳಲ್ಲಿ ದೆವ್ವ ಮತ್ತಿತರ ಚಿತ್ರಗಳನ್ನು ತೋರಿಸುವುದರಿಂದ ಯುವ ಜನತೆಯ ಮೇಲೆ ಇವು ಕೆಟ್ಟ ಪರಿಣಾಮ ಬೀರುತ್ತವೆ. ಕನಸಿನಲ್ಲಿಯೂ ಅದೇ ಬರುತ್ತದೆ. ಪೋಷಕರು ಮಂತ್ರ ಹಾಕಿಸುವ, ಪೂಜೆ ಮಾಡಿಸಿ ದೆವ್ವ ಬಿಡಿಸುವ ಮಟ್ಟಕ್ಕೆ ಹೋಗುತ್ತಾರೆ. ಇಂತಹ ಮೌಡ್ಯ ಭಾವನೆ ಗಳಿಗೆ ಹೆಚ್ಚು ಆಸ್ಪದ ನೀಡಬಾರದು ಎಂದರು.

ಆರೋಗ್ಯವೂ ವೃದ್ಧಿ: ತುಮಕೂರು ನಗರ ಸಾಂತ್ವನ ಕೇಂದ್ರದ ಸಲಹೆಗಾರ ಸಾ.ಚಿ.ರಾಜಕುಮಾರ ಮಾತನಾಡಿ, ಕೋವಿಡ್‌ನ‌ ಈ ಸೂಕ್ಷ್ಮ ಸಂದರ್ಭದಲ್ಲಿ ವಿದ್ಯಾರ್ಥಿ ಯುವಜನರ ಜವಾಬ್ದಾರಿ ಕುಟುಂಬಗಳಲ್ಲಿ ಹೆಚ್ಚಿನದಿದೆ. ಹಿಂದೆಲ್ಲಾ ಅವಶ್ಯಕ ಮತ್ತು ಅನಾವಶ್ಯಕ ಎಂದು ಯೋಚಿಸದೆ ಹಣ ಖರ್ಚು ಮಾಡುವವರಿದ್ದರು. ಈಗ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿರುವುದರಿಂದ ಯಾವುದೇವಸ್ತುಗಳನ್ನು ಕೊಳ್ಳುವ ಮುನ್ನ ಒಮ್ಮೆಯೋಚಿಸಬೇಕು. ಪೋಷಕರೊಂದಿಗೆಮಾತನಾಡಬೇಕು. ಪರಸ್ಪರ ಕೌಟುಂಬಿಕ ವಾತಾವರಣದಲ್ಲಿ ಕುಳಿತು ಮಾತನಾಡುವ ಪ್ರವೃತ್ತಿ ಹೆಚ್ಚಾದಂತೆಲ್ಲಾ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ವರಾನ ಗ್ಲೋಬಲ್‌ ಟ್ರಸ್ಟಿ ಎಚ್‌.ಹರೀಶ್‌, ಅನನ್ಯ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವಾಸ್‌, ಕಾಮರ್ಸ್‌ ವಿಭಾಗದ ಮುಖ್ಯಸ್ಥರಾದ ದೇವಕಿ ಪ್ರಸಾದ್‌, ಎನ್‌.ಜೆ. ಯತೀಶ್‌ ಇತರರು ಇದ್ದರು.

ಟಾಪ್ ನ್ಯೂಸ್

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು

ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು

ತುಮಕೂರು ಬಳಿ ಖಾಸಗಿ ಬಸ್‌ ಮತ್ತು ಸರಕು ಸಾಗಣೆ ವಾಹನ ಅಪಘಾತ: ನಾಲ್ವರ ದುರ್ಮರಣ

ತುಮಕೂರು ಬಳಿ ಖಾಸಗಿ ಬಸ್‌ ಮತ್ತು ಸರಕು ಸಾಗಣೆ ವಾಹನ ಅಪಘಾತ : ನಾಲ್ವರ ದುರ್ಮರಣ

ಕಾಡುಗೊಲ್ಲರ ಮನೆಯಲ್ಲಿ ಶಾಸಕರ ಗ್ರಾಮವಾಸ್ಥವ್ಯ

ಕಾಡುಗೊಲ್ಲರ ಮನೆಯಲ್ಲಿ ಶಾಸಕರ ಗ್ರಾಮವಾಸ್ಥವ್ಯ

ಮಟ್ಕಾ ದಂಧೆ ಭೇದಿಸಲು ಪೊಲೀಸರು ಸಜ್ಜು

ಮಟ್ಕಾ ದಂಧೆ ಭೇದಿಸಲು ಪೊಲೀಸರು ಸಜ್ಜು

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.