ನಾಳೆ ರಾಜ್ಯ ಮಟ್ಟದ ಕವಿಗೋಷ್ಠಿ

Team Udayavani, Jun 8, 2019, 3:27 PM IST

ತುಮಕೂರು: ಸ್ನೇಹ ಸಂಗಮ ಸಾಹಿತ್ಯ ಬಳಗದ ರಾಜ್ಯ ಶಾಖೆಯ ವತಿಯಿಂದ ಕವಿ ಹೃದಯಗಳ ಸಂಗಮ 2019 ರಾಜ್ಯ ಮಟ್ಟದ ಕವಿಗೋಷ್ಠಿ ಬಳಗದ ವಾರ್ಷಿಕೋತ್ಸವ, ಕವನ ಸಂಕಲನ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ವನ್ನು ಜೂ.9ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಕನ್ನಡ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಂಕಲನ ಬಿಡುಗಡೆಯ ಅಧ್ಯಕ್ಷತೆಯನ್ನು ಪಿಟೀಲು ವಾದಕರು ಹಾಗೂ ಕವಿಗಳಾದ ಜಿ.ಎನ್‌.ಶ್ಯಾಮಸುಂದರ್‌ ಉದ್ಘಾಟನೆ ಮಾಡಲಿ ದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಬಾ.ಹ. ರಮಾಕುಮಾರಿ, ಅನಿಕೇತನ ಸಂಸ್ಥೆಯ ಸಂಸ್ಥಾಪಕಿ ಭಾರತಿ ಶ್ರೀನಿವಾಸ್‌, ರಾಜೇಂದ್ರ ಪಾಟೀಲ್, ಅಣ್ಣಪ್ಪ ಮೇಟಿಗೌಡರು, ಎನ್‌.ಆರ್‌.ನರಸಿಂಹಯ್ಯ, ವೆಂಕಟೇಶಯ್ಯ, ನಾಗರಾಜು, ದಯಾನಂದ ಸರಸ್ವತಿ, ಭೈರಪ್ಪ, ಬಿ.ಎನ್‌.ದಯಾನಂದ್‌ ಭಾಗವಹಿಸಲಿದ್ದಾರೆ.

ಜಿ.ಎನ್‌.ಶ್ಯಾಮಸುಂದರ್ರವರಿಂದ ಶಾಮಗಾನ, ರತ್ನಬಡವನಹಳ್ಳಿ ಮೌನದಿಂಚರ, ವಿಜಯಪದ್ಮಶಾಲಿ ಭಾವೋಲ್ಲಾಸ, ಗೋಪಿ ಹಂದನಕೆರೆ ಜಗವೆಲ್ಲಾ ಕಾವ್ಯಮಯ, ಚಂದ್ರು ನಿಟ್ಟೂರು ಕಚಗುಳಿ ಪುಸ್ತಕ ಬಿಡುಗಡೆ ಗೊಳಿಸಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ನಡೆಯುವ ಕಾವ್ಯಗೋಷ್ಠಿ ಅಧ್ಯಕ್ಷತೆಯನ್ನು ರತ್ನ ಬಡವನಹಳ್ಳಿ ವಹಿಸುವರು. ಸರಸ್ವತಿ ಟಿ.ಎನ್‌., ಶೈಲಾನಾಗರಾಜು, ದೇಸು ಆಲೂರು, ವಿಜಯಪದ್ಮಶಾಲಿ, ರಂಗನಾಥಾ ಚಾರ್‌, ಸುರೇಶ್‌, ಸದಾಶಿವಯ್ಯ, ಶ್ರೀನಿವಾಸ್‌, ಗುರುಸಿದ್ದಪ್ಪ, ಕೋಮಲಾ, ವಿ.ಪುಷ್ಪ, ವೆನ್ನಲಾಕೃಷ್ಣರವರು ಆಗಮಿಸಲಿದ್ದಾರೆ.

ಬೆಳಿಗ್ಗೆ 12.30 ಗಂಟೆಗೆ ನಡೆಯುವ ಕಾವ್ಯಗೋಷ್ಠಿಯಲ್ಲಿ ಅಧ್ಯಕ್ಷತೆಯನ್ನು ಗೋಕಾಕ ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಉಪಾಧ್ಯಕ್ಷೆ ರಜನಿ ಅಶೋಕ್‌ ಜೀರಗ್ಯಾಳರವರು ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಜಬಿಲಾಲ್ ಮುಲ್ಲಾ, ಲಲಿತಾಸಂಪಿಗೆ, ಅಶೋಕ್‌ ಜೀರ ಗ್ಯಾಳ, ಬಿ.ಎಸ್‌.ನಾಗರಾಜು, ಡಾ.ಸುರೇಶದ ನೆಗಳಗುಳಿ, ಸಿದ್ದುಸ್ವಾಮಿ, ವಿಜಯಾ ಆರ್‌, ಹನುಮಂತಾಚಾರ್‌, ಎನ್‌.ಆನಂದ್‌ ಸೋಪುರ, ಫ‌ಣಿಶೇಖರ್‌, ಕೆ.ಹೆಚ್.ನರಸಿಂಹ ರಾಜುರವರು ಆಗಮಿಸಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ