Heme River: ಹೇಮೆ ಒಡಲು ಸೇರುತ್ತಿದೆ ಯುಜಿಡಿ ನೀರು!


Team Udayavani, Dec 21, 2023, 5:49 PM IST

Heme River: ಹೇಮೆ ಒಡಲು ಸೇರುತ್ತಿದೆ ಯುಜಿಡಿ ನೀರು!

ತುಮಕೂರು: (ಗ್ರಾಮಾಂತರ): ಕಲ್ಪತರು ನಾಡು ತುಮಕೂರು ಜಿಲ್ಲೆಗೆ ಜೀವನಾಡಿಯಾಗಿರುವ ಹೇಮೆಗೆ ತುಮಕೂರು ನಗರದ ವಾರ್ಡ್‌ಗಳೇ ಕಂಟಕವಾಗಿ ಪರಿಣಮಿಸಿವೆ. ಹೌದು, ತುಮಕೂರು ನಗರದ ವಾರ್ಡ್‌ ಗಳಿಂದ ಉತ್ಪತ್ತಿಯಾಗುವ ಯುಜಿಡಿ ಮತ್ತು ಕಲುಷಿತ ನೀರು ಕುಣಿಗಲ್‌ ಭಾಗಕ್ಕೆ ಹಾದುಹೋಗಿರುವ ಹೇಮಾವತಿ ಒಡಲಿದೆ ಸೇರುತ್ತಿದ್ದು, ಕುಣಿಗಲ್‌ ಭಾಗದ ಜನತೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಅಪಾಯ ಎದುರಾಗಿದೆ.

ಹೇಮಾವತಿ ಒಡಲಿಗೆ ಚರಂಡಿ, ಯುಜಿಡಿ ನೀರು: ತುಮಕೂರು ನಗರದ ರಿಂಗ್‌ ರಸ್ತೆಯ ಹಿಂಭಾಗದಲ್ಲಿ ಯುಜಿಡಿ ಪ್ಲಾಂಟ್‌ ಬಳಿ ಒಂದೆಡೆ ಯುಜಿಡಿ ನೀರು ಹಾಗೂ ಮತ್ತೂಂದೆಡೆ ಕಲುಷಿತ ನೀರು ಸೇರುತ್ತಿದೆ. ಯುಜಿಡಿ ಪ್ಲಾಂಟ್‌ ಬಳಿ ರೈಲು ಹಳಿ ಹಾದು ಹೋಗಿದ್ದು, ರೈಲು ಹಳಿಯ ಒಂದು ಭಾಗದಲ್ಲಿ ಕೊಳಚೆ ನೀರು ಹಾದುಹೋಗುವ ಚಾನೆಲ್‌ ಇದೆ. ಇನ್ನೊಂದು ಭಾಗದಲ್ಲಿ ಯುಜಿಡಿ ಪ್ಲಾಂಟ್‌ ಇದೆ. ಕುಣಿಗಲ್‌ ಭಾಗಕ್ಕೆ ಹಾದುಹೋಗಿರುವ ಚಾನೆಲ್‌ ಮೇಲ್ಭಾಗದಲ್ಲಿ ಚರಂಡಿ ನೀರು ಹೋಗುವ ಚಾನೆಲ್‌ ನಿಂದ ಕೆಳಭಾಗದಲ್ಲಿ ಹಾದು ಹೋಗಿರುವ ಹೇಮಾವತಿ ಚಾನೆಲ್‌ಗೆ ಕೊಳಚೆ ನೀರು ಧುಮ್ಮಿಕ್ಕುತ್ತಿದೆ. ಇತ್ತ ಯುಜಿಡಿ ಪ್ಲಾಂಟ್‌ ನಿಂದಲೂ ಸಹ ಯುಜಿಡಿ ನೀರು ಸೋರಿಕೆಯಾಗಿ ನೇರವಾಗಿ ಹೇಮಾವತಿ ಒಡಲಿಗೆ ಸೇರುತ್ತಿದೆ.

ಶಾಸಕರೇ ಎಚ್ಚರ: ತುಮಕೂರಿನಿಂದ ಕುಣಿಗಲ್‌ ಕಡೆ ಹರಿಯುವ ಹೇಮಾವತಿ ನಾಲೆಗೆ ತುಮಕೂರಿನ ಭೀಮಸಂದ್ರ ಸಮೀಪದ ರಿಂಗ್‌ ರಸ್ತೆಯಲ್ಲಿ ಹಾದುಹೋಗಿರುವ ನಾಲೆಗೆ ಚರಂಡಿ, ಯುಜಿಡಿ ನೀರು ಹರಿದು ಸೇರುತ್ತಿದೆ. ಕುಣಿಗಲ್‌ ಭಾಗಕ್ಕೆ ಹಾದು ಹೋಗುವ ಚಾನೆಲ್‌ಗೆ ಯುಜಿಡಿ ಮತ್ತೆ ಕೊಳಚೆ ನೀರು ಸೇರುತ್ತಿರುವ ಪರಿಣಾಮ ಈ ಭಾಗದ ಹೇಮೆ ನೀರನ್ನು ಅವಲಂಬಿಸಿರುವ ಕೆರೆಗಳಿಗೆ ಕಂಟಕವಾಗಿದ್ದು, ಈ ನೀರನ್ನು ಬಳಸುತ್ತಿರುವ ಜನರಿಗೆ ಆತಂಕ ಎದುರಾಗಿದೆ. ಹಾಗಾಗಿ ಮುಂದೆ ಎದುರಾಗಬಹುದಾದ ಕಂಟಕವನ್ನು ತಪ್ಪಿಸುವ ನಿಟ್ಟಿನಲ್ಲಿ ಕುಣಿಗಲ್‌ ಶಾಸಕ ಡಾ.ರಂಗನಾಥ್‌ ಅವರು ಎಚ್ಚೆತ್ತುಕೊಂಡು ಕ್ರಮವಹಿಸಿ ಯುಜಿಡಿ ಮತ್ತು ಕಲುಷಿತ ನೀರು ಹೇಮೆಗೆ ಸಂಪರ್ಕವಾಗುವುದನ್ನು ತಪ್ಪಿಸಬೇಕಾಗಿದೆ.

ಸಮಸ್ಯೆಯಾಗುತ್ತಿತ್ತು: ಭಾರಿ ಮಳೆ ಬಂದಾಗ ಕೊಳಚೆ ನೀರು ಚಾನೆಲ್‌ಗೆ ಸೇರಿ ಸಮಸ್ಯೆಯಾಗುತ್ತಿತ್ತು. ತುಮಕೂರಿನಲ್ಲಿ ಭಾರೀ ಮಳೆಯಿಂದಾಗಿ ನಗರದ ಚರಂಡಿ ನೀರು ಮಳೆಯ ಆರ್ಭಟದಿಂದ ಹರಿದು ಹೋಗಿ ಕುಡಿಯುವ ನೀರಿನ ಹೇಮಾವತಿ ನಾಲೆಗಳನ್ನು ಸೇರುತ್ತಿದ್ದು, ಇದರ ಪರಿಣಾಮ ನಾಲೆಯಿಂದ ಸುತ್ತಮುತ್ತಲ ಕೆರೆಗಳ ಒಡಲನ್ನೂ ಸಹ ಸೇರುತ್ತಿದ್ದ ಘಟನೆ ನಡೆದಿದೆ. ಆದರೆ ಈಗ ನೇರವಾಗಿ ಕಲುಷಿತ ನೀರು ನಾಲೆ ಸೇರುತ್ತಿದ್ದೆ.

ಅಧಿಕಾರಿಗಳ ಮೌನ : ಹೇಮಾವತಿ ಒಡಲಿಗೆ ಯುಜಿಡಿ, ಕಲುಷಿತ ನೀರು ಕಳೆದ ಏಳೆಂಟು ತಿಂಗಳಿಂದ ಸೇರುತ್ತಿದ್ದರೂ ಅಧಿಕಾರಿಗಳು ಮೌನವನ್ನು ವಹಿಸಿದ್ದಾರೆ. ಅಲ್ಲದೇ, ಇದು ಪಾಲಿಕೆಯ ಅಧಿಕಾರಿಗಳು ಮತ್ತು ಹೇಮಾವತಿ ನಾಲಾ ಅಧಿಕಾರಿಗಳ ನಿರ್ಲಕ್ಷ್ಯವಾಗಿದೆ ಎಂಬುದು ಸ್ಥಳೀಯರು ತಮ್ಮ ಆಕ್ರೋಶವನ್ನೂ ಹೊರ ಹಾಕುತ್ತಿದ್ದಾರೆ.

ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಬೇಕು: ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಇಂದು ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲುಷಿತ ಮತ್ತು ಯುಜಿಡಿ ನೀರು ಹೇಮಾವತಿ ನಾಲೆಗೆ ಹೋಗುತ್ತಿರುವುದುನ್ನು ಸರಿಪಡಿಸಲು ಮುಂದಾಗಿದ್ದಾರೆ. ಆದರೆ, ಹೇಮಾವತಿ ಇಲಾಖಾಧಿಕಾರಿಗಳು ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುವುದು ಅತ್ಯಗತ್ಯವಾಗಿದೆ.

ಹೇಮಾವತಿ ನಾಲೆಗೆ ಸೋರಿಕೆಯಾಗುತ್ತಿರುವುದು ಕೊಳಚೆ, ಯುಜಿಡಿ ನೀರಲ್ಲ. ಕಲುಷಿತ ನೀರು. ಈಗಾಗಲೇ ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೋರಿಕೆಯನ್ನು ತಡೆಗಟ್ಟುವುದಕ್ಕೆ ಕ್ರಮ ವಹಿಸಿದ್ದೇವೆ. ಈಗಾಗಲೇ ಸೋರಿಕೆ ಜಾಗಕ್ಕೆ ಕಾಂಕ್ರಿಟ್‌ ಹಾಕಲಾಗುತ್ತಿದೆ. – ಅಭಿಷೇಕ್‌, ಎಇಇ, ತುಮಕೂರು ಮಹಾನಗರ ಪಾಲಿಕೆ

– ಗಿರೀಶ ಎಸ್‌.ಕಲ್ಗುಡಿ

ಟಾಪ್ ನ್ಯೂಸ್

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.