ಉಳ್ತೂರು ಗುಡ್ಡೆವಳಲಿನಲ್ಲಿ ಭೂಗರ್ಭ ಸೇರುತ್ತಿದೆ 800 ವರ್ಷ ಇತಿಹಾಸವುಳ್ಳ ಶಿಲಾಶಾಸನ !

Team Udayavani, Jun 17, 2019, 5:50 AM IST

ತೆಕ್ಕಟ್ಟೆ : ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಮಹತೋಭಾರ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಐತಿಹಾಸಿಕ ವಿಜಯ ನಗರ ಕಾಲದಲ್ಲಿ ವೈಭವದಿಂದ ಮೆರೆದ ಸುಮಾರು 800 ವರ್ಷಗಳ ಇತಿಹಾಸವಿರುವ ಅತ್ಯಮೂಲ್ಯ ಬೃಹತ್‌ ಶಿಲಾ ಶಾಸನವೊಂದು ಇಲ್ಲಿಗೆ ಸಮೀಪದ ಗುಡ್ಡೆವಳಲು ಎಂಬಲ್ಲಿ ಕಾನನದ ನಡುವೆ ಭೂಗರ್ಭ ಸೇರುತ್ತಿದ್ದು ಶಾಸನದ ಮೇಲಿನ ಬರಹಗಳು ಸಂಪೂರ್ಣ ಮರೆಯಾಗುತ್ತಿದೆ .

ಈ ಹಿನ್ನೆಲೆಯಲ್ಲಿ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹಲೂ¤ರು ಸುರೇಂದ್ರ ಹೆಗ್ಡೆ ಹಾಗೂ ಬಸೂÅರಿನ ಪ್ರಶಾಂತ್‌ ಕುಮಾರ್‌ ಅವರು ಈ ಹಿಂದೆ ಉದಯವಾಣಿಯಲ್ಲಿ ಪ್ರಕಟಗೊಂಡ ವರದಿಯ ಆಧಾರದ ಮೇಲೆ ಜೂ.16 ರಂದು ಶಾಸನಗಳಿರುವ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಪಡೆದು ಸಂರಕ್ಷಣೆಗೆ ಚಿಂತನೆ ಮಾಡಿದ್ದಾರೆ.

ಮಾತನಾಡುವ ಶ್ರೀ ಮಹಾಲಿಂಗ ಎಂದೇ ಪ್ರಸಿದ್ಧಿಯಾದ ಉಳೂ¤ರಿನ ಶ್ರೀ ಮಹಾಲಿಂಗೇಶ್ವರ ವಿಜಯ ನಗರದ ಆಳ್ವಿಕೆಯ ಕಾಲದ ವೈಭವದಿಂದ ಮೆರೆದ ಅತ್ಯಮೂಲ್ಯ ಮಾಹಿತಿಗಳು ಗುಡ್ಡೆವಳಲಿನಲ್ಲಿರುವ ಶಾಸನಗಳು ಅಡಕವಾಗಿದ್ದು ಎಂದು ಹೇಳಲಾಗುತ್ತಿದೆ. ಹಿಂದೆ ಈ ದೇವಳದ ಮೂಲ ಸ್ಥಾನವೇ ಗುಡ್ಡೆವಳಲಿನಲ್ಲಿತ್ತು ಎಂಬುದು ಪೂರ್ವಜರ ಅಭಿಪ್ರಾಯ. ಅದಕ್ಕೆ ನಿದರ್ಶನವಾಗಿ ಇಲ್ಲಿ ಕೆಲವು ಕುರುಹುಗಳ ನಡುವೆ ಈ ಶಾಸನಗಳಿವೆ.

ಶಾಸನ ಹೇಳುವಂತೆ ಉಳೂ¤ರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗೃಹದ ಎದುರಿನಲ್ಲಿ ಎರಡು ಶಿಲಾ ಶಾಸನ ಹಾಗೂ ಇಲ್ಲಿಗೆ ಸಮೀಪದಲ್ಲಿರುವ ಗುಡ್ಡೆವಳಲು ಎಂಬಲ್ಲಿ ಇರುವ ಶಾಸನಗಳ ಅಧ್ಯಯನದ ಪ್ರಕಾರ ಈ ಊರಿನ ಹೆಸರು ಮೊಳತ್ತೂರು ಎಂದಿತ್ತು ಎಂದು ಹೇಳಲಾಗುತ್ತಿದೆ.

ಕರಾವಳಿ ತೀರದಿಂದ ಒಳ ಭಾಗದಲ್ಲಿರುವ ಈ ಗ್ರಾಮದಲ್ಲಿ ಎಷ್ಟೇ ಮಳೆ , ನೆರೆ ಬಂದರೂ ಈ ಊರು ಉಳಿಯುತ್ತಿತ್ತು. ಇಲ್ಲಿನ ಗುಡ್ಡೆವಳಲಿನಲ್ಲಿರುವ ಶಿಲಾ ಶಾಸನದಂತೆ ಇಲ್ಲಿನ ಐತಿಹಾಸಿಕ ವೈಭವದ ಆಡಳಿತವನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಹೀಗಾಗಿ ಈ ಪ್ರದೇಶವನ್ನು ಶಾಸನಗಳು ಉಲ್ಲೇಖೀಸುವಂತೆ ದೇವಸ್ಥಾನ ಇರುವ ಸ್ಥಳವನ್ನು “ಮಾಳತೂರು ಕೇರಿಯ ಮಹಾದೇವ’ ಎಂದು ನಮೂದಿಸಲ್ಪಟ್ಟಿತ್ತು.

ವಿಜಯ ನಗರ ಸಾಮ್ರಾಜ್ಯದ ಸ್ಥಾಪಕರಲ್ಲೊಬ್ಬನಾದ ಒಂದನೇ ಬುಕ್ಕರಾಯನ ಆಳ್ವಿಕೆಯ ಶಾಸನವೊಂದು ದೇವಳದ ಗರ್ಭಗೃಹದ ಎದುರು ಶಿಲಾ ಶಾಸನ 34 ಸಾಲುಗಳನ್ನು ಕ್ರಿ.ಶ.1438 ರಲ್ಲಿ ಬರೆಸಿದಾಗಿದ್ದು ಇವು ಕನ್ನಡ ಭಾಷೆಯಲ್ಲಿವೆ.
ಹೀಗೆ ಈ ಗ್ರಾಮದಲ್ಲಿ ಇನ್ನು ಕೆಲವು ಶಿಲಾ ಶಾಸನಗಳಿದ್ದು ಕೆಲವೊಂದು ಶಾಸನಗಳು ನೀರಿನಲ್ಲಿವೆ ಎಂದು ದಿ| ಡಾ| ಬಿ. ವಸಂತ ಶೆಟ್ಟಿಯವರು ತಮ್ಮ ಸಂಶೋಧನಾತ್ಮಕ ಲೇಖನದಲ್ಲಿ ಉಲ್ಲೇಖೀಸಿದ್ದಾರೆ.

ಗಮನ ಹರಿಸಬೇಕು
ಶ್ರೀ ಮಹಾಲಿಂಗೇಶ್ವರ ದೇವನ ಪಾಣಿಪೀಠವನ್ನು ಹೊಂದಿದ ಲಿಂಗ ಹಾಗೂ ಇದರ ಎರಡು ಬದಿಯಲ್ಲಿ ಬಸವ ಮತ್ತು ದೀಪದ ಸಂಕೇತ ಎದ್ದು ಕಾಣುತ್ತಿದೆ. ಮೇಲ್ಭಾಗದದಲ್ಲಿ ಸೂರ್ಯ ಚಂದ್ರರ ಕೆತ್ತನೆಗಳಿದ್ದು ಒಂದೆಡೆಯಲ್ಲಿ ಖಡ್ಗದ ಸಂಕೇತಗಳಿರುವುದರಿಂದ ಇದು ರಾಜ ಶಾಸನ ಎಂದು ಹೇಳಲಾಗುತ್ತಿದೆ. ಈ ಶಾಸನದಲ್ಲಿ ಅಕ್ಷರಗಳು ಮಾಸಿದಂತಿದ್ದು ಸಂಬಂಧಪಟ್ಟ ಶಿಲಾ ಶಾಸನ ತಜ್ಞರು ಅಧ್ಯಯನಗೈಯುವ ಜತೆಗೆ ಪ್ರಾಚ್ಯ ಇಲಾಖೆಯವರು ಸಂರಕ್ಷಿಸುವ ಬಗ್ಗೆ ಗಮನಹರಿಸಬೇಕು.
-ಪ್ರಶಾಂತ್‌ ಕುಮಾರ್‌ ಬಸೂÅರು , ಶಾಸನಗಳ ಸಂರಕ್ಷಕರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ