ಕೃಷ್ಣನ ಊರಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಪರ್ಯಾಯೋತ್ಸವಕ್ಕೆ ರಂಗು ತುಂಬಿದ ಮೆರವಣಿಗೆ; ವೈವಿಧ್ಯಮಯ ಕಲಾತಂಡಗಳು, ಟ್ಯಾಬ್ಲೋಗಳು

Team Udayavani, Jan 18, 2020, 10:23 PM IST

meg-19

ಉಡುಪಿ: ಅದಮಾರು ಶ್ರೀಪಾದರ ಈ ಬಾರಿಯ ಪರ್ಯಾಯ ಮಹೋತ್ಸವದ ವೈಭವದ ಮೆರವಣಿಗೆ ಭಕ್ತರ ಜಯಘೋಷದ ನಡುವೆ ಶನಿವಾರ ಉಡುಪಿಯ ಮುಖ್ಯ ರಸ್ತೆಯಲ್ಲಿ ಅದ್ದೂರಿಯಾಗಿ ನೆರವೇರಿತು. ಮೆರವಣಿಗೆ ವೀಕ್ಷಿಸಲು ಪ್ರವಾಹೋಪಾದಿಯಲ್ಲಿ ಆಗಮಿಸಿದ್ದ ಲಕ್ಷಕ್ಕೂ ಹೆಚ್ಚು ಕೃಷ್ಣ ಭಕ್ತರು ನೆರೆದು ಪರ್ಯಾಯೋತ್ಸವ ಕಣ್ತುಂಬಿಕೊಂಡರು. ಮೆರವಣಿಗೆ ಸಾಗಿ ಬಂದ ರಸ್ತೆ, ಇಕ್ಕೆಲಗಳಲ್ಲಿ ಜನರು ಮೆರವಣಿಗೆ ವೀಕ್ಷಿಸಿದರು. ಬೃಹತ್‌ ಕಟ್ಟಡಗಳ ಮಾಳಿಗೆಗಳಲ್ಲಿ, ಕಾಂಪೌಂಡ್‌ ಗೋಡೆಗಳ ಮೇಲೆಯೂ ನಿಂತು ಆಸ್ವಾದಿಸಿದರು.

ಕೃಷ್ಣ ಮಠದಿಂದ 1 ಕಿ.ಮೀ ದೂರವಿರುವ ಜೋಡುಕಟ್ಟೆ ಬಳಿಯಿಂದ ಶನಿವಾರ ಬೆಳಗಿನ ಜಾವ 1.55ಕ್ಕೆ ಮೆರವಣಿಗೆ ಆರಂಭವಾಯಿತು. ಸಂಪ್ರದಾಯದಂತೆ ಉಡುಪಿಯಿಂದ 20 ಕಿ.ಮೀ ದೂರದ ದಂಡತೀರ್ಥದಲ್ಲಿ ಅದಮಾರು ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪವಿತ್ರ ತೀರ್ಥ ಸ್ನಾನ ಪೂರೈಸಿ ಜೋಡುಕಟ್ಟೆಗೆ ಆಗಮಿಸಿದರು.

ಜೋಡುಕಟ್ಟೆಯಿಂದ ಹೊರಟ ಶೋಭಾಯಾತ್ರೆ
ಶ್ರೀಪಾದರನ್ನು ಅಷ್ಟಮಠದ ಇತರೆ ಮಠಾಧೀಶರು ಬರಮಾಡಿಕೊಂಡರು. ಜೋಡುಕಟ್ಟೆ ಮಂಟಪದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಪರ್ಯಾಯ ಮೆರವಣಿಗೆ ಆರಂಭಗೊಂಡಿತು. ಕೆ.ಎಂ. ಮಾರ್ಗ, ತಾ. ಕಚೇರಿ ರಸ್ತೆಯ ಮೂಲಕ ರಥಬೀದಿಗೆ ಸಾಗಿತು. ವಿವಿಧ ಸ್ತಬ್ಧಚಿತ್ರಗಳು, ಕಲಾ ತಂಡಗಳು ಮೆರವಣಿಗೆಯಲ್ಲಿ ಒಳಗೊಂಡಿದ್ದು ಸಾಂಪ್ರ ದಾಯಿಕತೆಗೆ ಆದ್ಯತೆ ನೀಡಲಾಗಿತ್ತು. ವೇದಘೋಷ, ಲಕ್ಷ್ಮೀಶೋಭಾನೆ, ಕಾಳಿಯಮರ್ದನ ಶ್ರೀಕೃಷ್ಣ ದೇವರು, ಶ್ರೀ ರಾಮ ಮಂದಿರದಲ್ಲಿ ಪೂಜಿಸುತ್ತಿರುವ ಪೇಜಾವರ ಶ್ರೀಗಳು, ಬೆಳ್ಳಿರಥದಲ್ಲಿ ಶ್ರೀ ಕೃಷ್ಣ, ಆಂಜನೇಯ, ತುಳಸಿ ಅರ್ಚನೆಯ ಬೆಳ್ಳಿ ರಥ, ನವದುರ್ಗೆಯರು, ವೃಂದಾವನ ಆಕೃತಿಯ ವಾಹನದಲ್ಲಿ ಮಹಿಳೆಯರ ತಂಡದ ಭಜನೆ, ಕುಂಜಾರುಬೆಟ್ಟ, ಮಧ್ವಾಚಾರ್ಯರು, ದೇಸೀಯ ಗೋವಿನ ತಳಿ, ಹಳ್ಳಿ ಜೀವನ, ತುಳುನಾಡ ಸಂಸ್ಕೃತಿ, ಪ್ಲಾಸ್ಟಿಕ್‌ ಭೂತ, ಇಸ್ರೋ ವೀಕ್ಷಣೆ, ನಾಡ ದೋಣಿ ಇವು ಟ್ಯಾಬ್ಲೋಗಳಲ್ಲಿ ಪ್ರತಿಬಿಂಬಿಸಿದವು.

ನಗರಸಭೆಯ ಸ್ವತ್ಛತೆಯ ಟ್ಯಾಬ್ಲೋ, ಕೃಷಿ ಇಲಾಖೆಯ ಕೃಷಿಯ ಸೊಬಗಿನ ಟ್ಯಾಬ್ಲೋ, ಪ್ರವಾಸೋದ್ಯಮ ಇಲಾಖೆಯ ತುಳುನಾಡ ಸೃಷ್ಟಿ, ಜಿಲ್ಲಾ ಪಂಚಾಯತ್‌ ವತಿಯಿಂದ ವಿಶೇಷ ಭಜನೆ ತಂಡಗಳು ರಂಗು ತುಂಬಿದವು.

ಪೂರ್ಣಕುಂಭ, ಬಿರುದಾವಳಿ, 4 ಗೊಂಬೆ ತಂಡಗಳು, 7 ಚೆಂಡೆ ಬಳಗ, ಪಂಚವಾದ್ಯ, 20 ಮಂದಿಯ ಕೊಂಬು ವಾದ್ಯ, ನಾಗಸ್ವರ ತಂಡ, ಸ್ಯಾಕೊÕàಫೋನ್‌ ತಂಡ, ನಾಸಿಕ್‌ ಬ್ಯಾಂಡ್‌, ಚೆಂಡೆ ಮತ್ತು ಕೋಲಾಟ ತಂಡ, ತಮಟೆ ಮತ್ತು ನಗಾರಿ ತಂಡದ ವಾದನ, ತಾಲೀಮು, ಮರಕಾಲು ಕುಣಿತ. ಹೋಳಿಕುಣಿತ, ನವೀಲು ನೃತ್ಯ, ಬ್ಯಾಂಡ್‌ ಸೆಟ್‌, ಬ್ಯಾಂಡ್‌ ನಾಸಿಕ್‌, ಹುಲಿ ಕುಣಿತ ಟ್ಯಾಬ್ಲೊ, ವಿಷ್ಣು ಸಹಸ್ರನಾಮ, ಇಸ್ಕಾನ್‌ ಭಜನಾ ತಂಡ ಹಾಗೂ ಕುಣಿತ ಭಜನೆ ತಂಡಗಳಿದ್ದವು.

ತಟ್ಟಿರಾಯ, ಒಂಟೆ, ಕುದುರೆ, ಮುಖವರ್ಣಿಕೆಗಳು, ವಿದ್ಯಾರ್ಥಿಗಳ ಕೃಷ್ಣ ಗೋಪಿಕೆಯರ ನೃತ್ಯ, ಸ್ಥಳೀಯ ಶಿಕ್ಷಣ ಸಂಸ್ಥೆಗಳ ಭಾರತ ಸೇವಾದಳ ರೇಂಜರ್ ಆ್ಯಂಡ್‌ ರೋವರ್ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುವಿಕೆ ಮೆರುಗು ಹೆಚ್ಚಿಸಿದವು.

ಬೆಂಕಿ ಜ್ವಾಲೆಯ ಪ್ರದರ್ಶನ
ಪುತ್ತೂರು ಅಂಬಾಗಿಲು ಜನತಾ ವ್ಯಾಯಾಮ ಶಾಲೆಯ ತಂಡದವರು ಜೋಡುಕಟ್ಟೆ ಬಳಿ ವಿವಿಧ ಕಸರತ್ತುಗಳನ್ನು ನಡೆಸಿ ಮೆರವಣಿಗೆಯ ಮುಂಭಾಗದಲ್ಲಿ ಬಂದರು. ಮಾನವ ನಿರ್ಮಿತ ಗೋಪುರ ನಿರ್ಮಿಸಿ ಬೆಂಕಿ ಜ್ವಾಲೆಯ ಅನೇಕ ಪ್ರದರ್ಶನಗಳನ್ನು ನೀಡಿದರು.

ಕಲಾತಂಡಗಳ ಪ್ರದರ್ಶನ
ಮೈಸೂರು ಜಿಲ್ಲೆ ಗೋವಿಂದ ನಾಯ್ಕ ತಂಡದ ಡೊಳ್ಳು ಕುಣಿತ, ಮಂಡ್ಯ ಪಾಂಡವಪುರ ಡಿ.ವಿ. ರುದ್ರಸ್ವಾಮಿ ತಂಡದ ವೀರಗಾಸೆ, ರಾಮನಗರ ಜಿಲ್ಲೆ ಹನುಮಂತನಾಯ್ಕ ತಂಡದ ಪೂಜಾ ಕುಣಿತ, ದಾವಣಗೆರೆ ಜಿಲ್ಲೆ ಎಚ್‌. ಆರ್‌. ದೇವಣ್ಣ ತಂಡದ ಕರಡಿ ಮಜಲು, ಚಿತ್ರದುರ್ಗ ಜಿಲ್ಲೆಯ ಮಹಾಂತೇಶ್‌ ತಂಡದ ಗಾರುಡಿಗೊಂಬೆ ಕುಣಿತ, ದಾವಣೆಗೆರೆ ಜಿಲ್ಲೆ ವಸಂತಕುಮಾರ್‌ ತಂಡದ ಪುರವಂತಿಕೆ, ಧಾರವಾಡ ಜಿಲ್ಲೆ ಶಂಕರಪ್ಪ ಮಾದರ ತಂಡದ ಪುರವಂತಿಕೆ, ಧಾರವಾಡ ಜಿಲ್ಲೆ ಶಂಕರಪ್ಪ ಮಾದರ ತಂಡದ ಜಗ್ಗಳಿಕೆ ವಾದ್ಯ, ಹಾಸನ ಜಿಲ್ಲೆ ಕುಮಾರಯ್ಯ ತಂಡದ ಚಿಟ್ಟಿಮೇಳ, ಚಿತ್ರದುರ್ಗ ಜಿಲ್ಲೆ ಮೈಲಾರಪ್ಪ ತಂಡದ ಗೊರವರ ಕುಣಿತ, ತುಮಕೂರು ಜಿಲ್ಲೆ ಕುಮಾರಸ್ವಾಮಿ ತಂಡದ ಸೋಮನ ಕುಣಿತ, ಮೈಸೂರು ಜಿಲ್ಲೆ ವಿಶ್ವನಾಥ್‌ ತಂಡದ ಕಂಸಾಳೆ, ಉಡುಪಿ ಜಿಲ್ಲೆ ಶಂಕರ್‌ ದಾಸ್‌ ಚೆಂಡ್ಕಳ ತಂಡದ ಕಂಗೀಲು ನೃತ್ಯ, ಮಂದಾರ್ತಿ ಮಲ್ಲಿಕಾರ್ಜುನ ಕುಡುಬಿ ಜನಪದ ಗುಮಟೆ ನೃತ್ಯ, ಬ್ರಹ್ಮಾವರ ಬಾರ್ಕೂರು ಗಣೇಶ್‌ ಕೊರಗ ಮತ್ತು ತಂಡದ ಡೋಲು ವಾದ್ಯ, ಕೊಳಲು ವಾದನ ಮನಸೂರೆಗೊಳಿಸಿದವು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.