ಭೂಮಾಪನ ಇಲಾಖೆ: ಸರ್ವರ್‌ ಸಮಸ್ಯೆ; ಸರ್ವೇಯರ್‌ಗಳ ಕೊರತೆ


Team Udayavani, Mar 26, 2021, 4:00 AM IST

ಭೂಮಾಪನ ಇಲಾಖೆ: ಸರ್ವರ್‌ ಸಮಸ್ಯೆ; ಸರ್ವೇಯರ್‌ಗಳ ಕೊರತೆ

ಕಾರ್ಕಳ: ಭೂಮಾಪನ  ಇಲಾಖೆಯ ಖಾಸಗಿ ಪರವಾನಿಗೆ ಸರ್ವೇಯರ್‌ಅವರ ಮುಷ್ಕರ ಒಂದೆಡೆ, ಇನ್ನೊಂದೆಡೆ  ಸರಕಾರಿ ಸರ್ವೇಯರ್‌ಗಳ ಸಂಖ್ಯೆ ಕಡಿಮೆಯಿರುವುದು,  ಇಷ್ಟು  ಸಾಲದೆಂಬಂತೆ ಕೈಕೊಡುತ್ತಿರುವ ಸರ್ವರ್‌ ಸಮಸ್ಯೆ ಇದೆಲ್ಲದರ ನಡುವೆ ಜನರ  ಗೋಳು ಕೇಳುವವರೇ  ಇಲ್ಲದಂತಾಗಿದೆ.

ಭೂಮಿ ಮಾರಾಟ ಉದ್ದೇಶಕ್ಕಾಗಿ  11 ಇ ನಕಾಶೆ  ಸಹಿತ ವಿವಿಧ  ಕಡತಗಳಿಗೆ ಸಂಬಂಧಿಸಿದ ಕೆಲಸಗಳು ಕಂದಾಯ ಕಚೇರಿಯಲ್ಲಿ ಬಾಕಿಯಿವೆ. ಇದನ್ನು  ಮಾಡಿಸಿಕೊಳ್ಳಲು ಜನಸಾಮಾನ್ಯರು  ಕಚೇರಿ ಬಾಗಿಲು  ಬಡಿಯುತ್ತಿದ್ದರೆ  ಕೆಲಸಗಳು   ತ್ವರಿತಗತಿಯಲ್ಲಿ  ಆಗದೇ ಜನ ಹೈರಾಣಾಗಿದ್ದಾರೆ.  ದಿನದಿಂದ ದಿನಕ್ಕೆ  ಜನರ  ಅಸಹನೆಯೂ ಹೆಚ್ಚುತ್ತಿದೆ.

ಕುಟುಂಬದಲ್ಲಿ ಮದುವೆ, ಹೊಸಮನೆ  ನಿರ್ಮಾಣ ಸಹಿತ ಆರ್ಥಿಕ ಸಂಕಷ್ಟದಲ್ಲಿ   ಹಣಕಾಸು ನಿರ್ವಹಣೆ ಸೇರಿದಂತೆ ಅಗತ್ಯ  ಕೆಲಸಗಳಿಗೆ  ಜಮೀನು ಮಾರಾಟ ಮಾಡಲು ಹೊರಟವರಿಗೆ  ಸಕಾಲದಲ್ಲಿ  ಜಮೀನು ಮಾರಾಟ ಮಾಡಲಾಗದೆ  ವಿವಿಧ ಸರಕಾರಿ ಸೇವೆಗಳು  ಸಿಗದೆ  ಜನ ಪರದಾಡುತ್ತಿದ್ದಾರೆ.

ತಾಲೂಕುಗಳಲ್ಲಿ 1 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆ  :

ಜಿಲ್ಲೆಯಲ್ಲಿ ಪ್ರತಿ ತಿಂಗಳು ಭೂಮಾಪನಕ್ಕೆ  ಸರಾಸರಿ   6 ಸಾವಿರಕ್ಕೂ ಅಧಿಕ ಅರ್ಜಿಗಳು, ತಾಲೂಕುಗಳಲ್ಲಿ 1 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗು ತ್ತವೆ.  ಈ ಪೈಕಿ ಶೇ. 80ರಷ್ಟನ್ನು    ಪರವಾನಿಗೆ ಪಡೆದ ಖಾಸಗಿ  ಸರ್ವೇಯರ್‌ಗಳೇ  ವಿಲೇವಾರಿ ಮಾಡುತ್ತಿದ್ದರು.  ಕಳೆದ  ಒಂದು ತಿಂಗಳಿನಿಂದ ಖಾಸಗಿ ಸರ್ವೆಯರ್‌ಗಳು ವಿವಿಧ ಬೇಡಿಕೆ ಈಡೇರಿಸುವಂತೆ  ಒತ್ತಾಯಿಸಿ  ಕೆಲಸ ಸ್ಥಗಿತಗೊಳಿಸಿದ್ದಾರೆ. ಇದರಿಂದ  ಕಡತಗಳ ವಿಲೇವಾರಿಯನ್ನು ಭೂಮಾಪನ ಇಲಾಖೆಯ ಸರಕಾರಿ ಸರ್ವೇಯರ್‌ಗಳೇ ಮಾಡಬೇಕಿದ್ದು,ಇರುವ ಅತ್ಯಲ್ಪ ಸರ್ವೇಯರ್‌ಗಳಿಂದ ಇದು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರಿಗೆ ಸೇವೆ ಸಕಾಲ ದಲ್ಲಿ ಸಿಗುತ್ತಿಲ್ಲ. ಖಾಸಗಿ ಸರ್ವೇಯರ್‌ಗಳು  ಮುಷ್ಕರ ಹೂಡಿರುವುದರಿಂದ ಮತ್ತು ಸರಕಾರಿ  ಸರ್ವೇಯರ್‌ಗಳು ಕಡಿಮೆ ಇರುವುದರಿಂದ   ಕಡತ ವಿಲೆವಾರಿ ಆಗದೇ ಕಡತಗಳೆಲ್ಲವೂ ಕಚೇರಿಗಳಲ್ಲಿ ಬಾಕಿ ಉಳಿದುಕೊಂಡಿತ್ತು. ಜನಸಾಮಾನ್ಯರು   ಕೆಲಸ ಮಾಡಿಸಿಕೊಳ್ಳಲು ಪರದಾಡುತ್ತಿದ್ದು. ಅಧಿಕಾರಿಗಳಿಗೂ ಇದಕ್ಕೆ ಸ್ಪಂದಿಸಲು ಸಾಧ್ಯವಾಗದೆ ನಿರುತ್ತರರಾಗಿದ್ದಾರೆ.

ಜನಸಾಮಾನ್ಯರ ಕೆಲಸ ಬಾಕಿ  :

ತಾಲೂಕು  ಕಚೇರಿಗಳ ಭೂದಾಖಲೆ, ನೊಂದಣಿ  ವಿಭಾಗಗಳಲ್ಲಿ    ಸರ್ವರ್‌ ಸಮಸ್ಯೆ ಇರುವುದು ಇನ್ನೊಂದು ತೊಡಕು. ಇದರಿಂದ  ಸರಕಾರಿ ಸರ್ವೇಯರ್‌ಗಳಿಗೂ ತಲೆನೋವು,  ಜತೆಗೆ ಕೆಲಸ ಮಾಡಿಸಿಕೊಳ್ಳಲು ತೆರಳುವ ಜನಸಾಮಾನ್ಯರಿಗೂ  ಸಂಕಷ್ಟ. ಇದರ ನಡುವೆ ಜನಸಾಮಾನ್ಯರ ಕೆಲಸಗಳು ಬಾಕಿಯಾಗುತ್ತಿವೆ.  ಸಾರ್ವಜನಿಕರು ಕೆಲಸ ಗಳಿಗೆ ಕಚೇರಿಗೆ  ಅಲೆದಾಡಿದರೂ ಕೆಲಸವಾಗುತ್ತಿಲ್ಲ. ಟೋಕನ್‌ ಪಡೆದರೂ ಸರದಿ ಕೈ ತಪ್ಪುತ್ತಿದೆ. ಕೃಷಿಕರಿಗೆ, ಕೊರೊನಾ ಸಂದರ್ಭ ದೂರದ ಊರುಗಳಿಂದ ಊರಿಗೆ ಬಂದವರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದ್ದು,  ದೈನಂದಿನ ಕೆಲಸಗಳನ್ನು  ಬಿಟ್ಟು ನಿತ್ಯ ಅಲೆದಾಟ ನಡೆಸುತ್ತಿದ್ದಾರೆ. ಮಳೆಗಾಲಕ್ಕೂ ಮುಂಚಿತವಾಗಿ ಕೆಲಸ ಮಾಡಿಸಿಕೊಳ್ಳಬೇಕು ಎಂದು ಎಣಿಸಿದವರಿಗೆ ತೊಂದರೆ ಉಂಟಾಗಿದೆ.

 ಸೀಮಿತ ಅವಧಿಯಲ್ಲಿ ಕೆಲಸ ಮುಗಿಸಲು ಅನನುಕೂಲ  : ಪರವಾನಿಗೆದಾರ ಸರ್ವೇಯರ್‌ಗಳು ಭೂಮಾಪನ, 11ಇ ನಕಾಶೆ ತತ್ಕಾಲ್‌ ಪೋಡಿ  ಮುಂತಾದ ಸೇವೆಗಳನ್ನು ಮಾಡಿಕೊಡುತ್ತಿ ದ್ದರು. ಸರಕಾರಿ ಸರ್ವೇಯರ್‌ ಗಡಿ ಹದ್ದು ಬಸ್ತನ್ನಷ್ಟೇ  ನಿಭಾಯಿಸುತ್ತಿದ್ದರು. ಇದರಿಂದ ಸಾರ್ವ ಜನಿಕರಿಗೆ ಸಕಾಲದಲ್ಲಿ ಸೇವೆಗಳು  ಸಿಗುತಿತ್ತು.  ಈಗ ಕಂದಾಯ ಇಲಾಖೆ ತತ್ರಾಂಶದಲ್ಲಿ  ಬದಲಾವಣೆಗಳನ್ನು ತಂದು ಸರಕಾರಿ ಸರ್ವೇಯರ್‌ಗ‌ಳು ಈ ಎಲ್ಲ  ಸೇವೆಯನ್ನು ಮಾಡುವಂತೆ ಅವಕಾಶ ಕಲ್ಪಿಸಲಾಗಿದೆ. ಆದರೆ ಹೆಚ್ಚುವರಿ  ಹೊಣೆಗಾರಿಕೆ ಜತೆಗೆ ಈ ಎಲ್ಲ  ಕೆಲಸಗಳನ್ನು ಸೀಮಿತ ಅವಧಿಯಲ್ಲಿ  ಮುಗಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಎಷ್ಟೇ ಹೆಚ್ಚುವರಿ ಸಮಯ ತೆಗೆದುಕೊಂಡರೂ ನಿರೀಕ್ಷೆಯ ಸೇವೆ  ಜನರಿಗೆ ಸಿಗುತ್ತಿಲ್ಲ. ಅತಿಯಾದ‌  ಒತ್ತಡವೂ ಇವರ ಮೇಲಿದೆ.

ಪರವಾನಿಗೆ ಪಡೆದ ಭೂಮಾಪಕರಿಗೆ ತರಬೇತಿ  :

ಸರಕಾರಿ ಸರ್ವೇಯರ್‌ಗಳ ಕೊರತೆ ಹಿನ್ನೆಲೆಯಲ್ಲಿ ಇದನ್ನು ನಿವಾರಿಸಲು   ಬೊಕ್ಕಸಕ್ಕೆ ಹೊರೆಯಾಗದಂತೆ  2001ರಲ್ಲಿ  ಕಾನೂನಿಗೆ ತಿದ್ದುಪಡಿ ತರಲಾಗಿತ್ತು. ಪರವಾನಿಗೆ ಪಡೆದ  ಭೂಮಾಪಕರಿಗೆ  ತರಬೇತಿ ನೀಡಿ   ಅರ್ಜಿ ವಿಲೇವಾರಿಗೆ   300 ರೂ. ಗೌರವಧನ  ಪಾವತಿಸುವ ಮಾನದಂಡ ಜಾರಿಗೆ ತರಲಾಯಿತು. 2008ರಲ್ಲಿ  ಸೂಕ್ತ ಕೆಲಸ ಮತ್ತು  ಸಕಾಲದಲ್ಲಿ ಪಾವತಿಸುವಂತೆ ಖಾಸಗಿ  ಭೂಮಾಪಕರು ಪ್ರತಿಭಟನೆ ನಡೆಸಿದ್ದರು. ಭೂಮಾಪಕರಿಗೆ  11ಇ  ಸೇವೆಗಳಾದ ಜಮೀನು   ಕ್ರಯ, ಕನ್ವರ್ಷನ್‌, ದಸ್ತಾವೇಜು, ವ್ಯವಹಾರ ಕಡತಗಳು

ಬೆಂಗಳೂರಿನಿಂದ  ಆನ್‌ಲೈನ್‌ ಮೂಲಕ ಜಮೆ ಪದ್ಧತಿ ಜಾರಿಗೆ ಬಂತು. ಪರವಾನಿಗೆ  ಪಡೆದ  ಭೂಮಾಪಕರಿಗೆ  2014ರಿಂದ ತತ್ಕಾಲ್‌ ಪೋಡಿಗೆ ಸಂಬಂಧಿಸಿದ   ಗೌರವಧನ ದಕ್ಕಿಲ್ಲ. ಸರಕಾರಿ ಸರ್ವೇಯರ್‌ ಇಲ್ಲವೆಂದು ಪರವಾನಿಗೆ ಸರ್ವೇಯರ್‌ಗಳಿಂದ   ಕೆರೆ, ರಸ್ತೆ ಅಳತೆ, ಒಳಚರಂಡಿ ಸಮೀಕ್ಷೆ  ಅಳತೆ  ಕೆಲಸವನ್ನು ಮಾಡಿಸಿದ್ದರು.

ಪರವಾನಿಗೆದಾರ  ಭೂಮಾಪಕರ 2,700 ಮಂದಿಯ  ನೇಮಕವಾಗಿದ್ದು, ತರಬೇತಿ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ. ನಿನ್ನೆ ಇಂದು ನೋಂದಣಿ ಪ್ರಕ್ರಿಯೆಗಳು ನಡೆದಿವೆ. ಹಿಂದೆ  ಗುಲ½ರ್ಗಾ ಮತ್ತು ರಾಯಚೂರು ಎರಡು ಕೇಂದ್ರಗಳಿತ್ತು. ಅದನ್ನು  ಹೊಸದಾಗಿ ಇನ್ನೆರಡು ಕಡೆ   ತರಬೇತಿ ಶಿಬಿರ ತೆರೆದು ನಾಲ್ಕು  ಕೇಂದ್ರಕ್ಕೆ ವಿಸ್ತರಿಸಲಾಗಿದೆ. ಈ ತಿಂಗಳಾಂತ್ಯದೊಳಗೆ   ಇವರು  ಕರ್ತವ್ಯಕ್ಕೆ  ದೊರೆತು ಸಮಸ್ಯೆ  ಪರಿಹಾರ ಕಾಣಲಿದೆ.  –ನಿರಂಜನ್‌ ಎಂ.,  ಭೂದಾಖಲೆಗಳ ಉಪನಿರ್ದೇಶಕರು, ಉಡುಪಿ ಜಿಲ್ಲೆ

 

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.