ಗಾಳಿ,ಮಳೆಯಿಂದ ವಿವಿಧೆಡೆ ಅಪಾರ ಹಾನಿ


Team Udayavani, May 29, 2018, 6:00 AM IST

rain-da-1.jpg

ಉಡುಪಿ ಸುತ್ತಮುತ್ತಲಿನಲ್ಲಿ  ಹಾನಿ
ಉಡುಪಿ:
ರವಿವಾರ ರಾತ್ರಿ, ಸೋಮವಾರ ಮುಂಜಾನೆ ಸುರಿದ ಭಾರಿ ಗಾಳಿ, ಸಿಡಿಲು, ಮಿಂಚು ಸಹಿತ ಮಳೆಗೆ ಉಡುಪಿಯಲ್ಲಿ ಹಲವೆಡೆ ಮರಗಳು ಉರುಳಿ ಬಿದ್ದಿದೆ. ಮನೆಗಳಿಗೆ ನೀರು ನುಗ್ಗಿದೆ. ವಿದ್ಯುತ್‌ ಸಂಪೂರ್ಣ ವ್ಯತ್ಯಯವಾಗಿದೆ.
 
ಶ್ರೀಕೃಷ್ಣ ಮಠ ಪರಿಸರದ ತೆಂಕಪೇಟೆ, ಬಡಗುಪೇಟೆಯಲ್ಲೂ ನೆರೆ ಬಂದಿದೆ. ರವಿವಾರ ಮಧ್ಯರಾತ್ರಿ ಮಠದ ರಥಬೀದಿ, ಬಡಗುಪೇಟೆಯ ಕಾಳಿಂಗ ರಾವ್‌ ರಸ್ತೆ, ಮುಕುಂದಕೃಪಾ ರಸ್ತೆ ಜಲಾವೃತಗೊಂಡಿತ್ತು. ಮನೆಗಳಿಗೂ ನೀರು ನುಗ್ಗಿದೆ. ಬನ್ನಂಜೆ, ಶಿರಿಬೀಡುವಿನಲ್ಲಿ ಮೂರ್‍ನಾಲ್ಕು ಅಡಿಗಳಷ್ಟು ಮೇಲಕ್ಕೆ ನೀರು ಮೇಲೇರಿ ಬಂದಿದೆ. ಸಮರ್ಪಕವಾದ ತೋಡಿನ ವ್ಯವಸ್ಥೆ ಇಲ್ಲದ ಕಾರಣ ಈ ರೀತಿಯಾಗಿದೆ ಎಂದು ವಾರ್ಡ್‌ನ ನಿವಾಸಿಗಳು ಹೇಳಿದ್ದಾರೆ.

ನಿಟ್ಟೂರಿನ ಲೀಲಾ ಬಾಯಿ, ಕೊಡವೂರಿನ ಕೆ. ವಿಟuಲ್‌ ಅವರ ಮನೆ ಮೇಲೆ ಭಾರಿ ಗಾತ್ರದ ಮರ ಬಿದ್ದು ಅಪಾರ ಪ್ರಮಾಣದ ಹಾನಿಯಾಗಿದ್ದು, ಅವರ ಮನೆಗಳಿಗೆ ಶಾಸಕ ಕೆ. ರಘುಪತಿ ಭಟ್‌ ಅವರು ಭೇಟಿ ಇತ್ತರು. ಪರಿಹಾರ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಮಣಿಪಾಲದ ಈಶ್ವರನಗರ, ಮಂಚಿ, ಅಂಬಾಗಿಲು ಪೆರಂಪಳ್ಳಿ, ದೊಡ್ಡಣಗುಡ್ಡೆ ಮೊದಲಾದೆಡೆಗಳಲ್ಲಿ ರಸ್ತೆ ಬದಿ ಇದ್ದ ಬೃಹತ್‌ ಮರಗಳು ಬಿದ್ದಿದೆ. ವಿದ್ಯುತ್‌ ತಂತಿ, ಕಂಬಗಳ ಮೇಲೆಯೇ ಮರ ಉರುಳಿದ್ದು, ಭಾರಿ ಪ್ರಮಾಣದಲ್ಲಿ ಮೆಸ್ಕಾಂಗೆ ಹಾನಿಯಾಗಿದೆ. ಮಂಚಿ ಯಲ್ಲಿ ಮರ ಬಿದ್ದು ವಾಹನಗಳಿಗೂ ಹಾನಿಯುಂಟಾಗಿದೆ. 

ನಗರ ಮಾತ್ರವಲ್ಲದೆ ಗ್ರಾಮಾಂತರ ದಲ್ಲಿಯೂ ಹಾನಿ ಪ್ರಮಾಣ ಹೆಚ್ಚಿಗೆ ಇದೆ. ಅಲ್ಲಲ್ಲಿ ರಸ್ತೆ ಸಂಚಾರ, ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಯಿತು. 

ಮರ ತೆರವು
ನಗರಸಭಾ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಆಗಬೇಕಾದ ಕೆಲಸಗಳ ಬಗೆಗೆ ಸಂಬಂಧಪಟ್ಟವರ ಗಮನ ಸೆಳೆದರು. ಮೆಸ್ಕಾಂ ಅಧಿಕಾರಿ/ಸಿಬಂದಿಯವರು ಸ್ಥಳೀಯರ ಸಹಕಾರದಿಂದ ಮರಗಳನ್ನು ತೆರವುಗೊಳಿಸಿದರು. ಅಲ್ಲಲ್ಲಿ ಕಡಿತಗೊಂಡ ವಿದ್ಯುತ್‌ ಸಂಪರ್ಕವನ್ನು ದುರಸ್ತಿಪಡಿಸಿ ಪುನಃಸ್ಥಾಪಿಸಲಾಗುತ್ತಿದೆ. 

ಕಾಪು ವಿವಿಧೆಡೆಗಳಲ್ಲಿ  ಹಾನಿ
ಕಾಪು: ರವಿವಾರ ರಾತ್ರಿ ಬೀಸಿದ ಜೋರಾದ ಗಾಳಿ ಸಹಿತ ಗುಡುಗು ಸಿಡಿಲಿನೊಂದಿಗಿನ ಸುರಿದ ಭಾರೀ ಮಳೆಗೆ ಕಾಪು ಸುತ್ತಮುತ್ತಲಿನಲ್ಲಿ ಅಪಾರ ಹಾನಿಯುಂಟಾಗಿದೆ.ಕಾಪು, ಮೂಳೂರು, ಮಜೂರು, ಹೇರೂರು, ಉಚ್ಚಿಲ, ಪಣಿಯೂರು, ಕೈಪುಂಜಾಲು, ಸುಭಾಸ್‌ ನಗರ ಮತ್ತು ಕೊಪ್ಪಲಂಗಡಿ ಪರಿಸರದಲ್ಲಿ ಮನೆ, ಬಸ್‌ ನಿಲ್ದಾಣ, ಆಸ್ಪತ್ರೆ, ವಿದ್ಯುತ್‌ ಕಂಬ, ವಿದ್ಯುತ್‌ ತಂತಿ ಮತ್ತು ರಸ್ತೆಗೆ ಮರ ಬಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಕರಂದಾಡಿ – ಹೇರೂರು
ಮಜೂರು-ಕರಂದಾಡಿ ರಸ್ತೆ ಬದಿಯಲ್ಲಿ ಬೃಹತ್‌ ದೂಪದ ಮರ ಬಿದ್ದು, ವಿದ್ಯುತ್‌ ಕಂಬ ತುಂಡಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
 
ಕಲ್ಲುಗುಡ್ಡೆ-ಹೇರೂರು ರಸ್ತೆಯಲ್ಲಿ ಗೇರು ಮರ ತುಂಡಾಗಿ ವಿದ್ಯುತ್‌ ಕಂಬದ ಮೇಲೆ ಬಿದ್ದಿದ್ದು, ವಿದ್ಯುತ್‌ ತಂತಿ ತುಂಡಾಗಿದೆ.

ಕಾಪು – ಉಚ್ಚಿಲ
ಕಾಪು ಜನಾರ್ದನ ದೇವಸ್ಥಾದ ಬಳಿ ಬೃಹತ್‌ ಮರವೊಂದು ಬುಡ ಸಮೇತವಾಗಿ ಗದ್ದೆಗೆ ಉರುಳಿ ಬಿದ್ದು ಹಾನಿಯುಂಟಾಗಿದೆ. ಉಚ್ಚಿಲ – ಪೊಲ್ಯ ರಸ್ತೆಯಲ್ಲಿ ಬೃಹತ್‌ ಗೋಳಿ ಮರವೊಂದು ತುಂಡಾಗಿ ಬಿದ್ದಿದ್ದು, ರಸ್ತೆ ಸಂಪರ್ಕಕ್ಕೆ ತಡೆಯುಂಟಾಗಿದೆ.

ಪಣಿಯೂರು
ಎಲ್ಲೂರು-ಪಣಿಯೂರು ರಸ್ತೆಯ ಸೆಂಟರ್‌ ಬಳಿ ಮರವೊಂದು ಉರುಳಿ ಬಿದ್ದು, ಇತೀ¤ಚೆಗೆ ಹಾಕಲಾಗಿದ್ದ ಹೊಸ ವಿದ್ಯುತ್‌ ಕಂಬಕ್ಕೆ ಹಾನಿಯುಂಟಾಗಿದೆ. ವಿದ್ಯುತ್‌ ತಂತಿಗಳೂ ತುಂಡಾಗಿದ್ದು ರವಿವಾರ ರಾತ್ರಿ ಬೈಕ್‌ ಸವಾರರಿಬ್ಬರು ವಿದ್ಯುತ್‌ ತಂತಿಯೊಳಗೆ ಸಿಲುಕಿ ಅಪಾಯಕ್ಕೆ ಸಿಲುಕುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಸುಭಾಸ್‌ನಗರ
ಕುರ್ಕಾಲು ಸುಭಾಸ್‌ನಗರ ಪೇಟೆಯ ಗಣೇಶ ಕಟ್ಟೆಯ ಬಳಿ ಮರ ಉರುಳಿ ಬಿದ್ದು ವಿದ್ಯುತ್‌ ಕಂಬ ಮತ್ತು ವಿದ್ಯುತ್‌ ತಂತಿಗೆ ಹಾನಿಯುಂಟಾಗಿದೆ. ಮರ ರಸ್ತೆಗೆ ಅಡ್ಡ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೂ ತೊಡಕುಂಟಾಗಿದೆ.

ಕೈಪುಂಜಾಲು
ಕಾಪು ಪುರಸಭೆ ವ್ಯಾಪ್ತಿಯ ಕೈಪುಂಜಾಲು ಪರಿಸರದಲ್ಲಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ಸಹಿತ ಹಲವು ಮನೆಗಳಿಗೆ ತೆಂಗಿನ ಮರ ಬಿದ್ದು ಹಾನಿಯುಂಟಾಗಿದೆ. ಕೆಲವು ಮನೆಗಳ ಹಂಚು ಹಾರಿ ಹೋಗಿ ಹಾನಿಯುಂಟಾಗಿದೆ.

ಕೈಕೊಟ್ಟ  ವಿದ್ಯುತ್‌
ಗುಡುಗು, ಸಿಡಿಲು, ಗಾಳಿಯ ಪ್ರತಾಪದಿಂದಾಗಿ ರವಿವಾರ ರಾತ್ರಿ 9.30ರಿಂದ ವಿದ್ಯುತ್‌ ಕೈ ಕೊಟ್ಟಿದ್ದು ಸೋಮವಾರ ಮಧ್ಯಾಹ್ನದವರೆಗೂ ಕತ್ತಲಿನಲ್ಲೇ ಕಾಲ ಕಳೆಯುವಂತಾಗಿದೆ. ಕಂಬಗಳ ಮೇಲೆ ಬಿದ್ದ ಮರಗಳ‌ನ್ನು ತೆರವುಗೊಳಿಸಲು ಹಾಗೂ ವಿದ್ಯುತ್‌ ಸಂಪರ್ಕವನ್ನು ಜೋಡಿಸಲು ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬಂದಿ ಹರಸಾಹಸ ಪಡುತ್ತಿದ್ದಾರೆ.

ಕೋಟೆ-ಮಟ್ಟು, ಕುರ್ಕಾಲು ಕಟಪಾಡಿ, ಉದ್ಯಾವರ ಸುತ್ತಮುತ್ತಲಿನಲ್ಲಿ  ಹಾನಿ
ಕಟಪಾಡಿ:
ರವಿವಾರ ರಾತ್ರಿ ಬàಸಿದ ಬಲವಾದ ಗಾಳಿ ಮತ್ತು ಸುರಿದ ಮಳೆಯಿಂದಾಗಿ ಕೋಟೆ-ಮಟ್ಟು, ಕಟಪಾಡಿ, ಮಣಿಪುರ, ಕುರ್ಕಾಲು, ಉದ್ಯಾವರ  ಗ್ರಾ.ಪಂ. ವ್ಯಾಪ್ತಿಯಲ್ಲಿ  ಅಪಾರ ಹಾನಿ  ಹಾನಿ ಸಂಭವಿಸಿದೆ.

ಕೋಟೆ ಗ್ರಾ.ಪಂ. ವ್ಯಾಪ್ತಿಯ ಮಟ್ಟು ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಡೇವಿಡ್‌ ಪಿಂಟೋ ಆವರ ಮನೆಯ ಮಾಡು, ನರಸಿಂಹ ಗಾಣಿಗರ ಮನೆಯ ಮೇಲ್ಛಾವಣಿ, ರತ್ನಾಕರ ಮನೆಯ ಹಂಚು, ದ್ಯಾಮು ಪೂಜಾರಿ¤ ಮನೆಯ ಶೀಟ್‌ಗಳು, ಹರಿದಾಸ ರಾವ್‌ ಮನೆಗೆ ಮರದ ಗೆಲ್ಲು ಬಿದ್ದಿದ್ದು, ದಡ್ಡಿ ಎಂಬಲ್ಲಿನ ಸುಶೀಲಾ ಪೂಜಾರಿ¤ ಮನೆ, ಕೋಟೆ ಮೆಂಡನ್‌ ಮನೆ, ಆಣೆಕಟ್ಟು ಬಳಿಯ ಉದಯ ವಿ. ಬಂಗೇರ, ಕೋಟೆ ಪಂಚಾಯತ್‌ ಬಳಿಯ ಬೆಂಜಮಿನ್‌ ಎಂಬವರ ಕ್ಯಾಂಟೀನ್‌, ಆಂಬಾಡಿ ಬೈಲ್‌ ಮುರಳಿ ಸಿ. ಬಂಗೇರ, ಸುಶೀಲ ಸಾಲ್ಯಾನ್‌, ಶಶಿಧರ್‌ ಸುವರ್ಣ, ದೇವು ಪಾಲನ್‌, ಅಂಬಾಡಿ ಬೇಬಿ, ಸದಿಯ ಸುವರ್ಣ, ಸದಿಯ ಸುವರ್ಣ, ಮಹಮ್ಮದ್‌ ಅಸಿಫ್‌, ಬಾಲಮ್ಮ ಪೂಜಾರಿ ಮನೆ, ಮಟ್ಟು ಕೊಪ್ಲ ಬಳಿ ತುಕ್ರಿ ಪೂಜಾರಿ¤  ಮನೆ, ಮಟ್ಟು ಗುಂಡ್ಲಡ್ಕ ಬಳಿಯ ಕಿನ್ನಾಲ್‌ ಪಾಠಾಳಿ ಮತ್ತು ನಾನಪ್ಪ ಕುಟುಂಬಸ್ಥರ ನಾಗ ಬನ ಸಹಿತ ಹಲವೆಡೆಗಳಲ್ಲಿ ಗಾಳಿಯ ರಭಸಕ್ಕೆ ಮನೆಯ, ಅಡುಗೆ ಕೋಣೆಗಳ, ಶೌಚಾಲಯಗಳ, ಹಂಚು, ಶೀಟ್‌ ಮುರಿದು ಬಿದ್ದಿದ್ದು, ಕೆಲವು ಕಡೆ ಮರಗಳು ಮನೆಯ ಮೇಲೆ ಮತ್ತು ನಾಗ ಬನದ ಒಳಗಡೆ ಬುಡ ಸಮೇತ ಮತ್ತು ಮುರಿದು ಬಿದ್ದು ಲಕ್ಷಾಂತರ ಮೌಲ್ಯದ ಹಾನಿ ಸಂಭವಿಸಿದೆ ಎಂದು ಪರಿಶೀಲನೆಗೈದ ಪಿ.ಡಿ.ಒ., ಗ್ರಾಮ ಲೆಕ್ಕಿಗರು, ಪಂಚಾಯತ್‌ ಆಡಳಿತ, ಸಿಬಂದಿಯಿಂದ ತಿಳಿದು ಬಂದಿದೆ.

ಕೋಟೆ ವ್ಯಾಪ್ತಿಯ ತೆಂಕು ಮನೆ ಲೀಲಾ ಆಂಬಾಡಿ ಮನೆಯ ವಿದ್ಯುತ್‌ ಪರಿಕರಗಳು ಮಿಂಚಿನ ಹೊಡೆತಕ್ಕೆ ಹಾನಿಗೊಳಗಾಗಿವೆ.

ಉದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಟ್ಟು ಕೊಪ್ಲ ಬಳಿ ಬೇಬಿ ಕುಂದರ ಎಂಬರ ಮನೆಯ ಮೇಲೆ ತೆಂಗಿನ ಮರ  ಬಿದ್ದು ಸುಮಾರು 80 ಸಾವಿರ ಮತ್ತು ಮೇಲ್ಪೇಟೆ ಅಜೀಜ್‌ ಎಂಬವರ ಮನೆಯ ಮೇಲೆ ಹಲಸಿನ ಗೆಲ್ಲೊಂದು ಬಿದ್ದು ಸುಮಾರು 20 ಸಾವಿರ ನಷ್ಟ ಹಾಗೂ 13ನೇ ವಾರ್ಡಿನಲ್ಲಿ ಹಲವೆಡೆ ತೆಂಗಿನ ಮರಗಳು ಮುರಿದು ಬಿದ್ದು ವಿದ್ಯುತ್‌ ಕಂಬಗಳು, ವಿದ್ಯುತ್‌ ತಂತಿ ಹಾನಿಗೊಳಗಾಗಿವೆ.

ಕುರ್ಕಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸುರೇಶ್‌ ಶೆಟ್ಟಿ, ಸುಶೀಲಾ ಪೂಜಾರಿ¤, ಶಾರದಾ ಆಚಾರ್ಯ, ಮನೆಯ ಮೇಲೆ ಮರಗಳು ಬಿದ್ದು ಹಾನಿ ಸಂಭವಿಸಿದೆ. ಗಾಳಿಯ ರಭಸಕ್ಕೆ ಸುಭಾಸ್‌ ನಗರ ಸರ್ಕಲ್‌ ಬಳಿ ಅಶ್ವತ್ಥ ಮರವೊಂದು ಧರಾಶಾಹಿಯಾಗಿದೆ, ಗಿಲ್ಬರ್ಟ್‌ ಮನೆ ಬಳಿ ಮರ ರಸ್ತೆಗುರುಳಿ ಬಿದ್ದಿದೆ. ಹಲವೆಡೆ ವಿದ್ಯುತ್‌ ತಂತಿ ಹಾನಿಗàಡಾಗಿದೆ.

ಕಟಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ವೇಣುಗಿರಿ ದೇವಸ್ಥಾನದ ಬಳಿಯಲ್ಲಿ ಮರ ಬಿದ್ದು ವಿದ್ಯುತ್‌ ತಂತಿ, ಸಹಿತ ಮಣಿಪುರ ರಸ್ತೆಯಲ್ಲಿ ಅಲ್ಲಲ್ಲಿ ಮರ ಬಿದ್ದು ಹಾನಿ ಸಂಭವಿಸಿದೆ.

ಕಟಪಾಡಿ ಮೆಸ್ಕಾಂ ವಿಭಾಗದ ಎಸ್‌.ಒ. ರಾಜೇಶ್‌ ನಾಯಕ್‌ ಉದಯವಾಣಿಗೆ ಮಾಹಿತಿ ನೀಡಿ, ಮಣಿಪುರ, ಮಟ್ಟು, ಮೂಡಬೆಟ್ಟು, ಪಾಂಗಾಳ, ಚೊಕ್ಕಾಡಿ, ಅಗ್ರಹಾರ,  ತೌಡಬೆಟ್ಟು, ಮಟ್ಟು ವಿಷ್ಣುಮೂರ್ತಿ ದೇವಸ್ಥಾನದ ಬಳಿ ಸುಮಾರು 16ಕ್ಕೂ ಮಿಕ್ಕಿದ ವಿದ್ಯುತ್‌ ಕಂಬಗಳು, ವಿದ್ಯುತ್‌ ತಂತಿಗಳು ಹಾನಿಗೀಡಾಗಿವೆ. ಸುಮಾರು 4ಲಕ್ಷ 50 ಸಾವಿರಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ. 2 ಗ್ಯಾಂಗ್‌ ಮೂಲಕ ಸರಿಪಡಿಸುವ ಕೆಲಸ ಭರದಿಂದ ಸಾಗುತ್ತಿದ್ದು, ಶೇ.90 ಭಾಗ ಕೆಲಸಕಾರ್ಯ ಪೂರೈಸಲಾಗಿದೆ ಎಂದರು. ಈ ಪ್ರಾಕೃತಿಕ ವಿಕೋಪದಿಂದ ಎಲ್ಲೆಡೆಯ ಲ್ಲಿಯೂ ವಿದ್ಯುತ್‌ ವ್ಯತ್ಯವಾಗಿರುತ್ತದೆ. 

ಮರ್ಣೆ ಗ್ರಾಮದ ಅಂಗನವಾಡಿ ಮೇಲೆ ಬಿದ್ದ ಮರ ,ಸಾಣೂರು ಗ್ರಾಮದ ಹಲವು ಮನೆಗಳಿಗೆ ಹಾನಿ
ಕಾರ್ಕಳ:
ಕಾರ್ಕಳ ತಾಲೂಕಿನಾದ್ಯಂತ ಮೇ 27ರಂದು ತಡರಾತ್ರಿ ಸುರಿದ ಭಾರೀ ಗಾಳಿ-ಮಳೆ ಹಾಗೂ ಸಿಡಿಲಿಗೆ ಹಲವು ಮನೆ ಹಾಗೂ ಕೃಷಿಗೆ ಹಾನಿಯುಂಟಾಗಿದ್ದು, ವಿವಿಧ ಭಾಗಗಳಲ್ಲಿ ಅಪಾರ ನಷ್ಟ ಸಂಭವಿಸಿದೆ.

ಬೋಳ ಗ್ರಾಮದ ಸೋಮಾವತಿ ಅವರ ಮನೆಗೆ ಸಿಡಿಲು ಬಡಿದು 40 ಸಾವಿರ ರೂ. ನಷ್ಟ ಸಂಭವಿಸಿದೆ. ಮರ್ಣೆ ಗ್ರಾಮದ ಅಂಗನವಾಡಿ ಮೇಲೆ ಮರ ಬಿದ್ದು ಸುಮಾರು 5 ಸಾವಿರ ರೂ.ನಷ್ಟು ನಷ್ಟವಾಗಿದೆ. ಅಲ್ಲದೇ ಕಲತ್ರಪಾದೆ ನಲ್ಲೂರಿನ ಮರಿಯಮ್ಮ ಅವರ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿ 20 ಸಾವಿರ ರೂ. ನಷ್ಟ ಉಂಟಾಗಿದೆ.

ಸಾಣೂರಿನಲ್ಲಿ ಗಾಳಿ ಮಳೆ
ಸಾಣೂರು ಗ್ರಾಮದ ಹಲವು ಮನೆಗಳಿಗೆ ಸಿಡಿಲು ಗಾಳಿ ಮಳೆಯಿಂದ ಹಾನಿಯಾಗಿದ್ದು, ಐಸಮ್ಮ ಮೊಯಿದಿನ್‌ ಅವರ ಮನೆಯ ಮೇಲ್ಚಾವಣಿ ಗಾಳಿಯಿಂದ ಹಾರಿ ಹೋಗಿದ್ದು, 80 ಸಾವಿರ ರೂ. ನಷ್ಟ, ಕಲ್ಲಯ್ಯ ಹಿರೇಮಠ ಅವರ ಮನೆಗೆ ಹಾನಿಯಾಗಿ 20 ಸಾವಿರ ರೂ., ರಮಣಿ ಶೆಟ್ಟಿಗಾರ್‌ ಮನೆಗೆ 5 ಸಾವಿರ ರೂ, ಪ್ರೇಮ ಪೂಜಾರಿ ಅವರ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದ್ದು 20 ಸಾವಿರ ರೂ., ಶೋಭಾ ಪೂಜಾರಿ ಅವರ ಮನೆಗೆ ಗಾಳಿ ಮಳೆಯಿಂದ 25 ಸಾವಿರ ರೂ., ಸುಶೀಲಾ ಅವರ ಮನೆಗೆ ಹಾನಿಯಾಗಿ 20 ಸಾವಿರ ರೂ., ಅಬ್ದುಲ್ಲಾ ಅವರ ಮನೆಗೆ ಹಾನಿಯಾಗಿ 60 ಸಾವಿರ ರೂ., ಸುಂದರಿ ಅವರ ಮನೆಗೆ ಹಾನಿಯಾಗಿ 60 ಸಾವಿರ ರೂ., ಇಸ್ಮಾಯಿಲ್‌ ಅವರ ಮನೆಗೆ ಹಾನಿಯಾಗಿ 20 ಸಾವಿರ ರೂ.,  ಅಲೊ#àನ್ಸಾ ಡಿಸೋಜಾ ಅವರ 50 ಬಾಳೆ ಗಿಡ, 20 ಅಡಿಕೆ ಗಿಡಗಳು ಧ್ವಂಸಗೊಂಡಿವೆ.

ಮಿಯ್ಯಾರು ಗ್ರಾಮಾದಾದ್ಯಂತ ಸಿಡಿಲಿನ ಆರ್ಭಟ
ಗ್ರಾಮದ ಜಗನ್ನಾಥ ಮೊಲಿ ಅವರ ಮನೆಗೆ ಸಿಡಿಲು ಬಡಿದು ಗೋಡೆ ಬಿರುಕು ಬಿಟ್ಟಿದ್ದು 5 ಸಾವಿರ ರೂ. ನಷ್ಟ ಉಂಟಾಗಿದೆ., ಸುಂದರಿ ಮೊಲಿ, ಜಯಂತಿ, ಮಹಾಬಲ ಶೆಟ್ಟಿ, ನಳಿನಿ ಅವರ ಮನೆಗೆ ಸಿಡಿಲು ಬಡಿದು ತಲಾ 5 ಸಾವಿರ ರೂ. ನಷ್ಟ ಸಂಭವಿಸಿದೆ. ಕಸ್ತೂರಿ ಅವರ ಮನೆಯ ನಾಲ್ಕು ತೆಂಗಿನ ಮರ, ಚಂದ್ರಹಾಸ ಪೂಜಾರಿ ಅವರ ಹಲವು ಅಡಿಕೆ ಮರ, ಸುನಂದ ಅವರ ಮನೆಯ 250 ಹಂಚು, ರೀಪು, ಪಕ್ಕಾಸ್‌ ಮುರಿದು 10 ಸಾವಿರ ನಷ್ಟ, ಗೋವಿಂದ ನಾಯಕ್‌, ಸುಲೋಚನಾ ನಾಯಕ್‌, ಈಶ್ವರ ನಾಯಕ್‌ ಅವರ ಅಡಿಕೆ ಹಾಗೂ ತೆಂಗಿನ ಮರಗಳಿಗೆ ಹಾನಿಯಾಗಿದೆ.
ಸುಮತಿ ಮೂಲ್ಯ ಅವರ ಮನೆಯ 15 ಸಿಮೆಂಟ್‌ ಶೀಟ್‌ ಒಡೆದು 8 ಸಾವಿರ ರೂ. ನಷ್ಟ, ಕಲ್ಯಾಣಿ ಮೂಲ್ಯಅವರ ಮನೆಯ 5 ಸಿಮೆಂಟ್‌ ಶೀಟ್‌ ಒಡೆದು 5 ಸಾವಿರ ರೂ. ನಷ್ಟ ಸಂಭವಿಸಿದೆ.

ಸಿಡಿಲಿಗೆ ಗಾಯ
ಮಿಯ್ಯಾರು ಗ್ರಾಮದ ಮೋನು ಮೊಲಿ ಎಂಬವರಿಗೆ ಸಿಡಿಲು ಬಡಿದು ಮುಖ ಹಾಗೂ ಕಾಲಿಗೆ ಗಾಯವಾಗಿದೆ.

ಕೊಲ್ಲೂರು ಪರಿಸರದಲ್ಲಿ  ಭಾರೀ ಮಳೆ
ಕೊಲ್ಲೂರು:
ಕೊಲ್ಲೂರು, ಜಡ್ಕಲ್‌,ಮುದೂರು ಪರಿಸರದಲ್ಲಿ ರವಿವಾರ ರಾತ್ರಿ, ಸೋಮವಾರ ಬೆಳಗ್ಗೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಸೌಪರ್ಣಿಕಾ ನದಿ ಸಮೇತ ಕಾಶಿ ಹೊಳೆಯಲ್ಲಿ ನೀರು ಹರಿದು ಬಂತು. ಏಕಾಏಕಿಯಾಗಿ ಸುರಿದ ಮಳೆಯಿಂದಾಗಿ ಕೊಲ್ಲೂರಿಗೆ ಆಗಮಿಸಿದ ಯಾತ್ರಾರ್ಥಿಗಳು ತೊಯ್ದ ಬಟ್ಟೆಯಲ್ಲಿ ವಸತಿಗೃಹಕ್ಕೆ ಸಾಗಬೇಕಾಯಿತು. ಒಳಚರಂಡಿಯಲ್ಲಿ ನೀರು ತುಂಬಿ ಹರಿದು ರಸ್ತೆ ತುಂಬ ಕೆಸರುಮಯವಾಗಿತ್ತು. ಜಡ್ಕಲ್‌, ಮುದೂರು ಹಾಗೂ ವಂಡ್ಸೆಯಲ್ಲಿ ಉತ್ತಮ ಮಳೆಯಾಗಿದೆ.

ಅಂಗನವಾಡಿಯ ಮೇಲ್ಛಾವಣಿಗೆ ಹಾನಿ
ಅಜೆಕಾರು
: ಮರ್ಣೆ ಗ್ರಾ. ಪಂ. ವ್ಯಾಪ್ತಿಯ ಅಜೆಕಾರು ಪೇಟೆಯ ಅಂಗನವಾಡಿ ಕೇಂದ್ರದ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮೇ 27ರ ರಾತ್ರಿ ಬೀಸಿದ ಭಾರೀ ಗಾಳಿಗೆ ಅಂಗನವಾಡಿಯ  ಮೇಲ್ಛಾವಣಿಗೆ  ಹಾನಿಗೀಡಾಗಿದೆ.

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.