ಕಳಸ-ಕಾರ್ಕಳ ಹೆದ್ದಾರಿ ತಿರುವು ಸಿಲುಕಿದ ಐರಾವತ!
Team Udayavani, Aug 25, 2018, 10:03 AM IST
ಕಾರ್ಕಳ: ಕಳಸ-ಕಾರ್ಕಳ ಹೆದ್ದಾರಿಯ ತಿರುವೊಂದರಲ್ಲಿ ಶುಕ್ರವಾರ ಕೆಎಸ್‌ಆರ್‌ಟಿಸಿ ಐರಾವತ ಬಸ್ಸನ್ನು ತಿರುಗಿಸಲು ಸಾಧ್ಯ ವಾಗದೆ ಸಾಕಷ್ಟು ಕಾಲ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಮಂಗಳೂರಿಗೆ ಬರುತ್ತಿದ್ದ ಬಸ್ಸನ್ನು ಹೆದ್ದಾರಿಯ ನೆಲ್ಲಿಬೀಡು ಎಂಬಲ್ಲಿ ತಿರುವಿನಲ್ಲಿ ಚಾಲಕನಿಗೆ ಸರಾಗವಾಗಿ ತಿರುಗಿಸಲು ಸಾಧ್ಯವಾಗಿಲ್ಲ. ಬಸ್ ಹಿಂದೆಯೂ ಹೋಗದೇ ಮುಂದೆಯೂ ಸಾಗದೇ ಸಮಸ್ಯೆ ಉಂಟಾಗಿತ್ತು. ಬಸ್ ಸಿಬಂದಿ, ಜನರು ಸೇರಿ ಪ್ರಯ ತ್ನಿಸಿ ದರೂ ಸಾಧ್ಯವಾಗಿಲ್ಲ. ಅನಂತರ ಜೆಸಿಬಿ ಸಹಾಯದಿಂದ ಬಸ್ಸನ್ನು ಹಿಂದಕ್ಕೆ ಎಳೆದು ತಿರುಗಿಸಲು ಅನುವು ಮಾಡಿ ಕೊಡಲಾಯಿತು. ಚಾರ್ಮಾಡಿ ರಸ್ತೆಯಲ್ಲಿ ಘನ ವಾಹನಗಳಿಗೆ ಪ್ರವೇಶವಿಲ್ಲದ ಕಾರಣ ಕೆಲವು ವಾಹನಗಳು ಕಳಸ-ಕಾರ್ಕಳ ರಸ್ತೆಯಲ್ಲಿ ಸಂಚರಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಸಾಧನೆ : ಸಾಧಕರಿಗೆ ಉದಯವಾಣಿ ಅಭಿನಂದನೆ
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಪ್ರಿಯಾಂಕಾ ಆಚಾರ್ಯ ಅವರ ಸ್ಟ್ರಿಂಗ್ ಆರ್ಟ್ ಸೇರ್ಪಡೆ
ಎಲ್ಲೂರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೊರಕೆ ಭೇಟಿ : ಸ್ಥಳೀಯರ ಮಧ್ಯೆ ಮಾತಿನ ಚಕಮಕಿ
ಹೆಬ್ರಿ-ಮಲ್ಪೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಮತ್ತೆ ಸಂಕಷ್ಟ
ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?