ಕುಂದಾಪುರ ವಿಧಾನಸಭಾ ಕ್ಷೇತ್ರ: ಹೊಸಮುಖ x ಹಳೆಮುಖ ಕದನ


Team Udayavani, Apr 11, 2018, 6:00 AM IST

3.jpg

ಕುಂದಾಪುರ: ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಮುಖ, ಬಿಜೆಪಿಗೆ ಹಳಬರ ಆಗಮನ !  ಈ ಬಾರಿಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಕದನ ಕುತೂಹಲ ಸಾಮಾನ್ಯ ಮಟ್ಟಿಗೆ ಹೀಗಿದೆ. 1999ರಿಂದ ಇಲ್ಲಿ ಗೆಲ್ಲುತ್ತಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಎದುರಾಳಿ ಯಾಗಿರುವುದು ಚೊಚ್ಚಲ ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ ರಾಕೇಶ್‌ ಮಲ್ಲಿ ಅವರು. ಪ್ರತಾಪ ಚಂದ್ರ ಶೆಟ್ಟಿ ಅವರ ನಿರಂತರ ನಾಲ್ಕು ಗೆಲುವುಗಳ ಬಳಿಕ ಕೈತಪ್ಪಿದ ಕುಂದಾಪುರ ಕ್ಷೇತ್ರವನ್ನು ಮುಂದಿನ ನಾಲ್ಕು ಅವಧಿಗಳಲ್ಲಿ ನಿರಂತರವಾಗಿ ಹಾಲಾಡಿ ಅವರೇ ತಮ್ಮ ವಶದಲ್ಲಿ ಇಟ್ಟುಕೊಂಡಿರುವುದು ಕಾಂಗ್ರೆಸ್‌ಗೆ ನುಂಗಲಾರದ ಬಿಸಿತುಪ್ಪವಾಗಿದೆ. ಹಾಲಾಡಿ ಸ್ಪರ್ಧೆಗಿಳಿದ ಬಳಿಕ ಈ ಕ್ಷೇತ್ರ ಕಾಂಗ್ರೆಸ್‌ ಪಾಲಿಗೆ ದಕ್ಕಲೇ ಇಲ್ಲ; ಅಚ್ಚರಿಯ ವಿಷಯ ಎಂದರೆ ಭಾಷಾವಾರು ಪ್ರಾಂತ್ಯ ರಚನೆಯಾಗಿ ಮೈಸೂರು ರಾಜ್ಯಕ್ಕೆ ಸೇರಿದ ಚುನಾವಣೆಯಲ್ಲಿ ಗೆದ್ದ ಕುಂದಾಪುರದ ಮೊದಲ ಶಾಸಕರ ಹೆಸರು ಕೂಡ ಶ್ರೀನಿವಾಸ ಶೆಟ್ಟಿ !

ಗೆದ್ದವರು
ಕರಾವಳಿ ಭಾಗ ಮದ್ರಾಸ್‌ ಪ್ರಾಂತ್ಯದಲ್ಲಿದ್ದಾಗ 1952ರಲ್ಲಿ ಯಡ್ತರೆ ಮಂಜಯ್ಯ ಶೆಟ್ಟಿ ಅವರು ಅವಿರೋಧ ಆಯ್ಕೆಯಾಗಿದ್ದರು. 1957ರ ಸಾರ್ವತ್ರಿಕ ಚುನಾವಣೆಯಲ್ಲಿ ವಕ್ವಾಡಿ ಶ್ರೀನಿವಾಸ ಶೆಟ್ಟಿ ಅವರು ಪಿಎಸ್‌ಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಕಕ್ಕುಂಜೆ ಸೂರ್ಯ ನಾರಾಯಣ ಅಡಿಗ ಅವರನ್ನು ಮಣಿಸಿದ್ದರು. ಆದರೆ 1962ರಲ್ಲಿ ಕಾಂಗ್ರೆಸ್‌ ಕೊಳ್ಕೆಬೈಲು ಸಂಜೀವ ಶೆಟ್ಟಿ ಅವರು ವಕ್ವಾಡಿಯವರಿಗೆ ಸೋಲಿನ ರುಚಿ ತೋರಿಸಿದ್ದರು. 1967 ಹಾಗೂ 1972ರಲ್ಲಿ ವಿನ್ನಿಫ್ರೆಡ್‌ ಫೆರ್ನಾಂಡಿಸ್‌ ಅವರು ಮೊದಲ ಅವಧಿಗೆ ಪಿಎಸ್‌ಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ಎಂ. ಹೆಗ್ಡೆ ಅವರನ್ನು ಸೋಲಿಸಿ, ಎರಡನೇ ಅವಧಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸ್ಥಾ ಕಾಂಗ್ರೆಸ್‌ನ ಕಾಪು ಸಂಜೀವ ಶೆಟ್ಟಿ ಅವರನ್ನು ಸೋಲಿಸಿದ್ದರು. 1978ರಲ್ಲಿ ಕಾಪು ಸಂಜೀವ ಶೆಟ್ಟರು ಜನತಾ ಪಕ್ಷದಿಂದ ಗೆಲ್ಲಲು ಕಾಂಗ್ರೆಸ್‌ನ ಮಾಣಿಗೋಪಾಲ್‌ ಮಣಿಯಬೇಕಾಯ್ತು. 1983ರಿಂದ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಸತತ 4 ಅವಧಿಗೆ ಶಾಸಕರಾದರೆ 1999ರಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸತತ 4 ಬಾರಿ ಶಾಸಕರಾದರು.

ಪಕ್ಷಾಂತರ
ಪಕ್ಷಾಂತರ ಕೂಡ ಇಲ್ಲಿ ಸಾಮಾನ್ಯ ಎಂಬಂತೆ ನಡೆದು ಹೋಗಿದೆ. ವಿನ್ನಿಫ್ರೆಡ್‌ ಫೆರ್ನಾಂಡಿಸ್‌ ಪಿಎಸ್‌ಪಿ(ಪ್ರಜಾ ಸೋಶಿಯಲಿಸ್ಟ್‌ ಪಾರ್ಟಿ)ಯಿಂದ ಸ್ಪರ್ಧಿಸಿ ಗೆದ್ದು ಪಕ್ಷಾಂತರ ಮಾಡಿ ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧಿಸಿ ಗೆದ್ದರು. ಮಾಣಿಗೋಪಾಲ್‌ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತು ಅನಂತರ ಜನತಾ ಪಕ್ಷದಲ್ಲಿ ಸ್ಪರ್ಧಿಸಿ ಸೋತರು. 1972 ಮತ್ತು 1978ರಲ್ಲಿ ಬೈಂದೂರಿನಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದ ಎ.ಜಿ. ಕೊಡ್ಗಿ  ಬಿಜೆಪಿ ಸೇರಿ 1994ರಲ್ಲಿ ಇಲ್ಲಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟರ ವಿರುದ್ಧ ಸ್ಪರ್ಧಿಸಿದರು. 2008ರಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟರ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಯಪ್ರಕಾಶ ಹೆಗ್ಡೆ ಅವರು ಈಗ ಬಿಜೆಪಿಯಲ್ಲಿದ್ದಾರೆ. ಬಿಜೆಪಿಗೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟರು ಈಗ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ.

ಗೆಲುವು ಅನಿವಾರ್ಯ
ನಿರಂತರ ತನ್ನ ಕೈಯಲ್ಲೇ ಇಟ್ಟುಕೊಂಡಿದ್ದ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟ ಪಶ್ಚಾತ್ತಾಪದಲ್ಲಿರುವ ಕಾಂಗ್ರೆಸ್‌ ಈ ಬಾರಿಯ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇ ಬೇಕು ಎಂಬ ಹಂಬಲ ಹೊಂದಿದೆ. ಆದ್ದರಿಂದ ಇಂಟಕ್‌ ರಾಜ್ಯಾಧ್ಯಕ್ಷ ಬಂಟ್ವಾಳದ ರಾಕೇಶ್‌ ಮಲ್ಲಿ ಅವರನ್ನು ಇಲ್ಲಿಂದ ಕಣಕ್ಕಿಳಿಸುವ ಯೋಜನೆಯಲ್ಲಿದೆ. ಊರು ತೊರೆದು ಇಲ್ಲಿಗೇ ಬಂದು ಮನೆ ಮಾಡಿ ನೆಲೆಸಿರುವ ಮಲ್ಲಿ ಕ್ಷೇತ್ರಾದ್ಯಂತ ತಿರುಗಾಟ, ಕಾರ್ಯಕರ್ತರ ಸಭೆಗಳ ಮೂಲಕ ಜನರ ಬೆಂಬಲ ಗಳಿಸುತ್ತಿದ್ದಾರೆ.

ಇಷ್ಟೇ ಉತ್ಸಾಹ ಬಿಜೆಪಿಯಲ್ಲೂ ಇದೆ. ಮೂರು ಬಾರಿ ಪಕ್ಷದಿಂದ ಗೆದ್ದು ಪಕ್ಷೇತರರಾಗಿ ಸ್ಪರ್ಧಿಸಿ ದಾಖಲೆ ಮತಗಳ ಅಂತರದಿಂದ ಗೆದ್ದ ಹಾಲಾಡಿಯವರನ್ನು ಮರಳಿ ಬಿಜೆಪಿ ಕರೆತಂದು ಸ್ಪರ್ಧೆಗೆ ಅವಕಾಶ ನೀಡಿದೆ. ಹಾಲಾಡಿಯವರ ಬಿಜೆಪಿ ಸೇರ್ಪಡೆ ಹಾಗೂ ಸ್ಪರ್ಧೆಗೆ ಇದ್ದ ಸಣ್ಣ ವಿರೋಧದ ಧ್ವನಿ ನಿಧಾನವಾಗಿ ಕ್ಷೀಣಿಸಿದೆ. ಏಕೆಂದರೆ ಸತತ 4 ಗೆಲುವಿನ ಸಂಭ್ರಮದಲ್ಲಿದ್ದ ಪ್ರತಾಪಚಂದ್ರ ಶೆಟ್ಟರ ಗೆಲುವಿನ  ನಾಗಾಲೋಟಕ್ಕೆ ತಡೆಯೊಡ್ಡಿದ್ದು ಹಾಲಾಡಿಯವರು. ಜಯ ಪ್ರಕಾಶ ಹೆಗ್ಡೆಯಂತಹವರಿಗೆ ಸೋಲಿನ ಕಹಿ ಉಣಿಸಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದಾಗ ಬಿಜೆಪಿಗೆ ಕೇವಲ 14,000 ಮತಗಳನ್ನಷ್ಟೇ ಪಡೆಯಲು ಶಕ್ಯವಾದ ಕಾರಣ “ಹಾಲಾಡಿ ಹವಾ’ ಇದೆ ಎಂದು ಬಿಜೆಪಿ ಗುರುತಿಸಿದೆ. ಸ್ಪರ್ಧೆಯಿಂದ ಸ್ಪರ್ಧೆಗೆ ಹಾಲಾಡಿಯವರು ಗಳಿಸುತ್ತಾ ಹೋದ ಮತಗಳ ಏರುಗತಿ ಕೂಡ ಬಿಜೆಪಿಗೆ ಹಾಲಾಡಿ ಅನಿವಾರ್ಯ ಎನ್ನುವುದನ್ನು ನಿರೂಪಿಸಿದೆ. ಏಕೆಂದರೆ ಹಾಲಾಡಿ ಮೊದಲು ಸ್ಪರ್ಧಿಸಿದಾಗ ಪಡೆದ ಮತ 48,051. ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಾಗ ಗೆಲುವಿನ ಅಂತರವೇ 40,611 ಸಚಿವರಾಗಿಲ್ಲ ಕುಂದಾಪುರದಿಂದ ಗೆದ್ದವರು ಈ ವರೆಗೆ ಸಚಿವರಾಗಿಲ್ಲ. ಸತತ 4 ಬಾರಿ ಗೆದ್ದರೂ ತಮ್ಮದೇ ಪಕ್ಷದ ಸರಕಾರ ಇದ್ದರೂ ಪ್ರತಾಪಚಂದ್ರ ಶೆಟ್ಟರು ಸಚಿವರಾಗಲಿಲ್ಲ. ಹಾಲಾಡಿ ಅವರಿಗೆ ತಮ್ಮದೇ ಪಕ್ಷದ ಸರಕಾರದಲ್ಲಿ  ಸಚಿವ ಸ್ಥಾನ ಕೊಡುವುದಾಗಿ ಹೇಳಿ ಬೆಂಗಳೂರಿಗೆ ಕರೆಸಿದರೂ ಪಕ್ಷ ಕೊನೆಗಳಿಗೆಯಲ್ಲಿ ನಿರಾಸೆ ಉಂಟು ಮಾಡಿತ್ತು. ಇದರಿಂದಾಗಿ ಅವರು ಪಕ್ಷಕ್ಕೇ ರಾಜೀನಾಮೆ ನೀಡುವಂತಾಗಿ ಅನಂತರದ ಚುನಾವಣೆಯಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದರು.

ಅವಧಿ ಪೂರ್ವ ರಾಜೀನಾಮೆ
2008ರ ಚುನಾವಣೆಯಲ್ಲಿ ಗೆದ್ದ ಹಾಲಾಡಿಯವರು ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ದೊರೆಯದೇ ಅವಧಿಗೂ ಮುನ್ನ ರಾಜೀನಾಮೆ ನೀಡಿದರು. 2013ರಲ್ಲಿ ಗೆದ್ದವರು ಬಿಜೆಪಿ ಸೇರಲೆಂದು ಮತ್ತೂಮ್ಮೆ ಅವಧಿಪೂರ್ವ ರಾಜೀನಾಮೆ ನೀಡಿದರು. ವಿನ್ನಿಫ್ರೆಡ್‌ ಫೆರ್ನಾಂಡಿಸ್‌ ಅವರು ಎರಡು ಅವಧಿಗೆ ಶಾಸಕರಾದ್ದು ಹೊರತುಪಡಿಸಿದರೆ ಈವರೆಗೆ ಇಲ್ಲಿಂದ ಶಾಸಕರಾದವರ ಹೆಸರು ಕೊನೆಯಾಗುವುದು “ಶೆಟ್ಟಿ’ ಸರ್‌ನೆàಮ್‌ ಮೂಲಕ.

ಕಳೆದ ಬಾರಿಯ ಮತ ವಿವರ
2013ರ ಚುನಾವಣೆ
ಹಾಲಾಡಿ ಶ್ರೀನಿವಾಸ ಶೆಟ್ಟಿ (ಪಕ್ಷೇತರ) 80,563
40,611 ಮತಗಳ ಅಂತರದ ಗೆಲುವು

ಮಲ್ಯಾಡಿ ಶಿವರಾಮ ಶೆಟ್ಟಿ (ಕಾಂಗ್ರೆಸ್‌) 39,952
ಕಿಶೋರ್‌ ಕುಮಾರ್‌ (ಬಿಜೆಪಿ) 14,524

ಒಟ್ಟು  ಮತ ಕೇಂದ್ರ
215
ಒಟ್ಟು ಮತದಾರರು
1,97,061
ಪುರುಷ ಮತದಾರರು
94,653
ಮಹಿಳಾ ಮತದಾರರು
1,02,408

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.