
ಕುಂದಾಪುರ: ಮಾನಹಾನಿ ಆರೋಪಿಗಳಿಗೆ ಜಾಮೀನು
Team Udayavani, Jan 27, 2023, 1:20 AM IST

ಕುಂದಾಪುರ: ಸ್ಥಿರಾಸ್ತಿಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಗೆ ಹಲ್ಲೆ ನಡೆಸಿ, ಮಾನಹಾನಿ ಮಾಡಿದ್ದಾರೆಂದು ಆಪಾದಿಸಿದ ಪ್ರಕರಣದಲ್ಲಿ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆರೋಪಿಗಳಿಗೆ ನಿರೀಕ್ಷಣ ಜಾಮೀನು ಮಂಜೂರು ಮಾಡಿದೆ.
ಕೋಡಿ ನಿವಾಸಿಗಳಾದ ಅಭಿಷೇಕ, ಪದ್ಮಾವತಿ, ರಾಜೀವಿ ಅವರು ಜಲಜಾ ಅವರ ಆಸ್ತಿಗೆ ಪ್ರವೇಶಿಸಿ ಹಲ್ಲೆ ಮಾಡಿದ್ದಾರೆಂದು ದೂರಲಾಗಿತ್ತು. ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ದೊರೆತಿದ್ದು, ಆರೋಪಿಗಳ ಪರ ವಕೀಲ ಹಂದಕುಂದ ಅಶೋಕ ಶೆಟ್ಟಿ ವಾದಿಸಿದ್ದರು.
ಟಾಪ್ ನ್ಯೂಸ್
