ಕುರ್ಕಾಲು-ಮಣಿಪುರ: ಸಂಪರ್ಕ ರಸ್ತೆ ತಾತ್ಕಾಲಿಕ ಕಾಮಗಾರಿ ಪೂರ್ಣ; ವಾಹನ ಸಂಚಾರ ಮುಕ್ತ

Team Udayavani, Sep 11, 2019, 5:49 AM IST

ಕಟಪಾಡಿ : ವಾಹನ ಸಂಚಾರ ನಿಷೇಧಗೊಂಡಿದ್ದ ಕುರ್ಕಾಲು- ಮಣಿಪುರ ಸಂಪರ್ಕ ರಸ್ತೆಯ ಅಪಾಯಕಾರಿ ಪ್ರದೇಶದಲ್ಲಿ ತಾತ್ಕಾಲಿಕ ಕಾಮಗಾರಿ ನಿರ್ವಹಿಸಲಾಗಿದ್ದು, ಸೆ.8ರಿಂದ ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ.

ಬೆಳ್ಮಣ್‌, ಶಿರ್ವ, ಶಂಕರಪುರ ಭಾಗದಿಂದ ಮಣಿಪುರ-ದೆಂದೂರುಕಟ್ಟೆ-ಅಲೆವೂರು ಮಣಿಪಾಲಕ್ಕೆ ಸಂಪರ್ಕವನ್ನು ಕಲ್ಪಿಸುವ ಹೆಚ್ಚು ಬಳಕೆಯಲ್ಲಿರುವ ಅತೀ ಶಾರ್ಟ್‌ ಕಟ್ ಆಗಿರುವ ಈ ರಸ್ತೆಯ ನಡುವೆ ಕುಸಿತ ಉಂಟಾಗಿ ಸೃಷ್ಟಿಯಾಗಿದ್ದ ಭಾರೀ ಗಾತ್ರದ ಕಂದಕ ಇದೀಗ ಮುಚ್ಚಲಾಗಿದೆ.

ರಸ್ತೆಯನ್ನು ಅಗೆದಾಗ ಬೃಹತ್‌ ಗಾತ್ರದ ಮರದ ಬುಡವೊಂದು ಕಂಡು ಬಂದಿದ್ದು, ಅದರ ಸುತ್ತ ಮಣ್ಣು ಕುಸಿದು ರಸ್ತೆಯಲ್ಲಿ ಕಂದಕ ಏರ್ಪಟ್ಟಿತ್ತು. ಇದೀಗ ಬುಡ ಸಮೇತವಾಗಿ ತೆರವುಗೊಳಿಸಲಾಗಿದೆ. ತಾತ್ಕಾಲಿಕ ಕಾಮಗಾರಿಯನ್ನು ನಿರ್ವಹಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಪ್ರಸನ್ನ ಶೆಟ್ಟಿ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಕುರ್ಕಾಲು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶೋಭಾ, ಸದಸ್ಯ ದಿನಕರ ಶೆಟ್ಟಿ ಕುರ್ಕಾಲು, ಪಿ.ಡಿ.ಒ ಚಂದ್ರಕಲಾ ಸೆ.7ರ ಸಂಜೆ ಸ್ಥಳಕ್ಕೆ ತೆರಳಿ ನಿರ್ವಹಿಸಲಾದ ತಾತ್ಕಾಲಿಕ ಕಾಮಗಾರಿಯ ಪರಿಶೀಲನೆಯನ್ನು ನಡೆಸಿರುತ್ತಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ