ಶಿರ್ವ ಧರ್ಮಗುರು ಫಾ.ಮಹೇಶ್ ಡಿಸೋಜ ಆತ್ಮಹತ್ಯೆ: ನ್ಯಾಯಕ್ಕೆ ಒತ್ತಾಯಿಸಿ ಪ್ರತಿಭಟನೆ

ಧರ್ಮಗುರು ಫಾ.ಮಹೇಶ್ ಡಿಸೋಜ ಸಾವಿಗೆ ನ್ಯಾಯ ಒದಗಿಸಲು ಒತ್ತಾಯ

Team Udayavani, Nov 2, 2019, 8:10 PM IST

shirva

ಶಿರ್ವ: ಇಲ್ಲಿನ ಆರೋಗ್ಯ ಮಾತಾ ದೇವಾಲಯದ ಸಹಾಯಕ ಧರ್ಮಗುರು, ಪ್ರಾಂಶುಪಾಲರ ಕೊಠಡಿಯ ಒಳಗಡೆ ಅ. 11 ರಂದು ನೇಣಿಗೆ ಶರಣಾದ ಶಾಲೆಯ ಪ್ರಾಂಶುಪಾಲ ಫಾ| ಮಹೇಶ್‌ ಡಿ ಸೋಜಾ ಸಾವಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಕ್ರೈಸ್ತ ಸಮುದಾಯದವರು ಶನಿವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ಫಾ| ಮಹೇಶ್‌ ಆತ್ಮಹತ್ಯೆಗೆ ಶರಣಾಗಿ 20 ದಿನಗಳು ಕಳೆದರೂ ಅವರ ಸಾವಿನ ಹಿಂದಿನ ರಹಸ್ಯ ಬಹಿರಂಗಗೊಂಡಿಲ್ಲ. ಜತೆಗೆ ಅವರ ಸಾವಿನ ಹಿಂದೆ ಯಾರದೋ ಕೈವಾಡ ಇರುವ ಬಗ್ಗೆ ಸಂಶಯ ಮೂಡಿದ್ದು ಚರ್ಚ್‌ನ ವತಿಯಿಂದ ಯಾವುದೇ ಪ್ರಕರಣ ದಾಖಲಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಚರ್ಚಿನ ಗಂಟೆ ಬಾರಿಸಿ ಪ್ರತಿಭಟನೆ
ತುರ್ತು ಸಂದರ್ಭಗಳಲ್ಲಿ ಮಾತ್ರ ಚರ್ಚ್‌ನ ಗಂಟೆ ಬಾರಿಸುವುದಾಗಿದ್ದು ನೆರೆದಿದ್ದ ಸುಮಾರು 1 ಸಾವಿರಕ್ಕೂ ಮಿಕ್ಕಿದ ಜನರು ಆಕ್ರೋಶಿತರಾಗಿ ಚರ್ಚ್‌ನ ಗಂಟೆ ಬಾರಿಸಿ ಫಾ| ಮಹೇಶ್‌ ಡಿ‡ಸೋಜಾ ಸಾವಿನ ಬಗ್ಗೆ ತನಿಖೆ ನಡೆಸಿ ನ್ಯಾಯ ಕೋರಿ ಪ್ರತಿಭಟನೆ ನಡೆಸಿದರು. ಚರ್ಚ್‌ಗೆ ಪೂಜೆ ಸಲ್ಲಿಸಲು ಬಂದಿದ್ದ ಭಕ್ತಾಧಿಗಳು ಚರ್ಚ್‌ನ ಧರ್ಮಗುರು ರೆ|ಫಾ|ಡೆನ್ನಿಸ್‌ ಡೇಸಾ ಅವರಲ್ಲಿ ಮಾತನಾಡಲು ಯತ್ನಿಸಿದ್ದು ಆ ವೇಳೆ ಧರ್ಮಗುರುಗಳು ಒಳಗಡೆ ಹೋಗಿದ್ದರಿಂದ ಪ್ರತಿಭಟನಾಕಾರರು ಮತ್ತಷ್ಟು ಆಕ್ರೋಶಗೊಂಡು ಧರ್ಮಗುರುಗಳು ಹೊರಬರುವಂತೆ ಒತ್ತಾಯಿಸಿದರು.

ಪೊಲೀಸ್‌ ಅಧಿಕಾರಿಗಳ ಭೇಟಿ
ಕಾಪು ವೃತ್ತ ನಿರೀಕ್ಷಕ ಮಹೇಶ್‌ ಪ್ರಸಾದ್‌ ಭೇಟಿ ನೀಡಿದ್ದು ಪ್ರತಿಭಟನಾಕಾರರೊಡನೆ ಮಾತುಕತೆ ನಡೆಸಿದರು. ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ಸಮಸ್ಯೆಯನ್ನು ಇತ್ಯರ್ಥಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಚರ್ಚ್‌ನ ಧರ್ಮಗುರುಗಳೊಂದಿಗೆ ಮಾತನಾಡಿದ ಬಳಿಕ ಧರ್ಮಗುರುಗಳು ಬಂದು ಸಮುದಾಯದ ಜನರೊಂದಿಗೆ ಮಾತನಾಡಿ ರವಿವಾರ ಬೆಳಿಗ್ಗೆ 10 ಗಂಟೆಗೆ ಬಿಷಪ್‌ ಅವರು ಆಗಮಿಸಿ ಪಾಲನ ಮಂಡಳಿಯ ಸಭೆ ಕರೆದು ಮಾತುಕತೆ ನಡೆಸುವರು ಎಂದು ತಿಳಿಸಿದರು.

ಉಡುಪಿ ಡಿಸಿಐಬಿ ಇನ್ಸ್‌ಪೆಕ್ಟರ್‌ ಸಂಪತ್‌ ಕುಮಾರ್‌,ಶಿರ್ವ ಠಾಣಾಧಿಕಾರಿ ಅಬ್ದುಲ್‌ ಖಾದರ್‌, ಕಾಪು ಪಿಎಸ್‌ಐ ರಾಜಶೇಖರ ಸಗಣೂರು, ಪಡುಬಿದ್ರಿ ಪಿಎಸ್‌ಐ ಸುಬ್ಬಣ್ಣ ,ಪೋಲೀಸ್‌ ಸಿಬಂದಿ ಉಪಸ್ಥಿತರಿದ್ದರು. ಶಿರ್ವ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ. ಸಾವಿನ ಸುತ್ತ ದಿನಕ್ಕೊಂದರಂತೆ ಸುದ್ದಿ ಹರಡುತ್ತಿದ್ದು ಸತ್ಯಾಂಶ ಪೊಲೀಸ್‌ ತನಿಖೆಯಂದಷ್ಟೇ ಹೊರಬರಬೇಕಿದೆ.

ಟಾಪ್ ನ್ಯೂಸ್

BCCI

ಏಷ್ಯಾ ಕಪ್ ಗೆ ಭಾರತ ತಂಡ ಪ್ರಕಟ; ಬುಮ್ರಾ, ಹರ್ಷಲ್ ಪಟೇಲ್ ಗಾಯಾಳಾಗಿ ಹೊರಗೆ

ಪುರುಷರ ಹಾಕಿಯಲ್ಲಿ ರಜತ; ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಭಾರತಕ್ಕೆ 7-0 ಸೋಲು

ಪುರುಷರ ಹಾಕಿಯಲ್ಲಿ ರಜತ; ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಭಾರತಕ್ಕೆ 7-0 ಸೋಲು

NIA

ಭಾರತದಲ್ಲಿ ‘ಜಿಹಾದ್’ ಪ್ರಚಾರ: ಇಬ್ಬರು ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಮಳೆಗಾಲದ ವಿಧಾನ ಮಂಡಲ ಅಧಿವೇಶನ ಅನುಮಾನ

ಮಳೆಗಾಲದ ವಿಧಾನ ಮಂಡಲ ಅಧಿವೇಶನ ಅನುಮಾನ

1-wwwqewq

ವಿವಾದಾತ್ಮಕ ಕಾರ್ಯಕ್ರಮ: ರಾಜಶ್ರೀ ಚೌಧರಿ ಬೋಸ್ ಪೊಲೀಸ್ ವಶಕ್ಕೆ

ಉಪ ಲೋಕಾಯುಕ್ತ ನೇಮಕ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಉಪ ಲೋಕಾಯುಕ್ತ ನೇಮಕ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಅಕ್ರಮ: ಆರೋಪ ಪಟ್ಟಿ ಸಲ್ಲಿಕೆ

ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಅಕ್ರಮ: ಆರೋಪ ಪಟ್ಟಿ ಸಲ್ಲಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

ಕಟಪಾಡಿ-ಮಣಿಪುರ ಸಂಪರ್ಕ ರಸ್ತೆ; ಮೇಲ್ಸೇತುವೆ ಬಳಿ ತಡೆಬೇಲಿ ಅಳವಡಿಕೆ

8

ನಿರಂತರ ಮಳೆ; ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಭೀತಿ

meenugarike

ಮೀನುಗಾರಿಕೆಗೆ ಈ ವರ್ಷವೂ ಆರಂಭದಲ್ಲೇ ಅಡ್ಡಿ : ಕಡಲಿಗಿಳಿಯದೆ ದಡದಲ್ಲೇ ಉಳಿದ ಬೋಟುಗಳು

ಕಾಮನ್‌ವೆಲ್ತ್‌ ಗೇಮ್ಸ್‌ ನಲ್ಲಿ ಕಂಚಿನ ಪದಕ : “ಯುವಜನತೆಗೆ ಗುರುರಾಜ್‌ ಸ್ಫೂರ್ತಿ’

ಕಾಮನ್‌ವೆಲ್ತ್‌ ಗೇಮ್ಸ್‌ ನಲ್ಲಿ ಕಂಚಿನ ಪದಕ : “ಯುವಜನತೆಗೆ ಗುರುರಾಜ್‌ ಸ್ಫೂರ್ತಿ’

ಶಿರೂರಿನ ಇನ್ನೊಂದು ದೋಣಿ ಎರ್ಮಾಳಿನಲ್ಲಿ ಪತ್ತೆ

ಶಿರೂರಿನ ಇನ್ನೊಂದು ದೋಣಿ ಎರ್ಮಾಳಿನಲ್ಲಿ ಪತ್ತೆ

MUST WATCH

udayavani youtube

ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ?

udayavani youtube

ತುಂಬಿ ಹರಿಯುತ್ತಿದೆ ಬಾರೇಹಳ್ಳ ಚೆಕ್ ಡ್ಯಾಂ… ನೋಡಲು ಅದೆಷ್ಟು ಸುಂದರ…

udayavani youtube

ಮಾನ ಮರ್ಯಾದೆ ಇದೆಯೇನ್ರಿ…? ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ

udayavani youtube

ಅಕ್ರಮ ಗೋಹತ್ಯೆ ತಡೆಯಲು ಯೋಗಿ ಮಾದರಿಗೆ ಮುಂದಾದ ಚಿಕ್ಕಮಗಳೂರು ನಗರಸಭೆ

udayavani youtube

ಜೆಸ್ಕಾಂ ಅಧಿಕಾರಿಗಳೇ ಇಲ್ಲಿ ಗಮನಿಸಿ.. ಮನೆಯ ಮಾಳಿಗೆ ತಾಗುತ್ತಿವೆ ವಿದ್ಯುತ್ ತಂತಿಗಳು!

ಹೊಸ ಸೇರ್ಪಡೆ

BCCI

ಏಷ್ಯಾ ಕಪ್ ಗೆ ಭಾರತ ತಂಡ ಪ್ರಕಟ; ಬುಮ್ರಾ, ಹರ್ಷಲ್ ಪಟೇಲ್ ಗಾಯಾಳಾಗಿ ಹೊರಗೆ

ಪುರುಷರ ಹಾಕಿಯಲ್ಲಿ ರಜತ; ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಭಾರತಕ್ಕೆ 7-0 ಸೋಲು

ಪುರುಷರ ಹಾಕಿಯಲ್ಲಿ ರಜತ; ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಭಾರತಕ್ಕೆ 7-0 ಸೋಲು

NIA

ಭಾರತದಲ್ಲಿ ‘ಜಿಹಾದ್’ ಪ್ರಚಾರ: ಇಬ್ಬರು ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಮಳೆಗಾಲದ ವಿಧಾನ ಮಂಡಲ ಅಧಿವೇಶನ ಅನುಮಾನ

ಮಳೆಗಾಲದ ವಿಧಾನ ಮಂಡಲ ಅಧಿವೇಶನ ಅನುಮಾನ

1-wwwqewq

ವಿವಾದಾತ್ಮಕ ಕಾರ್ಯಕ್ರಮ: ರಾಜಶ್ರೀ ಚೌಧರಿ ಬೋಸ್ ಪೊಲೀಸ್ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.