ಪಂಜಿಮಾರು: ಮನೆಗೆ ಸಿಡಿಲು ಬಡಿದು ಹಾನಿ

Team Udayavani, Jun 14, 2019, 6:10 AM IST

ಶಿರ್ವ: ಕಟಪಾಡಿ-ಶಿರ್ವ ಮುಖ್ಯರಸ್ತೆಯ ಪಂಜಿಮಾರು ಫಲ್ಕೆ ಗಿಲ್ಬರ್ಟ್‌ ಡಿ’ಸೋಜಾ ಅವರ ಮನೆಗೆ ಬುಧವಾರ ರಾತ್ರಿ 11.30ರ ವೇಳೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ.

ಸಿಡಿಲಿನ ರಭಸಕ್ಕೆ ಮನೆಯ ಮನೆಯ ಫ್ಯಾನ್‌ಗಳು,ವಿದ್ಯುತ್‌ ಮೀಟರ್‌, ಸ್ವಿಚ್‌ ಬೋರ್ಡ್‌ ಹಾಗೂ ವಿದ್ಯುತ್‌ ಪಂಪ್‌ನ ಸ್ಟಾರ್ಟರ್‌ಸುಟ್ಟು ಹೋಗಿದೆ . ಮನೆಯ ಮೇಲ್ಛಾವಣಿಯ ಗೋಡೆ ಒಡೆದು ಬಿರುಕು ಬಿಟ್ಟಿದೆ. ಮನೆಯ ವಿದ್ಯುತ್‌ ವಯರಿಂಗ್‌ ಸಂಪೂರ್ಣಸುಟ್ಟು ಹೋಗಿದ್ದು ವಿದ್ಯುತ್‌ ಉಪಕರಣಗಳು ಪುಡಿ ಪುಡಿಯಾಗಿ ಸುಮಾರು 2 ಲಕ್ಷ ರೂ.ಹಾನಿ ಸಂಭವಿಸಿದೆ. ಮನೆಯ ಕೆಳಅಂತಸ್ತಿನಲ್ಲಿ ತಂದೆ, ತಾಯಿ ಮಲಗಿದ್ದರು. ಮಹಡಿಯಲ್ಲಿ ಮಗ, ಸೊಸೆ ಮತ್ತು ಮಗು ಮಲಗಿದ್ದ ಕೋಣೆಗೆ ಸಿಡಿಲು ಬಿದ್ದಿದ್ದು ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಕಾಪು ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಅವರ ನಿರ್ದೇಶನದ ಮೇರೆಗೆ ಶಿರ್ವ ಗ್ರಾಮ ಕರಣಿಕ ವಿಜಯ್‌ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಶಿರ್ವ ಗ್ರಾ.ಪಂ. ಸದಸ್ಯ ಕೆ.ಆರ್‌.ಪಾಟ್ಕರ್‌, ವೈಲೆಟ್‌ ಕ್ಯಾಸ್ತಲಿನೊ ಮತ್ತಿತರ ಮುಖಂಡರು ಮನೆಗೆ ಭೇಟಿ ನೀಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌-ಜನವರಿ ತಿಂಗಳ ಅವಧಿಯಲ್ಲಿ ದೇಶದ ಚಾಲ್ತಿ ಖಾತೆ ಕೊರತೆ(ಸಿಎಡಿ)ಯ ಮೇಲೆ ಚಿನ್ನದ ಆಮದು ಶೇ.9ರಷ್ಟು ಕುಸಿದು ಸುಮಾರು...

  • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

  • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

  • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

  • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...