ಈ ಶಾಪಿಂಗ್‌ ಗ್ಯಾಲರಿಗೆ ನಿಮ್ಮ ಫ್ಯಾಮಿಲಿ ಫೋಟೋ ಕಳಿಸಿ

Team Udayavani, Oct 20, 2019, 5:21 AM IST

ಸಾಂದರ್ಭಿಕ ಚಿತ್ರ

ಹಬ್ಬಕ್ಕೆ ಬಟ್ಟೆ ತರುವುದಿರಲಿ, ಯಾವುದೋ ಹೊಸತರ ಖರೀದಿಯೇ ಇರಲಿ. ಮನೆ ಮಂದಿಯೆಲ್ಲ ಹೋಗಿ, ಅಳೆದು ತೂಗಿ, ಖುಷಿ ಪಟ್ಟು ತರುವ ಸಂಭ್ರಮಕ್ಕೆ ಯಾವ ಹೋಲಿಕೆಯೂ ಇಲ್ಲ. ಇಂದಿನ ಆಧುನಿಕ ಕುಟುಂಬಗಳ ಕಲ್ಪನೆಯಲ್ಲಂತೂ ಅವು ಅದ್ಭುತ ಕ್ಷಣಗಳು. ಅದಕ್ಕೆಂದೇ ಉದಯವಾಣಿ ಈ ಬಾರಿ ನಿಮ್ಮ ಕುಟುಂಬದ ಶಾಪಿಂಗ್‌ನ್ನು ಅವಿಸ್ಮರಣೀಯಗೊಳಿಸಲು ಹೊರಟಿದೆ ಫ್ಯಾಮಿಲಿ ಶಾಪಿಂಗ್‘ ಪರಿಕಲ್ಪನೆ ಮೂಲಕ. ಇಂದೇ ಹೋಗಿ ಕುಟುಂಬ ಸಮೇತ ಶಾಪಿಂಗ್‌ ಮಾಡಿ. ನಿಮ್ಮ ಕನಸು ಈಡೇರಿದ ಕ್ಷಣವನ್ನು ಕುಟುಂಬ ಸಮೇತ ಫೋಟೋ ತೆಗೆದು ಕಳಿಸಿ. ನಾವು ಅದನ್ನು ನಮ್ಮ ಗ್ಯಾಲರಿಯಲ್ಲಿ ತೂಗು ಹಾಕಿ ಲಕ್ಷಾಂತರ ಮಂದಿಗೆ ನಿಮ್ಮಖುಷಿಯನ್ನು ಹಂಚುತ್ತೇವೆ !

ಮಣಿಪಾಲ: ಫ್ಯಾಮಿಲಿ ಶಾಪಿಂಗ್‌ ! ಈ ಪದವೇ ಒಂದು ಬಗೆಯ ಹೊಸ ಸಂಭ್ರಮವನ್ನು ತುಂಬುತ್ತದೆ. ಅಷ್ಟೇ ಅಲ್ಲ ; ನಮ್ಮ ಮನೆಗೆ ಬರುವ ಪ್ರತಿ ಹೊಸ ಸದಸ್ಯನ ಮೇಲೂ ಇಡೀ ಕುಟುಂಬದ ಒಪ್ಪಿಗೆಯ ಮೊಹರು ಇರುತ್ತದೆ. ಅಂದರೆ ಖುಷಿಯನ್ನು ತುಂಬಿಕೊಂಡು ಬಂದಂತೆಯೇ !

ಅದರಲ್ಲೂ ಹಬ್ಬದ ದಿನಗಳಲ್ಲಿ ಮತ್ತು ಹಬ್ಬಗಳಿಗಾಗಿ ಶಾಪಿಂಗ್‌ ಮಾಡಲು ಒಬ್ಬೊಬ್ಬರು ಹೋಗುವುದರಲ್ಲಿ ಅರ್ಥವೇ ಇಲ್ಲ. ಬಟ್ಟೆ ಇರಲಿ, ಮಿಕ್ಸಿ ಇರಲಿ, ವಾಷಿಂಗ್‌ ಮೆಷಿನ್‌ ಇರಲಿ, ರೆಫ್ರಿಜರೇಟರ್‌ ಇರಲಿ-ಎಲ್ಲದಕ್ಕೂ ಕುಟುಂಬ ಪೂರ್ತಿ ಅಂಗಡಿ, ಮಾಲ್ಗಳನ್ನು ಹೊಕ್ಕು ಉತ್ಪನ್ನವನ್ನು ನೋಡಿ, ಖುಷಿ ಪಟ್ಟು ಒಪ್ಪಿಕೊಳ್ಳುವುದು ಈಗಿನ ಜಮಾನಾ. ಹೊಸ ಮನೆ ಖರೀದಿಯ ಬಗ್ಗೆ ಹೇಳುವುದೇ ಬೇಡ. ಒಬ್ಬರ ತೀರ್ಮಾನ ಅಲ್ಲಿ ನಡೆಯುವುದೂ ಇಲ್ಲ. ಒಂದು ಹೊಸ ವಸ್ತುವನ್ನು ತರುವುದೆಂದರೆ ಹಲವು ಕುಟುಂಬಗಳಲ್ಲಿ ದೊಡ್ಡ ಕನಸು. ಅದು ಈಡೇರುವ ಗಳಿಗೆಯೆಂದರೆ ಕಡಿಮೆ ಮಹತ್ವವೇ? ಖಂಡಿತಾ ಅಲ್ಲ.

ಇವೆಲ್ಲವೂ ಹೊಸ ಸದಸ್ಯನ ಆಗಮನಕ್ಕೆ
ಈ ಫ್ಯಾಮಿಲಿ ಶಾಪಿಂಗ್‌ ಎನ್ನುವ ಪರಿ ಕಲ್ಪನೆ ಇರುವುದು ನಗರಗಳಲ್ಲಿನ, ಆಧುನಿಕ ಬದುಕಿನ ಏಕತಾನತೆಯನ್ನು ನಿವಾರಿಸಿ ಸಂಭ್ರಮ ತುಂಬಿಕೊಳ್ಳುವುದಕ್ಕಾಗಿಯೇ. ಹಾಗಾ ಗಿಯೇ ಹಿಂದೆಯೂ ಹಬ್ಬದಿಂದ ಹಿಡಿದು, ಯಾವುದೇ ಶುಭ ಕಾರ್ಯಕ್ರಮವಿದ್ದರೂ ಮನೆ ಮಂದಿಯನ್ನೆಲ್ಲ ಪೇಟೆಗೆ ಕರೆದುಕೊಂಡು ಹೋಗುತ್ತಿದ್ದ ಪದ್ಧತಿ ಇದ್ದದ್ದು. ನಮ್ಮ ಮನೆಗೆ ಬರುವ ಪ್ರತಿಯೊಂದೂ ವಸ್ತುವೂ ಹೊಸ ಸದಸ್ಯನಿದ್ದಂತೆಯೇ. ಏಕೆಂದರೆ, ಸದಸ್ಯನೊಂದಿಗೆ ಅಥವಾ ಅದನ್ನು ಸಾಕಷ್ಟು ಯೋಚಿಸಿಯೇ ತಂದಿ ರುತ್ತೇವೆ, ನಿತ್ಯವೂ ಒಟ್ಟಾಗಿ ಜೀವಿಸುತ್ತೇವೆ. ಇದೂ ನಿಜ.

ನಗರ ಜೀವನದ ಸಂದರ್ಭದಲ್ಲಿ ಶಾಪಿಂಗ್‌
ಸಹ ಕುಟುಂಬವೊಂದು ಒಟ್ಟಾಗಿ ಮೌಲ್ಯಯುತ ವಾಗಿ ಸಮಯವನ್ನು ಕಳೆಯಲು, ಕೂಡಲು, ಬೆರೆಯಲು ಇರುವ ಅವಕಾಶ.

ನನಗೊಬ್ಬನಿಗಷ್ಟೇ ಅಲ್ಲ, ನಮ್ಮೆಲ್ಲರಿಗೂ !
ಈ ಭಾವ ನಮ್ಮೊಳಗೆ ತುಂಬುವುದು ಫ್ಯಾಮಿಲಿ ಶಾಪಿಂಗ್‌. ಒಬ್ಬೊಬ್ಬರೇ ಶಾಪಿಂಗ್ಗೆ ಹೋದಾಗ ನಾವು ಯೋಚಿಸುವುದು ನಮ್ಮ ಬಗ್ಗೆ ಮಾತ್ರ. ಆದರೆ ಫ್ಯಾಮಿಲಿ ಶಾಪಿಂಗ್‌ ಹಾಗಲ್ಲ. ಎಲ್ಲರ ಬಗ್ಗೆಯೂ ಯೋಚಿಸುವುದನ್ನು ಕಲಿಸುತ್ತದೆ. ನಮ್ಮ ಆದಾಯವನ್ನು ಎಲ್ಲರ ಅಗತ್ಯಕ್ಕೂ ಹಂಚುವುದನ್ನು ಮತ್ತು ಹಂಚುವ ಅನಿವಾರ್ಯತೆಯನ್ನು ಹೇಳಿಕೊಡುತ್ತದೆ. ಖುಷಿ ಎಂದರೆ ಅದೇ ತಾನೇ, ಹಂಚಿಕೊಂಡಾಗಲಲ್ಲವೇ. ಅದೇ ಫ್ಯಾಮಿಲಿ ಶಾಪಿಂಗ್ನ ಮೂಲ ಮಂತ್ರ.

ನೀವೂ ಫ್ಯಾಮಿಲಿ ಶಾಪಿಂಗ್‌ ಮಾಡಿ, ಫೋಟೋ ಕಳಿಸಿ
ಮೊನ್ನೆಯಷ್ಟೇ ದಸರಾ ಮುಗಿಯಿತು, ಈಗ ದೀಪಾವಳಿ ಬಂದಿದೆ. ಎಲ್ಲ ಉದ್ಯಮ ವಲಯ ಗಳೂ, ಕಂಪೆನಿಗಳೂ ಸಾಕಷ್ಟು ರಿಯಾಯಿತಿ ಘೋಷಿಸಿವೆ. ದಿನಕ್ಕೊಂದು ಆಫ‌ರ್‌ಗಳೂ ಬರು ತ್ತಿವೆ. ನೀವೂ ನಿಮ್ಮ ಕುಟುಂಬ ಸಮೇತ ಶಾಪಿಂಗ್ಗೆ ಹೊರಡಿ. ನಿಮ್ಮ ಕನಸಿನ ಉತ್ಪನ್ನ ಸದಸ್ಯವನ್ನು ಆಯ್ಕೆ ಮಾಡಿ. ಅದರ ಜತೆಗೆ ಇಡೀ ಕುಟುಂಬ ಫೋಟೋ ತೆಗೆಸಿಕೊಂಡು ನಮಗೆ ಕಳುಹಿಸಿ. ನಿಮ್ಮ ಬಿಲ್‌ನ ಫೊಟೋ ಪ್ರತಿ ಅದರ ಜತೆಗೆ ಇರಲಿ. ನಿಮ್ಮ ಹೆಸರು, ಊರು, ಖರೀದಿಸಿದ ಉತ್ಪನ್ನದ ಹೆಸರು, ತೆಗೆದುಕೊಂಡ ಮಳಿಗೆ, ಸ್ಥಳದ ಹೆಸರನ್ನು ನಮೂದಿಸಲು ಮರೆಯಬೇಡಿ.

ಅದರ ಜತೆಗೆ, ನಿಮ್ಮ ಕನಸು ಈಡೇರಿದ್ದರ ಬಗ್ಗೆ ಮತ್ತು ಅದರ ಮಹತ್ವದ ಬಗ್ಗೆ ಎರಡು ಸಾಲು ಬರೆಯಿರಿ. ನಾವು ಆಯ್ದವುಗಳನ್ನು ಪ್ರಕಟಿಸುತ್ತೇವೆ. ಅಕ್ಟೋಬರ್‌ 29ರ ಬಳಿಕ ಬಂದ ಫೋಟೋಗಳನ್ನು ಪರಿಗಣಿಸುವುದಿಲ್ಲ. ನಮ್ಮ ಗ್ಯಾಲರಿಯ ಪ್ರೇಮ್ನಲ್ಲಿ ನಿಮ್ಮ ಫ್ಯಾಮಿಲಿ ಶಾಪಿಂಗ್ನ ಫೋಟೋ !

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ