ಬಿಜೆಪಿಯ ಹಿರಿಯ ನಾಯಕ ತೋನ್ಸೆ ದೇವದಾಸ್ ಪೈ ನಿಧನ
Team Udayavani, Apr 29, 2021, 6:54 PM IST
ಉಡುಪಿ : ಬಿಜೆಪಿಯ ನಾಯಕ ಹಾಗೂ ಆರ್ಎಸ್ಎಸ್ ಹಿರಿಯ ಕಾರ್ಯಕರ್ತ ತೋನ್ಸೆ ದೇವದಾಸ್ ಪೈ (86) ಗುರುವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ತೋನ್ಸೆ ಅವರು ಪುರಸಭೆ ಸದಸ್ಯರಾಗಿ ನೇಮಕಗೊಂಡಿದ್ದ ದಕ್ಷಿಣ ಭಾರತದ ಮೊದಲ ಜನಸಂಘದ ಸದಸ್ಯರಾಗಿದ್ದರು. 1962 ರಿಂದ 16 ವರ್ಷಗಳ ಕಾಲ ಮೂರು ಬಾರಿ ಚುನಾಯಿತಗೊಂಡಿದ್ದರು. ಉಡುಪಿಯ ಭಾರತ್ ಪ್ರೆಸ್ನ ಸಂಸ್ಥಾಪಕರು ಆಗಿದ್ದ ತೊನ್ಸೆ ಅವರು, 1967 ರಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದ್ದರು.
ತೋನ್ಸೆ ಅವರು ಇತ್ತೀಚಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಓರ್ವ ಪುತ್ರ ಹಾಗೂ ಐದು ಜನ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.