
ಪತ್ನಿ ಅಗಲಿದ ಮರುದಿನ ಉದ್ಯಮಿ ಜ್ಞಾನದೇವ ಕಾಮತ್ ಸಂತೆಕಟ್ಟೆ ನಿಧನ
ಉದಯವಾಣಿ ಮಾಜಿ ಏಜೆಂಟ್ ಜ್ಞಾನದೇವ ಕಾಮತ್
Team Udayavani, Sep 10, 2022, 9:12 PM IST

ಹೆಬ್ರಿ: “ಉದಯವಾಣಿ’ ಪತ್ರಿಕೆಯ ಮಾಜಿ ಏಜೆಂಟ್, ಹೆಬ್ರಿ ಸಂತೆಕಟ್ಟೆ ನಿವಾಸಿ, ಹಿರಿಯ ಉದ್ಯಮಿ ಜ್ಞಾನದೇವ ಕಾಮತ್ ಸಂತೆಕಟ್ಟೆ (80) ಅವರು ಸೆ. 10ರಂದು ನಿಧನ ಹೊಂದಿದರು. ಅವರ ಪತ್ನಿ ಸುಲತಾ ಕಾಮತ್ (76) ಅವರು ಸೆ. 9ರಂದು ನಿಧನ ಹೊಂದಿದ್ದರು.
ಮೃತರು ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ವಿವಿಧ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಅವರು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು. ಸುಮಾರು 30 ವರ್ಷಕ್ಕೂ ಮಿಕ್ಕಿ “ಉದಯವಾಣಿ’ ಪತ್ರಿಕೆಯ ವಿತರಕರಾಗಿ, ಸ್ಥಳೀಯ ಶಾಲೆ, ಮೊದಲಾದ ಸಂಘ ಸಂಸ್ಥೆಗಳಿಗೆ ದಾನಿಯಾಗಿದ್ದರು.
ಸಾಹಿತ್ಯದ ಆಸಕ್ತಿ
ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಇದ್ದ ಅವರು ಹಲವಾರು ಕಥೆ, ಕವನಗಳನ್ನು ಬರೆಯುತ್ತಿದ್ದರು. ಪುಸ್ತಕಗಳನ್ನು ಮುದ್ರಿಸಿ ಜನರಿಗೆ ಉಚಿತವಾಗಿ ವಿತರಿಸುತ್ತಿದ್ದರು. ಅವರ ಜೋಮ್ಲ ಕಾಶಿ ಎನ್ನುವ ಲೇಖನವು ಬಹಳ ಪ್ರಸಿದ್ಧಿ ಪಡೆದಿತ್ತು. ಇದು ತರಂಗದ ಅಂದಿನ ಮುಖಪುಟದ ಲೇಖನವಾಗಿ ಹೊರಬಂದಿತ್ತು.
ಸಾವಿನಲ್ಲೂ ಒಂದಾದ ದಂಪತಿಯ ಅಗಲುವಿಕೆಗೆ ಹಲವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
