ಚರಂಡಿ ಅವ್ಯವಸ್ಥೆ ಈ ವಾರ್ಡ್‌ನ ಪ್ರಮುಖ ಸಮಸ್ಯೆ

Team Udayavani, Oct 20, 2019, 5:13 AM IST

1910KKRAM3

ಕಾರ್ಕಳ: ಪತ್ತೂಂಜಿಕಟ್ಟೆ, ಸದ್ಭಾವನ ನಗರ, ಪದ್ಮಾವತಿ ನಗರ ಗುಂಡ್ಯ, ಹಂಚಿಕಟ್ಟೆ ಪ್ರದೇಶಗಳನ್ನು ಹೊಂದಿರುವ ಪುರಸಭೆಯ 3ನೇ ವಾರ್ಡ್‌ ಬಹುತೇಕ ಡೀಮ್ಡ್ ಫಾರೆಸ್ಟ್‌ ಗೆ ಒಳಪಟ್ಟ ಪ್ರದೇಶ. ಹೀಗಾಗಿ ಇಲ್ಲಿನ ಸುಮಾರು 20 ಮನೆಗಳು ಹಕ್ಕುಪತ್ರದಿಂದ ವಂಚಿತವಾಗಿವೆ. ವಾರ್ಡ್‌ನಲ್ಲಿ ಸುಮಾರು 150 ಮನೆಗಳಿವೆ.

ಹಕ್ಕುಪತ್ರವಿಲ್ಲದೆ ಸಂಕಷ್ಟ
ಗುಂಡ್ಯ ಪ್ರದೇಶದಲ್ಲಿ ಹಲವಾರು ಬಡವರ ಮನೆಗಳು ಶಿಥಿಲಗೊಂಡು ಬೀಳುವ ಹಂತದಲ್ಲಿವೆ. ಮನೆ ದುರಸ್ತಿ ಅಥವಾ ಹೊಸ ಮನೆ ನಿರ್ಮಾಣಕ್ಕಾಗಿ ಸರಕಾರದ ಅನುದಾನ ಪಡೆಯಲು ಸಮಸ್ಯೆಯಾಗಿದೆ. ಕಾರಣ ಹಕ್ಕುಪತ್ರ ವಿಲ್ಲದಿರುವುದು. ಕಳೆದ 20 ವರ್ಷಗಳಿಂದ ವಾಸ ಮಾಡಿಕೊಂಡಿ ದ್ದಾಗ್ಯೂ ಹಕ್ಕುಪತ್ರವಿಲ್ಲವೆಂಬ ಏಕೈಕ ಕಾರಣಕ್ಕಾಗಿ ಸರಕಾರದ ಯಾವೊಂದು ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಇಲ್ಲಿನ ನಿವಾಸಿಗಳದ್ದು.

ಸಮಸ್ಯೆಗಳು
ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ವಾರ್ಡ್‌ನ
ಪ್ರಮುಖ ಸಮಸ್ಯೆ. ಆಶ್ರಯ ಕಾಲನಿ ಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಕೆಲವೆಡೆ ಚರಂಡಿಯೇ ಇಲ್ಲ ಎನ್ನಬಹುದು. ಇದ್ದ ಚರಂಡಿಗಳು ಪೊದೆಯಿಂದ ಆವೃತವಾಗಿದ್ದು ಉಪಯೋಗಕ್ಕೆ ಬಾರದಂತಿವೆ.

ರಸ್ತೆ ಸ್ಥಿತಿ ಶೋಚನೀಯ
ವಾರ್ಡ್‌ನಲ್ಲಿ ರಸ್ತೆಯೂ ಚೆನ್ನಾಗಿಲ್ಲ. ಹೊಂಡಗುಂಡಿಗಳಿಂದ ಕೂಡಿರುವ ಇಲ್ಲಿನ ರಸ್ತೆಗಳಿಗೆ ಮರುಡಾಮರು ಆಗಬೇಕಿದೆ. ಸದ್ಭಾವನ ನಗರದಿಂದ ಕಲ್ಲೊಟ್ಟೆ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ.

ಉದ್ಯಾನವನ ಅಭಿವೃದ್ಧಿಗೊಂಡಿಲ್ಲ
ಗುಂಡ್ಯ ಎಂಬಲ್ಲಿ ಉದ್ಯಾನವನಕ್ಕಾಗಿ ಕಾಯ್ದಿರಿಸಿದ ಜಾಗ ಅಭಿವೃದ್ಧಿ ಕಂಡಿಲ್ಲ. ಉದ್ಯಾನವನ ಸುಂದರಗೊಳಿಸಿ ನಮ್ಮ ಬೇಡಿಕೆಯೊಂದನ್ನು ಈಡೇರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿದ್ಯುತ್‌ ಸಂಪರ್ಕ ವಂಚಿತ ಮನೆಗಳು
ಈ ವಾರ್ಡ್‌ನಲ್ಲಿ ಸುಮಾರು 150 ಮನೆಗಳಿದ್ದು, ಅವುಗಳಲ್ಲಿ ಮೂರು ಮನೆಗಳಿಗೆ ಇದುವರೆಗೂ ವಿದ್ಯುತ್‌ ಸಂಪರ್ಕವಿಲ್ಲ. ತಮ್ಮ ಮನೆಯಲ್ಲಿ ಯಾವಾಗ ಬೆಳಕು ಹರಿಯುವಂತಾಗುವುದೋ ಎಂದು ಇಲ್ಲಿನ ನಿವಾಸಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ವಾರ್ಡ್‌ ಅಭಿವೃದ್ಧಿಗೆ
ಪ್ರಾಮಾಣಿಕ ಪ್ರಯತ್ನ
ಒಂದು ವರ್ಷವಾದರೂ ಪುರಸಭೆಗೆ ಅಧ್ಯಕ್ಷರ ನೇಮಕವಾಗದಿರುವುದು ಅಭಿವೃದ್ಧಿ ದೃಷ್ಟಿಯಲ್ಲಿ ಹಿನ್ನಡೆಯಾಗಿದೆ. ನನ್ನ ವಾರ್ಡ್‌ನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ವ ರೀತಿಯಿಂದಲೂ ಪ್ರಯತ್ನಿಸುತ್ತೇನೆ.
– ನೀತಾ ಪ್ರಶಾಂತ್‌ ಆಚಾರ್ಯ ,3ನೇ ವಾರ್ಡ್‌ ಸದಸ್ಯೆ

ಉದಯವಾಣಿ ಫ‌ಲಶ್ರುತಿ
ಪತ್ತೂಂಜಿಕಟ್ಟೆ ಪ್ರದೇಶಗಳಿಗೆ ಈ ಹಿಂದೆ ಪುರಸಭಾ ವತಿಯಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ ಹಾಗೂ ಈ ಪರಿಸರದಲ್ಲಿ ಅಳವಡಿಸ ಲಾಗಿದ್ದ ದಾರಿದೀಪದ ಸ್ವಿಚ್‌ಗಳು ಅಪಾಯಕಾರಿಯಾಗಿರುವ ಕುರಿತು ಉದಯವಾಣಿಯಲ್ಲಿ ವರದಿ ಪ್ರಕಟಗೊಂಡಿತ್ತು. ಬಳಿಕ ಪುರಸಭೆ ಈ ಭಾಗಕ್ಕೆ ನೀರು ಸರಬರಾಜುಗೊಳಿಸಿದೆ. ಮೆಸ್ಕಾಂ ಇಲಾಖೆ ಹೊಸ ಸ್ವಿಚ್‌ ಬೋರ್ಡ್‌ ಅಳವಡಿಸಿ ಸ್ಪಂದಿಸಿದೆ ಎಂದು ಸ್ಥಳೀಯರು ಸಂತಸ ಹಂಚಿಕೊಂಡರು.

ರಾಮಚಂದ್ರ ಬರೆಪ್ಪಾಡಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.