Udupi Case ತೀವ್ರ ವಿಚಾರಣೆ; ಮೂಲ್ಕಿಯಲ್ಲಿ ಸುಟ್ಟ ಬಟ್ಟೆ ಪತ್ತೆ

ಮಹಜರು ಪ್ರಕ್ರಿಯೆ ಶೇ. 98ರಷ್ಟು ಪೂರ್ಣ; ಶೀಘ್ರ ಕೋರ್ಟ್‌ಗೆ ಹಾಜರು ಸಾಧ್ಯತೆ

Team Udayavani, Nov 22, 2023, 12:45 AM IST

Udupi Case ತೀವ್ರ ವಿಚಾರಣೆ; ಮೂಲ್ಕಿಯಲ್ಲಿ ಸುಟ್ಟ ಬಟ್ಟೆ ಪತ್ತೆ

ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಆರೋಪಿ ಪ್ರವೀಣ್‌ ಚೌಗಲೆಯ ಮಹಜರು ಪ್ರಕ್ರಿಯೆ ಶೇ.98ರಷ್ಟು ಪೂರ್ಣಗೊಂಡಿದೆ.

ಪೊಲೀಸರು ಆತನನ್ನು ನ.28ರ ವರೆಗೆ ಕಸ್ಟಡಿಗೆ ತೆಗೆದುಕೊಂಡಿದ್ದು, ತನಿಖೆ ಈಗಾಗಲೇ ಬಹುತೇಕ ಪೂರ್ಣಗೊಂಡಿರುವ ಕಾರಣ ಆ ದಿನಾಂಕಕ್ಕೂ ಮುನ್ನ ಆತನನ್ನು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಗಳಿವೆ.

ಸಂಪೂರ್ಣ ಮಾಹಿತಿ ಸಂಗ್ರಹ
ಪೊಲೀಸರು ನಿರಂತರವಾಗಿ ಆತನನ್ನು ಮಹಜರು ಪ್ರಕ್ರಿಯೆಗೆ ಒಳಪಡಿಸಿದ್ದು, ಕೃತ್ಯಕ್ಕೆ ಬಳಸಿದ್ದ ಚಾಕು, ಮಾಸ್ಕ್, ಬ್ಯಾಗ್‌ ಸಹಿತ ಇತರ ವಸ್ತುಗಳು ಆತನ ಬಿಜೈಯ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿವೆ. ಬಿಜೈನಲ್ಲಿರುವ ಮೃತ ಯುವತಿ ಅಯ್ನಾಝ್ ಬಾಡಿಗೆ ರೂಂ ಬಳಿ ಪಾರ್ಕ್‌ ಮಾಡಿದ್ದ ಚೌಗಲೆ ಹೆಸರಿನಲ್ಲಿರುವ ಸ್ಕೂಟರ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರವೀಣ್‌ ಚೌಗಲೆ ಕಾರು ಖರೀದಿ ಮಾಡಿದ ಬಳಿಕ ತನ್ನಲ್ಲಿದ್ದ ಸ್ಕೂಟರ್‌ ಅನ್ನು ಸಹೋದ್ಯೋಗಿ ಅಯ್ನಾಝ್ಗೆ ಬಳಕೆ ಮಾಡಲು ನೀಡಿದ್ದ. ಆರೋಪಿ ಆಕೆಗೆ ಸ್ಕೂಟರ್‌ ಅನ್ನು ಮಾರಾಟ ಮಾಡಿದ್ದನೇ ಅಥವಾ ಉಪಯೋಗಿಸಲು ನೀಡದ್ದನೇ ಎಂಬುದನ್ನು ಪೊಲೀಸರು ಇನ್ನಷ್ಟೇ ವಿಚಾರಣೆ ನಡೆಸಬೇಕಿದೆ.

ಸುಟ್ಟ ಬಟ್ಟೆ ಪತ್ತೆ
ನೇಜಾರಿನಲ್ಲಿ ಕೊಲೆ ನಡೆಸಿದ ಬಳಿಕ ಅನ್ಯರ ಬೈಕ್‌ ಸಹಾಯದಿಂದ ಸಂತೆಕಟ್ಟೆ, ಕರಾವಳಿ ಬೈಪಾಸ್‌ ಮಾರ್ಗವಾಗಿ ಹೆಜಮಾಡಿ ಟೋಲ್‌ಗೇಟ್‌ ತಲುಪಿದ್ದ. ಅಲ್ಲಿ ಆತ ಮೊದಲೇ ತಂದು ನಿಲ್ಲಿಸಿದ್ದ ಎಂಜಿ ಹೆಕ್ಟರ್‌ ಕಾರಿನ ಮೂಲಕ ಬಪ್ಪನಾಡು ಬಳಿಯ ಪಾಳುಬಿದ್ದ ಕಟ್ಟಡದ ಬಳಿ ತೆರಳಿ ಆತ ರಕ್ತಸಿಕ್ತ ಬಟ್ಟೆಯನ್ನು ಅಲ್ಲಿಯೇ ಸುಟ್ಟುಹಾಕಿದ್ದಾನೆ. ಪೊಲೀಸರ ಮಹಜರು ಪ್ರಕ್ರಿಯೆ ವೇಳೆ ಆತ ಇದನ್ನು ತಿಳಿಸಿದ್ದು, ಬಟ್ಟೆಯ ಕುರುಹುಗಳು ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಬಳಿಕ ಆತ ಅಲ್ಲಿಂದ ನೇರವಾಗಿ ಮಂಗಳೂರಿನತ್ತ ತೆರಳಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಮಹಜರು ಪೂರ್ಣ
ಈಗಾಗಲೇ ಘಟನೆ ನಡೆದ ನೇಜಾರಿನ ಮನೆ, ಸಂತೆಕಟ್ಟೆ, ಕರಾವಳಿ ಬೈಪಾಸ್‌, ಹೆಜಮಾಡಿ, ಮೂಲ್ಕಿ ಭಾಗ, ಕೆಪಿಟಿ ಬಳಿಯಲ್ಲಿರುವ ಫ್ಲ್ಯಾಟ್‌, ಮಂಗಳೂರಿನಲ್ಲಿರುವ ಎರಡು ನಿವೇಶನ, ಸುರತ್ಕಲ್‌ನಲ್ಲಿ ಸ್ವಂತ ಮನೆಯಲ್ಲಿ ತಪಾಸಣೆ ಕಾರ್ಯವನ್ನು ಪೊಲೀಸರು ನಡೆಸಿದ್ದಾರೆ. ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ಆತ ಉಳಿದುಕೊಂಡಿದ್ದರಿಂದ ಆತನ ಊರಾದ ಮಹಾರಾಷ್ಟ್ರದ ಸಾಂಗ್ಲಿಗೆ ಕರೆದುಕೊಂಡು ಹೋಗುವ ಪ್ರಕ್ರಿಯೆ ಇಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೋರ್ಟ್‌ಗೆ ಹಾಜರುಪಡಿಸಲು ಸಿದ್ಧತೆ
ಆರೋಪಿಯನ್ನು ಪೊಲೀಸರು ಮಂಗಳವಾರವೂ ವಿಚಾರಣೆಗೆ ಒಳಪಡಿಸಿದರು. ಮುಂದಿನ ಎರಡು ದಿನಗಳೊಳಗೆ ಆತನನ್ನು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಗಳಿವೆ. ಆತನಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಹಾಜರುಪಡಿಸುವ ದಿನಾಂಕವನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಜನದಟ್ಟನೆಯನ್ನು ತಪ್ಪಿಸುವ ಉದ್ದೇಶದಿಂದ ನ್ಯಾಯಾಧೀಶರ ಮನೆಗೂ ಆತನನ್ನು ಹಾಜರುಪಡಿಸಬಹುದು. ನ.15ರಂದು ಆರೋಪಿಯನ್ನು ಕೋರ್ಟ್‌ಗೆ ಕರೆತಂದಿದ್ದ ವೇಳೆ 200ಕ್ಕೂ ಅಧಿಕ ಮಂದಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ನಗರದ ಆಯಾ ಕಟ್ಟಿನ ಭಾಗದಲ್ಲಿಯೂ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಂದೆಯೂ ಪೊಲೀಸ್‌ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.

ಕುಸ್ತಿ “ಪ್ರವೀಣ’
ದೈಹಿಕವಾಗಿಯೂ ಸದೃಢನಾಗಿದ್ದ ಆರೋಪಿ ಪ್ರವೀಣ್‌ ಕುಸ್ತಿಪಟುವಾಗಿದ್ದ. ಎದುರಾಳಿಯನ್ನು ಸೋಲಿಸುವುದನ್ನು ಆತ ತಿಳಿದುಕೊಂಡಿದ್ದ. ಹೀಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಚಾಕುವಿನಿಂದ 4 ಮಂದಿಯನ್ನು ಒಬ್ಬನೇ ಕೊಲ್ಲಲು ಸಾಧ್ಯವಾಗಿತ್ತು. ಕೊಲೆ ನಡೆಸಿದ ದಿನ ಮಾದಕದ್ರವ್ಯ ಏನಾದರೂ ಸೇವಿಸಿದ್ದನೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಫಾರೆನ್ಸಿಕ್‌ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲಾಗಿದ್ದು, ವರದಿ ಇನ್ನಷ್ಟೇ ಪೊಲೀಸರ ಕೈಸೇರಬೇಕಿದೆ.

ಟಾಪ್ ನ್ಯೂಸ್

Man finds Rs 9,900 crore in his bank account

Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?

Udupi Gitanjali Silk, Shantisagar Hotel founder Neere Bailur Govinda Naik passes away

Udupi ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

twin terror attacks in Jammu and Kashmir

Jammu and Kashmir ಉಗ್ರ ದಾಳಿ; ಮಾಜಿ ಸರಪಂಚ್ ಸಾವು, ಇಬ್ಬರು ಪ್ರವಾಸಿಗರಿಗೆ ಗಾಯ

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

1-24-sunday

Daily Horoscope: ವಿರಾಮ ಆಚರಣೆಯ ನಡುವೆ ಹೊಸ ಕಾರ್ಯಗಳ ಪ್ರಸ್ತಾವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಉಭಯ ಜಿಲ್ಲೆಯಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ

ಉಭಯ ಜಿಲ್ಲೆಯಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Kapu ಟಿಪ್ಪರ್‌ಗೆ ಪಿಕಪ್‌ ಢಿಕ್ಕಿ: ಚಾಲಕ ಗಂಭೀರ

Kapu ಟಿಪ್ಪರ್‌ಗೆ ಪಿಕಪ್‌ ಢಿಕ್ಕಿ: ಚಾಲಕ ಗಂಭೀರ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

2-hunsur

Hunsur: ಹೆದ್ದಾರಿ ಸರ್ವೆ ಕಾರ್ಯ ತಡೆದು ರೈತರ ಆಕ್ರೋಶ

Man finds Rs 9,900 crore in his bank account

Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?

Udupi Gitanjali Silk, Shantisagar Hotel founder Neere Bailur Govinda Naik passes away

Udupi ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

twin terror attacks in Jammu and Kashmir

Jammu and Kashmir ಉಗ್ರ ದಾಳಿ; ಮಾಜಿ ಸರಪಂಚ್ ಸಾವು, ಇಬ್ಬರು ಪ್ರವಾಸಿಗರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.