ಉಡುಪಿ, ಮಣಿಪಾಲ: ರೈತರಿಂದಲೇ ನೇರ ತರಕಾರಿ ಮಾರಾಟ 

Team Udayavani, Dec 28, 2017, 2:58 PM IST

28-36.jpg

ಉಡುಪಿ: ರೈತರು ತಾವು ಬೆಳೆದ ತರಕಾರಿಗಳನ್ನು ತಾವೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. ಅದು ತಾಜಾ ಮತ್ತು ಒಂದಿಷ್ಟು ಕಡಿಮೆ ದರಕ್ಕೆ ಲಭ್ಯವಾಗಲಿದೆ. ಹೌದು. ಉಡುಪಿ ತಾಲೂಕಿನ ಬೆನೆಗಲ್‌, ಕುಕ್ಕೆಹಳ್ಳಿ ಮತ್ತು ಮಟ್ಟು ಪ್ರದೇಶಗಳ ರೈತರು ಬೆಳೆದ ತರಕಾರಿಗಳು “ಮೊಬೈಲ್‌ ಮಾರ್ಕೆಟ್‌’ಗಳ ಮೂಲಕ ಗ್ರಾಹಕರನ್ನು ತಲುಪಲಿವೆ. ಈ ಯೋಜನೆಯ ಸಂಯೋಜಕ, ಮಣಿಪಾಲ ಸ್ಕೂಲ್‌ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕ ಡಾ| ಹರೀಶ್‌ ಜೋಷಿ ಮತ್ತು ತರಕಾರಿ ಬೆಳೆಗಾರರ ಸೌಹಾರ್ದ ಸಹಕಾರಿ ಬೆನೆಗಲ್‌ – ಕುಕ್ಕೆಹಳ್ಳಿ – ಮಟ್ಟು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್‌ ಉಳಿತ್ತಾಯ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ನ 
ಸಹಕಾರದೊಂದಿಗೆ ಸಂಚಾರಿ ತರಕಾರಿ ಮಾರುಕಟ್ಟೆ ಯೋಜನೆ ಆರಂಭಿಸಲಾಗುತ್ತಿದೆ. ಮಧ್ಯವರ್ತಿಗಳು ಇಲ್ಲದೆಯೇ ನೇರವಾಗಿ ರೈತರು ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡಲಿದ್ದಾರೆ. ಅಲಸಂಡೆ, ಬದನೆ, ಹರಿವೆ, ಸೌತೆ ಕಾಯಿ ಮೊದಲಾದವುಗಳನ್ನು ಮಾರಾಟ ಮಾಡಲಾಗುವುದು. ರೈತರು ಯಾವ ಕಾಲದಲ್ಲಿ ಯಾವ ತರಕಾರಿಗಳನ್ನು ಬೆಳೆಯುತ್ತಾರೋ ಅದು ಸಂಚಾರಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಮುಂದೆ ಅಕ್ಕಿ, ಬೆಲ್ಲ, ತೆಂಗಿನಕಾಯಿಗಳನ್ನು ಕೂಡ ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಮೊಬೈಲ್‌ ಮೂಲಕ ಮಾಹಿತಿ
ಯಾವ ದಿನ ಯಾವ ತರಕಾರಿ ದೊರೆಯುತ್ತದೆ ಎಂಬುದನ್ನು ವಾಟ್ಸಪ್‌ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಲಾಗುವುದು. ವಾಹನ ದಲ್ಲಿಯೇ ಮಾರಾಟ ನಡೆಯುತ್ತದೆ. ಆ ವಾಹನದಲ್ಲಿ ಸಂಪರ್ಕ ಸಂಖ್ಯೆಯನ್ನು ಕೂಡ ಪ್ರಚುರಪಡಿಸಲಾಗುವುದು. ಈ ತರಕಾರಿಗಳಲ್ಲಿ ಸಾವಯವೂ ಇದೆ. ಆದರೆ ಸಾವಯವ ಎಂದು ಕರೆಯಬೇಕಾದರೆ ಅದನ್ನು ಪ್ರಮಾಣೀಕರಿಸಬೇಕು. ಹಾಗಾಗಿ ಇಲ್ಲಿ ಪೂರ್ಣವಾಗಿ ಸಾವಯವ ತರಕಾರಿಯೇ ಮಾರಾಟವಾಗುತ್ತದೆ ಎಂದು ಹೇಳಲಾಗದು. ಆದರೆ ತಾಜಾ ತರಕಾರಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ರಾಘವೇಂದ್ರ ಭಟ್‌, ನಿರ್ದೇಶಕ ಅರ್ಜುನ್‌ ನಾೖಕ್‌, ಸಿಇಒ ನಾಗರಾಜ್‌, ಮಟ್ಟುಗುಳ್ಳ ಬೆಳೆಗಾರರ ಸಂಘದ ಲಕ್ಷ್ಮಣ್‌ ಮಟ್ಟು ಉಪಸ್ಥಿತರಿದ್ದರು.

ಮಣಿಪಾಲ 5, ಉಡುಪಿ 3 ಕಡೆ
ಮಣಿಪಾಲದ ಟೈಗರ್‌ ಸರ್ಕಲ್‌, ಎಂಐಟಿ ಕ್ಯಾಂಪಸ್‌, ಸಿಂಡಿಕೇಟ್‌ ಸರ್ಕಲ್‌, ಸಿಂಡಿಕೇಟ್‌ ಬ್ಯಾಂಕ್‌ ಪ್ರಧಾನ ಕಚೇರಿ ಬಳಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಪಕ್ಕದಲ್ಲಿ ಸಂಚಾರಿ ತರಕಾರಿ ಮಾರುಕಟ್ಟೆ ಇರುತ್ತದೆ. ಉಡುಪಿಯಲ್ಲಿ ಸಿಟಿ ಬಸ್‌ ನಿಲ್ದಾಣ ಮತ್ತು ಅಂಬಲಪಾಡಿ ಜಂಕ್ಷನ್‌ ಪರಿಸರದಲ್ಲಿ  ಸಂಚಾರಿ ಮಾರುಕಟ್ಟೆ ಆರಂಭಿಸಲು ನಿರ್ಧರಿಸಲಾಗಿದೆ. ಇವು ಸಾಮಾನ್ಯವಾಗಿ ಬೆಳಗ್ಗೆ 8ರಿಂದ ರಾತ್ರಿ 7 ಗಂಟೆಯವರೆಗೆ ಲಭ್ಯವಿರುತ್ತವೆ. ಆದರೆ ನಿರ್ದಿಷ್ಟ ಸಮಯವನ್ನು ಮೊಬೈಲ್‌ ಸಂಖ್ಯೆಯ ಮೂಲಕವೇ ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಪಡುಬಿದ್ರಿ, ಕಾರ್ಕಳ ಕಡೆಗಳಿಂದಲೂ ಬೇಡಿಕೆ ಇದೆ. ತರಕಾರಿ ಬೆಳೆಗಾರರ ಸೌಹಾರ್ದ ಸಹಕಾರಿಯಲ್ಲಿ ಈಗಾಗಲೇ 250 ಸದಸ್ಯರು ನೋಂದಣಿಗೊಂಡಿದ್ದು ಅವರು ತಮ್ಮಲ್ಲಿರುವ ತರಕಾರಿಗಳ ಬಗ್ಗೆ ಪರಸ್ಪರ ಮಾಹಿತಿ ನೀಡುತ್ತಾ ಸಮನ್ವಯ ಸಾಧಿಸಿ ಮಾರಾಟ ಮಾಡಲಿದ್ದಾರೆ. ಡಿ. 29ರಂದು ಬೆಳಗ್ಗೆ 11ಕ್ಕೆ ಮಣಿಪಾಲ ಟೈಗರ್‌ ಸರ್ಕಲ್‌ನಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಉದ್ಘಾಟಿಸಲಿದ್ದಾರೆ ಎಂದು ಡಾ| ಹರೀಶ್‌ ಜೋಷಿ ಮತ್ತು ನಾಗರಾಜ್‌ ಉಳಿತ್ತಾಯ ತಿಳಿಸಿದರು. 

ಟಾಪ್ ನ್ಯೂಸ್

ವಿಜಯ್ ಬರ್ತ್‌ಡೇ: ಹುಟ್ಟುಹಬ್ಬ ಆಚರಿಸುತ್ತಿಲ್ಲ, ಮನೆ ಬಳಿ ಬರಬೇಡಿ ಎಂದ ನಟ

ವಿಜಯ್ ಬರ್ತ್‌ಡೇ: ಹುಟ್ಟುಹಬ್ಬ ಆಚರಿಸುತ್ತಿಲ್ಲ, ಮನೆ ಬಳಿ ಬರಬೇಡಿ ಎಂದ ನಟ

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಎರಡು ಪ್ರತ್ಯೇಕ ಕೇಸು ದಾಖಲು

ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಪ್ರಕರಣ ದಾಖಲು

ಅಗತ್ಯವಿದ್ದರೆ ತರಗತಿ ಅವಧಿ 1 ತಾಸು ವಿಸ್ತರಿಸಲು ಕ್ರಮ

ಅಗತ್ಯವಿದ್ದರೆ ತರಗತಿ ಅವಧಿ 1 ತಾಸು ವಿಸ್ತರಿಸಲು ಕ್ರಮ

ಶೀಘ್ರವೇ ಹಳೆಯ ವಿದ್ಯುತ್‌ ತಂತಿ ಬದಲಾವಣೆ

ಶೀಘ್ರವೇ ಹಳೆಯ ವಿದ್ಯುತ್‌ ತಂತಿ ಬದಲಾವಣೆ

ಎಸ್‌ಬಿಐಗೆ 973 ಕೋಟಿ ಪರಿಹಾರ; ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ

ಎಸ್‌ಬಿಐಗೆ 973 ಕೋಟಿ ಪರಿಹಾರ; ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಂಡೋ ಸಂತ್ರಸ್ತರಿಗೆ ಸೌಲಭ್ಯ ಒದಗಿಸಿ: ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌

ಎಂಡೋ ಸಂತ್ರಸ್ತರಿಗೆ ಸೌಲಭ್ಯ ಒದಗಿಸಿ: ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌

ಉಡುಪಿ ಜಿಲ್ಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್‌!

ಉಡುಪಿ ಜಿಲ್ಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್‌!

ಪರ್ಯಾಯ ಕಳೆದರೂ ಜಾತ್ರೆಯ ಕಳೆ: ಶ್ರೀಕೃಷ್ಣನ ದರ್ಶನಕ್ಕೆ ಭಕ್ತ ಸಮೂಹ

ಪರ್ಯಾಯ ಕಳೆದರೂ ಜಾತ್ರೆಯ ಕಳೆ: ಶ್ರೀಕೃಷ್ಣನ ದರ್ಶನಕ್ಕೆ ಭಕ್ತ ಸಮೂಹ

1-saad

ಬ್ರಹ್ಮಾವರ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಭಕ್ತಿ, ಜ್ಞಾನ, ಮುಕ್ತಿ ಪರ್ಯಾಯ ಪೂಜೆಯ ಸಂದೇಶ; ನಿರ್ಗಮನ ಅದಮಾರು ಶ್ರೀಗಳು

ಭಕ್ತಿ, ಜ್ಞಾನ, ಮುಕ್ತಿ ಪರ್ಯಾಯ ಪೂಜೆಯ ಸಂದೇಶ; ನಿರ್ಗಮನ ಅದಮಾರು ಶ್ರೀಗಳು

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ವಿಜಯ್ ಬರ್ತ್‌ಡೇ: ಹುಟ್ಟುಹಬ್ಬ ಆಚರಿಸುತ್ತಿಲ್ಲ, ಮನೆ ಬಳಿ ಬರಬೇಡಿ ಎಂದ ನಟ

ವಿಜಯ್ ಬರ್ತ್‌ಡೇ: ಹುಟ್ಟುಹಬ್ಬ ಆಚರಿಸುತ್ತಿಲ್ಲ, ಮನೆ ಬಳಿ ಬರಬೇಡಿ ಎಂದ ನಟ

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಎರಡು ಪ್ರತ್ಯೇಕ ಕೇಸು ದಾಖಲು

ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಪ್ರಕರಣ ದಾಖಲು

ಅಗತ್ಯವಿದ್ದರೆ ತರಗತಿ ಅವಧಿ 1 ತಾಸು ವಿಸ್ತರಿಸಲು ಕ್ರಮ

ಅಗತ್ಯವಿದ್ದರೆ ತರಗತಿ ಅವಧಿ 1 ತಾಸು ವಿಸ್ತರಿಸಲು ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.