Udayavni Special

ಉಡುಪಿಯ ಸಾಹಿತ್ಯಿಕ, ಸಾಂಸ್ಕೃತಿಕ ಲೋಕ ಮರೆಯಲಾಗದ ಕು.ಶಿ.

ಕು.ಶಿ.ಯವರು ಬರೆದ ಕೆ.ಕೆ. ಹೆಬ್ಟಾರರ ಜೀವನಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, 1986ರಲ್ಲಿ ಫಿನ್ ಲ್ಯಾಂಡ್ ಪ್ರಶಸ್ತಿ, 1989ರಲ್ಲಿ ಪ್ರತಿಷ್ಠಿತ ವಿಶ್ವ ಮಾನವ ಪ್ರಶಸ್ತಿ ಬಂದಿವೆ.

Team Udayavani, Nov 4, 2020, 12:09 PM IST

UDP-TDY-1

ಕುಂಜಿಬೆಟ್ಟು ಶಿವ ಹರಿದಾಸ ಭಟ್ಟ ಎಂಬ ಹೆಸರು ಕು.ಶಿ. ಹರಿದಾಸ ಭಟ್ಟ ಎಂದೇ ಚಿರಪರಿಚಿತ. ಉಡುಪಿಯ ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ, ಜಾನಪದೀಯ, ಸಂಘಟನಾತ್ಮಕ ಇತಿಹಾಸದಲ್ಲಿ ಮರೆಯಲಾಗದ ಹೆಸರಿದು.

ಎಂಜಿಎಂ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿಯೂ ಕು.ಶಿ.ಯವರು ಕೈಯಾಡಿಸಿದ್ದು ಅರ್ಥೇತರ ವಿಷಯಗಳಲ್ಲಿ. “ಉದಯವಾಣಿ’ಯಲ್ಲಿ ಪ್ರಕಟವಾಗುತ್ತಿದ್ದ ಅವರ “ಲೋಕಾಭಿರಾಮ’ ಅಂಕಣ ಅವರ ಲೋಕಾನುಭವದ ಪ್ರತೀಕವಾಗಿತ್ತು. ಅವರು ಈ ಅಂಕಣದಲ್ಲಿ ಅದೆಷ್ಟೋ ಧೀಮಂತರ ಬಗೆಗೆ ಬೆಳಕು ಚೆಲ್ಲಿದ್ದರು. 1924ರ ಮಾ. 17ರಂದು ಜನಿಸಿದ ಭಟ್ಟರು 2000ರ ಆ. 20ರಂದು ಇಹಲೋಕ ತ್ಯಜಿಸಿದರು.

ಎಂಜಿಎಂ ಕಾಲೇಜನ್ನು ತಮ್ಮ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಿ ಅದನ್ನೂ ಬೆಳೆಸಿದರು. ಇಂದಿಗೂ ಎಂಜಿಎಂ ಕಾಲೇಜು ಮತ್ತು ಗೋವಿಂದ ಪೈ ಸಂಶೋಧನ ಕೇಂದ್ರ ಅಂದಾಕ್ಷಣ ಕು.ಶಿ.ಯವರ ಚಿತ್ರಣ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ. ಎಂಜಿಎಂ ಕಾಲೇಜಿನ ಗೋವಿಂದ ಪೈ ಸಂಶೋಧನ ಕೇಂದ್ರ, ಯಕ್ಷಗಾನ ಕೇಂದ್ರ, ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿ ಭದ್ರ ಬುನಾದಿ ಒದಗಿಸಿದ್ದರಲ್ಲದೆ, ಹಲವು ವಿದ್ವಾಂಸರು ಈ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಲು ಕಾರಣರಾದರು. ಬೇಂದ್ರೆ, ಕಾರಂತ, ಪಾವೆಂ ಅಂತಹ ದಿಗ್ಗಜರನ್ನು ಕರೆಸಿ ಸಾಹಿತ್ಯಿಕ, ಸಾಂಸ್ಕೃತಿಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದು ಎಷ್ಟು ಬಾರಿ ಎಂಬುದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಆ ಕಾಲದಲ್ಲಿ ಇಂತಹ ಧೀಮಂತರಿಗೆ ಕು.ಶಿ.ಯವರ ಮನೆಯೇ ಅತಿಥಿಗೃಹವಾಗಿತ್ತು. ಅವರ ಆತಿಥೇಯ ವೈಶಿಷ್ಟéಗಳನ್ನು ಬೇಂದ್ರೆಯಂತಹ ಹಿರಿಯರು ಬೆಟ್ಟು ಮಾಡಿದ್ದಾರೆ.

1960ರ ದಶಕದಲ್ಲಿ ಮಣಿಪಾಲದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟಕರಾಗಿ ಕು.ಶಿ.ಯವರು ಅದನ್ನು ಯಶಸ್ವಿಗೊಳಿಸಿದ್ದನ್ನು ಇಂದಿಗೂ ಸ್ಮರಿಸಿಕೊಳ್ಳುವವರಿದ್ದಾರೆ. “ಅರ್ಥಶಾಸ್ತ್ರ’, “ಸಮಗ್ರ ಯಕ್ಷಗಾನ ಪರಂಪರೆ ಮತ್ತು

ಪ್ರಯೋಗ’, “ಪುಸ್ತಕ ಪುರಾಣ’, “ಕಾರಂತ ಪ್ರಪಂಚ’, “ಬದುಕುವ ದಾರಿ’, “ಪ್ರಜಾತಂತ್ರದ ಹೆದ್ದಾರಿ’, “ಶಿಕ್ಷಣ ಮತ್ತು ಜೀವನದ ಅರ್ಥ’, “ಸ್ವಾತಂತ್ರ್ಯ ಮತ್ತು ಸಂಸ್ಕೃತಿ’, “ಕಾಲವೇ ಬದಲಾಗಿದೆ’ ಮೊದಲಾದ 35ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಯಕ್ಷ ಗಾನ ಕೇಂದ್ರದ ಮೂಲಕ ಹಲವು ವಿದೇಶ ಗಳಲ್ಲಿ ನಮ್ಮ ಕರಾವಳಿ ಕಲೆಯನ್ನು ಪ್ರಚುರ ಪಡಿಸಿದ್ದರು. ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ತುಳು ನಿಘಂಟು ಹೊರತರುವಲ್ಲಿಯೂ ಭಟ್ಟರ ಪಾತ್ರ ಮಹತ್ವ ಪೂರ್ಣವಾದುದು. ಅರ್ಥಶಾಸ್ತ್ರ ಎನ್ನುವುದು ಅವರ ವೃತ್ತಿಪರ ಶಿಕ್ಷಣವಾದರೂ ಅವರು ಕನ್ನಡ ಮತ್ತು ಸಂಸ್ಕೃತದಲ್ಲಿ ವಿದ್ವಾನ್‌ ಪದವೀಧರರು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.

ಕು.ಶಿ.ಯವರ ಹೆಸರಿನಲ್ಲಿ  ಪ್ರಶಸ್ತಿ :  ಕು.ಶಿ.ಯವರು ಬರೆದ ಕೆ.ಕೆ. ಹೆಬ್ಟಾರರ ಜೀವನಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, 1986ರಲ್ಲಿ ಫಿನ್ ಲ್ಯಾಂಡ್‌ ಪ್ರಶಸ್ತಿ, 1989ರಲ್ಲಿ ಪ್ರತಿಷ್ಠಿತ ವಿಶ್ವ ಮಾನವ ಪ್ರಶಸ್ತಿ ಮೊದಲಾದ ಗೌರವಗಳು ಬಂದಿವೆ. ಕರ್ನಾಟಕ ರಾಜ್ಯೋತ್ಸವದ ಈ ಸುಸಂದರ್ಭದಲ್ಲಿ, ಕು.ಶಿ.ಯವರಿಗೆ 1985ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದನ್ನು ಸ್ಮರಿಸಬೇಕಾಗಿದೆ. ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಕು.ಶಿ.ಯವರ ಹೆಸರಿನಲ್ಲಿ ಪ್ರಶಸ್ತಿಯನ್ನೂ ನೀಡಲಾಗುತ್ತಿದೆ.

ಸ್ಮಾರಕವಿಲ್ಲ :

ಕು.ಶಿ.ಯವರ ಹೆಸರಿನಲ್ಲಿ ಸ್ಮಾರಕವಿನ್ನೂ ರಚನೆಯಾಗಿಲ್ಲ. ಅವರ ಕಾರ್ಯಕ್ಷೇತ್ರವಾಗಿದ್ದ ಉಡುಪಿಯಲ್ಲಿ  ಪ್ರಮುಖ ರಸ್ತೆ, ಗ್ರಂಥಾಲಯ ಇತ್ಯಾದಿಗೆ ಅವರ ನಾಮಕರಣ, ಸ್ಮಾರಕ ರಚನೆಗೆ ಜನಪ್ರತಿನಿಧಿಗಳು ಒತ್ತಡ ತಂದು ಸಾಕಾರಗೊಳಿಸಲು ಪ್ರಯತ್ನಿಸಬೇಕಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪಿಎಫ್ಐ ಕಚೇರಿ, ಪದಾಧಿಕಾರಿಗಳ ಮನೆ ಮೇಲೆ ಇ.ಡಿ ದಾಳಿ: ಕರ್ನಾಟಕ ಸೇರಿ 9 ರಾಜ್ಯದಲ್ಲಿ ದಾಳಿ

ಪಿಎಫ್ಐ ಕಚೇರಿ, ಪದಾಧಿಕಾರಿಗಳ ಮನೆ ಮೇಲೆ ಇ.ಡಿ ದಾಳಿ: ಕರ್ನಾಟಕ ಸೇರಿ 9 ರಾಜ್ಯದಲ್ಲಿ ದಾಳಿ

ನಟಿ ಭಾರತಿ ಸಿಂಗ್ ಬೇಲ್ ಗೆ ನೆರವು: ಇಬ್ಬರು ಎನ್ ಸಿಬಿ ಅಧಿಕಾರಿಗಳು ಅಮಾನತು

ನಟಿ ಭಾರತಿ ಸಿಂಗ್ ಬೇಲ್ ಗೆ ನೆರವು: ಇಬ್ಬರು ಎನ್ ಸಿಬಿ ಅಧಿಕಾರಿಗಳು ಅಮಾನತು!

ಕೊಡಾಜೆ ಬಳಿ ಭೀಕರ ಅಪಘಾತ: ಚಾಲಕ ಗಂಭೀರ, ಮಹಿಳೆ ಹಾಗೂ ಮಗುವಿಗೆ ಗಾಯ

ಕೊಡಾಜೆ ಬಳಿ ಭೀಕರ ಅಪಘಾತ: ಚಾಲಕ ಗಂಭೀರ, ಮಹಿಳೆ ಹಾಗೂ ಮಗುವಿಗೆ ಗಾಯ

ಮಲೆ ಮಹದೇಶ್ವರ ಬೆಟ್ಟದ ಬೆಳ್ಳಿ ರಥ ನಿರ್ಮಾಣಕ್ಕೆ 450 ಕೆಜಿ ಶುದ್ಧ ಬೆಳ್ಳಿ ಅಗತ್ಯ

ಮಲೆ ಮಹದೇಶ್ವರ ಬೆಟ್ಟದ ಬೆಳ್ಳಿ ರಥ ನಿರ್ಮಾಣಕ್ಕೆ 450 ಕೆಜಿ ಶುದ್ಧ ಬೆಳ್ಳಿ ಅಗತ್ಯ

ಶಿಸ್ತು ಸಮಿತಿ ಸ್ಪಂದಿಸದಿದ್ದರೆ ಎಐಸಿಸಿಗೆ ಪತ್ರ ಬರೆಯುತ್ತೇನೆ: ಅಖಂಡ ಶ್ರೀನಿವಾಸ ಮೂರ್ತಿ

ಶಿಸ್ತು ಸಮಿತಿ ಸ್ಪಂದಿಸದಿದ್ದರೆ ಎಐಸಿಸಿಗೆ ಪತ್ರ ಬರೆಯುತ್ತೇನೆ: ಅಖಂಡ ಶ್ರೀನಿವಾಸ ಮೂರ್ತಿ

ನಮ್ಮ ದೇಶೀ ಸಂಸ್ಕೃತಿ: ಅಚ್ಚುಮೆಚ್ಚಿನ ಉಡುಗೆ…ಉದಾರ ಉಡುಗೆ ಚೂಡಿದಾರ

ನಮ್ಮ ದೇಶೀ ಸಂಸ್ಕೃತಿ: ಅಚ್ಚುಮೆಚ್ಚಿನ …ಉದಾರ ಉಡುಗೆ ಚೂಡಿದಾರ

ರೈತರ ಪ್ರತಿಭಟನೆ; ಪ್ರತಿಷ್ಠಿತ ಪದ್ಮ ಪ್ರಶಸ್ತಿ ಮರಳಿಸಿದ ಪಂಜಾಬ್ ಮಾಜಿ ಸಿಎಂ ಬಾದಲ್

ರೈತರ ಪ್ರತಿಭಟನೆ; ಪ್ರತಿಷ್ಠಿತ ಪದ್ಮ ಪ್ರಶಸ್ತಿ ಮರಳಿಸಿದ ಪಂಜಾಬ್ ಮಾಜಿ ಸಿಎಂ ಬಾದಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿರಿಯ ವಿದ್ವಾಂಸ ಡಾ ಬನ್ನಂಜೆ ಗೋವಿಂದಾಚಾರ್ಯರಿಗೆ ಪುತ್ರ ವಿಯೋಗ

ಹಿರಿಯ ವಿದ್ವಾಂಸ ಡಾ ಬನ್ನಂಜೆ ಗೋವಿಂದಾಚಾರ್ಯರಿಗೆ ಪುತ್ರ ವಿಯೋಗ

ಜೀವಿತದಲ್ಲಿರುವಾಗಲೇ ಜೀವಿತ ಪತ್ರಕ್ಕೆ ಪರದಾಟ!

ಜೀವಿತದಲ್ಲಿರುವಾಗಲೇ ಜೀವಿತ ಪತ್ರಕ್ಕೆ ಪರದಾಟ!

ಏಡ್ಸ್‌ ರೋಗ ನಿಯಂತ್ರಣದಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆ ಪ್ರಥಮ: ಜಿಲ್ಲಾಧಿಕಾರಿ

ಏಡ್ಸ್‌ ರೋಗ ನಿಯಂತ್ರಣದಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆ ಪ್ರಥಮ: ಜಿಲ್ಲಾಧಿಕಾರಿ

ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ಭಾಷೆ ಕೈಬಿಟ್ಟು ತುಳುವಿಗೆ ಮನ್ನಣೆ : ಕಸಾಪ ತೀವ್ರ ಆಕ್ಷೇಪ

ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ಭಾಷೆ ಬಿಟ್ಟು ಇತರ ಭಾಷೆಗೆ ಮನ್ನಣೆ : ಕಸಾಪ ತೀವ್ರ ಆಕ್ಷೇಪ

ಕೋವಿಡ್ 2ನೇ ಅಲೆ ತಡೆಗೆ ಹಲವು ಕ್ರಮ: ಡಿಸಿ

ಕೋವಿಡ್ 2ನೇ ಅಲೆ ತಡೆಗೆ ಹಲವು ಕ್ರಮ: ಡಿಸಿ

MUST WATCH

udayavani youtube

ಉಗ್ರಪರ ಗೋಡೆ ಬರಹ ಪ್ರಕರಣದ ಆರೋಪಿಗಳ ಶೀಘ್ರ ಬಂಧನ: ಗೃಹ ಸಚಿವ ಬೊಮ್ಮಾಯಿ

udayavani youtube

Meal of Bakasur | ತುಳುನಾಡಿನ 14ಖಾದ್ಯಗಳನ್ನು ಉಣಬಡಿಸುವ ಬಕಾಸುರನ ಬಾಡೂಟ | FishCampus

udayavani youtube

ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ

udayavani youtube

ಸರಕಾರ ನಿಮ್ಮ ಜೊತೆಯಿದೆ: ಮೀನುಗಾರರ ಕುಟುಂಬಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಯ

udayavani youtube

ಮಂಗಳೂರು ಬೋಟ್ ದುರಂತ: ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆ

ಹೊಸ ಸೇರ್ಪಡೆ

ಆತ್ಮ ನಿರ್ಭರ ಸಾಲ ಸೌಲಭ್ಯಕ್ಕೆ ಶೇ.35 ಅರ್ಜಿಗಳು ಮಂಜೂರು

ಆತ್ಮ ನಿರ್ಭರ ಸಾಲ ಸೌಲಭ್ಯಕ್ಕೆ ಶೇ.35 ಅರ್ಜಿಗಳು ಮಂಜೂರು

ಎಲ್ಲೆಡೆ ಜೆಡಿಎಸ್‌ ಬೆಂಬಲಿತರು ಕಣಕ್ಕೆ

ಎಲ್ಲೆಡೆ ಜೆಡಿಎಸ್‌ ಬೆಂಬಲಿತರು ಕಣಕ್ಕೆ

ಪ್ರಚಾರಕ್ಕೆ ಐವರು ಸೀಮಿತ-ಬೈಕ್‌ ರ್ಯಾಲಿ ಮಾಡುವಂತಿಲ್ಲ: ಡಿಸಿ

ಪ್ರಚಾರಕ್ಕೆ ಐವರು ಸೀಮಿತ-ಬೈಕ್‌ ರ್ಯಾಲಿ ಮಾಡುವಂತಿಲ್ಲ: ಡಿಸಿ

ಪಿಎಫ್ಐ ಕಚೇರಿ, ಪದಾಧಿಕಾರಿಗಳ ಮನೆ ಮೇಲೆ ಇ.ಡಿ ದಾಳಿ: ಕರ್ನಾಟಕ ಸೇರಿ 9 ರಾಜ್ಯದಲ್ಲಿ ದಾಳಿ

ಪಿಎಫ್ಐ ಕಚೇರಿ, ಪದಾಧಿಕಾರಿಗಳ ಮನೆ ಮೇಲೆ ಇ.ಡಿ ದಾಳಿ: ಕರ್ನಾಟಕ ಸೇರಿ 9 ರಾಜ್ಯದಲ್ಲಿ ದಾಳಿ

uk-tdy-1

ಹಳ್ಳಿಗಳಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.