ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಕಾರ್ಯಾಗಾರ
Team Udayavani, Jul 24, 2019, 4:51 PM IST
ಹೊನ್ನಾವರ: ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಹೊನ್ನಾವರ: ನ್ಯೂ ಇಂಗ್ಲಿಷ ಶಾಲೆ ಸಭಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಕಾರ್ಯಗಾರ ನಡೆಯಿತು.
ಮುಕ್ತಾಯ ಸಮಾರಂಭದಲ್ಲಿ ತರಬೇತಿ ನಿರ್ದೇಶಕ ಮಂಗಳೂರಿನ ಮಾಂಡ ಸೊಬಾಣಿನ ಎರಿಕ್ ಒಜಾರಿಯೋ ಮಾತನಾಡಿ, ಸಾಂಪ್ರದಾಯಿಕ ಕೊಂಕಣಿ ಹಾಡುಗಳನ್ನು ಕಲಿತ ನೀವು ಅದನ್ನು ಅಭ್ಯಸಿಸಿ, ಅನುಭವಿಸಿ, ಉಳಿಸಿಕೊಂಡು ಮುಂದಿನ ಪಿಳಿಗೆಗೆ ದಾಟಿಸಿದಾಗಲೇ ಮಾತ್ರ ಈ ಸರ್ಟಿಫಿಕೇಟ್ ಕೊರ್ಸಿನ ಉದ್ದೇಶ ಫಲಿಸುವುದೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಸದಸ್ಯ ಸಂಚಾಲಕ ಮುನ್ವೇಲ ಸ್ಟಿಫನ್ ರೊಡ್ರಿಗಿಸ್ ಮಾತನಾಡಿ, ಕೊಂಕಣೆ ಅಕಾಡೆಮಿ ಕಳೆದ 25 ವರ್ಷದಿಂದ ಹಲವಾರು ಕಾರ್ಯಕ್ರಮಗಳನ್ನು ಕೊಂಕಣಿ ಭಾಷಿಕರಿಗೆ ಹಾಗೂ ಪ್ರೇಮಿಗಳಿಗೆ ನೀಡುತ್ತಾ ಬಂದ್ದಿದೆ. ಕೊಂಕಣಿ ಸಂಸ್ಕೃತಿ ಬೆಳೆಯಲು ಇಂಥ ಕಾರ್ಯಗಾರ ಅವಶ್ಯ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಜೋಯ್ಸ ಒಜಾರಿಯೊ, ಕಿಂಗಸ್ಲಿ ನಜರೇತ, ಮನೋಜ ಲೋಪಿಸ್, ಪ್ಲ್ಲಾವಿಯಾ ರೊಡ್ರಿಗಿಸ್ಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಜೇಮ್ಸ್ ಲೊಪಿಸ್ ಸ್ವಾಗತಿಸಿದರು. ಶಿಬಿರಾರ್ಥಿಗಳಾದ ಆಲೇಕ್ಸ್ ಫರ್ನಾಂಡಿಸ್ ಅನುಭವ ಹಂಚಿಕೊಂಡರು. ಎಪಿಪನ ಫರ್ನಾಂಡಿಸ್ ವಂದಿಸಿದರು. ಜೇಕಬ್ ಫರ್ನಾಂಡಿಸ್ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ