ಕೋಣೆನಾಲಾಕ್ಕೆ ಸ್ಲ್ಯಾಬ್ ಅಳವಡಿಸಲಿ

Team Udayavani, Dec 3, 2019, 5:52 PM IST

ಕಾರವಾರ: ನಗರದ ಹೃದಯಭಾಗದಲ್ಲಿರುವ ಕೋಣೆನಾಲಾ ಹಾಗೂ ಕೋಡಿಬಾಗದ ಮಧ್ಯೆವಾಡಾದಲ್ಲಿ ಬಂದು ಸೇರುವ ಕಾತ್ಯಾಯನಿ ಮುಖ್ಯನಾಲಾದಲ್ಲಿ ಸಂಗ್ರಹವಾಗುವ ತ್ಯಾಜ್ಯದಿಂದ ಉತ್ಪತ್ತಿಯಾಗುವ ಸೊಳ್ಳೆ ಕಡಿತದಿಂದ ಪಕ್ಕದ ನಿವಾಸಿಗಳು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಕೋಣೆನಾಲಾದ ಪಕ್ಕದಲ್ಲೇ ಶಾಸಕರ ಮಾದರಿಶಾಲೆ, ಸರ್ಕಾರಿ ಪ್ರೌಢಶಾಲೆ, ಲೋಕಾಯುಕ್ತ ಕಚೇರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಯಿದ್ದು, ಗಬ್ಬು ವಾಸನೆ ಕುಡಿಯುತ್ತಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.

ಮಳೆಗಾಲ ಹೊರತುಪಡಿಸಿದರೆ ಈ ಕೊಳಚೆ ನಾಲಾಗಳು ನಗರದ ನಿವಾಸಿಗಳ ಪಾಲಿಗೆ ನರಕ ಸದೃಶವಾಗಿವೆ. ಕೋಣೆನಾಲಾ ಸ್ವತ್ಛತೆಗೆ ಲಕ್ಷಾಂತರ ರೂ. ಮೀಸಲಾಗಿಡಲಾಗುತ್ತಿದೆ. ಆದರೆ ನಾಲಾದ ಸ್ವತ್ಛತೆ ಮಾತ್ರ ನಡೆಯುವುದು ಮೇ ತಿಂಗಳಲ್ಲಿ ಹೂಳು ತೆಗೆಯುವಾಗ ಮಾತ್ರ. ಉಳಿದ ಅವಧಿಯಲ್ಲಿ ಕೊಳಚೆ ನಾಲಾ ಪಕ್ಕದ ಜನರು, ವಿದ್ಯಾರ್ಥಿಗಳು, ಅಧಿಕಾರಿಗಳು ಮಾತ್ರ ಹಿಂಸೆ ಅನುಭವಿಸುತ್ತಾರೆ. ಜನರ ಮೈಮೇಲೆ ಬೊಕ್ಕೆಗಳು ಎದ್ದು, ಮೈಕೆರೆತದಂತ ಕಾಯಿಲೆಗಳು ಕಾಡತೊಡಗಿವೆ ಎಂದು ಬೇಸರ ಪಡುತ್ತಿದ್ದಾರೆ. ಕೊಳಚೆ ನಾಲಾದ ದುರ್ವಾಸನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡತೊಡಗಿವೆ ಎಂದು ಸ್ಥಳೀಯರು ಆತಂಕ ಪಟ್ಟಿದ್ದಾರೆ.

ಈ ಸಮಸ್ಯೆ ಬಗ್ಗೆ ನಗರಸಭೆಗೆ ಹಲವಾರುಬಾರಿ ದೂರು ನೀಡುತ್ತಲೇ ಬರಲಾಗಿದೆ. ಕೊಣೆನಾಲ ಹಾಗೂ ಕ್ಯಾತ್ಯಾಯಿನಿ ನಾಲಾಗಳೂ ಕ್ರಮವಾಗಿ ವಾರ್ಡ್‌ ನಂ. 3, 4, 5 ಹಾಗೂ 16 ರ ವ್ಯಾಪ್ತಿಯಲ್ಲಿವೆ. ಹೀಗಾಗಿ ವಾರ್ಡ್‌ ಸದಸ್ಯರಿಗೆ ಹಾಗೂ ಶಾಸಕರ ಗಮನಕ್ಕೂ ಸಮಸ್ಯೆಯನ್ನು ತರಲಾಗಿದೆ. ಆದರೂ ಏನೂ ಪ್ರಯೋಜನವಾಗಿಲ್ಲ. ಮುಖ್ಯನಾಲಾದಲ್ಲಿನ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ಅಲ್ಲದೇ ಈ ಮುಖ್ಯನಾಲಾ ಕಾಳಿ ನದಿ ಸೇರುವಲ್ಲಿ ಸಂಪೂರ್ಣವಾಗಿ ನಾಲಾದ ಎರಡೂ ಬದಿಗೆ ಅಂದಾಜು 100 ಮೀಟರ್‌ ಹಾಗೂ ಕೊಣೆನಾಲಕ್ಕೆ 1000 ಮೀಟರ್‌ ಉದ್ದ ತಡೆಗೋಡೆನಿರ್ಮಿಸಿ, ಕಾಂಕ್ರೀಟ್‌ ಮುಚ್ಚಳದಿಂದ ಮುಚ್ಚಬೇಕು. ಆ ಮೂಲಕ ಗಂಭೀರ ಆರೋಗ್ಯ ಸಮಸ್ಯೆಗಳು ಮರುಕಳಿಸದಂತೆ ನಿಗಾ ವಹಿಸಲು ಸ್ಥಳೀಯರುನಗರಸಭೆಗೆ ವಿನಂತಿಸುತ್ತಲೇ ಬಂದಿದ್ದಾರೆ. ಆದರೆ ನಗರಸಭೆ 100 ಕೋಟಿ ರೂ. ಅನುದಾನದ ದೂರದ ಕನಸು ಕಾಣುತ್ತಿದೆ. ಇರುವ ಅನುದಾನದಲ್ಲಿನಾಲಾವನ್ನು ಸ್ವಚ್ಛ ವಾಗಿಡುವ ಪ್ರಯತ್ನ ಮಾಡಿಲ್ಲ ಎಂಬುದು ಸ್ಥಳೀಯರ ಆರೋಪ. ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಷ್ಟೇ ಮತ ಕೇಳಲಿಕ್ಕಷ್ಟೇ ಮನೆ ಬಾಗಿಲಿಗೆ ಬರುತ್ತಾರೆ. ಬಳಿಕ ಈ ಕಡೆ ತಲೇ ಹಾಕುವುದೇ ಇಲ್ಲ.

ಅಪಾರ್ಟಮೆಂಟ್‌, ಹೋಟೆಲ್‌ ತ್ಯಾಜ್ಯ ಕೋಣೆನಾಲಕ್ಕೆ: ಅಪಾರ್ಟಮೆಂಟ್‌ನ ನೂರಾರು ಮನೆಗಳಿಂದ ಬಿಡಲಾಗುವ ತ್ಯಾಜ್ಯದ ನೀರು ಕಾತ್ಯಾಯನಿ ನಾಲಾದಿಂದ ಹರಿದು ಬಂದು ಕಾಳಿ ನದಿಗೆ ಸೇರುವ ಮುಂಚೆ ಸುಮಾರು 100 ಅಡಿ ದೂರದಲ್ಲಿಯೇ ನಿಂತು ಬಿಟ್ಟಿದೆ. ಇಲ್ಲಿ ಹೂಳು ತುಂಬಿರುವುದರಿಂದ ಈ ಮಲೀನ ತ್ಯಾಜ್ಯದ ನೀರು ಮುಂದೆ ಹರಿಯುತ್ತಿಲ್ಲ. ನಾಲಾದ ಮೇಲ್ಭಾಗದಿಂದಹರಿದು ಬರುವ ಮಲೀನ ತ್ಯಾಜ್ಯದ ನೀರಿನ ಜೊತೆಗೆ ಪ್ಲಾಸ್ಟಿಕ್‌, ಬಟ್ಟೆಯ ವಸ್ತುಗಳು ಸೇರಿದಂತೆ,ನಿತ್ಯ ಮನೆ ಬಳಕೆ ನಿರುಪಯೋಗಿ ವಸ್ತುಗಳು ನಾಲಾದಲ್ಲಿ ಬಿದ್ದು ಬ್ಲಾಕ್‌ ಆಗಿರುವ ಜಾಗದಲ್ಲಿ ಸೇರಿವೆ.

ಕೊಳಚೆ ಪ್ರಮಾಣದ ನೀರು ನದಿಗೆಸೇರುತ್ತಿದ್ದರೂ, ಉಳಿದ ನೀರು ಇಲ್ಲಿಯೇ ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಈ ನಾಲಾದಎರಡೂ ಬದಿಗೆ ಕಟ್ಟಲು ಬಾಕಿ ಇರುವ ಅಂದಾಜು 100 ಮೀ. ನಷ್ಟು ತಡೆಗೋಡೆ ನಿರ್ಮಿಸಿ, ಇಲ್ಲಿನ ಹೂಳು ತೆಗೆದರೆ, ನೀರು ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ. ಇದಲ್ಲದೇ ನಾಲಾದ ಮೇಲೆ ಕಾಂಕ್ರೀಟ್‌ ಮುಚ್ಚಳ ಹಾಕಿದರೆ, ಇಲ್ಲಿನ ಕೆಲ ಮನೆಗಳಿಗೆ ಇರುವ ಕಾಲು ದಾರಿ ಸಮಸ್ಯೆಯೂ ಬಗೆಹರಿಯುತ್ತದೆ. ಇದರೊಂದಿಗೆ ದುರ್ವಾಸನೆಹಾಗೂ ಸೊಳ್ಳೆಯ ಕಾಟದಿಂದ ಸ್ಥಳೀಯರಿಗೆ ಮುಕ್ತಿ ನೀಡಿದಂತಾಗುತ್ತದೆ ಎಂದು ಸಾರ್ವಜನಿಕರ ಅಂಬೋಣವಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜೋಯಿಡಾ: ಉತ್ತರ ಕರ್ನಾಟಕದ ಸುಪ್ರಸಿದ್ಧ ಉಳವಿ ಚೆನ್ನಬಸವೇಶ್ವರ ಜಾತ್ರೋತ್ಸವಕ್ಕೆ ಕೆಲವೇ ದಿನಗಳು ಇದ್ದು, ತಯಾರಿ ಜೋರಾಗಿ ನಡೆದಿದೆ. ದೇವಸ್ಥಾನ, ಮುಖ್ಯದ್ವಾರಗಳ...

  • ದಾಂಡೇಲಿ: ತಾಲೂಕಿಗೆ ಸಂಬಂಧಪಟ್ಟ ಎಲ್ಲಾ ಕಚೇರಿಗಳನ್ನು ಶೀಘ್ರದಲ್ಲಿ ಪ್ರಾರಂಭಿಸವುದರ ಜೊತೆಗೆ ಸಮಗ್ರ ಅಭಿವೃದ್ಧಿಗೆ ಹಾಗೂ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು...

  • ಹೊನ್ನಾವರ: ಪ್ರತಿವರ್ಷ ಪ್ರಸಿದ್ಧ ಇಂಗ್ಲಿಷ್‌ ಪತ್ರಿಕೆ ಔಟ್‌ಲುಕ್‌ ನೀಡುವ ಬೆಸ್ಟ್‌ ಟೂರ್‌ ಆಪರೇಟರ್‌ ಬೆಳ್ಳಿ ಪ್ರಶಸ್ತಿ ಡಾ| ಸವಿತಾ ನಾಯಕರ ಬುಡ ಫ್ಲೋಕ್‌ಲೋರ್‌ಗೆ...

  • ಕುಮಟಾ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ಸೇರ್ಪಡೆಗೊಳಿಸಿರುವ ತಾಲೂಕಿನ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವ ಕುರಿತು ಮತ್ತು ಅರಣ್ಯ ಹಕ್ಕು ಕಾಯಿದೆ...

  • ಶಿರಸಿ: ಐನೂರು ವರ್ಷಗಳ ಇತಿಹಾಸವುಳ್ಳ, ಕರೂರು ಅರಸ ಶಿವಪ್ಪ ನಾಯಕನಿಂದ ಪ್ರತಿಷ್ಠಾಪಿತವಾಗಿದೆ ಎಂಬ ಐತಿಹ್ಯವುಳ್ಳ ತಾಲೂಕಿನ ತುಡಗುಣಿ ಸಿದ್ಧಿವಿನಾಯಕ ದೇವಸ್ಥಾನದ...

ಹೊಸ ಸೇರ್ಪಡೆ

  • ಮೈಸೂರು: "ಸಾಲ ತಂದಾದರೂ ಸರ್ಕಾರ ರೈತರ ನೆರವಿಗೆ ಬರಲಿದೆ. ರೈತರ ಜೀವನದಲ್ಲಿ ಬದಲಾವಣೆ ತರಲು ಎಲ್ಲ ರೀತಿಯ ಯತ್ನ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ...

  • ಬೆಂಗಳೂರು: "ಪ್ರಯೋಜನಕ್ಕೆ ಬಾರದ ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ತ್ಯಜಿಸಿ, ವೈಜ್ಞಾನಿಕ ಮನೋಭಾವದಿಂದ ದೇಶದ ಪ್ರಗತಿಗೆ ಶ್ರಮಿಸಬೇಕು' ಎಂದು ನಾಡಿನ ಜನತೆಗೆ...

  • ಮಂಡಲವಾಸ್‌(ರಾಜಸ್ಥಾನ): ಹನಿ ನೀರಿಗೂ ಪರದಾಡಿದ್ದೆವು, ಕಿಮೀಗಟ್ಟಲೇ ದೂರ ಸಾಗಿ ನೀರು ತರಲು ಹಲವು ತಾಸುಗಳನ್ನೇ ಮೀಸಲಿಡುತ್ತಿದ್ದೆವು, ಮಳೆ ಬಂದ ಎರಡೇ ತಾಸಿಗೆ...

  • ಬೆಂಗಳೂರು: ಬಿಜೆಪಿ ಹಾಗೂ ಸಂಘ ಪರಿವಾರದಿಂದ ಸಂವಿಧಾನ ರಕ್ಷಿಸುವ ಹೊಣೆಯನ್ನು ಕಾಂಗ್ರೆಸ್‌ ಮಾಡಬೇಕಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕರು ಶಪಥಗೈಯುವ ಮೂಲಕ 71ನೇ...

  • ವಿಜಯಪುರ: "ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಿ.ಸಿ. ಪಾಟೀಲ ಅವರನ್ನು ಬಲಿಕೊಟ್ಟು ಸಚಿವನಾಗುವ ದುರಾಸೆ ನನಗಿಲ್ಲ. ಒಂದೊಮ್ಮೆ ಪಕ್ಷ ನನಗೆ ಅಧಿಕಾರ ನೀಡಬಯಸಿದರೆ...