ಪರ್ತಗಾಳಿ ಪೀಠಕ್ಕೆ ವಿದ್ಯಾವಂತ ಯುವ ಸನ್ಯಾಸಿ

Team Udayavani, Jul 30, 2021, 8:10 AM IST

ಪರ್ತಗಾಳಿ ಪೀಠಕ್ಕೆ ವಿದ್ಯಾವಂತ ಯುವ ಸನ್ಯಾಸಿ

ಹೊನ್ನಾವರ: ಪರ್ತಗಾಳಿ ಮಠ ಪರಂಪರೆಯಲ್ಲಿ ಇಂದು ಮತ್ತೂಂದು ಐತಿಹಾಸಿಕ ಸಂಗತಿ ದಾಖಲಾಗಲಿದೆ. ಮಠದ ಪರಂಪರೆಯಲ್ಲಿ ಹಲವು ಶಾಶ್ವತ ಸುಧಾರಣೆ ಮಾಡಿ ಮಠ, ಮಂದಿರಗಳನ್ನು ಶಿಷ್ಯರಿಗೆ ಒಪ್ಪಿಸುವ ಮೊದಲು ಪೀಠ ಮುನ್ನಡೆಸಲು ಅರ್ಹರಾದ ಯುವಕರನ್ನು ಆಯ್ಕೆ ಮಾಡಿ, ಪಾಠ, ಪ್ರವಚನ, ಎಲ್ಲ ಮಾರ್ಗದರ್ಶನದೊಂದಿಗೆ ಸನ್ಯಾಸ ದೀಕ್ಷೆ ನೀಡಿ ಪರಂಧಾಮಗೈದ ಪರ್ತಗಾಳಿ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಗಳ ಉತ್ತರಾಧಿಕಾರಿಯಾಗಿ ಎಂಜಿನಿಯರಿಂಗ್‌ ಓದಿದ ವಿದ್ಯಾವಂತ ಯುವ ಸನ್ಯಾಸಿಯೊಬ್ಬರು ಇಂದು ಪೀಠಾರೋಹಣ ಮಾಡುವ ಮೂಲಕ ಮಠ ಹಾಗೂ ಶಿಷ್ಯರನ್ನು ಮುನ್ನಡೆಸಲಿದ್ದಾರೆ.

ವೈದಿಕ ಮನೆತನದಲ್ಲಿ ಜನಿಸಿ, ವೇದವಿದ್ಯೆ ಯೊಂದಿಗೆ ಕಾಲೇಜು ವಿದ್ಯಾಭ್ಯಾಸ ಮುಂದುವರಿಸಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದುತ್ತಿರುವಾಗ ಸನ್ಯಾಸವನ್ನು ಮನಃಪೂರ್ವಕವಾಗಿ ಒಪ್ಪಿ ಬಂದ ಉದಯ ಲಕ್ಷ್ಮೀನಾರಾಯಣ ಭಟ್‌ ಪರ್ತಗಾಳಿ ಪೀಠದ 24ನೇ ಪೀಠಾಧಿಪತಿಗಳಾಗಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಅಭಿಧಾನದೊಂದಿಗೆ ಪೀಠ ಏರಲಿದ್ದಾರೆ.

ಮಠದ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಗಳನ್ನು ಅನಿರೀಕ್ಷಿತವಾಗಿ ಕಳೆದುಕೊಂಡ ಸಮಾಜ ದುಃಖದ ಮಡುವಿನಲ್ಲಿ ಇದ್ದಾಗಲೇ ತಮ್ಮ ಈ ವರೆಗಿನ ಚಟುವಟಿಕೆಯಿಂದ ವಿದ್ಯಾಧೀಶತೀರ್ಥ ಶ್ರೀಗಳು ಭಕ್ತರ ಆಶಾಕಿರಣವಾಗಿ ಭರವಸೆ ಮೂಡಿಸಿದ್ದು, ಮಠದ ಶಿಷ್ಯರ ಸಂತೋಷಕ್ಕೆ ಕಾರಣವಾಗಿದೆ.

ಪೀಠ ಏರಲಿರುವ ವಿದ್ಯಾಧೀಶ ಶ್ರೀಗಳು ಮೂಲತಃ ಉತ್ತರಕನ್ನಡ ಜಿಲ್ಲೆ ಭಟ್ಕಳದ ಗೋಪಾಲಕೃಷ್ಣ ದೇವಾಲಯದ ಅರ್ಚಕ ಲಕ್ಷ್ಮೀನಾರಾಯಣ ಭಟ್‌ ಮತ್ತು ಪದ್ಮಾವತಿ ಭಟ್‌ ಅವರ ದ್ವಿತೀಯ ಪುತ್ರ. 16-10-1995ರಲ್ಲಿ ಹೊನ್ನಾವರದ ಕಾಸರಕೋಡಿನಲ್ಲಿ ಜನಿಸಿದರು. ಈಗ 26ನೇ ವಯಸ್ಸು. ತಂದೆ ಲಕ್ಷ್ಮೀನಾರಾಯಣ ಭಟ್ಟರು 1996ರಲ್ಲಿ ಬೆಳಗಾವಿ ವಿದ್ಯಾಧಿರಾಜ ಭವನದಲ್ಲಿ ನೆಲೆಸಿದ್ದರು. ಬಾಲ್ಯವನ್ನು ಅಲ್ಲೇ ಕಳೆದು ಕಾಲೇಜಿನಲ್ಲಿ ಪಿಯುಸಿ ಸೈನ್ಸ್‌ ಓದಿ, ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಮಠದ ಕರೆಗೆ ಓಗೊಟ್ಟರು. ಮಾತೃಭಾಷೆ ಕೊಂಕಣಿ, ಬೆಳಗಾವಿ ವಾಸ್ತವ್ಯದಿಂದಾಗಿ ಮರಾಠಿ, ಹಿಂದಿ, ಇಂಗ್ಲಿಷ್‌ ಭಾಷೆಯಲ್ಲಿ ಜ್ಞಾನ ಪಡೆದರು. ತಂದೆಯೊಂದಿಗೆ ವೈದಿಕ ವೃತ್ತಿ ಕಲಿತರು. ಬಾಲ್ಯದಿಂದಲೂ ಧಾರ್ಮಿಕ ಪ್ರವೃತ್ತಿ ವಾತಾವರಣ ಸಹಜವಾಗಿ ಬಂದಿತ್ತು.

30-5-2014ರಲ್ಲಿ ವಿದ್ಯಾಭ್ಯಾಸಕ್ಕಾಗಿ ಪರ್ತಗಾಳಿ ಮಠಕ್ಕೆ ಬಂದರು. ಇಬ್ಬರು ಪಂಡಿತರಿಂದ ಬ್ರಾಹ್ಮಿ ಮುಹೂರ್ತದಲ್ಲಿ  ವಿಶೇಷ ಪಾಠ ನಡೆಯುತ್ತಿತ್ತು, ಸ್ವತಃ ಶ್ರೀಗಳೇ ಪಾಠ ಮಾಡುತ್ತಿದ್ದರು. 2017ರಲ್ಲಿ  ಪ್ರಣವ ಮಂತ್ರೋಪದೇಶ ಆಯಿತು.

ಅನಂತರದ ದಿನಗಳಲ್ಲಿ ಶ್ರೀಗಳು ಯತಿಗಳನ್ನು ಜತೆಯಲ್ಲಿಯೇ ಉಳಿಸಿಕೊಂಡು ಅವರಿಗೆ ಪರ್ತಗಾಳಿ ಮಠ ಪರಂಪರೆಯ ಮತ್ತು ಶಾಖಾ ಮಠದ ದೇವಾಲಯಗಳ ಪರಂಪರೆ ಆಡಳಿತಗಳನ್ನು ಕಲಿಸಿಕೊಟ್ಟರು. ಚಾತುರ್ಮಾಸ್ಯ ವೃತವನ್ನು ಜತೆಯಲ್ಲಿಯೇ ಆಚರಿಸಿದರು. ಹೀಗೆ ತಮ್ಮದೇ ಪ್ರತಿರೂಪವಾಗಬಲ್ಲ ಯತಿಗಳನ್ನು ಸಮಾಜಕ್ಕೆ ಒಪ್ಪಿಸಿದರು.

ವಿದ್ಯಾಧೀಶತೀರ್ಥರು ಕೋವಿಡ್‌ ಕಾರಣಕ್ಕಾಗಿ ಸರಳವಾಗಿ ಪೀಠಾರೋಹಣಕ್ಕೆ ಸೂಚನೆ ನೀಡಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಿಂದ ಮನೆಯಲ್ಲಿಯೇ ಕುಳಿತು ಪೀಠಾರೋಹಣ ಸಮಾರಂಭ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.

ಭಾರತದಲ್ಲಿ ಧರ್ಮ ಸ್ಥಾಪನೆಗೆ ಕಾರಣರಾದ ಆಚಾರ್ಯತ್ರಯರಲ್ಲಿ ಮಧ್ವಾಚಾರ್ಯರ ಪರಂಪರೆಗೆ ಸೇರಿದ ಪರ್ತಗಾಳಿ ಮಠ ಪ್ರಮುಖವಾದುದು. ಗೌಡಸಾರಸ್ವತ ಸಮಾಜಕ್ಕೆ ಕಾಶಿ ಮಠ, ಕವಳೆ ಮಠಗಳೆಂಬ ಇನ್ನೆರಡು ಮಠಗಳಿದ್ದರೂ ಮಠಗಳು ಶಿಷ್ಯರಲ್ಲಿ ಭೇದ ಎಣಿಸುತ್ತಿಲ್ಲ. ವಿದೇಶೀಯರ ದಾಳಿಯಿಂದ ತಮ್ಮ ದೇವರೊಂದಿಗೆ ವಲಸೆ ಬಂದ ಗೌಡಸಾರಸ್ವತ ಸಮಾಜ ಕರಾವಳಿಯಲ್ಲಿ ನೆಲೆಗೊಳ್ಳುವಲ್ಲಿ ಮತ್ತು ವ್ಯಾಪಾರ, ವ್ಯವಹಾರ, ಕೃಷಿ ಮತ್ತು ವಿದ್ಯಾಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಸಮಾಜದ ಅಗ್ರಪಂಕ್ತಿಯಲ್ಲಿ ನಿಲ್ಲುವಲ್ಲಿ ಮಠದ ಪಾತ್ರ ಬಹಳ ಮಹತ್ವದ್ದು. ಹೀಗಾಗಿ ಪರ್ತಗಾಳಿ ಮಠದ ಗುರುಪೀಠಾರೋಹಣ ಐತಿಹಾಸಿಕ ಮಹತ್ವ ಪಡೆದಿದೆ.

-ಜೀಯು, ಹೊನ್ನಾವರ

ಟಾಪ್ ನ್ಯೂಸ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.