ಅಂಜನಾದ್ರಿ ಸುತ್ತ ಸಾವಿರ ಎಕರೆ ಭೂಮಿ ಸ್ವಾಧೀನ?

ಹನುಮನಹಳ್ಳಿ, ಅಂಜಿನಳ್ಳಿ, ಚಿಕ್ಕರಾಂಪುರ ರೈತರ ಆತಂಕ

Team Udayavani, Apr 8, 2022, 10:55 AM IST

4

ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿಗೆ ಆಗಮಿಸುವ ಪ್ರವಾಸಿಗರನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರ ಅಂಜನಾದ್ರಿ ಸುತ್ತಲಿನ ರೈತರ ಭೂಮಿಯನ್ನು ಸ್ವಾಧಿಧೀನ ಮಾಡಿಕೊಂಡು ರಸ್ತೆ, ವಸತಿಗೃಹ, ಸ್ನಾನಘಟ್ಟ ಸೇರಿದಂತೆ ಹಲವು ಕಾಮಗಾರಿ ಕೈಗೊಳ್ಳಲು ಮುಂದಾಗಿವೆ. ಅಧಿಕಾರಿಗಳು ತಯಾರಿಸಿದ ಭೂ ಸ್ವಾಧಿಧೀನ ಯಾದಿಯಲ್ಲಿ ಹನುಮನಹಳ್ಳಿ, ಅಂಜಿನಳ್ಳಿ ಹಾಗೂ ಚಿಕ್ಕರಾಂಪುರ ಗ್ರಾಮಗಳು ಸೇರಿ ಈ ಗ್ರಾಮಗಳ ರೈತರಿಗೆ ಸೇರಿದ ಸುಮಾರು ಸಾವಿರ ಎಕರೆ ಭೂಮಿ ಸ್ವಾಧಿಧೀನವಾಗಲಿದ್ದು, ಕೃಷಿಕರನ್ನು ಒಕ್ಕಲೆಬ್ಬಿಸುವ ಆತಂಕ ಎದುರಾಗಿದೆ.

ಈಗಾಗಲೇ ಅಧಿಕೃತವಾಗಿ ಅಂಜನಾದ್ರಿ ಸುತ್ತಲೂ 14 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದ್ದು, ಪಂಪಾ ಸರೋವರಕ್ಕೆ ಸೇರಿದ 7 ಎಕರೆ ಭೂಮಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಅಗತ್ಯವಿರುವಷ್ಟು ಭೂಮಿ ಸ್ವಾಧಿಧೀನ ಮಾಡಿಕೊಂಡು ಅಂಜನಾದ್ರಿ ಸುತ್ತಲಿರುವ ಏಳುಗುಡ್ಡ ಪ್ರದೇಶದ ಜೀವಿಸಂಕುಲ ಮತ್ತು ನೂರಾರು ವರ್ಷಗಳಿಂದ ತುಂಗಭದ್ರಾ ನದಿಯಿಂದ ನೈಸರ್ಗಿಕವಾಗಿ ಕೃಷಿ ಮಾಡುವ ಕೃಷಿಕರು ಆತಂಕಗೊಂಡಿದ್ದಾರೆ.

ಕಿಷ್ಕಿಂದಾ ಅಂಜನಾದ್ರಿ ಪ್ರದೇಶದಲ್ಲಿ ಹೆಚ್ಚು ಗುಡ್ಡಗಾಡು ಇರುವುದರಿಂದ ಕೃಷಿ ಭೂಮಿ ಸುಮಾರು 5-6 ಸಾವಿರ ಎಕರೆ ಇದೆ. ಇಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿರುವ ಅಪರೂಪದ ಕರಿ ಮತ್ತು ಕೆಂಪು ಕೋತಿ, ಓತಿಕ್ಯಾತ, ನಕ್ಷತ್ರ ಆಮೆ, ಪುನಗು ಬೆಕ್ಕು, ಮೊಲ, ಕರಡಿ, ಚಿರತೆ, ಕಾಡು ಹಂದಿ, ನರಿ, ತೋಳ ಹಾಗೂ ರತ್ನಪಕ್ಷಿ, ಗೊರವಂಕ, ನವಿಲು, ಪಾರಿವಾಳ, ಹದ್ದು, ಗಿಡುಗ, ಕೌಜುಗ ಹೀಗೆ ಹತ್ತು ಹಲವು ವನ್ಯ ಜೀವಿಗಳಿವೆ. ಅಂಜನಾದ್ರಿಗಾಗಿ ಸಾವಿರ ಎಕರೆ ಫಲವತ್ತಾದ ಭೂಮಿ ಸ್ವಾಧೀನ ಮಾಡಿಕೊಳ್ಳುವುದರಿಂದ ಮೂರು ಹಳ್ಳಿಗಳ ಜನರನ್ನು ಜತೆಗೆ ಏಳು ಗುಡ್ಡ ಪ್ರದೇಶದಲ್ಲಿರುವ ಜೀವಿ ಸಂಕುಲ ನಾಶವಾಗುವ ಅಪಾಯವಿದೆ.

ಹಂಪಿಯನ್ನು ಯುನೆಸ್ಕೋ ಪಟ್ಟಿಯಲ್ಲಿ ಉಳಿಸುವ ಉದ್ದೇಶದಿಂದ ರಚನೆ ಮಾಡಿರುವ ಹಂಪಿ ಅಭಿವೃದ್ಧಿ ಪ್ರಾಧಿ ಕಾರದ ಅವೈಜ್ಞಾನಿಕ ನಿಯಮಗಳಿಂದ ಆನೆಗೊಂದಿ ಭಾಗದ 15 ಹಳ್ಳಿಗಳ ಅಭಿವೃದ್ಧಿ ಹಾಗೂ ಸ್ಥಳೀಯರು ವ್ಯಾಪಾರ ವಹಿವಾಟು ಮಾಡಲಾಗದಂತಹ ಸ್ಥಿತಿಯುಂಟಾಗಿದೆ. ಹೊಸಪೇಟೆ ಹೋಟೆಲ್‌ ಮತ್ತು ರಾಜಕೀಯ ಲಾಬಿಯಿಂದ ಕಳೆದ 10 ವರ್ಷಗಳಿಂದ ಆನೆಗೊಂದಿ ಭಾಗ ಶೋಷಣೆಗೆ ಒಳಗಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಂಜನಾದ್ರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಇಲ್ಲಿಯ ರೈತರ ಭೂಮಿಗೆ ಒಳ್ಳೆಯ ಬೆಲೆ ಬಂದಿತ್ತು. ಸರ್ಕಾರದ ನಿಯಮದಂತೆ ಗ್ರೀನ್‌ ಝೋನ್‌ ನಿಯಮಕ್ಕೊಳಪಟ್ಟು ಕೆಲ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ನಡೆಸಲು ಹವಾಮಾ ಎನ್‌ಒಸಿ ಕೊಡುವ ಸಂದರ್ಭದಲ್ಲಿಯೇ ಸಾವಿರ ಎಕರೆ ಭೂಮಿಯನ್ನು ಅಂಜನಾದ್ರಿಗೆ ಸ್ವಾಧೀನಪಡಿಸಿಕೊಳ್ಳುವ ಸುದ್ದಿ ಹರಡಿರುವುದು ಆತಂಕಕ್ಕೀಡು ಮಾಡಿದೆ. ಭೂಸ್ವಾಧಿಧೀನದ ಪ್ರದೇಶದಲ್ಲಿರುವ ಜನವಸತಿ ಗ್ರಾಮಗಳಾದ ಹನುಮನಹಳ್ಳಿ, ಅಂಜಿನಳ್ಳಿ ಹಾಗೂ ಚಿಕ್ಕರಾಂಪುರ ಗ್ರಾಮಗಳು ಸಹ ಸ್ಥಳಾಂತರವಾಗುವ ಆತಂಕ ಜನರಲ್ಲಿ ಕಾಡುತ್ತಿದ್ದು, ಜನಪ್ರತಿನಿ ಧಿಗಳು ಹಾಗೂ ಜಿಲ್ಲಾಡಳಿತ ಕೂಡಲೇ ಜನರಿಗೆ ಸತ್ಯ ಸಂಗತಿ ತಿಳಿಸಬೇಕಿದೆ.

ಕಿಷ್ಕಿಂದಾ ಅಂಜನಾದ್ರಿ ಪ್ರದೇಶದಲ್ಲಿರುವ ಜನಜೀವನ ಹಾಗೂ ಜೀವಿ ಸಂಕುಲವನ್ನು ಸಂರಕ್ಷಣೆ ಮಾಡುವುದರ ಜತೆಗೆ ಅಂಜನಾದ್ರಿಯ ಅಭಿವೃದ್ಧಿಗಾಗಿ 50-100 ಎಕರೆ ಭೂಮಿ ವಶಪಡಿಸಿಕೊಳ್ಳಬೇಕಿದೆ. ಸಾವಿರಾರು ಎಕರೆ ಅನಗತ್ಯವಾಗಿ ಭೂಮಿ ವಶಕ್ಕೆ ಪಡೆಯುವುದು ಸರಿಯಲ್ಲ. ಸರ್ಕಾರ ಮೊದಲಿಗೆ ಇಲ್ಲಿಯ ಗ್ರಾಮಗಳಿಗೆ ಹಕ್ಕುಪತ್ರ ಪಟ್ಟಾ ನೀಡಬೇಕು. ನೂರಾರು ವರ್ಷಗಳಿಂದ ಕೃಷಿ ಮಾಡುವ ರೈತರಿಗೂ ಸರಿಯಾದ ದಾಖಲಾತಿಗಳಿಲ್ಲ. ಅದನ್ನು ಸರಿಪಡಿಸಬೇಕು. ಅಂಜನಾದ್ರಿಗೆ ಅಗತ್ಯವಿರುವಷ್ಟು ಭೂಮಿ ಮಾತ್ರ ಸ್ವಾಧೀನ ಮಾಡಿಕೊಂಡು ಸ್ಥಳೀಯವಾಗಿರುವ ಭೂಮಿ ದರದ ಮೂರು ಪಟ್ಟು ಪರಿಹಾರ ವಿತರಿಸಬೇಕು. –ಕೆ. ಕೃಷ್ಣ, ಅಂಜಿನಳ್ಳಿ ರೈತ

ಅಂಜನಾದ್ರಿಗೆ ಈಗಾಗಲೇ ಪಂಪಾ ಸರೋವರ ವಿಜಯಲಕ್ಷೀ¾ ದೇಗುಲದ 7 ಎಕರೆ ಮತ್ತು ಇನ್ನೂ ಅಗತ್ಯವಿರುವ 14 ಎಕರೆ ಭೂಮಿಯನ್ನು ಸ್ವಾ ಧೀನ ಮಾಡಲಾಗಿದೆ. ಉಳಿದಂತೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಸ್ಥಳೀಯರು ಆತಂಕಗೊಳ್ಳಬಾರದು. ಕೆಲವರು ಹನುಮನಹಳ್ಳಿ, ಅಂಜಿನಳ್ಳಿ ಮತ್ತು ಚಕ್ಕರಾಂಪುರ ಗ್ರಾಮಗಳ ರೈತರ ಸಾವಿರ ಎಕರೆ ಭೂಮಿ ಸ್ವಾ ಧೀನ ಮಾಡಿಕೊಳ್ಳುವ ಯಾದಿ ಕುರಿತು ಆತಂಕಗೊಂಡಿದ್ದು, ಭೂಸ್ವಾ ಧೀನದ ಕುರಿತು ಸರ್ಕಾರ ಯಾವುದೇ ಸೂಚನೆ ನೀಡಿಲ್ಲ. ಈ ಕುರಿತು ಮೇಲಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಇದೆ. –ಯು. ನಾಗರಾಜ, ತಹಶೀಲ್ದಾರ್           

ಕೆ. ನಿಂಗಜ್ಜ

 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.