ಸರಕಾರಿ ನೌಕರರ ಬೇಡಿಕೆ ಈಡೇರಿಸಲು ಮನವಿ
Team Udayavani, Jan 29, 2022, 1:19 PM IST
ಸುರಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನ್ಯಾಯಯುತ ಬೇಡಿಕೆ ಪರಿಗಣಿಸಲು ಸರಕಾರಕ್ಕೆ ಶಿಫಾರಸು ಮಾಡುವಂತೆ ಕೋರಿ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯವರು ಶುಕ್ರವಾರ ಶಾಸಕ ರಾಜೂಗೌಡರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರಕಾರಿ ನೌಕರರಿಗೆ ಸರಿ ಸಮಾನವಾದ ವೇತನ ಹಾಗೂ ಭತ್ಯೆ ಜಾರಿಗೊಳಿಸಬೇಕು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ವಿವರಿಸಿದರು.
ನಮ್ಮ ಬೇಡಿಕೆಗಳು ನ್ಯಾಯಯುತ ವಾಗಿದ್ದು, ಈ ಮನವಿ ಪರಿಗಣಿಸಿ ನಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತಂದು ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಸರಕಾರಕ್ಕೆ ಶಿಫಾರಸು ಮಾಡಿ ಆದೇಶ ಹೊರಡಿಸುವಂತೆ ತಾವು ಶ್ರಮ ವಹಿಸಬೇಕು ಎಂದು ಶಾಸಕರಿಗೆ ವಿನಂತಿಸಿದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವ ದರಬಾರಿ, ಪ್ರಧಾನ ಕಾರ್ಯದರ್ಶಿ ಶರಣು ಗೋನಾಳ, ರಾಜ್ಯ ಪರಿಷತ್ ಸದಸ್ಯ ಸಿ.ಎಂ. ಪತ್ತಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದಪ್ಪ ತನಕೆದಾರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ್, ಸೋಮರೆಡ್ಡಿ ಮಂಗ್ಯಾಳ, ಆರ್.ಕೆ. ಕೋಡಿಹಾಳ, ಲಕ್ಷ್ಮಣ ಬಿರಾದಾರ, ಸಿದ್ದು ಕನ್ನೆಳ್ಳಿ, ಬಸು ಅಂಬಿಗೇರ, ಭೀಮಪ್ಪ, ಭೀಮರಾಯ, ನಿಂಗಯ್ಯ ಗೋನಾಳ, ಪ್ರಕಾಶ, ಜೋಗಪ್ಪ, ಹಣಮಂತ್ರಾಯ ನಾಯಕ, ಮಾರ್ಥಂಡ ಇದ್ದರು.