ಎಲ್ಲ ಶಿಥಿಲಾವಸ್ಥೆ ಶಾಲೆ ನವೀಕರಣ

Team Udayavani, Aug 13, 2019, 2:29 PM IST

ಕೆಂಭಾವಿ: ನಗನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡಕ್ಕೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಶಿಲಾನ್ಯಾಸ ನೆರವೇರಿಸಿದರು.

ಕೆಂಭಾವಿ: ನನ್ನ ಕ್ಷೇತ್ರದಲ್ಲಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವ ಎಲ್ಲ ಪ್ರಾಥಮಿಕ, ಪೌಢಶಾಲೆ ಹಾಗೂ ಕಾಲೇಜು ಕಟ್ಟಡಗಳನ್ನು ಹಂತಹಂತವಾಗಿ ನವೀಕರಣ ಮಾಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ನಗನೂರ ಗ್ರಾಮದಲ್ಲಿ ಸೋಮವಾರ ಎಚ್ಕೆಆರ್‌ಡಿಬಿ ಯೋಜನೆಯಡಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮಾಂತರ ಪ್ರದೇಶದ ಶಾಲೆಗಳನ್ನು ಅಭಿವೃದ್ಧಿಪಡಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಅಂತಹ ಯೋಜನೆಗಳ ಸದುಪಯೋಗ ಪಡೆದು ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.

ಇತ್ತೀಚೆಗೆ ನೆರೆ ಹಾವಳಿಯಿಂದ ಜಿಲ್ಲೆಯ ಅನೇಕ ಗ್ರಾಮಗಳು ಕೃಷ್ಣಾ ನೀರಿನಲ್ಲಿ ಮುಳುಗಡೆಯಾಗಿವೆ. ಇದರಿಂದ ಅನೇಕ ಕುಟುಂಬಗಳು ಬೀದಿಪಾಲಾಗಿವೆ. ಅಂತಹ ಕುಟುಂಬಗಳ ನೆರವಿಗೆ ಧನ ಸಹಾಯ, ಆಹಾರಾಧಾನ್ಯ, ಬಟ್ಟೆಬರೆ ಸೇರಿದಂತೆ ವಿವಿಧ ರೀತಿಯ ಸಹಾಯ ನೀಡುವಂತೆ ಜನರಲ್ಲಿ ಮನವಿ ಮಾಡಿದರು. ನಂತರ ಗ್ರಾಮಸ್ಥರ ಕುಂದುಕೊರತೆ ವಿಚಾರಿಸಿದರು.

ದಾಸೋಹ ಮಠದ ಶರಣಪ್ಪ ಶರಣರು, ಗ್ರಾಪಂ ಅಧ್ಯಕ್ಷ ಶಾಂತಣ್ಣ ಚನ್ನೂರ, ಮುಖಂಡರಾದ ಶಂಕ್ರಣ್ಣ ವಣಕ್ಯಾಳ, ಅಶೋಕ ಗೂಗಲ, ಬಸನಗೌಡ ಹೊಸಮನಿ, ಗುರಪ್ಪಗೌಡ ಪೊಲೀಸ್‌ಪಾಟೀಲ, ಸಿದ್ರಾಮರೆಡ್ಡಿ ಗೂಗಲ, ಶಿವರಾಜ ಬೂದೂರ, ಹಳ್ಳೆಪ್ಪ ಹವಾಲ್ದಾರ, ಚನ್ನಬಸಪ್ಪ ದೇಸಾಯಿ, ಶಿವಮಹಾಂತ ಚಂದಾಪುರ, ರಾಮಣ್ಣ ದೇಶಪಾಂಡೆ, ರಾವಸಾಬ ದೇಸಾಯಿ, ಚನ್ನಾರೆಡ್ಡಿ ದೇಸಾಯಿ, ಶ್ರೀಮಂತ ತಿಪ್ಪಶೆಟ್ಟಿ, ಕರ್ನಾಟಕ ಭೂಸೇನಾ ನಿಗಮದ ಅಧಿಕಾರಿಗಳು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಾದಗಿರಿ: ಕೌಶಲ್ಯ ಅಭಿವೃದ್ಧಿ ಇಲಾಖೆ ವೆಬ್‌ಸೈಟ್‌ ಮೂಲಕ ನೂತನ ತರಬೇತಿ ಹಾಗೂ ಕೌಶಲ್ಯಗಳ ಕುರಿತು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಮರ್ಪಕ ಮಾಹಿತಿ ನೀಡುವಂತೆ...

  • ಯಾದಗಿರಿ: ಪ್ರಸ್ತುತ ಜನಗಣತಿಗೂ ಮತ್ತು 2011ರಲ್ಲಿ ಮಾಡಿದ ಜನಗಣತಿಗೂ ತಾಳೆಹಾಕಿ ನೋಡಿದಲ್ಲಿ ತುಂಬಾ ವ್ಯತ್ಯಾಸವಿದೆ. ಆದ್ದರಿಂದ ನಿಖರ ಮಾಹಿತಿ ಸಂಗ್ರಹಿಸಬೇಕು...

  • ಯಾದಗಿರಿ: ಬಸ್‌ ಪ್ರಯಾಣ ಮತ್ತು ಅನಿಲ ದರ ಏರಿಕೆ ವಿರೋಧಿಸಿ ಮತ್ತು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಸ್‌ಯುಸಿಐಸಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ...

  • ಸೈದಾಪುರ: ಪ್ರಗತಿಗಾಗಿ ಮತ ನೀಡಿದ ಗುರುಮಠಕಲ್‌ ಮತಕ್ಷೇತ್ರದ ಜನರ ನಿರೀಕ್ಷೆಯಂತೆ ಸಮಗ್ರ ಅಭಿವೃದ್ಧಿಯೇ ತಮ್ಮ ಗುರಿ ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು. ಕಡೇಚೂರಿನಲ್ಲಿ...

  • ಶಹಾಪುರ: ಕಳೆದ ಎರಡು ದಿನಗಳಿಂದ ತಾಲೂಕಿನ ದೋರನಹಳ್ಳಿ ಬೆಟ್ಟದ ಮಹಾಂತೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜಾನುವಾರು ಜಾತ್ರೆ ನಡೆಯುತ್ತಿದೆ. ಜಾನುವಾರು ಜಾತ್ರೆಯಲ್ಲಿ...

ಹೊಸ ಸೇರ್ಪಡೆ