ತೊಗರಿ ರೈತರ ಕಲ್ಯಾಣಕ್ಕಿಲ್ಲ ಯೋಜನೆ

ಬೆಳೆದ ಬೆಲೆ ಪೂರ್ಣ ಖರೀದಿಸಿಹತ್ತಿ ಬೆಳೆದ ರೈತನೂ ಸಂಕಷ್ಟದಲ್ಲಿ

Team Udayavani, Oct 6, 2019, 10:57 AM IST

ಸಂತೋಷ ಬಿ. ನವಲಗುಂದ
ಯಡ್ರಾಮಿ: ತೊಗರಿಗೆ ಇತ್ತೀಚೆಗೆ ಭೌಗೋಳಿಕ ಮಾನ್ಯತೆ(ಜಿಆರ್‌ಆಯ್‌) ದೊರಕಿದ್ದರಿಂದ, ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೆಳೆಗಾರರಿಗೆ ಏನು ಲಾಭವಾಗಬಲ್ಲದು ಎನ್ನುವ ಚರ್ಚೆ ಶುರುವಾಗಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ ಮಳೆ ಕೊರತೆ ಎದ್ದು ಕಂಡರೂ, ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಿನಲ್ಲಿ ಬಂದ ಅಲ್ಪ ಸ್ವಲ್ಪ ಮಳೆ ರೈತನ ಮುಖದಲ್ಲಿ ಮಂದಹಾಸ ಮೂಡಿಸಿದೆ.

ತಾಲೂಕಿನಾದ್ಯಂತ ಶೇ. 40 ಹತ್ತಿ, ಶೇ. 35 ತೊಗರಿ ಬಿತ್ತನೆಯಾಗಿದೆ. ಸಹಕಾರ ಸಂಘಗಳು ರೈತ ಬೆಳೆದ ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸುವುದು ಕೇವಲ 10 ಕ್ವಿಂಟಲ್‌ ಮಾತ್ರ. ಪ್ರತಿ ಕ್ವಿಂಟಲ್‌ಗೆ ನೀಡುವ 6100 ರೂ. ನಮ್ಮ ಖಾತೆಗೆ ಜಮೆ ಆಗಲು ಮೂರ್‍ನಾಲ್ಕು ತಿಂಗಳು ಕಾಯಲೇಬೇಕು. ಇನ್ನು ಉಳಿದ ತೊಗರಿ ಯಾರಿಗೆ, ಎಲ್ಲಿ ಮಾರಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಸರ್ಕಾರ ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸಿ ರೈತರ ಕಲ್ಯಾಣ ಬಯಸುವುದಾದರೆ ನಾವು ಬೆಳೆದ ಪೂರ್ಣ ತೊಗರಿ ಖರೀದಿಸಬೇಕು. ಪ್ರತಿ ಕ್ವಿಂಟಲ್‌ಗೆ 8 ಸಾವಿರ ರೂ. ದರ ನಿಗದಿ ಮಾಡಬೇಕು. ಆಗ ನಿಜವಾದ ಕಾಳಜಿ ಮಾಡಿದಂತೆ ಆಗುತ್ತದೆ ಎನ್ನುತ್ತಾರೆ ರೈತರು.

ಸಂಬಂಧಪಟ್ಟವರು ತೊಗರಿ ಖರೀದಿ ಪ್ರಮಾಣ ಹಾಗೂ ಬೆಂಬಲ ಬೆಲೆ ಪರಿಷ್ಕರಿಸಿ, ರೈತ ಬೆಳೆದ ಸಂಪೂರ್ಣ ತೊಗರಿ ಖರೀದಿಸುವಂತೆ ಆಗಬೇಕು ಎನ್ನುತ್ತಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ