ಹಿಮೋಗ್ಲೋಬಿನ್‌ ಹೆಚ್ಚಿಸುವ ಆಹಾರ

Team Udayavani, Jun 15, 2019, 6:00 AM IST

ಹಿಮೋಗ್ಲೋಬಿನ್‌ ನಮ್ಮ ದೇಹದಲ್ಲಿ ಹರಿಯುವ ಕೆಂಪು ರಕ್ತ ಕಣದಲ್ಲಿನ ಪ್ರೊಟೀನ್‌ ಆಗಿದ್ದು, ಇದು ದೇಹದ ಆಮ್ಲಜನಕ ಉತ್ಪಾದನೆಯನ್ನು ವೃದ್ಧಿಸುವ ಕೆಲಸ ಮಾಡುತ್ತದೆ. ರಕ್ತ ಕಣಗಳಿಗೆ ಕೆಂಪು ಬಣ್ಣವನ್ನು ನೀಡುವ ಕೆಲಸವನ್ನೂ ಹಿಮೋಗ್ಲೊಬಿನ್‌ ಮಾಡುತ್ತದೆ. ಕಬ್ಬಿಣದ ಅಂಶ ಅಧಿಕವಾಗಿ ಹೊಂದಿದ್ದು, ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಬಾಡಿ ಸೆಲ್‌ಗ‌ಳಿಂದ ಶ್ವಾಸಕೋಶಕ್ಕೆ ಆಮ್ಲಜನಕವನ್ನು ಪೂರೈಕೆ ಮಾಡುವ ಕೆಲಸ ಮಾಡುತ್ತದೆ.

ಆರೋಗ್ಯವಂತ ಗಂಡಸರಲ್ಲಿ 13.5 ನಿಂದ 17.5 ರಷ್ಟು ಮತ್ತು ಮಹಿಳೆಯರಲ್ಲಿ 12ರಿಂದ 15.5 ಗ್ರಾಂ ವರೆಗಿನ ಹಿಮೋಗ್ಲೋಬಿನ್‌ ಅಂಶ ಇರಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಇಷ್ಟು ಇದ್ದಲ್ಲಿ ಮಾತ್ರವೇ ಅಂಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಹಿಮೋಗ್ಲೋಬಿನ್‌ ಹೆಚ್ಚಳಕ್ಕೆ ಸಹಾಯಕಾರಿಯಾಗುವ ಕೆಲವು ಆಹಾರ ವಸ್ತುಗಳ ಬಗ್ಗೆ ನಾವು ಗಮನಿಸೋಣ.

· ವಿಟಮಿನ್‌ ಸಿ: ಹಿಮೋಗ್ಲೋಬಿನ್‌ ಹೆಚ್ಚಾಗುವುದಕ್ಕೆ ವಿಟಮಿನ್‌ ಸಿ ಅಂಶ ಹೆಚ್ಚು ಉಪಯುಕ್ತ. ಕಿತ್ತಳೆ, ಲಿಂಬೆ, ಕ್ಯಾಪ್ಸಿಕಮ್‌, ಟೊಮೇಟೋ, ದ್ರಾಕ್ಷಿ ಮುಂತಾದವುಗಳಲ್ಲಿ ವಿಟಮಿನ್‌ ಸಿ ಅಂಶ ಹೆಚ್ಚಾಗಿರುತ್ತದೆ. ಇವುಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಹಿಮೋಗ್ಲೋಬಿನ್‌ವನ್ನು ಹೆಚ್ಚಿಸಿ ಕೊಳ್ಳಬಹುದಾಗಿದೆ.

· ಕಬ್ಬಿಣಾಂಶ: ಕಬ್ಬಿಣಾಂಶ ಹೆಚ್ಚು ಪ್ರಮಾಣದಲ್ಲಿರುವ ಆಹಾರ ವಸ್ತುಗಳೇ ಆದ್ಯತೆಯ ಪಟ್ಟಿಯಲ್ಲಿರಲಿ. ಹಸಿರು ತರಕಾರಿಗಳು, ಮೊಟ್ಟೆ, ಧಾನ್ಯಗಳು, ಕಾಳುಗಳು, ಮಾಂಸ, ಮೀನು, ಬೀನ್ಸ್‌, ಒಣ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ.

· ಫೊಲಿಕ್‌ ಆ್ಯಸಿಡ್‌ಗೆ ಮನ್ನಣೆ: ಫೊಲಿಕ್‌ ಆ್ಯಸಿಡ್‌ ದೇಹದ ಕೆಂಪು ರಕ್ತ ಕಣಗಳಿಗೆ ಬಿ ಕಾಂಪ್ಲೆಕ್ಸ್‌ ಪೋಷಣೆಯನ್ನು ನೀಡುವ ಕೆಲಸ ಮಾಡುತ್ತದೆ. ಕಡಲೇಬೀಜ, ಬಾಳೆಹಣ್ಣು ಮೊದಲಾದ ಫೊಲಿಕ್‌ ಆ್ಯಸಿಡ್‌ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ.

· ಬೀಟ್‌ರೂಟ್‌: ಬೀಟ್‌ರೂಟ್‌ ಸೇವನೆಯಿಂದ ಹಿಮೋಗ್ಲೋಬಿನ್‌ ಅಂಶ ಹೆಚ್ಚಾಗುತ್ತದೆ. ಇದು ಅಧಿಕ ಕಬ್ಬಿಣಾಂಶ, ಫೊಲಿಕ್‌ ಆ್ಯಸಿಡ್‌, ಪೊಟ್ಯಾಷಿಯಂ ಮತ್ತು ಫೈಬರ್‌ ಅಂಶಗಳನ್ನು ಪೂರೈಸುತ್ತದೆ. ಇದರ ಜ್ಯೂಸ್‌ ಸೇವನೆಯಿಂದ ಆರೋಗ್ಯಕರ ಕೆಂಪು ರಕ್ತಕಣಗಳು ವೃದ್ಧಿ ಸುತ್ತವೆ.

· ಚೀನೀಕಾಯಿ ಬೀಜಗಳು: ಇವು ಹಿಮೋಗ್ಲೋಬಿನ್‌ ಅಂಶಗಳು ಹೆಚ್ಚುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕ್ಯಾಲ್ಸಿಯಂ, ಮ್ಯಾಗ್ನೇಶಿಯಂ, ಮ್ಯಾಂಗನೀಸ್‌ ಅಂಶಗಳು ಹೆಚ್ಚಾಗುವುದಕ್ಕೆ ಇವು ಸಹಾಯ ಮಾಡುತ್ತದೆ.

ಭಾವಭೃಂಗ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ