ಅಕ್ಯುಪಂಕ್ಚರ್‌ನಿಂದ ತೂಕ ಇಳಿಸಿಕೊಳ್ಳಿ

Team Udayavani, May 20, 2019, 6:00 AM IST

ಅಕ್ಯುಪಂಕ್ಚರ್‌ ಎಂಬುದು ಪುರಾತನ ಚೀನಿಯರ ಔಷಧೀಯ ಅಭ್ಯಾಸ. ದೇಹದಲ್ಲಿ ಕಂಡುಬರುವ ಹಲವು ನೋವುಗಳಿಂದ ಮುಕ್ತಿ ಪಡೆಯಲು ದೇಹದ ಕೆಲವು ಭಾಗಗಳಿಗೆ ಸೂಜಿಗಳನ್ನು ಚುಚ್ಚುವುದು ಈ ಚಿಕಿತ್ಸೆಯ ಕ್ರಮ. ಇದರಿಂದ ತಲೆನೋವು, ಮಂಡಿ ನೋವು, ಬೆನ್ನು ನೋವಿನ ಸಮಸ್ಯೆಗಳಿಂದ ನಿರಾಳತೆ ದೊರೆಯುವುದು. ಈ ಅಕ್ಯುಪಂಕ್ಚರ್‌ ಚಿಕಿತ್ಸೆಯಿಂದ ದೇಹದ ತೂಕವನ್ನು ಕೂಡ ಇಳಿಸಿಕೊಳ್ಳಬಹುದಾಗಿದೆ. ಅಕ್ಯುಪಂಕ್ಚರ್‌ ಚಿಕಿತ್ಸೆ ದೇಹದ ತೂಕ ಇಳಿಸಿಕೊಳ್ಳಲು, ಒತ್ತಡ ಕಡಿಮೆ ಮಾಡಲು, ಚಯಾಪಚಯ ಕ್ರಿಯೆ ಹೆಚ್ಚಿಸಿಕೊಳ್ಳಲು ಮತ್ತು ಹಸಿವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

·ಇಯರ್‌ ಸ್ಟೇಪ್ಲಿಂಗ್‌

ಆಹಾರದ ಕಡುಬಯಕೆಗಳನ್ನು ನಿಯಂತ್ರಿಸಲು ಕಿವಿಯ ನಿರ್ದಿಷ್ಟ ಸ್ಥಳಗಳಲ್ಲಿ ಅಕ್ಯುಪಂಕ್ಚರ್‌ ಚಿಕಿತ್ಸೆ ಒಳ್ಳೆಯದು. ತೂಕ ಇಳಿಕೆ ಹೊರತಾಗಿ ಈ ಅಕ್ಯುಪಂಕ್ಚರ್‌ ಡ್ರಗ್ಸ್‌ ಮತ್ತು ತಂಬಾಕು ವ್ಯಸನದಿಂದ ಹೊರಬರಲು ಇಯರ್‌ ಸ್ಟೇಪ್ಲಿಂಗ್‌ ಸಹಕಾರಿಯಾಗಿದೆ.

·ಕಿಡ್ನಿ, ಎಂಡ್ರೋಕ್ರೈನ್‌ ಸಿಸ್ಟಮ್‌

ಈ ಆಕ್ಯುಪಂಕ್ಚರ್‌ ನೀರಿನ ಧಾರಣ ಶಕ್ತಿಯನ್ನು ಗುಣಪಡಿಸಲು ಮತ್ತು ದೇಹದಲ್ಲಿನ ಹಾರ್ಮೊನ್‌ಗಳ ಮಟ್ಟವನ್ನು ಸಮತೋಲನಗೊಳಿಸಲು ನೆರವಾಗುತ್ತವೆ. ಈ ಚಿಕಿತ್ಸೆ ಕೂಡ ತೂಕ ಇಳಿಕೆಗೆ ನೆರವಾಗುತ್ತದೆ.

·ಸ್ಲೀನ್‌, ಥೈರಾಯ್ಡ ಗ್ರಂಥಿ

ದೇಹದ ಕೆಲವು ಭಾಗಗಳಲ್ಲಿ ಸಕ್ಕರೆ ಅಂಶದ ಬಗ್ಗೆ ಗಮನಹರಿಸಲು ಈ ಅಕ್ಯುಪಂಕ್ಚರ್‌ ಸಹಕಾರಿಯಾಗಿದೆ. ಸ್ಲೀನ್‌ ಮತ್ತಯ ಥೈರಾಯ್ಡ ಗ್ರಂಥಿಗಳನ್ನು ಗುರಿಯಾಗಿಸಿಕೊಂಡಾಗ ಅಲ್ಲಿ ಶೇಖರವಾಗಿರುವ ಕೊಬ್ಬು ಕರಗಿಸಲು ಸಾಧ್ಯವಾಗುತ್ತದೆ.

·ಅಂಡಾಶಯದ ಗ್ರಂಥಿಗಳು

ತೂಕ ಇಳಿಸುವಿಕೆಯಲ್ಲಿ ಮತ್ತೂಂದು ಪ್ರಮುಖ ಅಂಶ ಇದಾಗಿದೆ. ಇದು ಋತುಬಂಧ ಅಥವಾ ಪಿ.ಎಂ.ಎಸ್‌. ಕಾರಣದಿಂದ ನಡೆಯುತ್ತದೆ. ಈ ಎರಡು ಕಾರಣಗಳಿಂದ ದೇಹದಲ್ಲಿ ತೂಕ ಹೆಚ್ಚಾಗಿದ್ದರೆ ಅಕ್ಯುಪಂಕ್ಚರ್‌ ಪರಿಣಿತರು ಅಂಡಾಶಯ ಮತ್ತು ಮೂತ್ರಜನಕಾಂಗದ ಗ್ರಂಥಿಗಳನ್ನು ಗುರಿಯಾಗಿಸಿಕೊಳ್ಳುತ್ತಾರೆ.

ಹಲವು ಅಧ್ಯಯನಗಳು ದೇಹದ ತೂಕ ಇಳಿಸಿಕೊಳ್ಳಲು ಅಕ್ಯುಪಂಕ್ಚರ್‌ ಸಹಾಯಕ ಎಂದು ಹೇಳಿದೆ. ಇದರೊಂದಿಗೆ 15 ನಿಮಿಷಗಳ ನಡಿಗೆ, ಪ್ರತಿದಿನ 2,000 ಕ್ಯಾಲೋರಿ ಡಯೆಟ್ ಯೋಜನೆ ಸೇರಿಸಿದರೆ ಉತ್ತಮ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕನ್ನಡ ದೃಶ್ಯ ಜಗತ್ತನ್ನು ಕಲಾತ್ಮಕವಾಗಿ ಶ್ರೀಮಂತಗೊಳಿಸಿದ ಕೆಲವೇ ಕೆಲವು ನಿರ್ದೇಶಕರ ಪೈಕಿ ಗಿರೀಶ್‌ ಕಾಸರವಳ್ಳಿ ಕೂಡ ಒಬ್ಬರು. ಚೊಚ್ಚಲ ನಿರ್ದೇಶನ, "ಘಟಶ್ರಾದ್ಧ'...

  • ಬೆಂಗಳೂರು: ರಾಜ್ಯಾದ್ಯಂತ ಅನುಷ್ಠಾನದಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳ ಕಾರ್ಯನಿರ್ವಹಣೆ ಸಂಬಂಧ ಸೂಕ್ತ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ....

  • ರಘುರಾಮನು ವನರಾಮನಾಗಿ ಆರಾಮದಿಂದ ಇದ್ದ ಸ್ಥಳವೇ ಚಿತ್ರಕೂಟ. ರಾಮ, ಲಕ್ಷ¾ಣ, ಸೀತೆಯರ ಚಿತ್ತಾಪಹಾರ ಮಾಡಿದ್ದ ಚಿತ್ರಕೂಟವು ಪ್ರವಾಸಿಗರ ಚಿತ್ತವನ್ನೂ ಅಪಹರಿಸುವಷ್ಟು...

  • ಮಂಗಳೂರು: ಪಾಶ್ಚಾತ್ಯ ಪ್ರಭಾವದಿಂದಾಗಿ ಭಾರತೀಯ ಸಂಗೀತವು ಸ್ವಲ್ಪ ಮಂಕಾಗಿ ಕಂಡರೂ ಮತ್ತೆ ಚಿಗುರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|...

  • ಇಂದು ದೌರ್ಜನ್ಯಗಳಿಗೆ ಮೇರೆಗಳಿಲ್ಲ. ದೆಹಲಿಯಲ್ಲೋ, ಹೈದರಾಬಾದ್‌ನಲ್ಲೋ ಹೆಣ್ಣಿನ ಮೇಲೆ ಹಾಗಾಯ್ತಲ್ಲ ಎನ್ನುತ್ತಾ ಕಳವಳಿಸುತ್ತಿರುವಾಗಲೇ, ಬೆಂಗಳೂರಿನಲ್ಲಿ...