ಫೋಬಿಯಾ ಆತಂಕ ಬೇಡ

Team Udayavani, Jun 25, 2019, 5:00 AM IST

ಎಲ್ಲ ವಯೋಮಾನದವರಿಗೂ ಯಾವುದಾದರೊಂದು ವಿಷಯದ ಬಗ್ಗೆ ಭಯ ಇದ್ದೇ ಇರುತ್ತದೆ. ನನಗೆ ಯಾವುದರ ಬಗ್ಗೆಯೂ ಭಯವಿಲ್ಲ ಎನ್ನುವವರು ಬಹಳ ಕಡಿಮೆ. ಆದರೆ ಈ ಭಯ ವಿಪರೀತವಾದರೆ ಅದನ್ನು ಫೋಬಿಯಾ ಎನ್ನಬಹುದು. ಇದು ನಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರಿದರೆ ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಬಹುಮುಖ್ಯ.

ಫೋಬಿಯಾ ಎಂದರೆ ಭಯ ಎಂದರ್ಥ. ಯಾವುದಾದರೊಂದು ವಸ್ತು ಅಥವಾ ಸನ್ನಿವೇಶದ ಅಸಹಜ, ಅರ್ಥಹೀನ ಅತಿರೇಕದ ಭಯವೆನ್ನುವುದು ಫೋಬಿಯಾದ ವ್ಯಾಖ್ಯಾನ. ಫೋಬಿಯಾವನ್ನು ಒಂದು ರೀತಿಯ ಮಾನಸಿಕ ಅಸಮತೋಲನ ಎಂದು ಕರೆಯಲಾಗುತ್ತದೆ. ಪೋಬಿಯಾದಿಂದ ಮಾನಸಿಕ ನೆಮ್ಮದಿ ಕಳೆದುಕೊಂಡು ಇಲ್ಲದ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಕೆಲವು ಸನ್ನಿವೇಶಗಳು ಪ್ರಾಣಕ್ಕೆ ಸಂಚಕಾರ ತರುವಷ್ಟು ಅಪಾಯಕಾರಿಯಾಗಬಲ್ಲವೆಂದರೆ ಆಶ್ಚರ್ಯವೆನಿಸಬಹುದು.

ವಿವಿಧ ಬಗೆ

ಕೆಲವರಿಗೆ ಕೆಲವು ವಿಷಯಗಳ ಭಯ ಇರುತ್ತದೆ. ಕೆಲವರು ಎತ್ತರದ, ಮುಚ್ಚಿದ ಸ್ಥಳಗಳಲ್ಲಿದ್ದಾಗ ಆತಂಕ ಎದುರಿಸುತ್ತಾರೆ. ಇನ್ನು ಕೆಲವರು ಜನಸಮೂಹದಲ್ಲಿದ್ದಾಗ ಅಥವಾ ಅಪರಿಚಿತರ ಸ್ಪರ್ಶಕ್ಕೆ ಭಯ ಬೀಳುತ್ತಾರೆ. ಇಂಥವರು ಭಾವನಾತ್ಮಕ ಅಡಚಣೆಗಳಿಂದ ನರಳುತ್ತಿದ್ದಾರೆ ಎನ್ನಬಹುದು. ಯಾರಾದರೂ ಜೋರಾಗಿ ಕೂಗಿದರೆ, ಸ್ವಲ್ಪ ಸನಿಹದಲ್ಲೇ ಯಾರಾದರೂ ಹಾದು ಹೋದರೆ ಆಘಾತಕ್ಕೆ ಒಳಗಾದವರಂತೆ ವಿಪರೀತ ಬೆವರುವುದು, ನಾಚುವುದು, ಅಳುವುದು ಮಾಡುತ್ತಾರೆ. ಇಂಥವರ ಮೇಲೆ ಯಾರಾದರೂ ಬಲವಾಗಿ ಭಾವನಾತ್ಮಕ ಒತ್ತಡ ಅಥವಾ ಅಭಿಪ್ರಾಯ ಹೇರಲು ನೋಡಿದರೆ ಅವರ ಪ್ರತಿರೋಧ ಶಕ್ತಿ ದುರ್ಬಲವಾಗಿರುತ್ತದೆ.

ಫೋಬಿಯಾ ಉಂಟಾದಾಗ ಬೆವರುತ್ತಾರೆ, ಅಸ್ವಾಭಾವಿಕ ಉಸಿರಾಟ, ಹೃದಯ ಬಡಿತದ ಜೋರಾಗುತ್ತದೆ, ತುಟಿಗಳು ಒಣಗುತ್ತವೆೆ, ಗೊಂದಲದ ನಡವಳಿಕೆ ಕಾಣಿಸಿಕೊಳ್ಳುತ್ತದೆ. ಫೋಬಿಯಾದ ಪ್ರಮುಖ ಲಕ್ಷಣವಾದ ಇದು ಜಾಸ್ತಿ ಆಗುತ್ತಲೇ ಹೋಗುತ್ತದೆ. ಸೂಕ್ತ ಸಮಯದಲ್ಲಿ ಅವರಿಗೆ ಚಿಕಿತ್ಸೆ ನೀಡದೇ ಇದ್ದರೆ ಇದು ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ. ಫೋಬಿಯಾ ಎಂದು ಪರಿಗಣಿಸಲು ವ್ಯಕ್ತಿಗೆ ಎತ್ತರದ ಸ್ಥಳಗಳ ಬಗ್ಗೆ ಭಯ ಇರಬೇಕು ಮತ್ತು ಅವರು ಯಾವುದೋ ಒಂದು ವಿಷಯಕ್ಕೆ ನಿಜವಾಗಿಯೂ ಹೆದರುತ್ತಿದ್ದರೆ ಕಾರಣ ಅವರು ಮಗುವಾಗಿರುವಾಗ ಆ ವಿಷಯವಾಗಿ ಭಯಪಟ್ಟಿರುತ್ತಾರೆ ಎನ್ನುತ್ತದೆ ಸಂಶೋಧನೆ.

ಏರೋ ಫೋಬಿಯಾ: ಹಾರಾಟದ ಬಗ್ಗೆ ಭಯ, ಇವರಿಗೆ ವಿಮಾನ ಪ್ರಯಾಣದ ಭಯವೂ ಇರುತ್ತದೆ.

ಡ್ರೈವಿಂಗ್‌ ಫೋಬಿಯಾ: ವಾಹನ ಚಾಲನೆ ಬಗ್ಗೆ ಭಯ, ರಕ್ತ, ಗಾಯ, ಇಂಜೆಕ್ಷನ್‌ ಫೋಬಿಯಾ

ಅಕ್ವಾಫೋಬಿಯಾ: ನೀರಿನ ಭಯ

ಝೂಫೋಬಿಯಾ: ಪ್ರಾಣಿಗಳ ಭಯ

ಎಕ್ರೋಫೋಬಿಯಾ: ಎತ್ತರದ ಭಯ

ಕ್ಲಾಸ್ಟ್ರೋ ಫೋಬಿಯಾ: ಇಕ್ಕಟ್ಟಿನ ಜಾಗದ ಭಯ

ಹೈಪೋಕೊಂಡ್ರಿಯಾ: ರೋಗ ಪೀಡಿತರಾಗುವ ಭಯ

ಎಸ್ಲ್ಕಾಫೋಬಿಯಾ: ಎಸ್ಕಾಲೇಟರ್‌ನಲ್ಲಿ ಹೋಗುವ ಭಯ

ಚಿಕಿತ್ಸೆ
ಯಾವುದೇ ಫೋಬಿಯಾವನ್ನು ಗುಣಪಡಿಸಬಹುದಾಗಿದೆ. ಔಷಧಕ್ಕಿಂತಲೂ ಮುಖ್ಯವಾಗಿ ವ್ಯಕ್ತಿಯ ಕಡೆಗೆ ಹೆಚ್ಚಿನ ಗಮನ ನೀಡುವುದು, ಪ್ರೀತಿಯಿಂದ ಅವರನ್ನು ಗುಣಪಡಿಸಬಹುದಾಗಿದೆ.

1 ಖನ್ನತೆಗೆ ನೀಡುವ ಔಷಧಗಳನ್ನು ವೈದ್ಯರು ನೀಡ ಬಹುದು. ಅದನ್ನು ವೈದ್ಯರು ಹೇಳಿದ ಸಮಯ ದವರೆಗೆ ಸರಿಯಾಗಿ ಬಳಸಬೇಕು. ವೈದ್ಯರ ಮಾರ್ಗದರ್ಶ ತೆಗೆದುಕೊಳ್ಳುವುದು ಸೂಕ್ತ.

2 ಯೋಗ, ಧ್ಯಾನ, ಪ್ರಾಣಾಯಾಮ, ಸಂಗೀತ, ಕ್ರೀಡೆ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.

3 ಭಯ ಪಡುವ ವಿಚಾರದ ಕುರಿತಂತೆ ಅದನ್ನು ಸರಿಯಾಗಿ ನಿಭಾಯಿಸುವ ಕೌಶಲವನ್ನು ತಿಳಿಸಲು ಕೌನ್ಸೆಲಿಂಗ್‌ ಪಡೆಯುವುದು ಅವಶ್ಯ.

4 ವ್ಯಕ್ತಿಯ ಜತೆ ನಾವಿದ್ದೇವೆ ಎಂದು ಹೇಳುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು

5 ವಾತಾವರಣದಲ್ಲಿ ಸೂಕ್ತ ಬದಲಾವಣೆಗಳನ್ನು ತಂದು ವ್ಯಕ್ತಿ ನೆಮ್ಮದಿಯಿಂದ ಇರುವಂತೆ ಮಾಡುವುದು.ಅಂದರೆ ಅವರನ್ನು ಪ್ರಶಾಂತವಾದ ಜಾಗಕ್ಕೆ ಕರೆದುಕೊಂಡು ಮನಸ್ಸು ಬದಲಾಯಿಸುವುದು.

ಸೂಕ್ತ ಚಿಕಿತ್ಸೆಯಿಂದ ಗುಣಮುಖ

ವಿವಿಧ ಬಗೆಯ ಫೋಬಿಯಾಗಳನ್ನು ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸ ಬಹುದು. ಅದಕ್ಕಾಗಿ ಫೋಬಿಯಾಕ್ಕೊಳಗಾದವರು ಹಾಗೂ ಅವರ ಮನೆಯವರ ಸಹಕಾರ ಅಗತ್ಯ. – ಡಾ| ಸುಚೇತ ಮಾನಸಿಕ ತಜ್ಞರು

ಲಕ್ಷಣಗಳು

ಫೋಬಿಯಾಕ್ಕೆ ಒಳಗಾದವರು ಅವರು ಹೆದರುವ ವಿಷಯ, ಜಾಗ, ವ್ಯಕ್ತಿಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ ಅಪರಿಚಿತ ದಾರಿ, ಸ್ಥಳಗಳಲ್ಲಿ ಭಯ ಅಥವಾ ಪರಿಚಿತ ಸ್ಥಳಗಳ ಬಗ್ಗೆ ಒಂದು ರೀತಿ ನಿರ್ಲಕ್ಷ್ಯ ವಹಿಸುತ್ತಾರೆ. ಅಲ್ಲದೆ, ಒಂದು ನಿರ್ದಿಷ್ಟ ವಿಷಯದ ಬಗ್ಗೆ ಇವರಲ್ಲಿ ಅವಿವೇಕದ ಭಯ ಕಾಡುತ್ತದೆ. ಸಾಧ್ಯವಾಗುವವರೆಗೆ ಬೇರೆ ವ್ಯಕ್ತಿಗಳಿಂದ ಈ ವಿಷಯಗಳನ್ನು ಮುಚ್ಚಿಡುವುದು, ಕಣ್ಣು ತಪ್ಪಿಸುವುದು ಉತ್ತಮ ಎಂದು ಅವರು ಭಾವಿಸುತ್ತಾರೆ.

••••ಪ್ರಜ್ಞಾ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜೀವನದಲ್ಲಿ ಸರಿಯಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಯೋಗ ಒಳ್ಳೆಯದು. ಆದಾಗ್ಯೂ ಯೋಗದಿಂದ ಗರಿಷ್ಠ ಪ್ರಯೋಜನ ಪಡೆಯಲು ಸರಿಯಾದ ಸಮಯದಲ್ಲಿ...

  • ಜೀವನದಲ್ಲಿ ನಡೆದ ಘಟನೆಗಳನ್ನು ಮರೆಯುವುದು ಅಷ್ಟು ಸುಲಭದ ವಿಷಯವಲ್ಲ. ಅದರಲ್ಲೂ ಆಘಾತಕಾರಿ ಘಟನೆಗಳು ಮನುಷ್ಯನ ಮಾನಸಿಕ ಆರೋಗ್ಯವನ್ನು ಹಾಳುಗೆಡವುತ್ತದೆ. ಕೆಲವು...

  • ಇಪ್ಪತ್ತೂಂದನೆಯ ಶತಮಾನದ ಅತಿ ಗಂಭೀರ ಸಾರ್ವಜನಿಕ ಆರೋಗ್ಯ ಸವಾಲುಗಳಲ್ಲಿ ಒಂದು ಮಕ್ಕಳು ಬಾಲ್ಯದಲ್ಲಿಯೇ ಬೊಜ್ಜು ಬೆಳೆಸಿಕೊಳ್ಳುವುದು. ಈ ಸಮಸ್ಯೆ ಜಾಗತಿಕವಾದುದು...

  • ಬೆಳಗ್ಗೆ ಎದ್ದು ಒಂದು ಲೋಟ ಕಾಫಿ ಕುಡಿದಾಗ ಮನಸ್ಸಿಗೆ ಹಾಯ್‌ ಎನಿಸುತ್ತದೆ. ಭಾರತೀಯರಿಗೂ, ಕಾಫಿಗೂ ಅವಿನಾಭಾವ ಸಂಬಂಧವಿದೆ. ಅದೆಷ್ಟೋ ಜನರಿಗೆ ಕಾಫಿ ಇಲ್ಲದೇ ಬೆಳಗಾಗುವುದೇ...

  • ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಎಲ್ಲರೂ ನಾನಾ ಬಗೆಯ ಕಸರತ್ತುಗಳನ್ನು ಮಾಡುತ್ತಾರೆ. ಮಾಡುವ ಕಸರತ್ತುಗಳು ಮಾತ್ರ ಆರೋಗ್ಯಕರವಾಗಿರುವುದಿಲ್ಲ. ಉತ್ತಮ...

ಹೊಸ ಸೇರ್ಪಡೆ