ಚುನಾವಣೆಯಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಅದ್ದೂರಿ ವೆಚ್ಚದ ಮೆರವಣಿಗೆಯ ಅಗತ್ಯವಿದೆಯೇ?

Team Udayavani, Nov 19, 2019, 4:42 PM IST

ಮಣಿಪಾಲ: ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗಾಗಿ ಅದ್ದೂರಿ ವೆಚ್ಚದ ಮೆರವಣಿಗೆಗಳ ಅಗತ್ಯವಿಎಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.

ಹಬಿಬ್ ಉಡುಪಿ: ಈ ಚುನಾವಣೆಯೆ ಅನಗತ್ಯ ಅಂತದ್ದರಲ್ಲಿ ಈ ರೀತಿ ದುಂದುವೆಚ್ಚ ಮಾಡುವ ಬದಲು ಅದೇ ಹಣವನ್ನು ನೆರೆ ಸಂತ್ರಸ್ತರಿಗೆ ನೀಡ ಬಹುದಿತ್ತು

ಹರೀಶ್ ಬಾಬು: ಇಲ್ಲ. ಅದನ್ನೇ ಅಧಿಕಾರ ಸಿಕ್ಕ ನಂತರ ಬಡವ ನಿಗ೯ತಿಕರಿಗೆ ಕೊಟ್ಟರೇ ಒಳ್ಳೆಯದೂ ಅಲ್ವಾವೇ…

ನವಿ ದಾಸ್: ಪ್ರಜೆಗಳ ತೆರಿಗೆ ಹಣದಿಂದಲೇ ಮಾಡುವಂತಹ ಇಂತಹ ಕಾರ್ಯಕ್ರಮಗಳು ಅವಶ್ಯಕತೆ ಇಲ್ಲ.

ಮೋಹನ್ ದಾಸ ಕಿಣಿ: ಪದೇಪದೇ ಚುನಾವಣೆಯೇ ಒಂದು ವ್ಯರ್ಥ ವೆಚ್ಚ. ತೋರಿಕೆಗೆ ಯಾರೋ ಮಾಡುವ ವೆಚ್ಚದಂತೆ ಕಂಡರೂ ಪರೋಕ್ಷವಾಗಿ ಇದಕ್ಕೆ ವೆಚ್ಚ ಮಾಡುವವರು ಆ ರಾಜಕೀಯ ನಾಯಕರಿಂದ ಪ್ರಯೋಜನ ಪಡೆಯುವವರೇ ಆಗಿರುತ್ತಾರೆ. ಹಾಗೂ ಚುನಾವಣೆಯಲ್ಲಿ ಗೆದ್ದರೆ ಸರಕಾರದಿಂದ ಲಾಭವನ್ನು ನಿರೀಕ್ಷಿಸಿಯೇ ಮಾಡಿರುತ್ತಾರೆ. ಕೆಲವೊಮ್ಮೆ ವಾಹನಗಳ ಮೆರವಣಿಗೆ ಕೂಡಾ ಮಾಡುವವರಿದ್ದು, ಇಂಧನ ವ್ಯರ್ಥ, ಪರಿಸರ ಮಾಲಿನ್ಯ.

ಲಕ್ಷ್ಮೀಕಾಂತ್ರಾಜ್ ಎಂ ಜಿ; ಈ ವೆಚ್ಚ ತಡೆಯಬೇಕೆಂದ್ರೆ. ನಾಮ ಪತ್ರ ಸಲ್ಲಿಸಲು ಚುನಾವಣಾ ಆಯೋಗ ಆನ್ ಲೈನ್ ವ್ಯವಸ್ಥೆ ಜಾರಿಗೆ ತರಬೇಕು. ಅಲ್ಲಿ ಅರ್ಜಿ ಸಲ್ಲಿಸಿ ಮೂಲ ದಾಖಲೆಗಳನ್ನ ತದನಂತರ ಪರಿಶೀಲಿಸಿಕೊಳ್ಳಬೇಕು.

ಸುಧಿ ಎಂಎನ್: ಖಂಡಿತ ಇಲ್ಲ .ರಾಜಕೀಯ ನಾಯಕರಿಗೆ ಬಲ ಪ್ರದರ್ಶನಕ್ಕೆ ವೇದಿಕೆಯಷ್ಟೆ ಇದು ಬದಲಾಗಿ ಇನ್ನೇನೂ ಅಲ್ಲ ,ಇದಕ್ಕೆ ಅಗತ್ಯ ಕಡಿವಾಣ ಬೀಳಬೇಕಿದೆ ,ಆನ್ ಲೈನ್ ಮೂಲಕ ನಾಮಿನೇಷನ್ ಫೈಲ್ ಮಾಡಲಿಕ್ಕೆ ಅವಕಾಶ ಕೊಡುವುದು ಉತ್ತಮ ಅಂತ ನನ್ನ ಭಾವನೆ ಆಗ ರ್ಯಾಲಿಗಳನ್ನು ನಡೆಸುವುದಕ್ಕೆ ಅವಕಾಶವೇ ಇರುವುದಿಲ್ಲ , ಇದರಿಂದ ಸಾರ್ವಜನಿಕರಿಗೆ ಅನಗತ್ಯ ಕಿರಿಕಿರಿ ಮತ್ತು ವಾಹನ ಸಂಚಾರ ದಟ್ಟಣೆಯನ್ನು ತಪ್ಪಿಸಬಹುದು .

ಗಂಗಾಧರ ರಾವ್ ಕೊಕ್ಕಡ: ಖಂಡಿತವಾಗಿ ನಮಗೆ ಇಲ್ಲ .ಆದರೆ ಅವರಿಗೆ ಇದೆ . ಜಯಿಸಿದ ಮೇಲೆ ಯಾವುದಾದರು ನೆಪದಲ್ಲಿ ಜನರನ್ನು ಲೂಟಿ ಮಾಡಬೇಕಲ್ಲ

ಸಂಗನಗೌಡ ಪಾಟೀಲ್: ಅಗತ್ಯವಿದೆ. ರಾಜ್ಯದಲ್ಲಿ ಹಣದ ಬರವಿದೆ. ಈ ಚುನಾವಣೆ ಎಷ್ಟೋ ಕೈ ಗಳಿಗೆ ಉದ್ಯೋಗ ಕೊಡಲಿದೆ. ಇವತ್ತಿನ ಮೆರವಣಿಗೆ ಎದೆಷ್ಟೋ ಬಾಜಾ -ಭಜಂತ್ರಿ, ಹೋಟೆಲ್ ಉದ್ಯಮಕ್ಕೆ, ರಸ್ತೆ ಬದಿಯ ದಿನಸಿ ಅಂಗಡಿದಾರರಿಗೆ, ಪರೋಕ್ಷವಾಗಿ ಕೋಟಿ ರೂ ಗಳ ವ್ಯವಹಾರ /ಆದಾಯ ನೀಡಿದೆ. ನೇರವಾಗಿ ನಾಯಕರಿಂದ ಹಣ ಕಿತ್ತುಕೊಳ್ಳೋದು ಆಗುವದಿಲ್ಲ. ಹೀಗಾದರೂ ಕಿತ್ತುಕೊಳ್ಳಲಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ