ಡುಕಾಟಿ ಐಶಾರಾಮಿ ನೂತನ ಬೈಕ್ ಮಾರುಕಟ್ಟೆಗೆ ಬಿಡುಗಡೆ; ಆರಂಭಿಕ ಬೆಲೆ 7.89 ಲಕ್ಷ!

Team Udayavani, Apr 26, 2019, 6:57 PM IST

ನವದೆಹಲಿ: ಐಶಾರಾಮಿ ದ್ವಿಚಕ್ರ ಮೋಟಾರ್ ಸೈಕಲ್ ತಯಾರಿಕೆಯಲ್ಲಿ ಹೆಸರುಗಳಿಸಿರವ ಡುಕಾಟಿ ಸಂಸ್ಥೆ ಭಾರತದಲ್ಲಿ ನಾಲ್ಕು ನೂತನ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್ ಗಳನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಡುಕಾಟಿ ನೂತನ ನಾಲ್ಕು ಮಾದರಿಯ  ಡೆಸೆರ್ಟ್ ಸ್ಲೆಡ್, ಕೆಫೆ ರೇಸರ್, ಐಕಾನ್ ಮತ್ತು ಫುಲ್ ಥ್ರೋಟ್ಟ್ ಲೆ ಬೈಕ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಸರಣಿಯ ಐಶಾರಾಮಿ ಮೋಟಾರ್ ಸೈಕಲ್ ಹೆಚ್ಚು ಸಮಕಾಲಿನ, ಹೆಚ್ಚು ಆರಾಮ ಮತ್ತು ಸುರಕ್ಷತೆಯ ದೃಷ್ಟಿಕೋನದಲ್ಲಿ ತಯಾರಿಸಲಾಗಿದೆ ಎಂದು ಡುಕಾಟಿ ಹೇಳಿದೆ.

ಬೆಲೆ ಎಷ್ಟು?

ಡುಕಾಟಿ Icon 7.89 ಲಕ್ಷ ರೂಪಾಯಿ(ಭಾರತದ ಶೋ ರೂಂನಲ್ಲಿ)

ಡುಕಾಟಿ Desert Sled 9.93 ಲಕ್ಷ ರೂಪಾಯಿ.

ಡುಕಾಟಿ Cafe Racer 9.78 ಲಕ್ಷ ರೂಪಾಯಿ.

ಡುಕಾಟಿ Full Throttle 8.92 ಲಕ್ಷ ರೂಪಾಯಿ.

ಡುಕಾಟಿ ಸ್ಕ್ರ್ಯಾಂಬ್ಲರ್:

ಡುಕಾಟಿ ಸ್ಕ್ರ್ಯಾಂಬ್ಲರ್ ಐಕಾನ್ ನೂತನ ಆಟೋಮಿಕ್ ಕಿತ್ತಳೆ ಬಣ್ಣ ಮತ್ತು ಕ್ಲಾಸಿಕ್ 62 ಹಳದಿ ಬಣ್ಣದಲ್ಲಿ ಲಭ್ಯವಾಗಲಿದೆ. ಕಪ್ಪು ಫ್ರೇಮ್ ಹೊಂದಿದ್ದು, ಕಪ್ಪು ಸೀಟ್ ಮತ್ತು ಗ್ರೇ ರಿಮ್ಸ್ ಹೊಂದಿದೆ. ಡುಕಾಟಿ ಸ್ಕ್ರ್ಯಾಂಬ್ಲರ್ 803 ಸಿಸಿ ಎಲ್-ಟ್ವಿನ್ ಎಂಜಿನ್, ಹವಾನಿಯಂತ್ರಿತ ಎಂಜಿನ್ ಸೌಲಭ್ಯ ಇದೆ. ಈ ಐಶಾರಾಮಿ ಬೈಕ್ ಗೇರ್ ಬಾಕ್ಸ್ 6 ಸ್ಪೀಡ್ ಹೊಂದಿದೆ. ಡುಕಾಟಿ ಸ್ಕ್ಯಾಂಬ್ಲರ್ ಭಾರತ ಹಾಗೂ ಜಾಗತಿಕವಾಗಿ ಬಹು ಯಶಸ್ವಿ ಮಾದರಿಯ ಬೈಕ್ ಆಗಿದೆ.

ಡುಕಾಟಿ ಐಶಾರಾಮಿ ಬೈಕ್ ಗಳ ನೂತನ ಹೈಡ್ರಾಲಿಕ್ ಕ್ಲಚ್ ಕಂಟ್ರೋಲ್ ಉತ್ತಮ ಅನುಭವ ನೀಡುತ್ತದೆ. ಹೊಂದಾಣಿಕೆಯ ಗೇರ್ ಲಿವರ್, ಅದರ ಜೊತೆಗೆ ಫ್ರಂಟ್ ಬ್ರೇಕ್ ಉತ್ತಮ ಗುಣಮಟ್ಟದ್ದಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ