ಬರಲಿದೆ ವಿದ್ಯುತ್ ಚಾಲಿತ ಬೈಕ್
ಮುಂದಿನ ತಿಂಗಳು ಆರ್ವಿ 400 ಮಾರುಕಟ್ಟೆಗೆ
Team Udayavani, Jun 19, 2019, 5:00 AM IST
ಹೊಸದಿಲ್ಲಿ: ದೇಶದ ಆಟೋಮೊಬೈಲ್ ರಂಗದಲ್ಲಿ ಈಗ ವಿದ್ಯುತ್ ಚಾಲಿತ ವಾಹನಗಳ ಹೇರಳ ಉತ್ಪಾದನೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಕೆಲ ಕಂಪೆನಿಗಳು ವಿದ್ಯುತ್ ಚಾಲಿತ ಕಾರುಗಳನ್ನು, ಸ್ಕೂಟರ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಆದರೆ, ವಿದ್ಯುತ್ ಚಾಲಿತ ಬೈಕ್ ಈವರೆಗೆ ಭಾರತಕ್ಕೆ ಕಾಲಿಟ್ಟಿಲ್ಲ. ಆದರೆ, ರಿವೋಲ್ಟ್ ಮೋಟರ್ಸ್ ಎಂಬ ಸಂಸ್ಥೆ ಈ ಕೊರತೆಯನ್ನು ನೀಗಲಿದ್ದು, ಸಂಪೂರ್ಣ ವಿದ್ಯುತ್ ಚಾಲಿತವಾದ “ಆರ್ವಿ 400′ ಹೆಸರಿನ ಬೈಕುಗಳನ್ನು ಅನಾವರಣ ಮಾಡಿದೆ. ಮುಂದಿನ ತಿಂಗಳು ಭಾರತದ ಮಾರು ಕಟ್ಟೆಗೆ ಈ ವಿದ್ಯುತ್ಚಾಲಿತ ಬೈಕು ಲಗ್ಗೆಯಿ ಡಲಿದೆ ಎಂದು ಝಿಗ್ ವ್ಹೀಲ್ಸ್ ತಿಳಿಸಿದೆ.
ಈ ಬೈಕಿನ ಬ್ಯಾಟರಿ ಒಂದು
ಚಾರ್ಚ್ಗೆ 156 ಕಿ.ಮೀ. ದೂರದ ವರೆಗೆ ಚಲಿಸುತ್ತದೆಂದು ಹೇಳಲಾಗಿದೆ. ಗರಿಷ್ಠ ವೇಗ 85 ಕಿ.ಮೀ. ಇದ್ದು, ಎರಡೂ ಚಕ್ರಗಳಿಗೆ ಡಿಸ್ಕ್ ಬ್ರೇಕ್ಗಳು ಇರಲಿವೆ. ಜತೆಗೆ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವೂ ಇದರಲ್ಲಿ ಇರಲಿದ್ದು, ಬ್ಲೂಟೂತ್ ಕನೆಕ್ಟಿವಿಟಿ, ದೂರದಲ್ಲೇ ನಿಂತು ಸ್ಮಾರ್ಟ್ಫೋನ್ ಮೂಲಕ ಬೈಕ್ ಸ್ಟಾರ್ಟ್ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ರೆಬೆಲ್ ರೆಡ್ ಹಾಗೂ ಕಾಸ್ಮಿಕ್ ಬ್ಲಾಕ್ ಎಂಬ ಎರಡು ಬಣ್ಣಗಳಲ್ಲಿ ಇದು ಲಭ್ಯವಾಗಲಿದ್ದು, ಇದರ ಬೆಲೆ ಅಂದಾಜು 1 ಲಕ್ಷ ರೂ. ಇರಬಹುದೆಂದು ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ