ದ.ಕ.- 13; ಉಡುಪಿ-12 ಅಭ್ಯರ್ಥಿಗಳು ಕಣದಲ್ಲಿ


Team Udayavani, Mar 30, 2019, 6:05 AM IST

DK-UD-ELECTION

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 15 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದು, ಈ ಪೈಕಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡಿದೆ, ಇನ್ನೊಬ್ಬರು ನಾಮಪತ್ರವನ್ನು ವಾಪಸು ಪಡೆದಿದ್ದಾರೆ. ಅಂತಿಮವಾಗಿ 13 ಮಂದಿ ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿಜೆಪಿಯ ಡಮ್ಮಿ ಅಭ್ಯರ್ಥಿ ಸುದರ್ಶನ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಇಸ್ಮಾಯಿಲ್‌ ಶಫಿ ಕೆ. ಅವರು ಶುಕ್ರವಾರ ನಾಮಪತ್ರ ವಾಪಸು ಪಡೆದಿದ್ದಾರೆ ಎಂದರು. ಅಭ್ಯರ್ಥಿಗಳು ದೇವಸ್ಥಾನ ಸಹಿತ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದಕ್ಕೆ ಆಕ್ಷೇಪವಿಲ್ಲ. ಆದರೆ ದೇವಸ್ಥಾನ ದಲ್ಲಿ ತನಗೆ ಮತ ನೀಡುವಂತೆ ಮನವಿ ಮಾಡುವುದು ಕಂಡುಬಂದರೆ ತತ್‌ಕ್ಷಣವೇ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಧಾರ್ಮಿಕ ಸ್ಥಳದಲ್ಲಿ ಮತಯಾಚನೆ ಬಗ್ಗೆ ರುಜುವಾತಾದರೆ ಅಂತಹ ಅಭ್ಯರ್ಥಿ ಜೀವಮಾನ ಪೂರ್ಣ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ ಎಂದರು.

ಪ್ರಚಾರದ ನೆಪದಲ್ಲಿ ಕೆಲವು ಪಕ್ಷದವರು ತಮ್ಮ ಕಾರ್ಯಕರ್ತರಿಗೆ ಹ್ಯಾಟ್‌,ಟಿಶರ್ಟ್‌ಗಳನ್ನು ಮಾಡಿ ಅದರಲ್ಲಿ ಪಕ್ಷದ ಚಿಹ್ನೆ ಅಥವಾ ಅಭ್ಯರ್ಥಿ ಕುರಿತು ಬರೆದು ಹಂಚಿದರೆ ಕ್ರಮ ಕೈಗೊಳ್ಳಲಾಗುವುದು. ಮತದಾನ ಕೇಂದ್ರಗಳಲ್ಲಿ ಅಥವಾ ಅವುಗಳ ಸಮೀಪ ಅವ್ಯವಸ್ಥಿತ ವರ್ತನೆ, ದುರ್ನಡತೆ ತೋರಿದರೆ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದರು.

17.24 ಲಕ್ಷ ಮತದಾರರು
ದ. ಕನ್ನಡದ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ 17,24,566 ಮñ ‌ದಾರರಿದ್ದು, 8,45,283 ಪುರುಷರು ಮತ್ತು 8,79,186 ಮಹಿಳೆಯರು, 97 ಇತರರು ಎಂದರು.

ದಕ್ಷಿಣ ಕನ್ನಡ: ಕಣದಲ್ಲಿರುವವರು
– ನಳಿನ್‌ಕುಮಾರ್‌ ಕಟೀಲು (ಬಿಜೆಪಿ)
– ಮಿಥುನ್‌ ಎಂ. ರೈ (ಕಾಂಗ್ರೆಸ್‌)
– ಎಸ್‌. ಸತೀಶ್‌ ಸಾಲ್ಯಾನ್‌ (ಬಿಎಸ್‌ಪಿ)
– ಮಹಮ್ಮದ್‌ ಇಲಿಯಾಸ್‌ (ಎಸ್‌ಡಿಪಿಐ)
– ವಿಜಯ ಶ್ರೀನಿವಾಸ ಸಿ. (ಉತ್ತಮ ಪ್ರಜಾಕೀಯ ಪಾರ್ಟಿ)
– ಸುಪ್ರೀತ್‌ ಕುಮಾರ್‌ ಪೂಜಾರಿ (ಹಿಂದುಸ್ಥಾನ ಜನತಾ ಪಾರ್ಟಿ)
– ಅಬ್ದುಲ್‌ ಹಮೀದ್‌, ಅಲೆಗಾÕಂಡರ್‌, ದೀಪಕ್‌ ರಾಜೇಶ್‌ ಕುವೆಲ್ಲೊ, ಮಹಮ್ಮದ್‌ ಖಾಲಿದ್‌, ಮ್ಯಾಕ್ಸಿಂ ಪಿಂಟೊ, ವೆಂಕಟೇಶ್‌ ಬೆಂಡೆ, ಎಚ್‌. ಸುರೇಶ್‌ ಪೂಜಾರಿ ಪಕ್ಷೇತರರು

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 14 ಉಮೇದುವಾರರ ಪೈಕಿ ಇಬ್ಬರು ನಾಮಪತ್ರಗಳನ್ನು ವಾಪಸು ಪಡೆದುಕೊಂಡಿದ್ದು ಅಂತಿಮವಾಗಿ 12 ಮಂದಿ ಕಣದಲ್ಲಿದ್ದಾರೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

14,98,016 ಮತದಾರರು ಕ್ಷೇತ್ರದಲ್ಲಿ ಒಟ್ಟು 14,98,016 ಮತದಾರರಿದ್ದಾರೆ. ಇವರಲ್ಲಿ 7,65,823 ಮಹಿಳೆಯರು, 7,32,193 ಪುರುಷರು. 30,826 ಯುವ ಮತದಾರರಿದ್ದಾರೆ. 11,861 ದೈಹಿಕ ಮತ್ತು ಮಾನಸಿಕ ದೌರ್ಬಲ್ಯ ಇರುವ ಮತದಾರರೆಂದು ಗುರುತಿಸಲಾಗಿದೆ. ಇವರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಅಗತ್ಯ ಸೌಲಭ್ಯಗಳಾದ ವೀಲ್‌ ಚೆಯರ್‌, ದಪ್ಪದ ಗ್ಲಾಸ್‌ ಮೊದಲಾದ ವಿಶೇಷ ವ್ಯವಸ್ಥೆ ಒದಗಿಸಲು ಕೋರಿಕೆ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಖೀ ಮತಗಟ್ಟೆ ಏರಿಕೆ
ಮಹಿಳಾ ಮತದಾರರು ಹೆಚ್ಚಿಗೆ ಇರುವ ಕಾರಣ ಸಖೀ ಮತಗಟ್ಟೆಗಳ ಸಂಖ್ಯೆಗಳನ್ನು ಏರಿಸಲು ಸಾಮಾನ್ಯ ವೀಕ್ಷಕ ಕೃಷ್ಣ ಕುನಾಲ್‌ ಸೂಚಿಸಿದಂತೆ 26 ಸಖೀ ಮತಗಟ್ಟೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

5,616 ಸಿಬಂದಿ ನೇಮಕ
ಲೋಕಸಭಾ ಕ್ಷೇತ್ರದಲ್ಲಿ 1,837 ಮತಗಟ್ಟೆಗಳಿವೆ. ಉಡುಪಿ ಜಿಲ್ಲೆಯಲ್ಲಿ 1,111 ಮತಗಟ್ಟೆಗಳಿದ್ದು ಇಲ್ಲಿಗೆ 1,401 ಅಧ್ಯಕ್ಷಾಧಿಕಾರಿ, 1,405 ಸಹಾಯಕ ಅಧ್ಯಕ್ಷಾಧಿಕಾರಿ, 2,810 ಮೂರು ಮತ್ತು ನಾಲ್ಕನೆಯ ಮತಗಟ್ಟೆ ಅಧಿಕಾರಿಗಳನ್ನು ಒಟ್ಟು 5,616 ಸಿಬಂದಿಯನ್ನು ನೇಮಿಸಲಾಗಿದೆ. ಇವರಿಗೆ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುವುದು ಎಂದರು.

ಆಯುಧ ಠೇವಣಿ
ಆಯುಧ ಪರವಾನಿಗೆ ಹೊಂದಿರುವವರು ಆಯಾ ಪೊಲೀಸ್‌ ಠಾಣೆಗಳಲ್ಲಿ ಅವುಗಳನ್ನು ಠೇವಣಿ ಇರಿಸಿಲು ಆದೇಶಿದಂತೆ ಜಿಲ್ಲೆಯ 4,630 ಪರವಾನಿಗೆ ಆಯುಧಗಳ ಪೈಕಿ 3,693 ಆಯುಧಗಳನ್ನು ಠೇವಣಿ ಇಡಲಾಗಿದೆ. ರೈತರೂ ಆಯುಧಗಳನ್ನು ಠೇವಣಿ ಇರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

16.65 ಲ.ರೂ. ನಗದು ವಶ
ಚುನಾವಣ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಇದುವರೆಗೆ ಏಳು ಪ್ರಕರಣಗಳಲ್ಲಿ 16.65 ಲ.ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಪರಿಶೀಲನೆ ಅನಂತರ ಒಂದು ಪ್ರಕರಣದಲ್ಲಿ 3.25 ಲ.ರೂ. ಬಿಡುಗಡೆಗೊಳಿಸಲಾಗಿದೆ ಎಂದರು.

ಸಿ ವಿಜಿಲ್‌: 42 ದೂರು
ಸಿ ವಿಜಿಲ್‌ ಆ್ಯಪ್‌ ಮೂಲಕ 42 ದೂರುಗಳು ಸ್ವೀಕೃತವಾಗಿದ್ದು 32 ಅರ್ಜಿಗಳನ್ನು ವಿಚಾರಣೆ ನಡೆಸಿ ವಿಲೆಗೊಳಿಸಲಾಗಿದೆ. 10 ಪ್ರಕರಣಗಳನ್ನು ಡಮ್ಮಿ ಪ್ರಕರಣಗಳಾಗಿದೆ ಎಂದರು. ಸಿ ವಿಜಿಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಯಾರೂ ದೂರು ಸಲ್ಲಿಸಬಹುದು. ಈಗಷ್ಟೇ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳ್ಳುತ್ತಿದೆ. ಯಾವುದೇ ಪೋಸ್ಟರ್, ಕರಪತ್ರಗಳನ್ನು ಹೆಸರು, ವಿಳಾಸವಿಲ್ಲದೆ ಮುದ್ರಿಸಬಾರದು ಎಂದು ಕೃಷ್ಣ ಕುನಾಲ್‌ ಹೇಳಿದರು.

ಮದ್ಯ ವಶ
ಅಬಕಾರಿ ಇಲಾಖೆಯವರು 15,580 ಲೀ. ಮದ್ಯ, ಪೊಲೀಸರು 2.520 ಲೀ. ಮದ್ಯ ವಶಪಡಿಸಿಕೊಂಡಿದ್ದು ಈ ಸಂಬಂಧ ಮೂರು ಟ್ರಕ್‌ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಅಂದಾಜು ಮೊತ್ತ 1.06 ಕೋ.ರೂ. ಆಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಣ ಸಂಗ್ರಹ
ವಿರುದ್ಧ ಪ್ರಕರಣ
ಪಕ್ಷೇತರ ಅಭ್ಯರ್ಥಿ ಅಮೃತ್‌ ಶೆಣೈ ಪಾದಯಾತ್ರೆ ಮೂಲಕ ದೇಣಿಗೆ ಸಂಗ್ರಹಿಸಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು ಇದರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೃಷ್ಣ ಕುನಾಲ್‌ ಜಿಲ್ಲಾಧಿಕಾರಿಗೆ ಸೂಚಿಸಿದರು.

ಪಕ್ಷಗಳು ಅಭ್ಯರ್ಥಿಗಳಿಗೆ ಕೊಡುವ ಮೊತ್ತವೂ ಅಭ್ಯರ್ಥಿಗಳಿಗೆ ಸೇರುತ್ತದೆ. 26 ದಿನಗಳೊಳಗೆ ಲೆಕ್ಕಪತ್ರಗಳನ್ನು ಕೊಡಬೇಕಾಗಿದ್ದು ಅಭ್ಯರ್ಥಿ ವೆಚ್ಚ ಮತ್ತು ಪಕ್ಷ ಕೊಟ್ಟ ಲೆಕ್ಕವನ್ನು ತಾಳೆ ಹಾಕಿ ನೋಡಲಾಗುವುದು ಎಂದು ಕೃಷ್ಣ ಕುನಾಲ್‌ ತಿಳಿಸಿದರು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.

ವೀಕ್ಷಕರು
ಕೃಷ್ಣ ಕುನಾಲ್‌ – ಸಾಮಾನ್ಯ ವೀಕ್ಷಕರು- 8277013878
ಸಂದೀಪ್‌ ಪ್ರಕಾಶ್‌ ಕಾರ್ಣಿಕ್‌ – ಪೊಲೀಸ್‌ ವೀಕ್ಷಕರು- 8277013926 ಮಲ್ಲಿಕಾರ್ಜುನ ಉತ್ತೂರೆ – ವೆಚ್ಚ ವೀಕ್ಷಕರು- 8277013973

ಉಡುಪಿ-ಚಿಕ್ಕಮಗಳೂರು: ಕಣದಲ್ಲಿ ಉಳಿದವರು
– ಪಿ. ಪರಮೇಶ್ವರ (ಬಿಎಸ್‌ಪಿ),
– ಪ್ರಮೋದ್‌ ಮಧ್ವರಾಜ್‌ (ಜೆಡಿಎಸ್‌),
– ಶೋಭಾ ಕರಂದ್ಲಾಜೆ (ಬಿಜೆಪಿ),
– ಪಿ. ಗೌತಮ್‌ ಪ್ರಭು (ಶಿವಸೇನೆ),
– ಎಂ.ಕೆ. ದಯಾನಂದ (ಪ್ರೌಟಿಸ್ಟ್‌ ಸರ್ವ ಸಮಾಜ),
– ವಿಜಯಕುಮಾರ್‌ (ಸಿಪಿಐ ಎಂಎಲ್‌ ರೆಡ್‌ಸ್ಟಾರ್‌),
– ಸುರೇಶ ಕುಂದರ್‌ (ಉತ್ತಮ ಪ್ರಜಾಕೀಯ ಪಾರ್ಟಿ),
– ಶೇಖರ ಹಾವಂಜೆ (ಆರ್‌ಪಿಐ),
– ಅಬ್ದುಲ್‌ ರೆಹಮಾನ್‌, ಅಮೃತ್‌ ಶೆಣೈ, ಎಂ.ಕೆ. ಗಣೇಶ್‌, ಕೆ.ಸಿ. ಪ್ರಕಾಶ್‌ (ಪ).

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.