ಮಂಡ್ಯದಲ್ಲಿ ಮಂಜುನಾಥ ಸ್ವಾಮಿ ಆಣೆ ಪ್ರಮಾಣದ ರಾಜಕೀಯ?

Team Udayavani, Apr 18, 2019, 3:00 AM IST

ಮಂಡ್ಯ: ಜಿಲ್ಲೆಯಲ್ಲೀಗ ಮತದಾನದ ಮುನ್ನಾದಿನ ಆಣೆ ಪ್ರಮಾಣದ ರಾಜಕಾರಣ ಶುರುವಾಗಿದೆ. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಹೆಸರಿನಲ್ಲಿ ಮತದಾರರನ್ನು ಕಟ್ಟಿ ಹಾಕುವ ಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮೈತ್ರಿಕೂಟದ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಮಾದರಿ ಬ್ಯಾಲೆಟ್‌ ಪೇಪರ್‌ ಜತೆ ಮಂಜುನಾಥಸ್ವಾಮಿ ಫೋಟೋ ಜತೆಗೆ 1000 ರೂ. ಇಟ್ಟಿರುವ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.

ಇದರ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ, ಅಂಬರೀಶ್‌ ಭಾವಚಿತ್ರಕ್ಕೆ ಹೊಂದಿಕೊಂಡಂತೆ ಶ್ರೀ ಮಂಜುನಾಥಸ್ವಾಮಿ ಫೋಟೋ ಅಳವಡಿಸಿ 500 ರೂ. ಹಂಚುತ್ತಿರುವ ಫೋಟೋಗಳೂ ವೈರಲ್‌ ಆಗಿವೆ.

ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ ಎಷ್ಟು ಸತ್ಯಾಂಶವಿದೆಯೋ ಗೊತ್ತಿಲ್ಲ. ಒಬ್ಬರು ಮತ್ತೂಬ್ಬರ ಮೇಲೆ ಗೂಬೆ ಕೂರಿಸುವ ಉದ್ದೇಶದಿಂದ ಈ ಫೋಟೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡಲಾಗಿದೆಯೇ ಎನ್ನುವುದು ಮಾತ್ರ ಗೊತ್ತಾಗಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ