LIVE: ಮಂಗಳೂರು ಮಹಾನಗರ ಪಾಲಿಕೆ ಮತ ಎಣಿಕೆ: ಬಿಜೆಪಿ ಗದ್ದುಗೆ; ಕೈಗೆ ಮುಖಭಂಗ


Team Udayavani, Nov 14, 2019, 8:31 AM IST

bjp

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ ಆರಂಭವಾಗಿದೆ. ನಗರದ ರೋಸಾರಿಯೋ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಭಾರತೀಯ ಜನತಾ ಪಕ್ಷವು 44 ಕ್ಷೇತ್ರಗಳನ್ನು ಗೆದ್ದು ಸರಳ ಬಹುಮತ ಪಡೆಯಿತು. ಮುಖಭಂಗ ಅನುಭವಿಸಿದ ಕಾಂಗ್ರೆಸ್ 14 ಸ್ಥಾನವನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಎಸ್ ಡಿಪಿಐ ಎರಡು ಸ್ಥಾನ ಗಳಿಸಿದರೆ ಜೆಡಿಎಸ್ ಖಾತೆ ತೆರೆಯಲೇ ಇಲ್ಲ.

ಇಲ್ಲಿದೆ ಸಂಪೂರ್ಣ ಮಾಹಿತಿ

ಕೋರ್ಟ್ ವಾರ್ಡ್ ನಲ್ಲಿ ಕಾಂಗ್ರೆಸ್ ನ ವಿನಯರಾಜ್ 1137 ಮತ ಪಡೆದು ಜಯ ಸಾಧಿಸಿದರು. ಬಿಜೆಪಿಯ ರಂಗನಾಥ ಕಿಣಿ 899 ಮತ ಪಡೆದರು.

ಫಳ್ನೀರ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಜೆಸಿಂತಾ ವಿಜಯ ಆಲ್ಫ್ರೆಡ್ 1762 ಮತ ಗಳಿಸಿ ಜಯ ಗಳಿಸಿದ್ದರೆ, ಬಿಜೆಪಿಗೆ ಹೊಸದಾಗಿ ಪಕ್ಷಾಂತರವಾಗಿ ಬಂದಿದ್ದ ಆಶಾ 1423 ಮತ ಗಳಿಸಿದರು.

ಬೆಂಗ್ರೆ ಕ್ಷೇತ್ರದಲ್ಲಿ ಎಸ್ ಡಿಪಿಐ ನ ಮುನೀಬ್ ಬೆಂಗ್ರೆ 1701 ಮತ ಪಡೆದು ಜಯ ಗಳಿಸಿದರು. ಹತ್ತಿರ ಪ್ರತಿಸ್ಪರ್ಧಿ ಗಂಗಾಧರ ಸಾಲ್ಯಾನ್ 1498 ಮತ ಪಡೆದರು, ಕಾಂಗ್ರೆಸ್ ನ ಆಸಿಫ್ ಅಹಮ್ಮದ್ 1192 ಮತ ಪಡೆದರು.

ಮರೋಳಿ ಕ್ಷೇತ್ರದ ಜಿದ್ದಾಜಿದ್ದಿನ ಕಣದಲ್ಲಿ ಕಾಂಗ್ರೆಸ್ ನ ಕೇಶವ ಅವರು 2037 ಮತ ಪಡೆದು ಜಯ ಸಾಧಿಸಿದರು. ಬಿಜೆಪಿಯ ಕಿರಣ್ ಮರೋಳಿ 2011 ಮತ ಪಡೆದು ಕೆವಲ 26 ಮತ ಅಂತರದಿಂದ ಸೋಲನುಭಿಸಿದರು.

ಶಿವಭಾಗ್ ವಾರ್ಡ್ ನಲ್ಲಿ ಬಿಜೆಪಿಯ ಕಾವ್ಯ ನಟರಾಜ ಆಳ್ವ 1731 ಮತ ಪಡೆದು ಜಯ ಸಾಧಿಸಿದರು. ಕಾಂಗ್ರೆಸ್ ನ ಕಿರಣಾ ಜೇಮ್ಸ್ 1690 ಮತ ಪಡೆದು ಸೋಲನುಭವಿಸಿದರು

ಪೋರ್ಟ್ ವಾರ್ಡ್ ನಲ್ಲಿ ಕಾಂಗ್ರೆಸ್ ನ ಅಬ್ದುಲ್ ಲತೀಫ್ 2048 ಮತ ಪಡೆದು ಜಯ ಗಳಿಸಿದರೆ, ಬಿಜೆಪಿಯ ಅನಿಲ್ ಕುಮಾರ್ 1493 ಮತ ಪಡೆದರು.

ದೇರೆಬೈಲ್ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಜಯಲಕ್ಷ್ಮಿ ಶೆಟ್ಟಿ 2233 ಮತ ಪಡೆದರೆ, ಕಾಂಗ್ರೆಸ್ ನ ರೂಪ ಚೇತನ್ 1331 ಮತ ಪಡೆದರು.

ಬಂದರ್ ಕ್ಷೇತ್ರದಲ್ಲಿ ಭಾರಿ ಪೈಪೋಟಿಯ ಸ್ಪರ್ಧೆಯಲ್ಲಿ ಕಾಂಗ್ರೆಸ್ ನ ಝೀನತ್ ಸಂಶುದ್ಧೀನ್ 1308 ಮತ ಪಡೆದು ಜಯ ಸಾಧಿಸಿದರು. ಪ್ರತಿಸ್ಪರ್ಧಿ ಬಿಜೆಪಿಯ ಪ್ರಿಯಾಂಕ 1281 ಮತ ಪಡೆದರೆ, ಜೆಡಿಎಸ್ ರಮೀಜಾ ನಾಸಿರ್ 1150 ಮತ ಪಡೆದರು. ಜಯ ಅಂತರ ಕೇವಲ 27 ಮತಗಳು. ವಿಶೇಷವೆಂದರೆ ನೋಟಾಗೆ 29 ಮತಗಳು ಚಲಾವಣೆಯಾದವು.

ಕುಂಜತ್ತಬೈಲ್ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಸುಮಂಗಳ 3780 ಮತ ಗಳಿಸಿ ಭರ್ಜರಿ ಜಯ ಸಾಧಿಸಿದರು. ಎದುರಾಳಿ ಕಾಂಗ್ರೆಸ್ ನ ಶಾಲಿನಿ ನವೀನ್ 1684 ಮತ ಪಡೆದರು.

ತಿರುವೈಲ್ ಕ್ಷೇತ್ರದಲ್ಲಿ ಬಿಜೆಪಿತ ಹೇಮಲತಾ ರಘು ಸಾಲಿಯಾನ್ 3028 ಮತ ಪಡೆದು ಜಯ ಸಾಧಿಸಿದರೆ, ಕಾಂಗ್ರೆಸ್ ನ ಪ್ರತಿಭಾ ರಾಜ್ ಕುಮಾರ್ ಶೆಟ್ಟಿ 1903 ಮತ ಪಡೆದರು.

ದೇರೆಬೈಲು ಪೂರ್ವ ಕ್ಷೇತ್ರದಲ್ಲಿ ಬಿಜೆಪಿಯ ರಂಜಿನಿ ಕೋಟ್ಯಾನ್ 2849 ಮತ ಗಳಿಸಿ ಜಯ ಸಾಧಿಸಿದರು. ಜ್ಯೋತಿ ಎಲ್ ದೇವಾಡಿಗ ಕಾಂಗ್ರೆಸ್ ನಿಂದ ಸ್ಪರ್ಧಿಸಿ 1583 ಮತ ಪಡೆದರು.

ದೇರೆಬೈಲು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಎಂ ಶಶಿಧರ ಹೆಗ್ಡೆ 2235 ಮತ ಪಡೆದು ಜಯ ಸಾಧಿಸಿದರು. ಬಿಜೆಪಿಯ ಚರಿತ್ ಕುಮಾರ್ 1908 ಮತ ಪಡೆದರು.

ಕೋಡಿಯಾಲ್ ಬೈಲ್ ಕ್ಷೇತ್ರದಲ್ಲಿ ಬಿಜೆಪಿಯ ಸುಧೀರ್ ಶೆಟ್ಟಿ 1846  ಮತ ಗಳಿಸಿ ಜಯ ಸಾಧಿಸಿದರೆ, ಕಾಂಗ್ರೆಸ್ ನ ಪ್ರಕಾಶ್ ಸಾಲಿಯಾನ್ 1661 ಮತ ಪಡೆದರು.

ಮರಕಡ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಲೋಹಿತ್ ಅಮೀನ್ ಅವರು 2055 ಮತ ಗಳಿಸಿ ಜಯ ಸಾಧಿಸಿದರು. ಎದುರಾಳಿ ಕಾಂಗ್ರೆಸ್ ನ ಹರಿನಾಥ 1704 ಮತ ಪಡೆದರು.

ಕದ್ರಿ ದಕ್ಷಿಣ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಯ ಕದ್ರಿ ಮನೋಹರ ಶೆಟ್ಟಿ 1526 ಮತ ಪಡೆದು ಜಯ ಸಾಧಿಸಿದರು. ಕಾಂಗ್ರೆಸ್ ನ ಅಶೋಕ್ ಕುಮಾರ್ ಡಿ ಕೆ 1277 ಮತ ಪಡೆದರು.

ಕಂಬ್ಳ ಕ್ಷೇತ್ರದಲ್ಲಿ ಬಿಜೆಪಿಯ ಲೀಲಾವತಿ 1884 ಮತ ಪಡೆದು ಜಯ ಸಾಧಿಸಿದರು. ಕಾಂಗ್ರೆಸ್ ನ ರೇಖಾ ಸುರೇಖ 318 ಮತ ಪಡೆದರು.

ಇಡ್ಯಾ ಪೂರ್ವ ಕ್ಷೇತ್ರದಲ್ಲಿ ಬಿಜೆಪಿಯ ಸರಿತಾ ಶಶಿಧರ್ 2233 ಮತಗಳಿಸಿ ಜಯ ಸಾಧಿಸಿದರೆ, ಕಾಂಗ್ರೆಸ್ ನ ವಿನಿತಾ ಆರ್ ರಾವ್ 1759 ಮತ ಪಡೆದರು.

ಪಚ್ಚನಾಡಿ ಕ್ಷೇತ್ರದಲ್ಲಿ ಬಿಜೆಪಿಯ ಸಂಗೀತಾ ಆರ್ ನಾಯಕ್ 2708 ಮತ ಪಡೆದು ಜಯ ಸಾಧಿಸಿದರೆ, ಕಾಂಗ್ರೆಸ್ ನ ವಿಶಾಲಾಕ್ಷಿ 1544 ಮತ, ಪಕ್ಷೇತರ ರೇಖಾ ಮೋಹನ್ 1112 ಮತ ಪಡೆದರು.

ಮಣ್ಣಗುಡ್ಡ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಸಂಧ್ಯಾ ಭರ್ಜರಿ ಜಯ ಸಾಧಿಸಿದರು. ಅವರು 3019 ಮತ ಪಡೆದರೆ, ಎದುರಾಳಿ ಕೈ ಪಕ್ಷದ ಮೇಘ್ನ ದಾಸ್ 698 ಮತ ಪಡೆದರು.

ಕಾಟಿಪಳ್ಳ – ಕೃಷ್ಣಾಪುರ ವಾರ್ಡ್ ನಲ್ಲಿ ಬಿಜೆಪಿಯ ಲಕ್ಷ್ಮೀ ಶೇಖರ ದೇವಾಡಿಗ 2675 ಮತ ಗಳಿಸಿ ಜಯ  ಸಾಧಿಸಿದ್ದಾರೆ. ಎದುರಾಳಿ ಕಾಂಗ್ರೆಸ್ ನ ಸವಿತಾ ಶೆಟ್ಟಿ 2127 ಮತ ಪಡೆದರು.

ಕುದ್ರೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಶುದ್ದೀನ್ 1256 ಮತ ಪಡೆದು ಜಯ ಸಾಧಿಸಿದರೆ, ಎಸ್ ಡಿಪಿಐನ ಮಝೈನ್ ಕುದ್ರೋಳಿ 1121 ಮತ ಪಡೆದರು.

ಕಾವೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ 3296 ಮತ ಪಡೆದು ಜಯ ಸಾಧಿಸಿದರೆ, ಎದುರಾಳಿ ಕಾಂಗ್ರೆಸ್ ನ ಭವ್ಯ ಪೂಜಾರಿ 1725 ಮತ ಪಡೆದರು.

ಪಂಜಿಮೊಗರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ 1690 ಮತ ಪಡೆದು ಜಯ ಸಾಧಿಸಿದರೆ, ಎದುರಾಳಿ ಬಿಜೆಪಿಯ ನವೀನ್ ಚಂದ್ರ ಬಿ ಪೂಜಾರಿ 1358 ಮತ, ಸಿಪಿಐಎಂ ನ ಅಹಮದ್ ಬಶೀರ್ 569 ಮತ ಪಡೆದರು.

ಬೋಳೂರು ಅಭ್ಯರ್ಥಿ ಬಿಜೆಪಿ ಜಗದೀಶ್ ಶೆಟ್ಟಿ 2364 ಮತ ಪಡೆದು ಜಯ ಸಾಧಿಸಿದರೆ, ಕಾಂಗ್ರೆಸ್ ನ ಕಮಲಾಕ್ಷ ಸಾಲಿಯಾನ್ 992 ಮತ, ಪಕ್ಷೇತರ ರಾಜಕುಮಾರ್ ಕೋಟ್ಯಾನ್ 757 ಮತ ಪಡೆದರು.

ಇಡ್ಯಾ ಕ್ಷೇತ್ರದಲ್ಲಿ ಬಿಜೆಪಿಯ ನಯನ ಆರ್ ಕೋಟ್ಯಾನ್ 2228 ಜಯ ಗಳಿಸಿದ್ದಾರೆ. ಎದುರಾಳಿ ಕಾಂಗ್ರೆಸ್ ನ ಮಾಜಿ ಮೇಯರ್ ಪ್ರತಿಭಾ ಕುಳಾಯಿ 1710 ಮತ ಪಡೆದರು.

ಕದ್ರಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಶಖಿಲ ಕಾವ 1813 ಮತ ಪಡೆದು ಜಯ ಗಳಿಸಿದರೆ, ಕಾಂಗ್ರೆಸ್ ನ ಮಮತಾ ಶೆಟ್ಟಿ 791 ಮತ ಪಡೆದರು.

ಪಣಂಬೂರು ಕ್ಷೇತ್ರದಲ್ಲಿ ಬಿಜೆಪಿ ಸುನಿತಾ 1236 ಮತ ಪಡೆದರು. ಎದುರಾಳಿ ಕಾಂಗ್ರೆಸ್ ನ ಚಂದ್ರಿಕಾ 1081 ಮತ, ಸಿಪಿಐಎಂನ ಸುನೀತಾ ಕೃಷ್ಣ 888 ಮತ ಪಡೆದರು.

ಕಾಟಿಪಳ್ಳ ಪೂರ್ವ ಕ್ಷೇತ್ರದಲ್ಲಿ ಬಿಜೆಪಿಯ ಲೋಕೇಶ್ ಬೊಳ್ಳಾಜೆ 2486 ಮತ ಪಡೆದು ಜಯಗಳಿಸಿದರು. ಎದುರಾಳಿ ಕಾಂಗ್ರೆಸ್ ಪಕ್ಷದ ಬಶೀರ್ ಅಹಮದ್ 1680 ಮತಗಳು, ನವಾಜ್ ಕಾಟಿಪಳ್ಳ 484 ಮತ, ಪಕ್ಷೇತರ ಹುಸೈನ್ ಕಾಟಿಪಳ್ಳ 67 ಮತ ಪಡೆದರು.

ದೇರೆಬೈಲ್ (ಉತ್ತರ) ಕ್ಷೇತ್ರದಲ್ಲಿ ಬಿಜೆಪಿಯ ಮನೋಜ್ ಕುಮಾರ್ 2146 ಮತ ಪಡೆದರೆ, ಕಾಂಗ್ರೆಸ್ ನ ಮಲ್ಲಿಕಾರ್ಜುನ್ ಎಂ 1930 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ಧಾರೆ.

ಹೈಗೆ ಬಜಾರ್ ಕ್ಷೇತ್ರದಲ್ಲಿ ಬಿಜೆಪಿಯ ರೇವತಿ 2116 ಮತ ಗಳಿಸಿ ಜಯ ಸಾಧಿಸಿದರು. ಎದುರಾಳಿ ಕಾಂಗ್ರೆಸ್ ನ ಶರ್ಮಿಳಾ ಶರತ್ 1238 ಮತ ಪಡೆದರು.

ಕಣ್ಣೂರು ಕ್ಷೇತ್ರದ ಚಂದ್ರಾವತಿ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಸಿ 1862 ಮತ ಪಡೆದು ಜಯ ಸಾಧಿಸಿದರು. ಎದುರಾಳಿ ಕಾಂಗ್ರೆಸ್ ನ ರಜಿಯಾ ಅಬ್ದುಲ್ ಖಾದರದ 1591 ಮತ, ಎಸ್ ಡಿಒಇಐ ನ ಮಿಶ್ರಿಯಾ 990 ಮತ ಪಡೆದರು.

ಪದವು ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ನ  ಅಭ್ಯರ್ಥಿ, ಮಾಜಿ ಮೇಯರ್ ಭಾಸ್ಕರ್ ಕೆ ಅವರು ಜಯ ಗಳಿಸಿದ್ದಾರೆ. ಅವರು 2492 ಮತ ಪಡೆದರೆ, ಬಿಜೆಪಿಯ ಸುಜನ್ ದಾಸ್ ಕೆ 1921 ಮತ ಗಳಿಸಿದರು.

ಇಷ್ಟರವೆಗಿನ ಮತೆಣಿಕೆಯಲ್ಲಿ ಮೊದಲ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಬಿಜೈ ವಾರ್ಡ್ ನಲ್ಲಿ ಲೇನ್ಸ್ ಲೋಟ್ ಪಿಂಟೋ 1939 ಮತ ಪಡೆದು ಜಯ ಗಳಿಸಿದೆರು. ಎದುರಾಳಿ ಬಿಜೆಪಿಯ ಪ್ರಶಾಂತ್ ಆಳ್ವ 1527 ಮತ ಪಡೆದಿದ್ದಾರೆ.

ಸುರತ್ಕಲ್ ಪೂರ್ವ ಕ್ಷೇತ್ರದಲ್ಲಿ ಬಿಜೆಪು ಪಕ್ಷದ ಶ್ವೇತಾ ಎ 2496 ಮತ ಪಡೆದು ಎದುರಾಳಿ ಕಾಂಗ್ರೆಸ್ ನ ಇಂದಿರಾ ವಿರುದ್ದ ಜಯ ಸಾಧಿಸಿದರು. ಇಂದಿರಾ ಅವರು 1133  ಮತ ಪಡೆದರು.

ಮಂಗಳಾದೇವಿ ಕ್ಷೇತ್ರದಲ್ಲಿ ಬಿಜೆಪಿಯ ಪ್ರೇಮಾನಂದ ಶೆಟ್ಟಿ ಭರ್ಜರಿ ಜಯ ಸಾಧಿಸಿದ್ದಾರೆ. ಅವರು 2187 ಮತ ಪಡೆದರೆ ಅವರ ಎದುರಾಳಿ ಕಾಂಗ್ರೆಸ್ ಪಕ್ಷದ  ದಿನೇಶ್ ಬಿ ರಾವ್ 874 ಪತ ಪಡೆದರು. ಜೆಡಿಎಸ್ ನ ಮಹೇಶ್ ರಾವ್ 60 ಮತ, ನೋಟಾ ಪರ 17 ಮತ ಚಲಾವಣೆಯಾಯಿತು.

ಅಳಪೆ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ರೂಪ ಶ್ರೀ 2033 ಮತ ಪಡೆದು ಗೆಲುವು ಸಾಧಿಸಿದರು.  ಎದುರಾಳಿ ಕಾಂಗ್ರೆಸ್ ನ ಶೋಭಾ 2007 ಪತ ಪಡೆದರೆ, 51 ಮತಗಳು ನೋಟಾ ಪಾಲಾದವು.

ವಾರ್ಡ್ ಸಂಖ್ಯೆ 21 ಆಗಿರುವ ಪದವು ಪಶ್ಚಿಮ ಕ್ಷೇತ್ರದ್ಲಲಿ ಬಿಜೆಪಿಯ ವನಿತಾ ಪ್ರಸಾದ್ ಭರ್ಜರಿ ಜಯ ಸಾಧಿಸಿದ್ದಾರೆ. ಅವರು 1051 ಮತ ಪಡೆದರೆ, ಎದುರಾಳಿ ಕಾಂಗ್ರೆಸ್ ನ ಆಶಾಲತಾ 605 ಪಡೆದರು

ಸೆಂಟ್ರಲ್ ಮಾರ್ಕೆಟ್ ವಾರ್ಡ್ ನಲ್ಲಿ ಬಿಜೆಪಿಯ ಪೂರ್ಣಿಮಾ ಭರ್ಜರಿ ಜಯ ಸಾಧಿಸಿದ್ದಾರೆ. ಪೂರ್ಣಿಮಾ ಅವರು 2039 ಮತ ಪಡೆದರೆ ಎದುರಾಳಿ ಕಾಂಗ್ರೆಸ್ ನ ಮಮತಾ ಶೆಣೈ 426 ಮತ ಪಡೆದರು. ಪಕ್ಷೇತರ ಅಭ್ಯರ್ಥಿ 210 ಮತ ಪಡೆದರು.

ಈ ಚುನಾವಣೆಯ ಮೊದಲ ವಾರ್ಡ್ ನ ಫಲಿತಾಂಶ ಹೊರಬಿದ್ದಿದ್ದು, ಸುರತ್ಕಲ್ ಪಶ್ಚಿಮದಲ್ಲಿ ಭಾರತೀಯ ಜನತಾ ಪಕ್ಷದ ಶೋಭಾ ರಾಜೇಶ್ ಜಯ ಗಳಿಸಿದ್ದಾರೆ. ಶೋಭಾ ರಾಜೇಶ್  985 ಮತ ಪಡೆದರೆ, ಕಾಂಗ್ರೆಸ್ ನ ಶಾಂತ ಎಸ್ ರಾವ್ 548 ಮತ ಪಡೆದರು. ಮತ್ತೋರ್ವ ಅಭ್ಯರ್ಥಿ ರೇವತಿ ಪುತ್ರನ್ 760 ಮತ ಪಡೆದರು. ಒಟ್ಟು 21 ನೋಟಾ ಮತಗಳು ಚಲಾವಣೆಯಾಗಿದ್ದವು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.