ಉಪ ಚುನಾವಣೆ ಫಲಿತಾಂಶ ಬಳಿಕ ಸರ್ಕಾರ ಬೀಳಲ್ಲ, ಮತ್ತೆ ಆಪರೇಶನ್ ಕಮಲ: ಹೊರಟ್ಟಿ 

Team Udayavani, Dec 7, 2019, 4:58 PM IST

ಬಾಗಲಕೋಟೆ : ರಾಜ್ಯದಲ್ಲಿ ನಡೆದ ಉಪ ಚುನಾವಣೆ ಫಲಿತಾಂಶ ಬಂದ ಬಳಿಕವೂ ಬಿಜೆಪಿ ಸರ್ಕಾರ ಪತನಗೊಳ್ಳುವುದು ಅನುಮಾನ. ಬಿಜೆಪಿ ಕಡಿಮೆ ಸ್ಥಾನ ಗೆದ್ದರೆ ಮತ್ತೆ ಆಪರೇಶನ್ ಕಮಲ ಮಾಡಿ, ಸರ್ಕಾರ ಉಳಿಸಿಕೊಳ್ಳುತ್ತಾರೆ ಎಂದು ವಿಧಾನಪರಿಷತ್ ಸದಸ್ಯ, ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿದರು.

ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಏಳು ಸ್ಥಾನ ಗೆದ್ದರೆ ಸರ್ಕಾರಕ್ಕೆ ಏನೂ ಆಗಲ್ಲ. 4ರಿಂದ 5 ಸ್ಥಾನ ಬಂದರೆ ಮಾತ್ರ ಸರ್ಕಾರಕ್ಕೆ ಗಂಡಾಂತರವಿದೆ. ಆ ವೇಳೆ ಇನ್ನೊಬ್ಬರ ಜೊತೆಗೆ ಸರ್ಕಾರ ರಚಿಸಬೇಕಾಗುತ್ತದೆ. ಇಲ್ಲದಿದ್ದರೆ ಯಡಿಯೂರಪ್ಪ ಅವರು ರಾಜಿನಾಮೆ ನೀಡಬೇಕಾಗುತ್ತದೆ. ಹೀಗಾಗಿ ಉಪ ಚುನಾವಣೆ ಫಲಿತಾಂಶದ ಬಳಿಕ ಯಡಿಯೂರಪ್ಪ ರಾಜಿನಾಮೆ ಕೊಡುತ್ತಾರೆ ಎಂಬ ಚರ್ಚೆ ಸಧ್ಯಕ್ಕೆ ಅಪ್ರಸ್ತುತ ಎಂದರು.

ಯಾರಿಗೂ ಚುನಾವಣೆ ಬೇಕಿಲ್ಲ 

ಮೂರು ಪಕ್ಷಗಳ ಶಾಸಕರಿಗೂ ಈಗ ಚುನಾವಣೆಗೆ ಹೋಗಲು ಮನಸ್ಸಿಲ್ಲ. ಚುನಾವಣೆಗೆ ಹೋಗಲೇಬೇಕಾದ ಪ್ರಸಂಗ ಬಂದರೆ, ಯಾರು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಸರ್ಕಾರದ ಬಗ್ಗೆ ಈಗಲೇ ಏನೂ ಹೇಳಲು ಆಗಲ್ಲ. ನನ್ನ ಅನುಭವದ ಪ್ರಕಾರ, ಬಿಜೆಪಿ ಸರ್ಕಾರಕ್ಕೆ ಏನೂ ಆಗಲ್ಲ. ಎಲ್ಲರೂ ಕೂಡಿ ಸರ್ಕಾರ ನಡೆಸುತ್ತಾರೆ ಎಂದು ಹೇಳಿದರು.

ಅನರ್ಹರಿಗೆ ಚುನಾವಣೆಗೆ ನಿಲ್ಲಲು ಸುಪ್ರೀಮ್ ಕೋರ್ಟ ಅವಕಾಶ ನೀಡಿದೆ. ಇದು ಪಕ್ಷಾಂತರ ಕಾಯಿದೆಯಿಂದ ಏನೂ ಆಗಲ್ಲ ಎಂಬ ಭಾವನೆ ಬರುತ್ತಿದೆ. ನನ್ನ ಅನಿಸಿಕೆ ಪ್ರಕಾರ, ಬಿಜೆಪಿ ಸರ್ಕಾರ ಹೋಗುವುದಿಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿ ಏಳು ಸ್ಥಾನ ಗೆದ್ದರೆ, ಮತ್ತೆ ಎಷ್ಟು ಶಾಸಕರು ಬಿಜೆಪಿಗೆ ಹೋಗುತ್ತಾರೆ ಎಂಬುದು ಗೊತ್ತಿಲ್ಲ. ಕಡಿಮೆ ಸ್ಥಾನ ಗೆದ್ದರೆ ಮತ್ತೆ ಆಪರೇಶನ್ ಕಮಲ ಆಗುತ್ತದೆ ಎಂದರು.

ಯಾವುದೇ ಸಮೀಕ್ಷೆಗಳು ಇಲ್ಲಿಯ ವರೆಗೆ ನಿಖರವಾಗಿ ಬಂದಿಲ್ಲ. ಮಹಾರಾಷ್ಟ್ರದಲ್ಲಿ ಸಮೀಕ್ಷೆ ಸುಳ್ಳಾಗಿದೆ. ಸಮೀಕ್ಷೆಗಳು ಒಂದೇ ತೆರನಾಗಿ ಇರುವುದಿಲ್ಲ. ಒಂದೊಂದು ಏರಿಯಾದಲ್ಲಿ ಒಂದೊಂದು ಸಮೀಕ್ಷೆ ಮಾಡುತ್ತಾರೆ. ಆ ಹಿನ್ನೆಲೆಯಲ್ಲಿ ಸಮೀಕ್ಷೆಗಳು 100ಕ್ಕೆ 100ರಷ್ಟು ಒಪ್ಪಲು ಆಗಲ್ಲ. ಈ ಉಪ ಚುನಾವಣೆಯಲ್ಲಿ ಜೆಡಿಎಸ್ 3 ಸ್ಥಾನ ಗೆಲ್ಲುವುದು ಶತಸಿದ್ಧ ಎಂದು ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ದೇಶ-ಭಾಷೆಯ ಪ್ರೇಮವನ್ನು ಸಾರುವ, ವ್ಯಕ್ತಿತ್ವ-ಅಭಿಪ್ರಾಯವನ್ನು ಬಿಂಬಿಸುವ, ಓದಿದ ಕೂಡಲೇ ವಾವ್‌ ಅನ್ನಿಸುವ ಚಂದದ ಸಾಲುಗಳನ್ನು ವಸ್ತ್ರದ ಮೇಲೆ ಮೂಡಿಸಿಕೊಳ್ಳಬಹುದು....

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...

  • ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ "ಸ್ಲಿಮ್‌ ಸೂತ್ರ'ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು...