ಒಂದೇ ಮಂಟಪದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ!
Team Udayavani, Jul 11, 2020, 3:08 PM IST
ಭೋಪಾಲ್: ಬಹುಶಃ ವಿಶ್ವದಲ್ಲೇ ಈತ ಅದೃಷ್ಟದ ಹುಡುಗ. ಗರ್ಲ್ ಫ್ರೆಂಡ್ ಹಾಗೂ ವಧುವಿಗೆ ಒಂದೇ ವಿವಾಹ ಮಂಟಪದಲ್ಲಿ ತಾಳಿ ಕಟ್ಟಿ ಪೌರುಷ ಮೆರೆದಿದ್ದಾನೆ! ಮಧ್ಯಪ್ರದೇಶದ ಘೋಡಡೋಂಗ್ರಿ ಹಳ್ಳಿಯಲ್ಲಿ ಸಂದೀಪ್ ಉಯಿಕೆ ಎಂಬಾತ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರು ಮಹಿಳೆಯರ ಕೈಹಿಡಿದಿದ್ದಾನೆ.
ಬುಡಕಟ್ಟು ಜನಾಂಗದ ಯುವಕ ಭೋಪಾಲ್ನಲ್ಲಿ ಓದುತ್ತಿದ್ದಾಗ ಹೋಶಂಗಾಬಾದ್ನ ಯುವತಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಆದರೆ, ಕುಟುಂಬಸ್ಥರು ತಾವು ನಿರ್ಧರಿಸಿದ ಹುಡುಗಿಯನ್ನು ಮದುವೆ ಆಗುವಂತೆ ಪಟ್ಟು ಹಿಡಿದಿದ್ದರು. ಈ ಸಂಬಂಧ ಊರಿನ ಮುಖಂಡರು ಪಂಚಾಯ್ತಿ ನಡೆಸಿದ್ದರು. ಗರ್ಲ್ ಫ್ರೆಂಡ್, ಸಂಬಂಧಿಕರ ಹುಡುಗಿ ಇಬ್ಬರೂ ಸಂದೀಪ್ ಜತೆಗೆ ಒಟ್ಟಿಗೆ ಸಂಸಾರ ನಡೆಸಲು ಒಪ್ಪಿಕೊಂಡಿದ್ದರಿಂದ, ಹುಡುಗನ ಅದೃಷ್ಟ ಬದಲಾಗಿದೆ.
ಆದರೆ ಕೋವಿಡ್ ಆತಂಕದ ನಡುವೆ ಮದುವೆಗೆ ಅನುಮತಿ ಪಡೆಯದೆ, ಅಪಾರ ಬಂಧುಗಳನ್ನು ಸೇರಿಸಿದ್ದರಿಂದ ಹುಡುಗನ ಮೇಲೆ ತಹಶೀಲ್ದಾರ್ ಪ್ರಕರಣ ದಾಖಲಿಸಿದ್ದಾರೆ.