ಮಳೆ ಬಂದರಷ್ಟೇ ತಮಿಳುನಾಡಿಗೆ ಕಾವೇರಿ ನೀರು
Team Udayavani, Jun 26, 2019, 5:40 AM IST
ಬೆಂಗಳೂರು: ಕಾವೇರಿ ನೀರು ಬಿಡಿ ಎಂಬ ತಮಿಳುನಾಡು ಸರಕಾರದ ಮೊಂಡಾಟಕ್ಕೆ ಬೆಲೆ ನೀಡದ ಕಾವೇರಿ ನೀರು ನಿರ್ವಹಣ ಪ್ರಾಧಿಕಾರ, ಮಳೆ ಬಂದರಷ್ಟೇ ತಮಿಳುನಾಡಿಗೆ ಜೂನ್-ಜುಲೈ ತಿಂಗಳ ಕೋಟಾದ ನೀರು ಬಿಡಿ ಎಂದು ಆದೇಶ ನೀಡಿದೆ. ಈ ಮೂಲಕ ಕರ್ನಾಟಕ ‘ಕಾವೇರಿ’ ನಿಟ್ಟುಸಿರು ಬಿಟ್ಟಿದೆ.
ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ಅಧ್ಯಕ್ಷತೆಯಲ್ಲಿ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ವಾದ ಆಲಿಸಿ ಸಂಕಷ್ಟ ಪರಿಸ್ಥಿತಿ ಇರುವುದರಿಂದ ಮಳೆ ಬಂದರೆ ನೀರು ಬಿಡುಗಡೆ ಮಾಡಿ ಎಂದು ನಿರ್ದೇಶನ ನೀಡಿತು.
ಈ ಮೂಲಕ ಜೂನ್ ತಿಂಗಳ 9.19 ಟಿಎಂಸಿ ನೀರು ಬಿಡುಗಡೆಗೆ ಪಟ್ಟು ಹಿಡಿದಿದ್ದ ತಮಿಳುನಾಡಿನ ವಾದಕ್ಕೆ ಮನ್ನಣೆ ಸಿಗದಿರುವುದು ಕರ್ನಾಟಕಕ್ಕೆ ತುಸು ನಿರಾಳ ತಂದಿದೆ.
ತಮಿಳುನಾಡು ವಾದವೇನು?
ಜೂನ್ ತಿಂಗಳ 9.19 ಟಿಎಂಸಿ ನೀರು, ಜುಲೈ ತಿಂಗಳ ಕೋಟಾ 31.24 ಟಿಎಂಸಿ ನೀರು ಕೊಡಬೇಕು. ಮೆಟ್ಟೂರು ಅಣೆಕಟ್ಟೆಗೆ ಕರ್ನಾಟಕ ನೀರು ಬಿಟ್ಟಿಲ್ಲ. ನಮ್ಮ ರೈತರು ಕಾವೇರಿ ನೀರು ನಂಬಿಕೊಂಡಿದ್ದಾರೆ. ಕಳೆದ ಸಭೆಯಲ್ಲಿ ಪ್ರಾಧಿಕಾರ 9.19 ಟಿಎಂಸಿ ನೀರು ಬಿಡಲು ಸೂಚಿಸಿತ್ತು. ಕಳೆದ 20 ದಿನಗಳಲ್ಲಿ ಕೇವಲ 1.77 ಟಿಎಂಸಿ ನೀರು ಮಾತ್ರ ಬಂದಿದೆ. ಕರ್ನಾಟಕ ಪ್ರಾಧಿಕಾರದ ಸೂಚನೆಯನ್ನು ಗಾಳಿಗೆ ತೂರಿದೆ. ಜೂನ್ ತಿಂಗಳ ನೀರಿನ ಜತೆಗೆ ಜುಲೈ ನೀರನ್ನು ಬಿಡಲು ಸೂಚಿಸಿ ಎಂದು ತಮಿಳುನಾಡು ವಾದ ಮಂಡಿಸಿತು.
ನಮ್ಮಲ್ಲೇ ನೀರಿಲ್ಲ ಎಂದ ರಾಜ್ಯ
ಮುಂಗಾರು ವಿಳಂಬದಿಂದ ಕರ್ನಾಟಕ ತೀವ್ರ ಬರ ಎದುರಿಸುತ್ತಿದೆ. ಹಾರಂಗಿ, ಕಬಿನಿ, ಹೇಮಾವತಿ, ಕೆ.ಆರ್.ಎಸ್. ಅಣೆಕಟ್ಟೆಗಳಿಗೆ ನೀರು ಬಂದಿಲ್ಲ. ಇದರ ನಡುವೆಯೂ ತಮಿಳುನಾಡಿಗೆ 1.88 ಟಿಎಂಸಿ ನೀರು ಹರಿಸಲಾಗಿದೆ. ಕಳೆದ ವರ್ಷ ಜೂನ್ 1ರಿಂದ 20ರ ವರೆಗೆ ನಾಲ್ಕೂ ಜಲಾಶಯಗಳಲ್ಲಿ 68 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಬಾರಿ ನೀರು ಸಂಗ್ರಹವಾಗಿಲ್ಲ, 1.77 ಟಿಎಂಸಿ ಮಾತ್ರ ಒಳಹರಿವು ಇದೆ. ಮುಂದೆ ಮಳೆ ಬಂದರೆ ತಮಿಳುನಾಡಿಗೆ ನೀರು ಬಿಡಲು ತಕರಾರಿಲ್ಲ . ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಸದಾ ಸಿದ್ಧ ಎಂದು ಕರ್ನಾಟಕ ವಾದ ಮಂಡಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿಎಂ ದಾವೋಸ್ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ
ತಪ್ಪುಗಳನ್ನು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ
ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು; 91.07 ಲಕ್ಷ ಕೆ.ಜಿ. ಹಾಲು ಶೇಖರಣೆ
ರಾಜ್ಯದಲ್ಲಿ ಕಾಂಗ್ರೆಸ್ “ಚಿಂತನ ಶಿಬಿರ’: ಕೆಪಿಸಿಸಿ ಸಮಿತಿ ರಚನೆ
ಶಿರಸಿಯ ರಂಗಭೂಮಿ ಕಲಾವಿದೆ ಶೀತಲ್ ಶ್ರೀಪಾದ ಭಟ್ ಅವರಿಗೆ ಕೆನಡಾದ ಲಿಟರರಿ ಅವಾರ್ಡ್
MUST WATCH
ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ
IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್
Wheel Chair Romeo actor exclusive interview | RELEASING ON MAY 27TH
ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?
ಹೊಸ ಸೇರ್ಪಡೆ
ಬೆಳ್ತಂಗಡಿ ತಾಲೂಕಿಗೆ ಜಿಲ್ಲಾಧಿಕಾರಿ ಭೇಟಿ: ಚಾರ್ಮಾಡಿ ಘಾಟಿ, ಭೂಕುಸಿತ ಪ್ರದೇಶ ಪರಿಶೀಲನೆ
ಈಡನ್ನಲ್ಲಿ ಆರ್ಸಿಬಿ ರಜತ ವೈಭವ; ಹೊರಬಿದ್ದ ಲಕ್ನೋ ಸೂಪರ್ ಜೈಂಟ್ಸ್
ಸಿಎಂ ದಾವೋಸ್ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ
ತಪ್ಪುಗಳನ್ನು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ
ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು; 91.07 ಲಕ್ಷ ಕೆ.ಜಿ. ಹಾಲು ಶೇಖರಣೆ