ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಮತದಾರರಲ್ಲಿ ಆಣೆ ಪ್ರಮಾಣ ಮಾಡಿಸಿದ ಮುಖಂಡ : ವಿಡಿಯೋ ವೈರಲ್
Team Udayavani, Dec 9, 2021, 2:50 PM IST
ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಿರ್ದಿಷ್ಠ ವ್ಯಕ್ತಿಯೋರ್ವರಿಗೆ ಮತ ನೀಡಲು ಮುಖಂಡರು, ಮತದಾರರಿಗೆ ಆಮಿಷವೊಡ್ಡಿ ಆಣೆ- ಪ್ರಮಾಣ ಮಾಡಿಸಿದ್ದಾರೆ ಎನ್ನಲಾಗಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ರಾಜಕೀಯ ಪಕ್ಷವೊಂದರ ಮುಖಂಡರು, ಮತದಾರರಿಗೆ ಹಣದ ಕವರ್ ನೀಡಿ ಪವಿತ್ರ ಯಾತ್ರಾ ಸ್ಥಳವೊಂದರ ಲಾಡು ನೀಡಿ, ದೇವರ ´ೋಟೋ ಮೇಲೆ ಪ್ರಮಾಣ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಬಿಜೆಪಿ ಮುಖಂಡರ ಫಾರಂ ಹೌಸ್‌ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಬೆಂಬಲಿತ ಮತದಾರರಿಗೆ ಆಣೆ ಪ್ರಮಾಣ ಮಾಡಿಸಲಾಗಿದೆ ಎಂದು ಜಿಲ್ಲೆಯ ನಾಗರಿಕರು ಆರೋಪಿಸುತ್ತಿದ್ದಾರೆ. ಬಾಗೇಪಲ್ಲಿ ತಾಲೂಕಿನ ಮುಖಂಡರೊಬ್ಬರು ಮತದಾರರ ಕೈಯನ್ನು ದೇವರ ಫೋಟೋ ಮೇಲೆ ಇರಿಸಿ “ಅಭ್ಯರ್ಥಿ ಡಾ.ವೇಣು ಗೋಪಾಲ್ ಅವರಿಗೆ ಮತ ನೀಡುತ್ತೇನೆ’ ಎಂದು ತೆಲುಗು ಭಾಷೆಯಲ್ಲಿರುವ ವಿಡಿಯೋ ಬಹಿರಂಗವಾಗಿದೆ. ಆದರೆ, ಸತ್ಯಾಸತ್ತತೆ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.ಈ ನಡುವೆಯೇ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೇಣು ಗೋಪಾಲ್‌ರಿಗೆ ಮತ ಹಾಕಲು ಆಮಿಷ ನೀಡಲಾಗುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಇದನ್ನೂ ಓದಿ : ಚುನಾವಣೆಗಳಲ್ಲಿ ಸೋಲುವ ಭೀತಿ, ತೆನೆ-ಕಮಲ ಹೊಂದಾಣಿಕೆ ನಾಟಕ ಬಯಲು : ಸಿದ್ದರಾಮಯ್ಯ
ಜಿಲ್ಲೆಯ ಹಲವಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಬೆಂಬಲಿತ ಸದಸ್ಯರಿಗೆ ಹಣದ ಆಮಿಷ ನೀಡಿ ಸೆಳೆಯಲಾಗುತ್ತಿದೆಯೆಂದು ದೂರಿದ್ದಾರೆ. ಆದರೆ, ಹಣದ ಆಮಿಷ ನೀಡಿ ದೇವರ ಫೋಟೋ ಮೇಲೆ ಪ್ರಮಾಣ ಮಾಡಿಸಿರುವ ಕುರಿತು ಯಾವುದೇ ದೂರು ದಾಖಲಾಗಿಲ್ಲ.