ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

ಸಂಕಷ್ಟದಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯ

Team Udayavani, Aug 1, 2021, 9:00 PM IST

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

ವಾಡಿ (ಚಿತ್ತಾಪುರ): ಶಾಲೆಗೆ ಬೀಗ ಬಿದ್ದು ವರ್ಷ ಕಳೆದಿದೆ. ತರಗತಿ ಕೋಣೆಗಳಲ್ಲೀಗ ಮದ್ಯದ ಬಾಟಲಿ ಬಿದ್ದಿವೆ. ಆಟದ ಅಂಗಳದಲ್ಲಿ ದನ ಕರುಗಳು ಹುಲ್ಲು ಮೇಯುತ್ತಿವೆ. ಪಾಠಗಳಿಂದ ದೂರ ಉಳಿದ ವಿದ್ಯಾರ್ಥಿಗಳು ತಮ್ಮದೇ ಶಾಲೆ ಮುಂದೆ ಹಸುಗಳ ಮಧ್ಯೆ ಮೈಮರೆತಿದ್ದಾರೆ. ಬೂಟು, ಬೆಲ್ಟು, ಟಾಯ್ ಧರಿಸಿ ಪುಸ್ತಕ ಹಿಡಿದಿರುತ್ತಿದ್ದ ಗ್ರಾಮೀಣ ಮಕ್ಕಳು ಈಗ ಊಟದ ಬುತ್ತಿ ಬೆತ್ತ ಹಿಡಿದು ದನಗಳ ಹಿಂದೆ ಓಡುತ್ತಿದ್ದಾರೆ!

ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗವು ವಿಶೇಷವಾಗಿ ಹಳ್ಳಿಗಾಡಿನ ವಿದ್ಯಾವಂತ ಹುಡುಗರ ಬಾಳಿನ ಮೇಲೆ ಕ್ರೌರ್ಯ ಮೆರೆದಿರುವುದು ವಾಸ್ತವ ಸತ್ಯ. ಅಕ್ಷರ ಬೆಳಕು ಬಾಳಿಗೆ ಹರಡಲು ಬಾ ಮರಳಿ ಶಾಲೆಗೆ ಎನ್ನುತ್ತಿದ್ದ ಸರಕಾರ ಸೋಂಕಿನ ಭೀತಿಯಲ್ಲಿ ಶಾಲೆಗೆ ಬೀಗ ಜಡಿದಿದೆ. ಮಾರುಕಟ್ಟೆ, ಮಾಲ್, ಹಾಲ್ ಕಾರ್ಯಕ್ರಮಕ್ಕೆ ಹಾರ್ದಿಕ ಸ್ವಾಗತವಿದ್ದರೂ ಶಾಲೆಗಳು ಮಾತ್ರ ಮಕ್ಕಳ ಕರೆಗೆ ಓಗೊಡುತ್ತಿಲ್ಲ. ಶಾಲೆ, ಶಿಕ್ಷಣ ಮತ್ತು ಶಿಕ್ಷಕರಿಂದ ದೀರ್ಘ ಕಾಲ ದೂರ ಉಳಿದ ಮಕ್ಕಳ ಮಾನಸಿಕ ಸ್ಥಿತಿಮಿತಿ ಹದಗೆಟ್ಟಿದೆ. ಮಕ್ಕಳ ಕಾಳಜಿಯಿಂದ ಸೋಂಕಿಗೆ ಸರಕಾರ ಹೆದರಿದರೂ ಹಸಿವಿಗೆ ಹೆದರಿದ ಪೋಷಕರು ಮಕ್ಕಳನ್ನು ಹಸುಗಳ ಹಿಂದೆ ಕಳುಹಿಸುತ್ತಿದ್ದಾರೆ. ಆತಂಕವಿಲ್ಲದೆ ಮಳೆ, ಗಾಳಿ, ಬಿಸಿಲಿನಲ್ಲಿ ವಿದ್ಯಾರ್ಥಿಗಳು ದನ ಕಾಯುವ ಕಾಯಕ ಮುಂದುವರೆಸಿರುವ ಕಳವಕಾರಿ ಪ್ರಸಂಗಗಳು ಎಲ್ಲೆಡೆ ಕಂಡು ಬರುತ್ತಿವೆ.

ಸಮರ್ಪಕವಾದ ಕಂಪೌಂಡ್ ಸೌಲಭ್ಯವಿಲ್ಲದ ಕಾರಣ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಮಕ್ಕಳ ಆಟದ ಮೈದಾನ ಅಕ್ಷರಶಃ ಗೋಮಾಳವಾಗಿ ಪರಿವರ್ತನೆಯಾಗಿದೆ. ತಾವು ಪಾಠ ಕೇಳಲು ಬರುತ್ತಿದ್ದ ಶಾಲೆಯ ಅಂಗಳದಲ್ಲಿ ತಾವೇ ದನಕಾಯುವ ಪರಸ್ಥಿತಿ ಬರುತ್ತದೆ ಎಂದು ವಿದ್ಯಾರ್ಥಿಗಳು ಕನಸು ಮನಸ್ಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಈ ಮನಕಲುಕುವ ಘಟನೆಗಳು ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಾಗಿವೆ. ಕೆಟ್ಟ ಕರಾಳ ದಿನಗಳು ವಿದ್ಯಾರ್ಥಿ ಸಮುದಾಯವನ್ನು ಕಾಡುತ್ತಿದ್ದು, ಜಾನುವಾರುಗಳಿಗೆ ಮೇವು ತಿನ್ನಿಸುವಲ್ಲಿ ಶಿಕ್ಷಣಾರ್ಥಿಗಳು ದಿನಗಳೆಯುತ್ತಿದ್ದಾರೆ. ಮನೆಯ ದನಗಳ ಜತೆಗೆ ಊರಿನ ದನಗಳನ್ನೂ ಕೂಲಿಗಾಗಿ ಕಾಯಲು ಮುಂದಾಗಿದ್ದಾರೆ. ಶಾಲೆಗಳು ಅನೈತಿಕ ಚಟುವಟಿಕೆಗಳ ತಾಣವಾಗಿರುವುದು ಒಂದೆಡೆಯಾದರೆ, ವಿದ್ಯಾರ್ಥಿಗಳು ಜೀವನೋಪಾಯಕ್ಕೆ ಅನ್ಯಮಾರ್ಗ ತುಳಿದಿರುವ ಆತಂಕ ಇನ್ನೊಂದೆಡೆ. ಒಟ್ಟಾರೆ ಹಳ್ಳಿಗಳಲ್ಲಿ ಶಾಲೆ ಮರೆತ ಹಾಲುಗಲ್ಲದ ಹಸುಳೆಗಳು ಈಗ ಹಸು ಕಾಯುವ ಜೀತದಾಳುಗಳಂತೆ ಗೋಚರಿಸುತ್ತಿದ್ದಾರೆ.

“ಶಾಲೆ ತರೆಯದೆ ವರ್ಷ ಕಳೆಯಿತು. ಆಟದ ಅಂಗಳದಲ್ಲಿ ಸಾಕಷ್ಟು ಹುಲ್ಲು ಮುಳ್ಳುಕಂಟಿ ಬೆಳೆದಿದೆ. ಊರಿನ ಪುಂಡ ಹುಡುಗರೆಲ್ಲ ಸಂಜೆಯಾಗುತ್ತಿದ್ದಂತೆ ಶಾಲೆಗೆ ನುಗ್ಗುತ್ತಾರೆ. ಮದ್ಯ ಕುಡಿದು ಬಾಟಲು ಬೀಸಾಡುತ್ತಾರೆ. ಪರಿಣಾಮ ಇಡೀ ಶಾಲಾ ಆವರಣದಲ್ಲಿ ಗಾಜುಗಳು ಹರಡಿಕೊಂಡಿವೆ. ಕಂಪೌಂಡ್ ನಿರ್ಮಾಣ ಅರ್ಧಂಬರ್ಧ ಆಗಿದ್ದರಿಂದ ದನಕರುಗಳು ಶಾಲೆಗೆ ಬರುತ್ತವೆ. ಶಾಲೆ ವಂಚಿತ ಮಕ್ಕಳು ಅನಿವಾರ್ಯವಾಗಿ ದನ ಕಾಯಲು ಹೋಗುತ್ತಿವೆ. ಸಣ್ಣಪುಟ್ಟ ಕೆಲಸ ಮಾಡುತ್ತ ತಂದೆ ತಾಯಿಯರಿಗೆ ನೆರವಾಗುತ್ತಿದ್ದಾರೆ. ಮಕ್ಕಳ ಪಾಲಿಗೆ ಬಹಳ ಕೆಟ್ಟ ಇನಗಳು ಬಂದಿವೆ. ಶಾಲೆಗೆ ಸೂಕ್ತ ಕಂಪೌಂಡ್ ವ್ಯವಸ್ಥೆಯಾಗಬೇಕು.”

-ಭೀಮಣ್ಣ ಕೇಸಬಳ್ಳಿ. ಎಸ್‌ಡಿಎಂಸಿ ಅಧ್ಯಕ್ಷ, ಸರಕಾರಿ ಪ್ರೌಢ ಶಾಲೆ ರಾವೂರ.

– ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.