ಸದಾಶಿವ ಆಯೋಗ ಜಾರಿಗೆ ವಿರೋಧ : DSS ಕಾರ್ಯಕರ್ತರಿಂದ ಸಚಿವ ಚವ್ಹಾಣ್ ವಾಹನ ತಡೆದು ಪ್ರತಿಭಟನೆ
Team Udayavani, Sep 1, 2021, 1:10 PM IST
ಕೊಪ್ಪಳ: ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧದ ಹೇಳಿಕೆ ನೀಡಿದ ಸಚಿವ ಪ್ರಭು ಚವ್ಹಾಣ್ ಅವರ ಹೇಳಿಕೆ ವಿರೋಧಿಸಿ ಕೊಪ್ಪಳದಲ್ಲಿ ಡಿಎಸ್ಎಸ್ ಮುಖಂಡರು ಸಚಿವರ ವಾಹನ ತಡೆದು ಪ್ರತಿಭಟನೆ ನಡೆಸಿದರು.
ಸಚಿವರು ನಿನ್ನೆ ಕೊಪ್ಪಳ ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಸದಾಶಿವ ವರದಿ ಜಾರಿಗೆ ವಿರೋಧವಿದೆ ಎಂದು ಹೇಳಿಕೆ ನೀಡಿದ್ದರು.
ಇಂದು ಕೊಪ್ಪಳದ ಡಿಸಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲು ಆಗಮಿಸಿದ್ದ ವೇಳೆ ಸಚಿವರಿಗೆ ಡಿಎಸ್ ಎಸ್ ಮುಖಂಡರು ಕಪ್ಪು ಪಟ್ಟಿ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.
ಬಳಿಕ ಸಚಿವರ ವಿರುದ್ಧ ಘೋಷಣೆ ಕೂಗಿ ವಾಹನಕ್ಕೆ ಮುತ್ತಿಗೆ ಹಾಕಲು ಯತ್ನ ನಡೆಸಿದರು ಆದರೆ ಪೊಲೀಸರು ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಬಂಧಿಸಿದರು.
ಕೆಲ ನಿಮಿಷ ಪೊಲೀಸರ ಭದ್ರತೆಯಲ್ಲಿಯೇ ಕಾರಿನಲ್ಲಿ ಕುಳಿತಿದ್ದ ಸಚಿವ ಚವ್ಹಾಣ್ ಅವರು. ಡಿಎಸ್ ಎಸ್ ಕಾರ್ಯಕರ್ತರ ಬಂಧನದ ಬಳಿಕ ಡಿಸಿ ಕಚೇರಿಗೆ ಪ್ರಯಾಣ ಬೆಳೆಸಿದರು.
ಇದನ್ನೂ ಓದಿ :ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ ಸುಮಲತಾ : ಅಭಿಷೇಕ್ ರಾಜಕೀಯ ಭವಿಷ್ಯಕ್ಕೆ ಮುನ್ನುಡಿ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಾವೋಸ್ ಪ್ರವಾಸ ಯಶಸ್ವಿ, ರಾಜ್ಯದಲ್ಲಿ 5 ಲಕ್ಷ ಕೋಟಿ ರೂ ಬಂಡವಾಳ ಹೂಡಿಕೆ ನಿರೀಕ್ಷೆ: ನಿರಾಣಿ
ಕಾರು- ಲಾರಿ ಢಿಕ್ಕಿ: ಮಹಿಳೆ ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು!
ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರರ ಮೇಲೆ ಹಲ್ಲೆ ನಡೆಸಿದ ಎಂಇಎಸ್ ಪುಂಡರು
ದಾವೋಸ್ ಪ್ರವಾಸದಿಂದ ಹಿಂತಿರುಗಿದ ಸಿಎಂ ಬಸವರಾಜ ಬೊಮ್ಮಾಯಿ
ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು