ಜುಲೈ 1 ರಿಂದ 3 ರವರೆಗೆ ಅರಮನೆ ಮೈದಾನದಲ್ಲಿ ಎಲೆಕ್ಟ್ರಿಕ್ ವೆಹಿಕಲ್ಸ್ ಎಕ್ಸ್ಪೋ
ಉತ್ಪಾದಕರು, ಬಳಕೆದಾರರ ಮುಖಾಮುಖಿಗೆ ʼಇವಿʼ
Team Udayavani, Jun 29, 2022, 4:24 PM IST
ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಬಳಕೆ ಕುರಿತು ಸಾರ್ವಜನಿಕರಿಗೆ ಇನ್ನಷ್ಟು ಅರಿವು ಮೂಡಿಸಲು ಕರ್ನಾಟಕ ಸರಕಾರ ಜುಲೈ 1 ರಿಂದ 6 ರವರೆಗೆ ಒಂದು ವಾರದ ಇವಿ ಅಭಿಯಾನವನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ ಬೆಸ್ಕಾಂ ಜುಲೈ 1ರಿಂದ ಜುಲೈ 3 ರವರೆಗೆ ಅರಮನೆ ಮೈದಾನದ ʼಚಾಮರ ವಜ್ರʼ ಸಭಾಂಗಣದಲ್ಲಿ ʼಇವಿ ಎಕ್ಸ್ಪೋ ಆಯೋಜಿಸಿದೆ.
ಇವಿ ಚಾರ್ಜಿಂಗ್ ಸ್ಟೇಷನ್ ಗಳ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಲು ಬೆಸ್ಕಾಂ ಈಗಾಗಲೇ ಇವಿ ಮಿತ್ರ ಆಪ್ ತಯಾರಿಸಿದ್ದು, ಬೆಸ್ಕಾಂ ಪ್ರಯತ್ನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಸ್ಕಾಂ ಚಾರ್ಜಿಂಗ್ ಸ್ಟೇಷನ್ ಗಳ ಕುರಿತು ಸಂಪೂರ್ಣ ಮಾಹಿತಿ ಇವಿ ಆಪ್ ನಲ್ಲಿ ಲಭ್ಯವಿದೆ.
ಕೇಂದ್ರ ಮತ್ತು ಕರ್ನಾಟಕ ಸರಕಾರ ಹಸಿರು ಇಂಧನ ಬಳಕೆಗೆ ಜನರನ್ನು ಉತ್ತೇಜಿಸುತ್ತಿದ್ದು, ಆಧುನಿಕ ತಂತ್ರಜ್ಞಾನ ಹಾಗು ವಿಮೆ ವಿನಾಯಿತಿ ಮೊದಲಾದ ಪೂರಕ ವಾತಾವರಣ ಕಲ್ಪಿಸುವ ಮೂಲಕ ವಿದ್ಯುತ್ ಚಾಲಿತ ವಾಹನಗಳ ಹೊಸ ಅಲೆ ದೇಶದಲ್ಲಿ ಸೃಷ್ಟಿಯಾಗಿದೆ. ಬೆಂಗಳೂರು ನಗರವನ್ನು ಇವಿ ರಾಜಧಾನಿಯನ್ನಾಗಿ ಮಾರ್ಪಡಿಸುವ ಉದ್ದೇಶದಿಂದ ರಾಜ್ಯ ಸರಕಾರ 2017ರಲ್ಲಿಇವಿ ನೀತಿಯನ್ನು ಜಾರಿಗೆ ತಂದಿತ್ತು. ಇವಿ ಉತ್ತೇಜನ ಮತ್ತು ಚಾರ್ಜಿಂಗ್ ಸ್ಟೇಷನ್ ಗಳ ಸ್ಥಾಪನೆಗೆ ಪೂರಕ ನೆರವು ನೀಡಲು ರಾಜ್ಯ ಸರಕಾರ ಬೆಸ್ಕಾಂ ಅನ್ನು ನೊಡೆಲ್ ಏಜೆನ್ಸಿಯನ್ನಾಗಿ ಕೂಡ ನೇಮಿಸಿದೆ.
ಇವಿ ಜಾಗೃತಿ ಪೋರ್ಟ್‌ಲ್ ಮೂಲಕ ರಾಜ್ಯದ ಎಲ್ಲ ಬಳಕೆದಾರರು ಇವಿ ನೀತಿ, ಇವಿ ಸಂಬಂಧಿತ ಪ್ರಮುಖ ಬೆಳವಣಿಗೆಗಳು, ಇವಿ ಸಾರ್ಟ್ ಅಪ್ ಗಳು ಹಾಗು ಇಲೆಕ್ಟ್ರಿಕ್ ವಾಹನಗಳ ಬಳಕೆ ಕುರಿತು ಮಾಹಿತಿಯನ್ನು ಪಡೆಯಬಹುದಾಗಿದೆ.
ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಬೆಸ್ಕಾಂ, ಬೆಂಗಳೂರಿನಲ್ಲಿ 136 ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಸ್ಟೇಷನ್ ಗಳನ್ನು ಆರಂಭಿಸಿದೆ. ಇನ್ನೂ 152 ಚಾರ್ಜಿಂಗ್ ಸ್ಟೇಷನ್ ಗಳು ಹೊಸದಾಗಿ ಸೇರ್ಪಡೆಗೊಳ್ಳಲಿದೆ. ರಾಜ್ಯದಲ್ಲಿ ಪಿಪಿಪಿ ಮಾದರಿಯಲ್ಲಿ ಒಂದು ಸಾವಿರ ಇವಿ ಚಾರ್ಜಿಂಗ್ ಸ್ಟೇಷನ್ ಗಳ ಸ್ಥಾಪನೆಗೆ ಟೆಂಡರ್ ಕರೆಯಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಇವಿ ಅಭಿಯಾನ ಮತ್ತು ಇವಿ ಎಕ್ಸ್ಪೋ ವನ್ನು ಉದ್ಘಾಟಿಸಲಿದ್ದಾರೆ. ಮಾನ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್, ಕೇಂದ್ರ ಸಚಿವರಾದರಾಜೀವ್ ಚಂದ್ರಶೇಖರ್ ಮತ್ತು ಭಗವಂತ ಖೂಬಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 250ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳ ಆರಂಭಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.
ಬೆಸ್ಕಾಂನ ಇವಿ ಮಿತ್ರ ಆಪ್, ಇವಿ ಚಾರ್ಜಿಂಗ್ ಸ್ಟೇಷನ್ ಮತ್ತು ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಏಕ ಗವಾಕ್ಸಿ ಯಲ್ಲಿ ಅನುಮತಿ ಪಡೆದ ಯೋಜನೆಗಳನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಉದ್ಘಾಟಿಸಲಿದ್ದಾರೆ.
“ಇವಿ ಅಭಿಯಾನ”ದ ಅಂಗವಾಗಿ ಜುಲೈ 2,. 2022 ರಂದು ಬೆಳಿಗ್ಗೆ 6 ರಿಂದ 9 ಗಂಟೆಗೆ ಇವಿ ರ್ಯಾಲಿ ಏರ್ಪಡಿಸಲಾಗಿದ್ದು, ವಿಧಾನ ಸೌಧದಿಂದ ಅರಮನೆ ಮೈದಾನದವರೆಗೆ ಇವಿ ರ್ಯಾಲಿ ಸಾಗಲಿದ್ದು, ಸುಮಾರು 300 ಕ್ಕೂ ಹೆಚ್ಚು ವಾಹನಗಳು ಪಾಲ್ಗೊಳ್ಳಲಿವೆ. ವಿದ್ಯುತ್ ಚಾಲಿತ ವಾಹನಗಳ ಉತ್ಪಾದಕರು, ಪೂರೈಕೆದಾರರು ಮತ್ತು ಬಳಕೆದಾರರನ್ನು ಒಂದೇ ಸೂರಿನಡಿಯಲ್ಲಿ ತಂದು ಪರಸ್ಪರ ಸಮನ್ವಯ ಸಾಧಿಸಲು ʼಇವಿ ಎಕ್ಸ್ಪೋ ʼ ನೆರವಾಗಲಿದೆ.
ಇವಿ ಅಭಿಯಾನ
ರಾಜ್ಯಾದ್ಯಂತ ಇವಿ ಅಭಿಯಾನವನ್ನು ಎಲ್ಲ ಎಸ್ಕಾಂಗಳ ವ್ಯಾಪ್ತಿಗಳಲ್ಲಿ ಆಯೋಜಿಸಲಾಗಿದೆ.
ಇವಿ ಅಭಿಯಾನದಲ್ಲಿ ಸಂಘ-ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಕಾಲೇಜುಗಳ ಜತೆ ಇವಿ ಚಾರ್ಜಿಂಗ್ ಸ್ಟೇಷನ್ ಗಳ ಸ್ಥಾಪನೆಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು.
ಇವಿ ಎಕ್ಸ್ಪೋ
ಉತ್ಪಾದಕರು, ಪೂರೈಕೆದಾರರು ಮತ್ತು ಬಳಕೆದಾರರನ್ನು ಒಂದೇ ಸೂರಿನಡಿಯಲ್ಲಿ ತಂದು ವಿದ್ಯುತ್ ಚಾಲಿತ ವಾಹನಗಳ ಉತ್ತಾದನೆ ಮತ್ತು ಬಳಕೆ ಕುರಿತು ಮಾಹಿತಿ ವಿನಿಮಯ.
ಇವಿ ಉತ್ತೇಜನಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳು ಮತ್ತು ನೀತಿಗಳ ಕುರಿತು ಮಾಹಿತಿ ಒದಗಿಸುವುದು.
ಬೆಸ್ಕಾಂ ಇವಿ ಚಾರ್ಜಿಂಗ್ ಸ್ಟೇಷನ್ ಗಳ ಕುರಿತು ಸಾರ್ವಜನಿಕರಿಗೆ ಸಂರ್ಪೂಣ ಮಾಹಿತಿ ನೀಡಲು ಬೆಸ್ಕಾಂ ಇವಿ ಮಿತ್ರ ಆಪ್ ಗೆ ಉದ್ಘಾಟನೆ.
ವಿದ್ಯುತ್ ಚಾಲಿತ ವಾಹನ ಕ್ಷೇತ್ರದಲ್ಲಿ ಇತ್ತೀಚೆಗೆ ಆಗಿರುವ ತಂತ್ರಜ್ಞಾನ ಅಭಿವೃದ್ದಿ, ಮಾರುಕಟ್ಟೆ ಪ್ರಗತಿ ಮತ್ತು ಸರಕಾರದ ಬೆಂಬಲ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು.
ಇವಿ ಎಕ್ಸ್ಪೊದಲ್ಲಿ ವಿವಿಧ ಖಾಸಗಿ ಮತ್ತು ಸರಕಾರಿ ಕಂಪನಿಗಳ 140 ಕ್ಕೂ ಅಧಿಕ ಮಳಿಗೆಗಳಿರುತ್ತವೆ.
ಹೊಸ ವಿದ್ಯುತ್ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದು.
ಬೆಸ್ಕಾಂನ 289 ಹೊಸ ಚಾರ್ಜಿಂಗ್ ಸ್ಟೇಷನ್ ಗಳ ಲೋಕಾರ್ಪಣೆ
ಬೆಸ್ಕಾಂ ನಿಂದ ಈ ವರ್ಷ 500 ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್ ಗಳ ಸ್ಥಾಪನೆ ಗುರಿ.
ಇವಿ ಸಂಬಂಧ ಕೆಲವು ಖಾಸಗಿ ಕಂಪನಿಗಳ ಜತೆ ಬೆಸ್ಕಾಂ ಒಡಂಬಡಿಕೆಗೆ ಸಹಿ
ಇವಿ ಚಾರ್ಜಿಂಗ್ ಸ್ಟೇಷನ್ ಗಳ ಸ್ಥಾಪನೆಗೆ ವಿದ್ಯುತ್ ಸಂಪರ್ಕ ಪಡೆಯಲು ಏಕ ಗವಾಕ್ಸಿ ಯೋಜನೆ. ಆನ್ ಲೈನ್ ನಲ್ಲಿಅರ್ಜಿ ಸಲ್ಲಿಸಿ, ಅಗತ್ಯ ದಾಖಲೆ ಸಲ್ಲಿಸಿದ ತಕ್ಷಣ ವಿದ್ಯುತ್ ಸಂಪರ್ಕ ಮಂಜೂರು.
ಒಂದೇ ಕಂಪನಿಗೆ ಹಲವೆಡೆ ಚಾರ್ಜಿಂಗ್ ಸ್ಟೇಷನ್ ಗಳ ಸ್ಥಾಪನೆಗೆ ಅವಕಾಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿ: ಧ್ರುವನಾರಾಯಣ್ ಮನವಿ
ಸುಶಿಕ್ಷಿತರಲ್ಲಿಯೇ ಹೆಚ್ಚುತ್ತಿದೆ ವರದಕ್ಷಿಣೆ ಪಿಡುಗು
ಮುನಿರತ್ನಗೆ ದೊಡ್ಡ ಇತಿಹಾಸವಿದೆ, ಅವರ ಬಗ್ಗೆ ಮಾತನಾಡುವುದಿಲ್ಲ: ಡಿಕೆ ಸುರೇಶ್ ವ್ಯಂಗ್ಯ
ಮಾನ ಮರ್ಯಾದೆ ಇದೆಯೇನ್ರಿ…? ಕಾಮಗಾರಿ ವಿಳಂಬಿಸಿದ ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ
ಸಿದ್ದರಾಮಯ್ಯ- ಡಿಕೆಶಿ ಆಲಿಂಗನ: ಯತ್ನಾಳ್ ವ್ಯಂಗ್ಯವಾಗಿ ಹೇಳಿದ್ದೇನು?