Ashwini Vaishnav: ಗೂಗಲ್, ಕಂಪನಿಗಳ ಸೇವಾ ಶುಲ್ಕ ಬಿಕ್ಕಟ್ಟು ಶಮನ: ಅಶ್ವಿನಿ ವೈಷ್ಣವ್
Team Udayavani, Mar 5, 2024, 10:22 PM IST
ನವದೆಹಲಿ: ಪ್ಲೇಸ್ಟೋರ್‌ನಿಂದ ತೆಗೆದು ಹಾಕಲಾಗಿದ್ದ ದೇಶದ ಆ್ಯಪ್‌ಗ್ಳನ್ನು ಸೇರಿಸಲು ಗೂಗಲ್ ಕಂಪನಿ ಒಪ್ಪಿಕೊಂಡಿದೆ. ಜತೆಗೆ ಸೇವಾ ಶುಲ್ಕಕ್ಕೆ ಸಂಬಂಧಿಸಿದಂತೆ ಆ್ಯಪಲ್ ಮತ್ತು ಭಾರತದ ಸ್ಟಾರ್ಟ್‌ಅಪ್ ಕಂಪನಿಗಳ ನಡುವಿನ ಬಿಕ್ಕಟ್ಟು ಶಮನವಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
“ತಂತ್ರಜ್ಞಾನ ದೈತ್ಯ ಗೂಗಲ್, ಭಾರತದ ಸ್ಟಾರ್ಟ್‌ಅಪ್ ಕಂಪನಿಗಳ ಮುಖ್ಯಸ್ಥರ ಸಭೆಯಲ್ಲಿ ಶುಲ್ಕ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಸ್ಟಾರ್ಟ್‌ಅಪ್ ಕಂಪನಿಗಳ ಆ್ಯಪ್‌ಗ್ಳನ್ನು ಪುನಃ ಸೇರಿಸಲು ಅದು ಒಪ್ಪಿಕೊಂಡಿದೆ’ ಎಂದು ಹೇಳಿದ್ದಾರೆ.