ಆಗಸದಲ್ಲಿ ಎಚ್‌ಎಎಲ್‌ನ ಐಜೆಟಿ ಪಲ್ಟಿ ಸಾಹಸ ಯಶಸ್ವಿ
Team Udayavani, Jan 6, 2022, 10:30 PM IST
ನವದೆಹಲಿ: ಭಾರತೀಯ ವಾಯುಪಡೆಯ ಪೈಲೆಟ್‌ಗಳ ತರಬೇತಿಗೆಂದು ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕಲ್ ಲಿ. ಸಂಸ್ಥೆ ತಯಾರಿಸಿರುವ ಇಂಟರ್‌ಮೀಡಿಯೇಟ್ ಜೆಟ್ ಟ್ರೈನರ್(ಐಜೆಟಿ) ಗುರುವಾರ ಆಗಸದಲ್ಲಿ ತನ್ನ ಕೊನೆಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ. ಗಗನದಲ್ಲಿ ಎಡಕ್ಕೆ ಬಲಕ್ಕೆ ಒಟ್ಟು ಆರು ಪಲ್ಟಿ ಹೊಡೆದು, ತನ್ನ ಸಾಮರ್ಥ್ಯವನ್ನು ತೋರಿಸಿದೆ.
ವಾಯುಪಡೆಯ ಕಾಪ್ಟರ್‌ಗಳ ಪೈಲಟ್‌ಗಳು ಎಲ್ಲ ಪರಿಸ್ಥಿತಿಗೂ ಸಿದ್ಧವಿರಬೇಕಾಗುತ್ತದೆ. ಹಲವು ಬಾರಿ ಅವರ ಕಾಪ್ಟರ್‌ಗಳು ಆಗಸದಲ್ಲೇ ಪಲ್ಟಿ ಹೊಡೆಯಬೇಕಾದ ಸನ್ನಿವೇಶವೂ ಉಂಟಾಗುತ್ತದೆ. ಅದಕ್ಕೆಂದು ಪೈಲೆಟ್‌ಗಳಿಗೆ ಎರಡನೇ ಹಂತದ ತರಬೇತಿಯಲ್ಲಿ ಜೆಟ್‌ಗಳ ಪಲ್ಟಿ ಹೊಡೆಸುವ ತರಬೇತಿಯನ್ನೂ ನೀಡಲಾಗುತ್ತದೆ. ಅದಕ್ಕೆಂದೇ ಎಚ್‌ಎಎಲ್ ಈ ಜೆಟ್ ಅನ್ನು ತಯಾರಿಸಿದೆ.
ಐಜೆಟಿಯ ಹಾರಾಟ ಪರೀಕ್ಷೆ, ತೂಕ ಹೊತ್ತೂಯ್ಯಬಲ್ಲ ಸಾಮರ್ಥ್ಯ, ಶಸ್ತ್ರಾಸ್ತ್ರ ಹೊರುವ ಸಾಮರ್ಥ್ಯದ ಪರೀಕ್ಷೆಯನ್ನು ಈ ಹಿಂದೆಯೇ ಮಾಡಲಾಗಿದ್ದು, ಅದೆಲ್ಲದರಲ್ಲೂ ಐಜೆಟಿ ಯಶಸ್ವಿಯಾಗಿತ್ತು. ಇದೀಗ ಕೊನೆಯದಾಗಿ ನಡೆಸಲಾದ ಪಲ್ಟಿ ಪರೀಕ್ಷೆಯನ್ನೂ ಐಜೆಟಿ ಯಶಸ್ವಿಯಾಗಿದೆ.
ಇದನ್ನೂ ಓದಿ :ಪ್ರಧಾನಿ ಭದ್ರತಾ ಲೋಪ ಪ್ರಕರಣ : ಇದು ಗಂಭೀರ ಪ್ರಕರಣ ; ರಾಷ್ಟ್ರಪತಿ ಕಳವಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಮನಗರದಲ್ಲಿ ಕುಮಾರಸ್ವಾಮಿ ಆಪರೇಷನ್! ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಾರಾ ಎಚ್ ಡಿಕೆ?
ಯುಜಿಡಿ ಪೈಪ್ ಲೈನ್ ಗೆ ಖಾಸಗಿ ಲೇಔಟ್ ನ ಪೈಪ್ ಲೈನ್ ಜೋಡಣೆ : ಅಧಿಕಾರಿಗಳಿಂದ ತಡೆ
ಜಿಲ್ಲೆಯಲ್ಲಿ ಆತ್ಮಹತ್ಯೆ ಹೆಚ್ಚಳ
ಕೋವಿಡ್ 19: ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ
ರೋಹಿತ್ ಶರ್ಮಾಗೆ ಬ್ರೇಕ್ ಕೊಟ್ಟಿದ್ಯಾಕೆ? ಇದು ಅನಗತ್ಯ: ರವಿ ಶಾಸ್ತ್ರಿ