ಬಾಯಿ ಚಪಲಕ್ಕೆ ಮಾತಾಡೋ ವ್ಯಕ್ತಿ ನಾನಲ್ಲ: ಕುಮಾರಸ್ವಾಮಿ

Team Udayavani, Jan 19, 2020, 10:11 PM IST

ರಾಮನಗರ: ಸಚಿವ ಈಶ್ವರಪ್ಪ ಅವರಂತೆ ಬಾಯಿ ಚಪಲಕ್ಕೆ ಮಾತನಾಡುವ ವ್ಯಕ್ತಿ ನಾನಲ್ಲ. ವಾಸ್ತವಾಂಶಗಳನ್ನು ಇಟ್ಟುಕೊಂಡೆ ಮಾತನಾಡುತ್ತೇನೆಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ತಾಲೂಕಿನ ಬಿಡದಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈಶ್ವರಪ್ಪನವರು ತಮ್ಮ ನಾಲಿಗೆಗೆ ಕಡಿವಾಣ ಹಾಕಿಕೊಳ್ಳುವುದನ್ನು ಕಲಿಯಲಿ. ನಿನ್ನೆ ನನ್ನ ಟ್ವೀಟ್‌ಗಳಲ್ಲಿ ಈಶ್ವರಪ್ಪ ಅವರು ಈ ಹಿಂದೆ ಮಾತನಾಡಿರುವುದನ್ನು ನೆನಪಿಸಿದ್ದೇನೆ ಎಂದರು.

“ಸೈನಿಕ ವೃತ್ತಿಗೆ ಸೇರುವವರು ಬಡವರು’ ಎಂಬ ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು. ಶ್ರೀಮಂತರು ಯಾರೂ ತಮ್ಮ ಮಕ್ಕಳನ್ನು ಸೈನಿಕ ವೃತ್ತಿಗೆ ಕಳುಹಿಸೋಲ್ಲ. ಯಡಿಯೂರಪ್ಪ, ಈಶ್ವರಪ್ಪ ಅವರು ತಮ್ಮ ಮಕ್ಕಳನ್ನು ಸೈನಿಕ ವೃತ್ತಿಗೆ ಕಳುಹಿಸಿದ್ದಾರೆಯೇ?. ಕುಟುಂಬ ನಿರ್ವಹಣೆಗೆ ಸೈನಿಕ ವೃತ್ತಿ ಸೇರುತ್ತಾರೆಂಬ ತಮ್ಮ ಹೇಳಿಕೆ ಅವಮಾನದ ಮಾತಲ್ಲ. ಅದರಲ್ಲಿ ಮಹಾ ಅಪರಾಧ ಏನಿದೆ ಎಂದು ಪ್ರಶ್ನಿಸಿದರು. ಅನೇಕ ಸೈನಿಕ ಕುಟುಂಬಗಳು ತಮ್ಮ ಬಳಿ ಮಾತನಾಡಿ ತಮ್ಮ ಅನಿಸಿಕೆ ಸರಿ ಎಂದು ತಿಳಿಸಿದ್ದಾರೆ ಎಂದರು.

ತಪ್ಪು ನೀತಿಗಳಿಂದ ನಿರುದ್ಯೋಗ ಸಮಸ್ಯೆ:
ಇದೇ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶದಲ್ಲಿಂದು ನಿರುದ್ಯೋಗ ಸಮಸ್ಯೆ ಹಿಂದೆಂದಿಗಿಂತ ಹೆಚ್ಚು ಕಾಡುತ್ತಿದೆ. ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಜನ ಸಾಮಾನ್ಯರ ಬದುಕು ದುಸ್ತರವಾಗಿದೆ.

ಆಟೋಮೊಬೈಲ್‌, ಸಿದ್ಧ ಉಡುಪು ಕಾರ್ಖಾನೆಗಳು ಸೇರಿ ಅನೇಕ ಕೈಗಾರಿಕೆಗಳು ಇಂದು ಮುಚ್ಚುವ ಹಂತಕ್ಕೆ ಬಂದಿವೆ. ಈ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಕಾರ್ಮಿಕರ ನೌಕರಿಗೆ ಕುತ್ತು ಬಂದಿದೆ. ದೇಶದ ಆರ್ಥಿಕ ಸ್ಥಿತಿಯನ್ನು ಮರೆಮಾಚುವ ಸಲುವಾಗಿ ಪ್ರಧಾನಿ ಮೋದಿಯವರು ಪೌರತ್ವ ತಿದ್ದುಪಡಿ ಮುಂತಾದ ಕಾಯ್ದೆಗಳನ್ನು ಜಾರಿ ಮಾಡುತ್ತಿದ್ದಾರೆ. ಆ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ರೈತರ ಸಾಲ ಮನ್ನಾದಿಂದ ರಾಜ್ಯದ ಅಭಿವೃದ್ದಿಗೆ ಹಿನ್ನಡೆಯಾಗಿದೆ ಎನ್ನುವುದು ಸುಳ್ಳು ಆರೋಪ. 14 ತಿಂಗಳಲ್ಲಿ ವಿವಿಧ ಮೂಲಗಳಿಂದ 25 ಸಾವಿರ ಕೋಟಿ ರೂ. ಸಂಗ್ರಹಿಸಲಾಗಿತ್ತು. ಇಲ್ಲಿಯವರೆಗೆ 18 ಸಾವಿರ ಕೋಟಿ ರೂ. ಸಾಲ ಮನ್ನಾ ಆಗಿದೆ. ಆದರೆ, ತಮ್ಮ ಆಡಳಿತಾವಧಿಯಲ್ಲಿ ಮಂಜೂರಾಗಿದ್ದ ಆನೇಕ ಕಾರ್ಯಕ್ರಮಗಳಿಗೆ ಹಾಲಿ ಸರ್ಕಾರ ತಡೆಯೊಡ್ಡಿದೆ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಆಶ್ರಯ ಮನೆ ನಿರ್ಮಾಣ ಅಕ್ರಮದ ಬಗ್ಗೆ ತನಿಖೆಗೆ ರಾಜ್ಯ ಸರಕಾರ ಆರಂಭಿಸಿರುವ ವಿಜಿಲ್‌ ಮೊಬೈಲ್‌ ಆ್ಯಪ್‌ನ ಗೊಂದಲ ಇನ್ನೂ ನಿವಾರಣೆ ಆಗಿಲ್ಲ. ಆ್ಯಪ್‌...

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

ಹೊಸ ಸೇರ್ಪಡೆ

  • ಬೆಂಗಳೂರು: ಆಶ್ರಯ ಮನೆ ನಿರ್ಮಾಣ ಅಕ್ರಮದ ಬಗ್ಗೆ ತನಿಖೆಗೆ ರಾಜ್ಯ ಸರಕಾರ ಆರಂಭಿಸಿರುವ ವಿಜಿಲ್‌ ಮೊಬೈಲ್‌ ಆ್ಯಪ್‌ನ ಗೊಂದಲ ಇನ್ನೂ ನಿವಾರಣೆ ಆಗಿಲ್ಲ. ಆ್ಯಪ್‌...

  • ಮನೋ ಚಿಕಿತ್ಸಾ ಕೇಂದ್ರಗಳ ಕುರಿತಾಗಿ ನಮ್ಮ ನಡುವೆ ಅನೇಕ ತಪ್ಪು ಕಲ್ಪನೆಗಳಿವೆ. "ಹುಚ್ಚಾಸ್ಪತ್ರೆ' ಎಂಬ ಪದಪ್ರಯೋಗವೇ ನಮ್ಮ ನಡುವೆ ಕೆಟ್ಟ ಭಾವವನ್ನು ಹೊಮ್ಮಿಸುತ್ತದೆ....

  • ಕುಲುಮೆಯ ಬೆಂಕಿ ಮುಂದೆ, ದುಡಿದು ದಣಿವ ಜೀವ. ಪ್ರಾಯ 65 ದಾಟಿದೆ. ಕಮ್ಮಾರಿಕೆಯಿಂದ ಬಂದ ನಾಲ್ಕಾರು ಕಾಸನ್ನು ವೀರಾಚಾರಿ ಅವರು ಬ್ಯಾಂಕಿನಲ್ಲಿ ಕೂಡಿಡದೆ, ನಮ್ಮೆಲ್ಲರ...

  • ರಷ್ಯಾ ಮೂಲದ ಸೀಬರ್ಡ್‌ಗಳಿಗೆ, ಕಾರವಾರದ ಕಡಲತಡಿ ಪಕ್ಷಿಕಾಶಿ ಇದ್ದಂತೆ. ಆದರೆ, ದುರಾದೃಷ್ಟ. ಈ ಬಾರಿ ಇಲ್ಲಿ ಸೀಬರ್ಡ್‌ನ ಚಿಲಿಪಿಲಿ ಕೇಳಿಸುತ್ತಿಲ್ಲ. ದೂರದ ಊರಿನ...

  • ಚಟುವಟಿಕೆಯ ಚಿಲುಮೆ ರೋನಿಕಾ ಲವಲವಿಕೆಯಿಂದ ರಂಗಪ್ರವೇಶಿಸಿ, ಆತ್ಮವಿಶ್ವಾಸದಿಂದ ನೃತ್ಯ ಪ್ರಸ್ತುತಪಡಿಸಿದ ಬಗೆ ಮುದ ತಂದಿತ್ತು. ಅಂಗಶುದ್ಧಿ, ಕಲಾನೈಪುಣ್ಯದ...