ಸೋಂಕು ನಿಯಂತ್ರಣಕ್ಕೆ ಹೆರಂಜಾಲು ಗ್ರಾಮಸ್ಥರೇ ಮುಂದಾದರು!
Team Udayavani, May 15, 2021, 7:30 AM IST
ಕುಂದಾಪುರ : ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸರಕಾರದ ಪಾತ್ರದ ಜತೆಗೆ ಜನರ ಜವಾಬ್ದಾರಿಯೂ ಮುಖ್ಯ ಎನ್ನುವುದನ್ನು ಈ ಊರಿನ ಜನ ನಿರೂಪಿಸು ತ್ತಿದ್ದಾರೆ. ಹಳ್ಳಿಗಳಲ್ಲಿ ಸೋಂಕು ಹೆಚ್ಚುತ್ತಿದೆ ಎನ್ನುವ ಸುದ್ದಿಯ ನಡುವೆ ಈ ಊರಿನ ಜನರು ಗ್ರಾಮದ ಪ್ರತಿಯೊಬ್ಬರ ಪರೀಕ್ಷೆಗೆ ಮುಂದಾಗಿದ್ದಾರೆ.
ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾ.ಪಂ. ವ್ಯಾಪ್ತಿಯ ಹೆರಂಜಾಲು ಗ್ರಾಮದ 1ನೇ ವಾರ್ಡಿನ ಎಲ್ಲ ಗ್ರಾಮಸ್ಥರು ಕೊರೊನಾ ಪರೀಕ್ಷೆಗೆ ಪಣ ತೊಟ್ಟಿ ದ್ದಾರೆ. ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಮಿತ್ರ ಮಂಡಳಿ ಇದರ ಮುಂದಾಳತ್ವ ವಹಿಸಿದೆ.
ಕಂಬದಕೋಣೆ ಗ್ರಾ.ಪಂ. ಅಧ್ಯಕ್ಷ ಸುಕೇಶ್ ಶೆಟ್ಟಿ ಮತ್ತು ಸದಸ್ಯರು, ಸಿಬಂದಿ, ಜತೆಗೆ ಕಿರಿಮಂಜೇಶ್ವರ ಪ್ರಾ.ಆ. ಕೇಂದ್ರದ ವೈದ್ಯೆ ಡಾ| ನಿಶಾ ರೆಬೆಲ್ಲೋ ಮತ್ತು ಸಿಬಂದಿಯ ಸಹಕಾರದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ಮಿತ್ರ ಮಂಡಳಿಯ 25 ಮಂದಿ ಯುವಕರು ಈ ಕಾರ್ಯ ಮಾಡುತ್ತಿದ್ದಾರೆ.
ಸೋಂಕು ಪೀಡಿತರಿಗೂ ನೆರವು
ಪರೀಕ್ಷೆ ವೇಳೆ ಪಾಸಿಟಿವ್ ಬಂದರೆ ಅವರನ್ನು ಮನೆಯಲ್ಲಿ ಅಥವಾ ಗಂಭೀರವಾಗಿದ್ದರೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವ, ತುರ್ತು ಅಗತ್ಯ ಏನಾದರೂ ಇದ್ದರೆ ನೆರವಾಗುವ ಕಾರ್ಯ ವನ್ನೂ ಈ ಸಂಘಟನೆಯ ಯುವಕರು ಮಾಡುತ್ತಿದ್ದಾರೆ.
ಹಳ್ಳಿಯಲ್ಲೇ ಪರೀಕ್ಷೆ
ವಿಶೇಷವೆಂದರೆ ಈ ಪರೀಕ್ಷೆ ನಡೆಯುತ್ತಿರುವುದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಲ್ಲ. ಹೆರಂಜಾಲು ಹಳ್ಳಿಯ ಒಂದು ಕಡೆ ತೆಂಗಿನ ಗರಿಗಳ ಚಪ್ಪರ ಹಾಕಿ, ಅಲ್ಲಿಯೇ ತಪಾಸಣ ಶಿಬಿರವನ್ನು ನಡೆಸುತ್ತಿರುವುದು ಇಲ್ಲಿನ ವಿಶೇಷ. ಇದರಿಂದಾಗಿ ಯಾರಿಗೂ ತಪಾಸಣೆಗೆ ಬರಲು ಕನಿಷ್ಠ ತೊಂದರೆಯೂ ಆಗುವುದಿಲ್ಲ.
150ಕ್ಕೂ ಮಿಕ್ಕಿ ಮನೆ, 750 ಜನ
2 ದಿನಗಳಲ್ಲಿ 50ಕ್ಕೂ ಹೆಚ್ಚು ಮನೆಗಳ 127 ಮಂದಿಯ ಪರೀಕ್ಷೆ ಮಾಡಲಾಗಿದೆ. ಆರಂಭದಲ್ಲಿ ಹೊರ ಉದ್ಯೋಗಿಗಳ ಪರೀಕ್ಷೆಗೆ ಆದ್ಯತೆ ನೀಡಲಾ ಗಿದೆ. 1ನೇ ವಾರ್ಡಿನಲ್ಲಿ ಒಟ್ಟು 150ಕ್ಕೂ ಹೆಚ್ಚು ಮನೆಗಳಿದ್ದು, ಒಟ್ಟು 750 ಮಂದಿ ಇದ್ದಾರೆ.
ಎಲ್ಲ ಕಡೆ ಜನರ ನಿರ್ಲಕ್ಷ éದಿಂದಲೇ ಸೋಂಕು ಹೆಚ್ಚಾಗುತ್ತಿದೆ. ವಾರದ ಹಿಂದೆ ನಮ್ಮ ಊರಿನಲ್ಲಿ ಮೊದಲ ಪಾಸಿಟಿವ್ ಪ್ರಕರಣ ಕಂಡುಬಂದಿತ್ತು. ನಮ್ಮ ಸಂಘಟನೆ ಯವ ರೆಲ್ಲ ಸೇರಿ ನಮ್ಮ ಊರಿಗೆ ಸೋಂಕು ಹರಡದಂತೆ ಕಾಪಾಡುವುದ ಕ್ಕಾಗಿ ಎಲ್ಲರ ಪರೀಕ್ಷೆ ನಡೆಸಲು ಮುಂದಾ ದೆವು. ಊರಿನ ಎಲ್ಲರಿಂದಲೂ ಉತ್ತಮ ಸ್ಪಂದನೆ ವ್ಯಕ್ತ ವಾಗಿದೆ. ಬಹುತೇಕರು ಸ್ವತಃ ಪರೀಕ್ಷೆಗೆ ಬರುತ್ತಿದ್ದಾರೆ.
– ಕೃಷ್ಣ ಪೂಜಾರಿ ಹಿತ್ಲಮನೆ, ಅಧ್ಯಕ್ಷರು, ಶ್ರೀ ದುರ್ಗಾಪರಮೇಶ್ವರಿ ಮಿತ್ರ ಮಂಡಳಿ, ಹೇರಂಜಾಲು
– ಪ್ರಶಾಂತ್ ಪಾದೆ