ಚಕ್ರಬಡ್ಡಿ ಮನ್ನಾಕ್ಕಾಗಿ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ! ವಿತ್ತ ಸಚಿವಾಲಯ ಸ್ಪಷ್ಟನೆ
ಗ್ರಾಹಕರ ಖಾತೆಗಳಿಗೆ ತನ್ನಿಂತಾನೆ ಕ್ರೆಡಿಟ್ ಆಗಲಿದೆ ಯೋಜನೆಯ ಹಣ
Team Udayavani, Oct 29, 2020, 7:15 PM IST
ನವದೆಹಲಿ: ಮಾರ್ಚ್ 1ರಿಂದ ಆಗಸ್ಟ್ 31 ನಡುವಿನ ಮೊರೊಟೋರಿಯಂ ಅವಧಿಯಲ್ಲಿನ ಚಕ್ರಬಡ್ಡಿ ಮನ್ನಾ ಸೌಲಭ್ಯಕ್ಕಾಗಿ ಯಾವ ಸಾಲ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ. ಅರ್ಹ ಫಲಾನುಭವಿಗಳ ಖಾತೆಗೆ ಬ್ಯಾಂಕುಗಳಿಂದ ಆಟೋ ಕ್ರೆಡಿಟ್ ಆಗಲಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ಹೇಳಿದೆ.
ಈ ಸಂಬಂಧ ಹಣಕಾಸು ಸಚಿವಾಲಯ 20 ಪ್ರಶ್ನೋತ್ತರಗಳನ್ನು ಸಿದ್ಧಪಡಿಸಿ ವೆಬ್ ಸೈಟ್ ನಲ್ಲಿ ಹಾಕಿದೆ. ಈ ಪ್ರಕಾರವಾಗಿ, ಯಾವುದೇ ಗ್ರಾಹಕರು ತಮಗೆ ಮೊರೊ ಟೋರಿಯಂ ಅವಧಿಯ ಚಕ್ರ ಬಡ್ಡಿ ಮನ್ನಾದ ಸೌಲಭ್ಯ ನೀಡಿ ಎಂದು ಅರ್ಜಿ ಸಲ್ಲಿಸಬೇಕಾಗಿಲ್ಲ, ಹಾಗೆಯೇ ಬ್ಯಾಂಕುಗಳಿಗೂ ಸುತ್ತಬೇಕಾಗಿಲ್ಲ. ಅರ್ಹ ಫಲಾನುಭವಿಗಳನ್ನು ಆರಿಸಲಿರುವ ಬ್ಯಾಂಕುಗಳು ಅವರ ಖಾತೆಗಳಿಗೆ ಜಮಾ ಮಾಡಲಿವೆ ಎಂದು ಹೇಳಿದೆ. ಜತೆಗೆ, ಮೊರೊ ಟೋರಿಯಂ ಸೌಲಭ್ಯ ಪಡೆಯದೇ ಇರುವವರಿಗೂ ಈ ಸೌಲಭ್ಯ ಅನ್ವಯವಾಗಲಿದೆ ಎಂದು ಹೇಳಿದೆ.
ಕ್ರಿಸಿಲ್‌ನ ವರದಿ ಪ್ರಕಾರ ಶೇ.75 ಸಾಲಗಾರರು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಇದರಿಂದ ಕೇಂದ್ರ ಸರ್ಕಾರಕ್ಕೆ 7,500 ಕೋಟಿ ರೂ. ಹೊರೆಯಾಗಲಿದೆ ಎಂದು ಹೇಳಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ ಭೂಮಿ ಖರೀದಿ ಕಾನೂನು: ಪಿಡಿಪಿ ಪ್ರತಿಭಟನೆ, ಹಲವರ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ