ಕ್ಲಬ್ , ರೆಸಾರ್ಟ್ ಮೇಲೆ ಪೊಲೀಸರ ದಾಳಿ : 113 ಜನರ ಬಂಧನ, 5.83 ಲಕ್ಷ ರೂ ಜಪ್ತಿ
Team Udayavani, Nov 23, 2021, 8:35 PM IST
ಕಲಬುರಗಿ: ನಗರ ಹಾಗೂ ನಗರದ ಹೊರ ವಲಯ ಕ್ಲಬ್ ಮತ್ತು ರೆಸಾರ್ಟ್ ಗಳಲ್ಲಿ ವ್ಯಾಪಕವಾಗಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿಯನ್ನು ಅರಿತು ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತಾಲಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೋಮವಾರ ರಾತ್ರಿ ನಗರದ ಹೊರವಲಯ ಆಳಂದ ರಸ್ತೆಯ ಜುರಿಚ್ ಕ್ಲಬ್ ಮತ್ತು ಕ್ರಿಸ್ಟಲ್ ಫಾರಂ ರೆಸಾರ್ಟ್ ದಲ್ಲಿ ಜೂಜಾಟ ನಡೆಯುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ.
ಜುರಿಚ್ ಕ್ಲಬ್: ಜುರಿಚ್ ಕ್ಲಬ್ ಮೇಲೆ ನಡೆದ ದಾಳಿಯಲ್ಲಿ ಜೂಜಾಟವಾಡುತ್ತಿದ್ದ 21 ಜನರನ್ನು ಬಂಧಿಸಿ 2.11 ಲಕ್ಷ ರೂ ಹಾಗೂ ಇಸ್ಪೀಟು ಎಲೆಗಳನ್ನು ಜಫ್ತಿ ಮಾಡಲಾಗಿದೆ.
ಜುರಿಚ್ ಕ್ಲಬ್ ಮಾಲೀಕರಾದ ಅರುಣಕುಮಾರ ಪಾಟೀಲ್ ವಿರುದ್ದ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿದ್ದಾರೆ. ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 21 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಲಯ ಬಂಧನಕ್ಕೊಪ್ಪಿಸಲಾಗಿದೆ.
ಇದನ್ನೂ ಓದಿ : ಹಾನಿಗೊಂಡ ಮಟ್ಟುಗುಳ್ಳ ಕೃಷಿ ಕ್ಷೇತ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಕ್ರಿಸ್ಟಲ್ ಫಾರಂ ರೆಸಾರ್ಟ್: ಅದೇ ರೀತಿ ಜುರಿಚ್ ಕ್ಲಬ್ ಸಮೀಪವಿರುವ ಕ್ರಿಸ್ಟಲ್ ಫಾರಂ ರೆಸಾರ್ಟ್ ದಲ್ಲಿ ದಾಳಿ ನಡೆಸಿ 92 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 3.72 ಲಕ್ಷ ರೂ ಹಾಗೂ ಇಸ್ಪೀಟು ಎಲೆಗಳನ್ನು ಜಫ್ತಿ ಮಾಡಿಕೊಳ್ಳಲಾಗಿದೆ. ಕ್ರಿಸ್ಟಲ್ ಫಾರಂ ರೆಸಾರ್ಟ್ ಮಾಲೀಕರಾದ ಅಶೋಕ ಗುತ್ತೇದಾರ ಬಡದಾಳ ವಿರುದ್ಧ ಪ್ರಕರಣ ದಾಖಲಾಗಿದೆ. 92 ಜನರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಎರಡು ದಾಳಿಯನ್ನು ಸಿಸಿಬಿ ಘಟಕದ ಇನ್ಸ್ಪೆಕ್ಟರ್ ಎ. ವಾಜೀದ್ ಪಟೇಲ್ ಮಾಹಿತಿ ಮೇರೆಗೆ ಪೊಲೀಸ್ ಆಯುಕ್ತರ ಡಾ. ವೈ.ಎಸ್. ರವಿಕುಮಾರ , ಉಪ ಪೊಲೀಸ್ ಆಯುಕ್ತ ಅಡ್ಡೂರು ಶ್ರೀ ನಿವಾಸ, ಸಹಾಯಕ ಪೊಲೀಸ್ ಆಯುಕ್ತರಾದ ಅಂಶುಕುಮಾರ, ಜೆ. ಎಚ್. ಇನಾಂದಾರ ಮಾರ್ಗದರ್ಶನದಲ್ಲಿ ಸಬ್ ಅರ್ಬನ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಭಾಸು ಚವ್ಹಾಣ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ ನಿಷ್ಠಾವಂತನಾದ ನನ್ನ ಸಚಿವ ಸ್ಥಾನ ಭದ್ರ: ಸಚಿವ ಪ್ರಭು ಚವ್ಹಾಣ್
ಮಸೀದಿ ಕುರಿತು ತಾಂಬೂಲ ಪ್ರಶ್ನೆ; ಬಿಜೆಪಿ ಈ ರಾಜ್ಯವನ್ನು ಕೊಲ್ಲುತ್ತಿದೆ :ಡಿಕೆಶಿ
ವಿಜಯೇಂದ್ರಗೆ ಭವಿಷ್ಯದಲ್ಲಿ ದೊಡ್ಡ ಅವಕಾಶ ಇದೆ: ಬಿಎಸ್ ವೈ ವಿಶ್ವಾಸ
ಶಿಕ್ಷಣವನ್ನ ಮಾತ್ರವಲ್ಲ, ಎಲ್ಲವನ್ನೂ ಬದಲಾವಣೆ ಮಾಡಿದ್ದೇವೆ : ಬಿ.ಸಿ.ನಾಗೇಶ್
ಜಿ.ಪಂ., ತಾ.ಪಂ. ಕ್ಷೇತ್ರ ಪುನರ್ ವಿಂಗಡಣೆ,ಮೀಸಲಾತಿ ನಿಗದಿ: ಹೈಕೋರ್ಟ್ನಿಂದ 12 ವಾರಗಳ ಗಡು